ಆದಿಕವಿ ವಾಲ್ಮೀಕಿಯು ವಾಲಿಯೊಂದಿಗೆ ಯುದ್ಧಕ್ಕೆ ಬಂದ

By admin


ಮುಂದುವರೆಸಿ ಅಗಸ್ತ್ಯ” ಹಠಮಾರಿ ರಾವಣI
ಪುನಃ ಮುಂದುವರಿಸಿದ ಯುದ್ಧಕ್ಕಾಗಿ ದಂಡಯಾತ್ರೆ;II
ಹುಡುಕುತ ತನಗೆ ಸಮಬಲರನು ರಾವಣI
ಬಂದ ಕಿಷ್ಕಿಂದ ಗವಿರಾಜ್ಯ ಬಳಿ; II
ರಾಜಾ ವಾಲಿಗೆ ಕಳಿಸಿದ ರಾವಣI
ತನ್ನೊಂದಿಗೆ ಯುದ್ಧ ಮಾಡುವ ಸಂದೇಶ; II
ವಾಲಿ ಸಂಬಂಧಿ, ಪತ್ನಿ ತಾರಾ, ಮಾವ ಸುಶೇಣ,I
ಸಹೋದರ ಸುಗ್ರೀವ ನುಡಿದರು ರಾವಣನಿಗೆ: II
ʻಓ ರಾಕ್ಷಸೇಂದ್ರಾ, ವಾನರಶ್ರೇಷ್ಠ ವಾಲಿ I
ಈಗ ಇಲ್ಲ, ಸಂದ್ಯಾ ಪೂಜೆಗೆ ಹೋಗಿಹನು,II
ಜಲ ತರಲು ನಾಲ್ಕು ದೆಸೆ ಸಮುದ್ರಗಳತ್ತ I
ನೀನ ಆಹ್ವಾನ ವಾಲಿ ಸ್ವೀಕರಿಸಿಹನು, II
ಮತ್ಯಾರು ವಾನರಶ್ರೇಷ್ಠರು ನಿನ್ನೊಂದಿಗೆ ಕಾದ ಬಹುದೇ?I
ಓ ರಾವಣ, ವಾಲಿ ಬರುವರೆಗೆ ಇರು ತಾಳ್ಮೆದಿ;II
ನೋಡು ಆ ಮೂಳೆಗಳ ರಾಶಿ ಬೆಟ್ಟ,ಅದುI
ವಾಲಿ ಪರಾಕ್ರ ಪರೀಕ್ಷಸಿಲು ಬಂದವನ ಗತಿ; II
ಓ ರಾವಣಾ, ಅಮೃತವನ್ನು ಸೇವಿಸಿದ್ದರೂ ನೀ,I
ವಾಲಿನ ಕೆಣಕಿ ಬದುಕಿ ಉಳಿಯಲಾರೆ ನೀ;II
ನಿನಗೆ ಬೇಗ ಮೃತ್ಯಬೇಕಾಗಿದ್ದರೇ ದಕ್ಷಿಣI
ಸಮುದ್ರಕ್ಕೆ ಹೋಗು, ಯಜ್ಞ ಮಾಡುತಿಹನು ವಾಲಿʼ. II
ತಿಳಿದು ವಾಲಿ ಸುಳಿವು ರಾವಣ ನಡೆದI
ದಕ್ಷಿಣಸಮುದ್ರದತ್ತ ತಕ್ಷಣ ಏರಿ ಪುಷ್ಪಕವಿಮಾನ;II
ಕಂಡನು ರಾವಣ ಸಂಧ್ಯಾವಂದನೆನಿರತ I
ಸ್ವರ್ಣಪರ್ವತಾಕಾರದ ವಾಲಿಯನು ದಕ್ಷಿಣಸಮುದ್ರತಟದಲಿ; II
ಪುಷ್ಪಕವಿಮಾನದಿ ಕೆಳಗಿಳಿದು ರಾವಣ ಸದ್ದಿಲ್ಲದೆ ಬಂಧಿಸಲು I
ಹೊರಟ ವಾಲಿ ಬಳಿ; ಆಕ್ಮಾತಾಗಿ ವಾಲಿ ದೃಷ್ಠಿ II
ಬಿತ್ತು ರಾವಣನ ಮೇಲೆ,ಅರಿತ ಅವನ ಕುತಂತ್ರ;I
ಕುಳಿತ ವಾಲಿ ಅಳುಕದೆ, ಮೊಲದ ಮುಂದೆ ಸಿಂಹದಂತೆ, II
