ಶಹಾಪುರ; 26ರಂದು ಬೃಹತ್ ರಕ್ತದಾನ- ಉಚಿತ ಆರೋಗ್ಯ ಶಿಬಿರ

By admin

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ 195ನೇ ಹುತಾತ್ಮ‌ ದಿನಾಚರಣೆ ಹಾಗೂ 77ನೇ ಗಣರಾಜ್ಯೋತ್ಸವ ನಿಮಿತ್ತ ಆಯೋಜನೆ

ಶಹಾಪುರ; 26ರಂದು ಬೃಹತ್ ರಕ್ತದಾನ- ಉಚಿತ ಆರೋಗ್ಯ ಶಿಬಿರ

Contents
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ 195ನೇ ಹುತಾತ್ಮ‌ ದಿನಾಚರಣೆ ಹಾಗೂ 77ನೇ ಗಣರಾಜ್ಯೋತ್ಸವ ನಿಮಿತ್ತ ಆಯೋಜನೆಶಹಾಪುರ; 26ರಂದು ಬೃಹತ್ ರಕ್ತದಾನ- ಉಚಿತ ಆರೋಗ್ಯ ಶಿಬಿರಸೆಕ್ಯುಲರ್ ವಾಯ್ಸ್ ನ್ಯೂಸ್ ಶಹಾಪುರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ 195ನೇ ಹುತಾತ್ಮ ದಿನಾಚರಣೆ ಹಾಗೂ 77ನೇ ಗಣರಾಜ್ಯೋತ್ಸವದ ನಿಮಿತ್ತ ಕರ್ನಾಟಕ ಪ್ರದೇಶ ಕುರುಬ ಸಂಘ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವಕ, ಕನಕ ನೌಕರರ ಸಂಘ ಮತ್ತು ಕನಕ ಗುತ್ತಿಗೆದಾರರ ಸಂಘದಿಂದ ಸಹಕಾರದೊಂದಿಗೆ ನಗರದ ಟೌನ್ ಹಾಲ್ ನಲ್ಲಿ ಜ.26ರಂದು ಬೃಹತ್ ರಕ್ತದಾನ- ಉಚಿತ ಆರೋಗ್ಯ ಶಿಬಿರ ಹಾಗೂ ನುಡಿನಮನ ಆಯೋಜಿಸಲಾಗಿದೆ ಎಂದು ಕಾಗಿನೆಲೆ ಗುರುಪೀಠದ ಧರ್ಮದರ್ಶಿಗಳಾದ ಡಾ.ಭೀಮಣ್ಣ ಮೇಟಿ ತಿಳಿಸಿದರು. ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊದಲಿಗೆ ಬ್ರಹ್ಮಲೀನರಾದ ಕಾಗಿನೆಲೆ ಕನಕ ಗುರುಪೀಠ ತಿಂಥಿಣಿ ಬ್ರಿಡ್ಜ್ ಕಲಬುರಗಿ ವಿಭಾಗದ ಪೂಜ್ಯ ಶ್ರೀ ಸಿದ್ಧರಮಾನಂದಪುರಿ ಮಹಾಸ್ವಾಮಿಗಳಿಗೆ ಬೆಳಗ್ಗೆ 10ಗಂಟೆಗೆ ನುಡಿನಮನ ನಡೆಯಲಿದೆ. ನಂತರ ಬೆಳಗ್ಗೆ 10ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಬೆಂಗಳೂರಿನ ಸಪ್ತಗಿರಿ ಹಾಗೂ ಸರಕಾರಿ ಸಾರ್ವಜನಿಕ ಆಸ್ಪತ್ರೆ ಸಂಯುಕ್ತಾಶ್ರಯದಲ್ಲಿ ಬೃಹತ್ ರಕ್ತದಾನ ಹಾಗೂ ಉಚಿತ ಆರೋಗ್ಯ ಶಿಬಿರ ನಡೆಯಲಿದ್ದು, ಹೃದಯ ರೋಗ, ನರರೋಗ, ಮೂತ್ರಪಿಂಡದ ಕಲ್ಲು, ಕ್ಯಾನ್ಸರ್ ಕುರಿತು ತಜ್ಞ ವೈದ್ಯರು ತಪಾಸಣೆ ಮಾಡಲಿದ್ದಾರೆ. ಸಮಾಜದ ಕುಲಬಾಂಧವರು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ‌ ಮಾಡಿದರು.ಶಿಬಿರಕ್ಕೆ ಬರುವಾಗ ತಪ್ಪದೆ ಬಿಪಿಎಲ್ ರೇಷನ್ ಕಾಡ್೯ ಹಾಗೂ ಆಧಾರ್ ಕಾರ್ಡ್ ತರಬೇಕು. ಶಿಬಿರದಲ್ಲಿ ಆಯ್ಕೆಯಾದ ರೋಗಿಗಳಿಗೆ ಉಚಿತವಾಗಿ ಹೆಚ್ಚಿನ ಚಿಕಿತ್ಸೆ ಅಥವಾ ಶಸ್ತ್ರ ಚಿಕಿತ್ಸೆಯನ್ನು ಸಪ್ತಗಿರಿ ಆಸ್ಪತ್ರೆ ಬೆಂಗಳೂರಿನಲ್ಲಿ ನೀಡಲಾಗುತ್ತದೆ ಎಂದು ತಿಳಿಸಿದರು. ಹಾಲಮತ ಸಮಾಜದ ಹಿರಿಯರಾದ ಗಿರಿಯಪ್ಪಗೌಡ ಬಾಣತಿಹಾಳ, ಕನಕ ನೌಕರರ ಸಂಘದ ಜಿಲ್ಲಾಧ್ಯಕ್ಷ ಅಯ್ಯಣ್ಣ ಇನಾಮದಾರ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವಕ ಸಂಘದ ಅಧ್ಯಕ್ಷ ರಾಮಪ್ಪ ಚಲವಾದಿ, ಕನಕ ನೌಕರರ ಸಂಘದ ತಾಲೂಕು ಅಧ್ಯಕ್ಷರಾದ ಧರ್ಮಣ್ಣಗೌಡ ಹುಲ್ಕಲ್, ಕನಕ ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಮಹಾಳಿಂಗರಾಯ ಮಂಡಗಳ್ಳಿ, ಶರಣುಗೌಡ ಪೊಲೀಸ್ ಪಾಟೀಲ್ ಸೈದಾಪುರ, ಶರಣಗೌಡ ಚಾಮನಾಳ, ನಾನೇಗೌಡ ಮೇಟಿ, ಮಲ್ಲಿಕಾರ್ಜುನ ಕಂದಕೂರ, ಶಾಂತಗೌಡ ನಾಗನಟಗಿ, ಭೀಮನಗೌಡ ದರಿಯಾಪುರ, ಶರಬಣ್ಣ ರಸ್ತಾಪುರ, ಸಿದ್ದಪ್ಪ‌ ಕನ್ಯಕೊಳೂರ, ದೇವೀಂದ್ರಪ್ಪ ನಾಶಿ, ಮಲ್ಲಿಕಾರ್ಜುನ ದೊರನಹಳ್ಳಿ, ಮಲ್ಲಪ್ಪ ಹಳಿಸಗರ, ಸಾಬಣ್ಣ ಚಟ್ನಳ್ಳಿ, ಬಲಭೀಮ ಮಡ್ನಾಳ, ಚಂದಪ್ಪ‌ ಮಡ್ನಾಳ, ಶಾಂತು ಅರಳಹಳ್ಳಿ, ಬಾಬುರಾವ ತಿಪ್ಪನಹಳ್ಳಿ, ಚಂದ್ರಶೇಖರ ದರಿಯಾಪುರ, ಮುನಿಯಪ್ಪಗೌಡ ನಾಗನಟಗಿ, ನಿಂಗಣ್ಣ‌ ನಾಗನಟಗಿ, ಮಾಳಪ್ಪ ಶೆಟ್ಟಿಕೇರಾ, ಭೀಮಣ್ಣಗೌಡ ಸೈದಾಪುರ, ನಿಂಗಣ್ಣ ಉಕ್ಕಿನಾಳ, ಮಲ್ಲಿಕಾರ್ಜುನ ಹೊತಪೇಠ, ನಿಂಗಣ್ಣ ಹೊತಪೇಠ, ಭೀಮಾಶಂಕರ ಹುಲ್ಕಲ್ ಸೇರಿದಂತೆ ಇತರರು ಇದ್ದರು.ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ 195ನೇ‌ ಹುತಾತ್ಮ ದಿನಾಚರಣೆ ನಿಮಿತ್ತ ಪ್ರತಿ ವರ್ಷವೂ ರಕ್ತದಾನ ಹಾಗೂ ಆರೋಗ್ಯ ಶಿಬಿರ ಆಯೋಜನೆ‌ ಮಾಡುತ್ತಾ ಬರಲಾಗುತ್ತಿದೆ. ಬ್ರಹ್ಮಲೀನರಾದ ಪೂಜ್ಯರಿಗೆ ನುಡಿನಮನ ಸೇರಿ ಈ ವರ್ಷ ಮೂರು ಕಾರ್ಯಕ್ರಮ ನಾನಾ ಸಂಘಗಳಿಂದ ಆಯೋಜನೆ ಮಾಡಲಾಗಿದೆ. -ಯಲ್ಲಪ್ಪ‌‌ ನರಿ, ಅಧ್ಯಕ್ಷರು, ಕರ್ನಾಟಕ ಪ್ರದೇಶ ಕುರುಬ ಸಂಘ ಶಹಾಪುರ.

ಸೆಕ್ಯುಲರ್ ವಾಯ್ಸ್ ನ್ಯೂಸ್ ಶಹಾಪುರ
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ 195ನೇ ಹುತಾತ್ಮ ದಿನಾಚರಣೆ ಹಾಗೂ 77ನೇ ಗಣರಾಜ್ಯೋತ್ಸವದ ನಿಮಿತ್ತ ಕರ್ನಾಟಕ ಪ್ರದೇಶ ಕುರುಬ ಸಂಘ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವಕ, ಕನಕ ನೌಕರರ ಸಂಘ ಮತ್ತು ಕನಕ ಗುತ್ತಿಗೆದಾರರ ಸಂಘದಿಂದ ಸಹಕಾರದೊಂದಿಗೆ ನಗರದ ಟೌನ್ ಹಾಲ್ ನಲ್ಲಿ ಜ.26ರಂದು ಬೃಹತ್ ರಕ್ತದಾನ- ಉಚಿತ ಆರೋಗ್ಯ ಶಿಬಿರ ಹಾಗೂ ನುಡಿನಮನ ಆಯೋಜಿಸಲಾಗಿದೆ ಎಂದು ಕಾಗಿನೆಲೆ ಗುರುಪೀಠದ ಧರ್ಮದರ್ಶಿಗಳಾದ ಡಾ.ಭೀಮಣ್ಣ ಮೇಟಿ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊದಲಿಗೆ ಬ್ರಹ್ಮಲೀನರಾದ ಕಾಗಿನೆಲೆ ಕನಕ ಗುರುಪೀಠ ತಿಂಥಿಣಿ ಬ್ರಿಡ್ಜ್ ಕಲಬುರಗಿ ವಿಭಾಗದ ಪೂಜ್ಯ ಶ್ರೀ ಸಿದ್ಧರಮಾನಂದಪುರಿ ಮಹಾಸ್ವಾಮಿಗಳಿಗೆ ಬೆಳಗ್ಗೆ 10ಗಂಟೆಗೆ ನುಡಿನಮನ ನಡೆಯಲಿದೆ. ನಂತರ ಬೆಳಗ್ಗೆ 10ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಬೆಂಗಳೂರಿನ ಸಪ್ತಗಿರಿ ಹಾಗೂ ಸರಕಾರಿ ಸಾರ್ವಜನಿಕ ಆಸ್ಪತ್ರೆ ಸಂಯುಕ್ತಾಶ್ರಯದಲ್ಲಿ ಬೃಹತ್ ರಕ್ತದಾನ ಹಾಗೂ ಉಚಿತ ಆರೋಗ್ಯ ಶಿಬಿರ ನಡೆಯಲಿದ್ದು, ಹೃದಯ ರೋಗ, ನರರೋಗ, ಮೂತ್ರಪಿಂಡದ ಕಲ್ಲು, ಕ್ಯಾನ್ಸರ್ ಕುರಿತು ತಜ್ಞ ವೈದ್ಯರು ತಪಾಸಣೆ ಮಾಡಲಿದ್ದಾರೆ. ಸಮಾಜದ ಕುಲಬಾಂಧವರು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ‌ ಮಾಡಿದರು.


