🟠 LOCAL NEWS :”ಚಿಂಚೋಳಿ|ಕೆಪಿಎಸ್ ಚಂದಾಪುರ ಶಾಲೆಯಲ್ಲಿ ದಿವಂಗತ ಜಗನ್ನಾಥ ಪಾಟೀಲ್ 15ನೇ ಪುಣ್ಯಸ್ಮರಣೆ :  ಮಕ್ಕಳಿಗೆ ಪೆನ್ನು ವಿತರಣೆ” 

By admin

🟠LOCAL NEWS :“ಚಿಂಚೋಳಿ|ಕೆಪಿಎಸ್ ಚಂದಾಪುರ ಶಾಲೆಯಲ್ಲಿ ದಿ.ಜಗನ್ನಾಥ ಪಾಟೀಲ್ 15ನೇ ಪುಣ್ಯಸ್ಮರಣೆ : ಮಕ್ಕಳಿಗೆ ಪೆನ್ನು,ನೋಟ್‌ ಬುಕ್‌  ವಿತರಣೆ”

• ಸೆಕ್ಯುಲರ್‌ ವಾಯ್ಸ್‌ ನ್ಯೂಸ್‌ ಚಿಂಚೋಳಿ:

ಪಟ್ಟಣದ ಚಂದಾಪುರದಲ್ಲಿರುವ ಕರ್ನಾಟಕ ಪಬ್ಲಿಕ್ ಸ್ಕೂಲ್ (ಕೆಪಿಎಸ್) ನಲ್ಲಿ ದಿ. ಜಗನ್ನಾಥ ಪಾಟೀಲ್ ಅವರ 15ನೇ ವರ್ಷದ ಪುಣ್ಯತಿಥಿಯ ಅಂಗವಾಗಿ ಶಾಲೆಯ ವಿದ್ಯಾರ್ಥಿಗಳಿಗೆ ಪೆನ್ನು ವಿತರಣೆ ಕಾರ್ಯಕ್ರಮವನ್ನು ಶನಿವಾರ ನಡೆಯಿತು.

ಕಾರ್ಯಕ್ರಮದಲ್ಲಿ ಗ್ರೇಡ್–2 ತಹಶೀಲ್ದಾರ್ ವೆಂಕಟೇಶ್ ದುಗ್ಗನ್ ಅವರು ಮಕ್ಕಳಿಗೆ ಪೆನ್ನು ವಿತರಿಸಿ ಮಾತನಾಡಿ, “ನಾವೆಲ್ಲರೂ ತಂದೆ–ತಾಯಿಗಳ ಮಾತುಗಳನ್ನು ಗೌರವಿಸಿ, ಅವರಿಗೆ ಸೇವೆ ಮಾಡಿದರೆ ಜೀವನದಲ್ಲಿ ಉತ್ತಮ ನಾಗರಿಕರಾಗಬಹುದು. ತಂದೆ–ತಾಯಿಗೆ ಗೌರವ ನೀಡುವ ಸಂಸ್ಕಾರವೇ ಸಮಾಜದ ಶಕ್ತಿ” ಎಂದು ಹೇಳಿದರು.

ಇಂದಿನ ದಿನಗಳಲ್ಲಿ ಜನರು ತಮ್ಮ ಮಕ್ಕಳ ಅಥವಾ ಕುಟುಂಬದ ಹುಟ್ಟುಹಬ್ಬಗಳನ್ನು ಆಚರಿಸುವುದರಲ್ಲಿ ತೊಡಗಿರುವಾಗ, ಸಂಜೀವಕುಮಾರ್ ಪಾಟೀಲ್ ಅವರು ತಂದೆಯ ಪುಣ್ಯತಿಥಿಯನ್ನು ಮಕ್ಕಳ ಸೇವೆಯ ಮೂಲಕ ಆಚರಿಸಿರುವುದು ಅತ್ಯಂತ ಶ್ಲಾಘನೀಯ ಕಾರ್ಯ ಎಂದು ಪ್ರಶಂಸಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಪಕ್ಷದ ಹಿರಿಯ ಮುಖಂಡ ಗೋಪಾಲರಾವ್ ಕಟ್ಟಿಮನಿ ಅವರು, “ಸುಮಾರು 34 ವರ್ಷಗಳ ಹಿಂದೆ ಚಿಂಚೋಳಿ ನಗರದಲ್ಲಿ ಒಂದೇ ಒಂದು ಜ್ಯೋತಿ ಫೋಟೋ ಸ್ಟುಡಿಯೋ ಇತ್ತು. ಆ ಕಾಲದಲ್ಲೇ ದಿವಂಗತ ಜಗನ್ನಾಥ ಪಾಟೀಲ್ ಅವರು ಫೋಟೋಗ್ರಾಫಿಕ್ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸಿದ್ದರು. ಅವರ ಸೇವಾ ಪರಂಪರೆಯನ್ನು ಅವರ ಪುತ್ರ ಸಂಜೀವಕುಮಾರ್ ಪಾಟೀಲ್ ಅವರು ಪತ್ರಿಕೋದ್ಯಮ ಹಾಗೂ ಸಮಾಜ ಸೇವೆಯ ಮೂಲಕ ಮುಂದುವರಿಸುತ್ತಿರುವುದು ಸಂತಸದ ಸಂಗತಿ” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಹಿರಿಯ ಮುಖಂಡರಾದ ರಮೇಶ್ ಪಡೆಶೆಟ್ಟಿ ಐನಾಪುರ, ಪ್ರದೀಪ್ ದೇಶಮುಖ್, ವೀರೇಶ್ ದೇಸಾಯಿ, ಶಿವಶರಣಪ್ಪ ಡಂಗಿ, ನರಸಪ್ಪ, ಉಮೇಶ್ ಪೂಜಾರಿ, ಮಲ್ಲಿನಾಥ್ ಮೇಲಗಿರಿ, ಕೃಷ್ಣ ಕೊಳೂರು, ಶಾಲೆಯ ಮುಖ್ಯಶಿಕ್ಷಕ ಗೋಪಾಲ ಯಂಪಳ್ಳಿ ಸೇರಿದಂತೆ ಅನೇಕ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.