ಸರ್ಪದ ಮುಂದೆ ಗರುಡನಂತೆ; I
ʻಕಪಟ ರಾವಣ ಬಂಧಿಸಲು ಬಂದಿಹನು ಎನ್ನ, ಕಟ್ಟಿ ಅವನ ಎನ್ನ ಕಾವಲಿಗೆII
ಸುತ್ತುವೆ ಮೂರು ಸಮುದ್ರದೀಸೆ; I
ನನ್ನ ಪಯಣ ಮುಗಿಸುವ ವೇಳೆಗೆ ನೇತಾಡುವ ರಾವಣನ ಅಂಗಾಂಗಗಳುII
ನಿತ್ರಾಣವಾಗುವವು ಗರುಡನ ಕಾಲಿಗೆI
ಸಿಕ್ಕ ನೇತಾಡುವ ಸರ್ಪದಂತೆʼ.II
ಹೀಗೆ ಯೋಚಿಸುತ್ತ ವಾಲಿ ಲೀನವಾದ ಜಪದಲಿ,I
ಹೊಂಚ ಹಾಕಿದರು ಇಬ್ಬರೂ ಬಂಧಿಸಲು ಪರಸ್ಪರರನು;II
ರಾವಣನ ಕದ್ದು ಹೆಜ್ಜೆ ಸಪ್ಪಳ ಬೆನ್ನು ಹಿಂದೆI
ಬರುತಿದ್ದಂತೆ ವಾಲಿ ತಕ್ಷಣ ತಿರುಗಿ ಬಂಧಿಸಿದ ರಾವಣನ: II
ರಾವಣ ವಾಲಿನ ಬಂಧಿಸುವೆ ಮೊದಲೆ ಎಚ್ಚತ್ತುಗೊಂಡ I
ವಾಲಿ ಬಲವಾಗಿ ಬಂಧಿಸಿದ ರಾವಣನ ವಾಲಿ; II
ಆಕಾಶಕ್ಕೆ ಗರುಡ ಸರ್ಪನ್ನು ಹಿಡಿದು ಹಾರುವಂತೆ I
ರಾವಣನ ಬಂಧಿಸಿ ಕಾವಲಿಗೆ ಜೋತುಬಿಟ್ಟ ಹಾರಿದ ವಾಲಿ; II
ರಾವಣನ ಬಿಡಿಸಿಕೊಳ್ಳಲು ರಾವಣನ ಮಂತ್ರಿಗಳುI
ಮುಗಿಬಿದ್ದರು ವಾಲಿ ಮೇಲೆ ಆಕಾಶದಲಿ; II
ನಡೆದ ಸೂರ್ಯನಂತೆ ವಾಲಿ ಮುಂದೆ ಮುಂದೆ,I
ಬೆನ್ನಟ್ಟಿದರು ಮೋಡಗಳಂತೆ ರಾಕ್ಷಸರು ಹಿಂದೆ ಹಿಂದೆ; II
ಹೀಗೆ ವಾಲಿ ಪಶ್ಚಿಮ, ಉತ್ತರ ವ ಪೂರ್ವI
ಸಮುದ್ರಗಳತ್ತ ಪಯಣಿಸಿ ಸಲ್ಲಿಸಿದ ಸಂಧ್ಯಾವಂದನೆ; II
ರಾಕ್ಷಸರ ಕೈಗೆ ಸಿಗದೇ ಅತಿ ವೇಗದಿI
ವಾಲಿ ತನ್ನ ಕಾರ್ಯ ಮುಗಿಸಿದ, ನೇತಾಡುತಿದ್ದ ರಾವಣ; II
ರಾವಣನ್ನು ನೇತಾಡಿಸಿಕೊಂಡೇ ವಾಲಿ ಮರಳಿದI
ಕಿಷ್ಕಿಂಧಕ್ಕೆ, ದಣಿದರು ಸುತ್ತಿ ಸುತ್ತಿ ರಾಕ್ಷಸವೀರರು;II
ತೂಗಿ ತೂಗಿ ರಾವಣನ ಕಣ್ಣುಗಳುI
ಮಂಪೇರಿದವು,ರಾವಣ ವಾಲಿಗೆ ನುಡಿದ: II
ʻಓ ವಾನರೇಶ್ವರಾ, ನಿನ್ನೊಂದಿಗೆ ಯುದ್ಧಕ್ಕೆ I
ಬಂದ ನಾನೇ ಸೆರೆಯಾಳಾದೆ ನಿನಗೆ; II