ಶಿಬಿರಕ್ಕೆ ಬರುವಾಗ ತಪ್ಪದೆ ಬಿಪಿಎಲ್ ರೇಷನ್ ಕಾಡ್೯ ಹಾಗೂ ಆಧಾರ್ ಕಾರ್ಡ್ ತರಬೇಕು. ಶಿಬಿರದಲ್ಲಿ ಆಯ್ಕೆಯಾದ ರೋಗಿಗಳಿಗೆ
ಉಚಿತವಾಗಿ ಹೆಚ್ಚಿನ ಚಿಕಿತ್ಸೆ ಅಥವಾ ಶಸ್ತ್ರ ಚಿಕಿತ್ಸೆಯನ್ನು ಸಪ್ತಗಿರಿ ಆಸ್ಪತ್ರೆ ಬೆಂಗಳೂರಿನಲ್ಲಿ ನೀಡಲಾಗುತ್ತದೆ ಎಂದು ತಿಳಿಸಿದರು.
ಹಾಲಮತ ಸಮಾಜದ ಹಿರಿಯರಾದ ಗಿರಿಯಪ್ಪಗೌಡ ಬಾಣತಿಹಾಳ, ಕನಕ ನೌಕರರ ಸಂಘದ ಜಿಲ್ಲಾಧ್ಯಕ್ಷ ಅಯ್ಯಣ್ಣ ಇನಾಮದಾರ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವಕ ಸಂಘದ ಅಧ್ಯಕ್ಷ ರಾಮಪ್ಪ ಚಲವಾದಿ, ಕನಕ ನೌಕರರ ಸಂಘದ ತಾಲೂಕು ಅಧ್ಯಕ್ಷರಾದ ಧರ್ಮಣ್ಣಗೌಡ ಹುಲ್ಕಲ್, ಕನಕ ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಮಹಾಳಿಂಗರಾಯ ಮಂಡಗಳ್ಳಿ, ಶರಣುಗೌಡ ಪೊಲೀಸ್ ಪಾಟೀಲ್ ಸೈದಾಪುರ, ಶರಣಗೌಡ ಚಾಮನಾಳ, ನಾನೇಗೌಡ ಮೇಟಿ, ಮಲ್ಲಿಕಾರ್ಜುನ ಕಂದಕೂರ, ಶಾಂತಗೌಡ ನಾಗನಟಗಿ, ಭೀಮನಗೌಡ ದರಿಯಾಪುರ, ಶರಬಣ್ಣ ರಸ್ತಾಪುರ, ಸಿದ್ದಪ್ಪ‌ ಕನ್ಯಕೊಳೂರ, ದೇವೀಂದ್ರಪ್ಪ ನಾಶಿ, ಮಲ್ಲಿಕಾರ್ಜುನ ದೊರನಹಳ್ಳಿ, ಮಲ್ಲಪ್ಪ ಹಳಿಸಗರ, ಸಾಬಣ್ಣ ಚಟ್ನಳ್ಳಿ, ಬಲಭೀಮ ಮಡ್ನಾಳ, ಚಂದಪ್ಪ‌ ಮಡ್ನಾಳ, ಶಾಂತು ಅರಳಹಳ್ಳಿ, ಬಾಬುರಾವ ತಿಪ್ಪನಹಳ್ಳಿ, ಚಂದ್ರಶೇಖರ ದರಿಯಾಪುರ, ಮುನಿಯಪ್ಪಗೌಡ ನಾಗನಟಗಿ, ನಿಂಗಣ್ಣ‌ ನಾಗನಟಗಿ, ಮಾಳಪ್ಪ ಶೆಟ್ಟಿಕೇರಾ, ಭೀಮಣ್ಣಗೌಡ ಸೈದಾಪುರ, ನಿಂಗಣ್ಣ ಉಕ್ಕಿನಾಳ, ಮಲ್ಲಿಕಾರ್ಜುನ ಹೊತಪೇಠ, ನಿಂಗಣ್ಣ ಹೊತಪೇಠ, ಭೀಮಾಶಂಕರ ಹುಲ್ಕಲ್ ಸೇರಿದಂತೆ ಇತರರು ಇದ್ದರು.


ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ 195ನೇ‌ ಹುತಾತ್ಮ ದಿನಾಚರಣೆ ನಿಮಿತ್ತ ಪ್ರತಿ ವರ್ಷವೂ ರಕ್ತದಾನ ಹಾಗೂ ಆರೋಗ್ಯ ಶಿಬಿರ ಆಯೋಜನೆ‌ ಮಾಡುತ್ತಾ ಬರಲಾಗುತ್ತಿದೆ. ಬ್ರಹ್ಮಲೀನರಾದ ಪೂಜ್ಯರಿಗೆ ನುಡಿನಮನ ಸೇರಿ ಈ ವರ್ಷ ಮೂರು ಕಾರ್ಯಕ್ರಮ ನಾನಾ ಸಂಘಗಳಿಂದ ಆಯೋಜನೆ ಮಾಡಲಾಗಿದೆ.
-ಯಲ್ಲಪ್ಪ‌‌ ನರಿ, ಅಧ್ಯಕ್ಷರು, ಕರ್ನಾಟಕ ಪ್ರದೇಶ ಕುರುಬ ಸಂಘ ಶಹಾಪುರ.