
ಅಗಸ್ತ್ಯ ಮುನಿ ಹೇಳಿದ ರಾಮನಿಗೆ ರಾವಣನ I
ವೃತ್ತಾಂತ, ನಡೆಯಿತು ಆತ್ಮಜ್ಞಾನ ಮಂಥನವು;II
ಬಂದ ಎಲ್ಲ ಋಷಿ ಮುನಿಗಳು ಶುಭI
ಹಾರೈಸಿ ಮರಳಿದರು ತಮ್ಮ ಆಶ್ರಮಗಳತ್ತ; II
ಹಾಡಿದರು ಕಿನ್ನರರು ಮಧುರ ದ್ವನಿಯಲಿ,I
ಸಂಜೆ ಕಳೆಯಿತು ರಾಮನ ಸನ್ನಿಧಿಯಲಿ ಸಂಭ್ರದಲಿ; II
ರಾತ್ರಿ ಕಳೆದರು ಅರಮನೆಯಲಿ ರಾಮ ಸೀತೆI
ಸಹೋದರರು ತಾಯಂದಿರು ಸ್ನೇಹಿತರು ಸಂತೋಷದಿ; II
ವಾನರ, ಕರಡಿ, ರಾಕ್ಷಸ, ಜನಕರಾಜ,I
ಬಂಧು ಬಳಗವನ್ನು ಬೀಳ್ಕೊಟ್ಟನು ರಾಮ; II
ನಡೆಯಿತು ರಾಮನ ರಾಜ್ಯ ಆಡಳಿತI
ದಶಮಾನದವರೆಗೆ ಸತ್ಯನಿಷ್ಠದಿ, ಧರ್ಮನಿಷ್ಠೆದಿ; II
ರಾಮರಾಜ್ಯದಲಿ ಸುಖಿಗಳಾಗಿದ್ದರು ವಿಧುವೆಯರು,ವಿಪತ್ತು, I
ವಿಕೋಪಗಳು ಸುಳಿಯಲಿಲ್ಲ, ಜನ ಸುಖಿಗಳಾಗಿದ್ದರು; II
ರಾಜ್ಯದಲಿ ಕಳ್ಳರಿಲ್ಲ, ಕ್ರೂರ ಪ್ರಾಣಿ ಉಪಟಳವಿಲ್ಲ, I
ದರೋಡೆಗಳಿಲ್ಲ, ರೋಗರುಜಿಗಳಿಲ್ಲ, ಬರಗಾಲವಿಲ್ಲ, II
ಅತೀವೃಷ್ಠಿಯಿಲ್ಲ;ಋತುಗಳು ನಿಯಮ ಮೀರಲಿಲ್ಲ, I
ವೃಕ್ಷಗಳು ಹೂ ಫಲಧರಿಸದವು ಋತುಗಳಂತೆ; II
ಯುವಕ ಯುವತಿಯರು, ವೃದ್ಧರು, ಮಕ್ಕಳುI
ನಿರ್ಭಯ, ನಿರ್ಭೀಡವಾಗಿದ್ದರು ರಾಮರಾಜ್ಯದಲಿ; II
ಕೊಲೆ, ಜಗಳ, ಮೋಸಗಳಿಲ್ಲ, ದೋಷಗಳಿಲ್ಲ ಸತ್ಯ,ಧರ್ಮನಿಷ್ಠೆ, I
ಯಜ್ಞ, ಸಂಸ್ಕಾರಗಳಿದ್ದವು ರಾಮರಾಜ್ಯದಲಿ; II
ಎಲ್ಲರಿಗೂ ಆಹಾರ, ವಸತಿ, ವಿದ್ಯೆ, ಪಶುಧನ,ಭೂಮಿ,I
ಸೇವೆಗಳು, ಸರ್ವರೂ ಸುಖಿಗಳಾಗಿದ್ದರು ರಾಮರಾಜ್ಯದಲಿ;II
ಎತ್ತ ನೋಡಿದರು ರಾಮನ ಗುಣಗಾನI
ರಾಮಾ, ರಾಮಾ, ನಾಮ ದ್ವನಿ ತ್ರಿಲೋಕಗಳಲ್ಲಿ; II
ಪತ್ನಿಯೊಂದಿಗೆ ಸುಖವಾಗಿದ್ದ ರಾಮ, ಬಂದುI
ಹೋದವು ಋತುಗಳು ನೀಡುತ ಉಲ್ಲಾಸ. II
ಉತ್ತರಕಾಂಡ