ಎಂಥಾ ಸಾಮರ್ಥ್ಯ, ಸಾಹಸ,ಬಲ ನಿನ್ನದು!I
ಎನ್ನ ಜೊತಾಡಿಸಿಕೊಂಡು ಸುತ್ತಿದೆ ಭೂಮಂಡಳ!! II
ಮೆಚ್ಚಿದೆ ನಿನ್ನ ವೇಗ,ಬಲ,ಯುಕ್ತಿ!I
ನಿನ್ನ ಸ್ನೇತನ್ನಾಗಿ ಮಾಡಿಕೋ ಎನ್ನ; II
ಪತ್ನಿಯರು, ಪುತ್ರರು, ನಗರ, ರಾಜ್ಯ
ಎಲ್ಲವೂ ಸುಖಿಗಳಾಗುವವು ನಮ್ಮ ಸ್ನೇಹದಿ; II
ವಾಲಿ ಒಪ್ಪಿದ ರಾವಣನ ಸ್ನೇಹ,I
ಎರಡು ಸಿಂಹಗಳಂತೆ ಮೇರೆದರು ವಾಲಿ ವ ರಾವಣ; II
ಓ ರಾಮಾ ಅಂತಹ ಬಲಶಾಲಿಗಳನ್ನುI
ಸಂಹರಿಸಿರುವೆ ನೀ, ಅಮೂಲ್ಯ ನಿನ್ನ ಕಾರ್ಯ”.II
ಉತ್ತರಕಾಂಡ

ಆದಿಕವಿ ವಾಲ್ಮೀಕಿಯು ವಾಲಿಯೊಂದಿಗೆ ಯುದ್ಧಕ್ಕೆ ಬಂದ ರಾವಣನು ಸ್ವತಃ ಅವನ ಸೆರೆಯಾಳು ಆಗಿ ಅವನ್ನೊಂದಿಗೆ ಸ್ನೇಹ ಬೆಳೆಸಿದ ಘಟನೆಯನ್ನು ವಿವರಿಸಿರುವರು, ವಾಲಿಯು ರಾವಣನ ಮೀರಿಸುವ ಪರಾಕ್ರಮ ಹೊಂದಿದ್ದನು ಆದಿ ಕವಿ ಇಲ್ಲಿ ಒತ್ತು ನೀಡಿ ಹೀಗೆ ವಿವರಿಸಿರುವರು: ಹಾಗೇಯೇ ರಾವಣನ ಕಥೆಯನ್ನು ಮುಂದುವರೆಸುತ ಅಗಸ್ತ್ಯರು ” ಹಠಮಾರಿ ರಾವಣನು ಯುದ್ಧಕ್ಕಾಗಿ ತನ್ನ ದಂಡಯಾತ್ರೆಯನ್ನು ಪುನಃ ಮುಂದುವರಿಸಿದನು; ತನಗೆ ಸಮಬಲರನು ಹುಡುಕುತ ರಾವಣನು ಕಿಷ್ಕಿಂದ ಗವಿರಾಜ್ಯ ಬಳಿ ಬಂದನು; ರಾವಣನು ತನ್ನೊಂದಿಗೆ ಯುದ್ಧ ಮಾಡುವ ಸಂದೇಶ ರಾಜಾ ವಾಲಿಗೆ ಕಳಿಸಿದನು; ವಾಲಿ ಸಂಬಂಧಿ, ಪತ್ನಿ ತಾರಾ, ಮಾವ ಸುಶೇಣ, ಸಹೋದರ ಸುಗ್ರೀವ ರಾವಣನಿಗೆ ಹೇಳಿದರು ʻಓ ರಾಕ್ಷಸೇಂದ್ರಾ, ವಾನರಶ್ರೇಷ್ಠ ವಾಲಿ ಈಗ ಕಿಷ್ಕಿಂಧದಲಿ ಇಲ್ಲ, ಸಂದ್ಯಾ ಪೂಜೆಗೆ ಜಲ ತರಲು ನಾಲ್ಕು ದೆಸೆ ಸಮುದ್ರಗಳತ್ತ ಹೋಗಿರುವನು, ನೀನ ಯುದ್ಧ ಆಹ್ವಾನವನ್ನು ವಾಲಿ ಸ್ವೀಕರಿಸುವನು, ಮತ್ಯಾರು ವಾನರಶ್ರೇಷ್ಠರು ನಿನ್ನೊಂದಿಗೆ ಕಾದ ಬಹುದೇ? ಓ ರಾವಣ, ವಾಲಿ ಬರುವರೆಗೆ ತಾಳ್ಮೆಯಿಂದ ಇರು; ಅಲ್ಲಿ ನೋಡು ಆ ಮೂಳೆಗಳ ರಾಶಿ ಬೆಟ್ಟ, ಅದು ವಾಲಿ ಪರಾಕ್ರ ಪರೀಕ್ಷಸಿಲು ಬಂದವನ ಗತಿ; ಓ ರಾವಣಾ, ನೀನು ಅಮೃತವನ್ನು ಸೇವಿಸಿದ್ದರೂ ವಾಲಿಯನ್ನು ಕೆಣಕಿ ಬದುಕಿ ಉಳಿಯಲಾರೆ; ನಿನಗೆ ಬೇಗ ಮೃತ್ಯಬೇಕಾಗಿದ್ದರೇ ದಕ್ಷಿಣ ಸಮುದ್ರಕ್ಕೆ ಹೋಗು, ಅಲ್ಲಿ ವಾಲಿ ಯಜ್ಞ ಮಾಡುತಿರುವನುʼ. ವಾಲಿ ಸುಳಿವು ತಿಳಿದು ರಾವಣನು ತಕ್ಷಣ ಏರಿ ಪುಷ್ಪಕವಿಮಾನ ದಕ್ಷಿಣಸಮುದ್ರದತ್ತ ನಡೆದನು; ಸಂಧ್ಯಾವಂದನೆನಿರತ ಸ್ವರ್ಣಪರ್ವತಾಕಾರದ ವಾಲಿಯನು ದಕ್ಷಿಣಸಮುದ್ರತಟದಲಿ ರಾವಣ ಕಂಡನು; ಪುಷ್ಪಕವಿಮಾನದಿಂದ ಕೆಳಗಿಳಿದು ರಾವಣನನು ಸದ್ದುಮಾಡದೇ ಬಂಧಿಸಲು ವಾಲಿ ಬಳಿ ಹೊರಟನು; ಆಕಸ್ಮಾತಾಗಿ ವಾಲಿಯ ದೃಷ್ಠಿ ರಾವಣನ ಮೇಲೆ ಬಿತ್ತು, ವಾಲಿಯು ಅವನ ಕುತಂತ್ರ ಅರಿತು ಅಳುಕದೆ ಕುಳಿತನು ಹಾಗು ಮನದಲ್ಲಿ ಅಂದುಕೊಂಡನು ʼಮೊಲದ ಮುಂದೆ ಸಿಂಹದಂತೆ, ಸರ್ಪದ ಮುಂದೆ ಗರುಡನಂತೆ ಕಪಟ ರಾವಣ ನನ್ನ ಬಂಧಿಸಲು ಬಂದಿರುವನು, ನಾನೇ ಅವನನ್ನು ನನ್ನ ಕಾವಲಿಗೆ ಕಟ್ಟಿ ಮೂರು ಸಮುದ್ರ ದಿಸೆಗಳನ್ನು ಸುತ್ತುವೆ, ನನ್ನ ಪಯಣ ಮುಗಿಸುವ ವೇಳೆಗೆ ಗರುಡನ ಕಾಲಿಗೆ ಸಿಕ್ಕ ನೇತಾಡುವ ಸರ್ಪದಂತೆ ನೇತಾಡುವ ರಾವಣನ ಅಂಗಾಂಗಗಳು ನಿತ್ರಾಣವಾಗುವವುʼ.ಹೀಗೆ ಯೋಚಿಸುತ್ತ ವಾಲಿ ತನ್ನ ಜಪದಲಿ ಲೀನವಾದನು, ಇಬ್ಬರೂ ಬಂಧಿಸಲು ಪರಸ್ಪರರನು ಹೊಂಚ ಹಾಕಿದರು; ರಾವಣನ ಕದ್ದು ಹೆಜ್ಜೆ ಸಪ್ಪಳ ಬೆನ್ನು ಹಿಂದೆ ಬರುತಿದ್ದಂತೆ ವಾಲಿ ತಕ್ಷಣ ತಿರುಗಿ ರಾವಣನನ್ನು ಬಂಧಿಸಿದನು: ರಾವಣ ವಾಲಿಯನ್ನು ಬಂಧಿಸುವೆ ಮೊದಲೆ ಎಚ್ಚತ್ತುಗೊಂಡ ವಾಲಿಯು ರಾವಣನನ್ನು ಬಲವಾಗಿ ಬಂಧಿಸಿದನು; ಆಕಾಶಕ್ಕೆ ಗರುಡ ಸರ್ಪನ್ನು ಹಿಡಿದು ಹಾರುವಂತೆ ವಾಲಿಯು ರಾವಣನನ್ನು ಬಂಧಿಸಿ ಕಾವಲಿಗೆ ಜೋತುಬಿಟ್ಟ ಹಾರಿದನು; ರಾವಣನನ್ನು ಬಿಡಿಸಿಕೊಳ್ಳಲು ರಾವಣನ ಮಂತ್ರಿಗಳು ಆಕಾಶದಲಿ ವಾಲಿ ಮೇಲೆ ಮುಗಿಬಿದ್ದರು; ವಾಲಿಯು ಸೂರ್ಯನಂತೆ ಮುಂದೆ ಮುಂದೆ ಚಲಿಸಿದನು, ಮೋಡಗಳಂತೆ ರಾಕ್ಷಸರು ಅವನ ಹಿಂದೆ ಹಿಂದೆ ಬೆನ್ನಟ್ಟಿದರು; ಹೀಗೆ ವಾಲಿಯು ಪಶ್ಚಿಮ, ಉತ್ತರ ಮತ್ತು ಪೂರ್ವ ಸಮುದ್ರಗಳತ್ತ ಪಯಣಿಸಿ ಸಂಧ್ಯಾವಂದನೆ ಸಲ್ಲಿಸಿದನು; ರಾಕ್ಷಸರ ಕೈಗೆ ಸಿಗದೇ ಅತಿ ವೇಗದಿಂದ ವಾಲಿಯು ತನ್ನ ಕಾರ್ಯ ಮುಗಿಸಿದನು, ರಾವಣನು ಹಾಗೆ ಕಾವಲಿಗೆ ನೇತಾಡುತಿದ್ದನು; ರಾವಣನ್ನು ನೇತಾಡಿಸಿಕೊಂಡೇ ವಾಲಿ ಮರಳಿದ ಕಿಷ್ಕಿಂಧಕ್ಕೆ, ವಾಲಿಯ ಹಿಂದೆ ಸುತ್ತಿ ಸುತ್ತಿ ರಾಕ್ಷಸವೀರರು ದಣಿದರು; ಕಾವಲಿಗೆ ತೂಗಿ ತೂಗಿ ರಾವಣನ ಕಣ್ಣುಗಳು ಮಂಪೇರಿದವು,ರಾವಣ ವಾಲಿಗೆ ಅರುಹಿದನು ʻಓ ವಾನರೇಶ್ವರಾ, ನಿನ್ನೊಂದಿಗೆ ಯುದ್ಧಕ್ಕೆ ಬಂದ ನಾನೇ ನಿನ್ನ ಸೆರೆಯಾಳಾದೆ, ನಿನ್ನದು ಎಂಥಾ ಸಾಮರ್ಥ್ಯ, ಸಾಹಸ, ಬಲ! ನನ್ನನ್ನು ಜೊತಾಡಿಸಿಕೊಂಡು ಸುತ್ತಿದೆ ಭೂಮಂಡಳ!! ಮೆಚ್ಚಿದೆ ನಿನ್ನ ವೇಗ,ಬಲ,ಯುಕ್ತಿ! ನನ್ನನು ನಿನ್ನ ಸ್ನೇತನ್ನಾಗಿ ಮಾಡಿಕೋ; ನಮ್ಮ ಸ್ನೇಹದಿಂದ ಪತ್ನಿಯರು, ಪುತ್ರರು, ನಗರ, ರಾಜ್ಯ,ಎಲ್ಲವೂ ಸುಖಿಗಳಾಗುವವು; ವಾಲಿಯು ರಾವಣನ ಸ್ನೇಹ ಒಪ್ಪಿದನು, ವಾಲಿ ಮತ್ತು ರಾವಣ ಎರಡು ಸಿಂಹಗಳಂತೆ ಮೇರೆದರು; ಓ ರಾಮಾ, ನೀನು ಅಂತಹ ಬಲಶಾಲಿಗಳನ್ನು ಸಂಹರಿಸಿರುವೆ, ನೀನ್ನದು, ಅಮೂಲ್ಯ ಕಾರ್ಯ ಸಾಧನೆ”.
-ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ‌.