LOCAL EXPRESS: “ಗಂಗಾವತಿ |ಮಹಿಳಾ ಶೌಚಾಲಯ ದುರಸ್ತಿಗೆ ನಾಗರಿಕರ ಹೋರಾಟ ಸಮಿತಿ ಆಗ್ರಹ”

By admin

“ಗಂಗಾವತಿ |ಮಹಿಳಾ ಶೌಚಾಲಯ ದುರಸ್ತಿಗೆ ನಾಗರಿಕರ ಹೋರಾಟ ಸಮಿತಿ ಆಗ್ರಹ”

•ಸೆಕ್ಯುಲರ್‌ ವಾಯ್ಸ್‌ ನ್ಯೂಸ್‌ ಗಂಗಾವತಿ: 

ಗಂಗಾವತಿಇಲ್ಲಿನ ಮೆಹಬೂಬ್ ನಗರದ ಮೂರು  ಮಹಿಳೆಯರ ಸಾಮೂಹಿಕ ಶೌಚಾಲಯಗಳನ್ನು ಕೂಡಲೇ ದುರಸ್ಥಿಗೊಳಿಸಲು ಆಗ್ರಹಿಸಿ ಮೆಹಬೂಬ್ ನಗರ ನಾಗರಿಕರ ಹೋರಾಟ ಸಮಿತಿ ನೇತೃತ್ವದಲ್ಲಿ ನಗರಸಭೆ ಪೌರಯುಕ್ತರಾದ ವಿರೂಪಾಕ್ಷ ಮೂರ್ತಿ ಅವರಿಗೆ ಗುರುವಾರ ಮನವಿ ಪತ್ರ ಸಲ್ಲಿಸಲಾಯಿತು.

ಮೆಹಬೂಬ್ ನಗರದ ಮೂರು  ಮಹಿಳೆಯರ ಸಾಮೂಹಿಕ ಶೌಚಾಲಯಗಳನ್ನು ಕೂಡಲೇ ದುರಸ್ಥಿಗೊಳಿಸಬೇಕು ಮತ್ತು ಸಾಮೂಹಿಕ ಮಹಿಳಾ ಶೌಚಾಲಯವು  ಬಳಕೆಗೆ ಸಮರ್ಪಕ ವ್ಯವಸ್ಥೆ ಮಾಡಬೇಕು .ಅವುಗಳ ನಿರ್ವಹಣೆ ಆದ್ಯತೆ ನೀಡಬೇಕೆಂದು ಮೆಹಬೂಬ್ ನಗರ ನಾಗರಿಕರ ಹೋರಾಟ ಸಮಿತಿಯು ಪೌರಯುಕ್ತರಿಗೆ ಒತ್ತಾಯಿಸಿದರು. ಬಳಿಕ ಮನವಿ ಪತ್ರ ಸ್ವೀಕರಿಸಿದ ಪೌರಯುಕ್ತ ವಿರೂಪಾಕ್ಷ ಮೂರ್ತಿ ಸಕಾರಾತ್ಮಕವಾಗಿ  ಸ್ಪಂದಿಸಿದರು ಎಂದರು.  

ಇತ್ತೀಚಿಗೆ ವಾರ್ಡ್ 7 ರಲ್ಲಿ ಹರಿಯುವ ದುರುಗಮ್ಮ ಹಳ್ಳಕ್ಕೆ  4 ವರ್ಷದ ಮಗು ಬಿದ್ದು ಜೀವ ಕಳೆದುಕೊಂಡಿದೆ. ಹಳ್ಳದ ರಸ್ತೆಯ ಎರಡು ಕಡೆ ತಡೆ ಗೋಡೆಗಳನ್ನು ನಿರ್ಮಿಸಬೇಕು ಮತ್ತು ಗುಂಡಿ ಬಿದ್ದಿರುವ ರಸ್ತೆಗಳನ್ನು ತಕ್ಷಣವೇ ಸರಿಪಡಿಸಬೇಕೆಂದು ಮನವಿ ಮಾಡಲಾಯಿತು.

ಈ ನಿಯೋಗದಲ್ಲಿ ಮೆಹಬೂಬ್ ನಗರ ನಿವಾಸಿಗಳು  ಮತ್ತು ಯುವ ಮುಖಂಡರಾದ ಮೈನುದ್ದಿನ್, ಖಾಜಾ ಹುಸೇನ್ ಹಾಗೂ ಹೋರಾಟಗಾರ ಶರಣು ಪಾಟೀಲ್‌ ಸೇರಿದಂತೆ ಹಲವರು ಹಾಜರಿದ್ದರು.