ಆದಿಕವಿ ವಾಲ್ಮೀಕಿಯು ವಾಲಿಯೊಂದಿಗೆ ಯುದ್ಧಕ್ಕೆ ಬಂದ ರಾವಣನು ಸ್ವತಃ ಅವನ ಸೆರೆಯಾಳು ಆಗಿ ಅವನ್ನೊಂದಿಗೆ ಸ್ನೇಹ ಬೆಳೆಸಿದ ಘಟನೆಯನ್ನು ವಿವರಿಸಿರುವರು, ವಾಲಿಯು ರಾವಣನ ಮೀರಿಸುವ ಪರಾಕ್ರಮ ಹೊಂದಿದ್ದನು ಆದಿ ಕವಿ ಇಲ್ಲಿ ಒತ್ತು ನೀಡಿ ಹೀಗೆ ವಿವರಿಸಿರುವರು: ಹೀಗೆ ಅಗಸ್ತ್ಯ ಮುನಿಗಳು ರಾಮನಿಗೆ ರಾವಣನ ವೃತ್ತಾಂತ ಹೇಳಿದನು, ಅದೇವೇಳೆ ಮುನಿಗಳ ಮಧ್ಯೆ ಆತ್ಮಜ್ಞಾನದ ಮಂಥನವು ನಡೆಯಿತು; ಅಲ್ಲಿ ನೆರೆದಿದ್ದ ಎಲ್ಲ ಋಷಿ ಮುನಿಗಳು ರಾಮನಿಗೆ ಶುಭ ಹಾರೈಸಿ ತಮ್ಮ ಆಶ್ರಮಗಳತ್ತ ಮರಳಿದರು; ಕಿನ್ನರರು ಮಧುರ ದ್ವನಿಯಲಿ ಹಾಡಿದರು, ರಾಮನ ಸನ್ನಿಧಿಯಲಿ, ಸಂಭ್ರದಲಿ ಅಂದಿನ ಸಂಜೆ ಕಳೆಯಿತು; ಅರಮನೆಯಲಿ ರಾಮ, ಸೀತೆ, ರಾಮನ ಸಹೋದರರು ತಾಯಂದಿರು ಸ್ನೇಹಿತರು ಸಂತೋಷದಿಂದ ರಾತ್ರಿ ಕಳೆದರು; ಮಾರನೇ ದಿನ ವಾನರ, ಕರಡಿ, ರಾಕ್ಷಸ, ಜನಕರಾಜ,ಬಂಧು ಬಳಗ ಎಲ್ಲರನ್ನೂ ರಾಮನು ಬಿಳ್ಕೊಟ್ಟನು; ಸತ್ಯನಿಷ್ಠೆ, ಧರ್ಮನಿಷ್ಠೆಯಿಂದ ರಾಮನ ರಾಜ್ಯ ಆಡಳಿತವು ದಶಮಾನದವರೆಗೆ ನಡೆಯಿತು; ರಾಮರಾಜ್ಯದಲಿ ವಿಧುವೆಯರು ಸುಖಿಗಳಾಗಿದ್ದರು, ವಿಪತ್ತು, ವಿಕೋಪಗಳು ಸುಳಿಯಲಿಲ್ಲ, ಜನ ಸುಖಿಗಳಾಗಿದ್ದರು; ರಾಮರಾಜ್ಯದಲಿ ಕಳ್ಳರಿಲ್ಲ, ಕ್ರೂರ ಪ್ರಾಣಿ ಉಪಟಳವಿಲ್ಲ, ದರೋಡೆಗಳಿಲ್ಲ, ರೋಗರುಜಿಗಳಿಲ್ಲ, ಬರಗಾಲವಿಲ್ಲ, ಅತೀವೃಷ್ಠಿಯಿಲ್ಲ, ಋತುಗಳು ನಿಯಮ ಮೀರಲಿಲ್ಲ, ವೃಕ್ಷಗಳು ಋತುಗಳಂತೆ ಹೂ ಫಲಧರಿಸದವು; ರಾಮರಾಜ್ಯದಲಿ ಯುವಕ ಯುವತಿಯರು, ವೃದ್ಧರು, ಮಕ್ಕಳು ನಿರ್ಭಯ, ನಿರ್ಭೀಡವಾಗಿದ್ದರು; ಕೊಲೆಗಳಿಲ್ಲ, ಜಗಳಗಳಿಲ್ಲ, ಮೋಸಗಳಿಲ್ಲ, ದೋಷಗಳಿಲ್ಲಸತ್ಯ, ಧರ್ಮನಿಷ್ಠೆ, ಯಜ್ಞ, ಸಂಸ್ಕಾರಗಳಿದ್ದವು; ರಾಮರಾಜ್ಯದಲಿ ಎಲ್ಲರಿಗೂ ಆಹಾರ, ವಸತಿ, ವಿದ್ಯೆ, ಪಶುಧನ,ಭೂಮಿ, ಸೇವೆಗಳು ಲಭ್ಯವಾಗಿದ್ದವು, ರಾಮರಾಜ್ಯದಲಿ ಸರ್ವರೂ ಸುಖಿಗಳಾಗಿದ್ದರು; ಎತ್ತ ನೋಡಿದರು ರಾಮಾ, ರಾಮಾ, ನಾಮ ದ್ವನಿ ತ್ರಿಲೋಕಗಳಲ್ಲಿ ರಾಮನ ಗುಣಗಾನ ಕಾಣುತಿತ್ತು; ರಾಮನು ಪತ್ನಿ ಸೀತೆಯೊಂದಿಗೆ ಸುಖವಾಗಿದ್ದನು, ಋತುಗಳು ನೀಡುತ ಉಲ್ಲಾಸ ಬಂದು ಹೋದವು”.
-ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ.
