ಸೀತೆಗೆ ವಾಲ್ಮೀಕಿ ಮುನಿ ಆಶ್ರಮದ ಆತಿಥ್ಯ

By admin


ಮೊಮ್ಮಕ್ಕಳೊಂದಿಗೆ ವಿಪಸಾನದೀ ಆಶ್ರಮದಿ I
ಚಿತ್ವನ ಆಶ್ರಮಕ್ಕೆ ಮರಳುತಿದ್ದ ಭಗವನ್ ವಾಲ್ಮೀಕಿ,II
ಅರಣ್ಯದಲ್ಲಿ ಗರ್ಭಿಣಿ ಸೀತೆಯನ್ನು ಕಂಡು ಮೊಮ್ಮಕ್ಕಳು I
ಆಶ್ಚರ್ಯದಿ ತಿಳಿಸಿದರು ವಾಲ್ಮೀಕಿ ಮುನಿಗೆ;II
ಕೈಯಲಿ ಕಮಂಡಲ ಹಿಡಿದ ವಾಲ್ಮೀಕಿI
ಧಾವಿಸಿದ ಸೀತೆಯಿದ್ದ ಗಮಗಾನದಿ ದಡಕ್ಕೆ; II
ವಾಲ್ಮೀಕಿ ಲಾಲಿಸಿದ ಸೀತೆಗೆ:”‘ ಓ ಕಂದಾ ಸೀತೆ,I
ನೀನು ಅರಣ್ಯದಲ್ಲಿ! ಕಾರಣವೇನು?” ಮುನಿಗಳ ಪಾದಕ್ಕೇರಗಿ II
ಕೈಮುಗಿದು ವಾಲ್ಮೀಕಿಗೆ ಉತ್ತರಿಸಿದಳು ಸೀತೆ:” ಭಗವನ್, I
ಹೆರಿಗೆ ದಿನಗಳನ್ನು ಋಷಿ ಆಶ್ರಮದಲಿ ಕಳೆವ ಬಯಕೆ,II
ಎನ್ನ ಬಯಕೆ ತಿಳಿಸಿದೆ ಪತಿ ರಾಮನಿಗೆ’, I
ʻನನ್ನ ಬಯಕೆ ಕೇಳಿ ರಾಮ ಖಿನ್ನಿತನಾದ’, ‘ಮಾರನೆಯದಿನ ತನ್ನ ಸ್ನೆಹಿತರಿಂದ II
ರಾಜ್ಯದ ಆಗುಹೋಗುಗಳ ಬಗ್ಗೆ ವಿಚಾರಿಸುವಾಗ, I
ಸ್ನೇಹಿತನೊಬ್ಬ ಜನರಾಡುವ ನಿಂದನೆ ರಾಮನಿಗೆ ತಿಳಿಸಿದ: II
‘ಪರಪುರುಷನ ವಶದಲ್ಲಿದ್ದ ಸೀತೆಯನ್ನು ರಾಮ ಸ್ವೀಕರಿಸಿದ್ದುI
ಕೆಟ್ಟ ನಿದರ್ಶನ, ಸ್ನೇಹಿತ ರಾಮನಿಗೆ ಹೇಳಿದ’, II
‘ಎಲ್ಲವನ್ನು ಬಲ ರಾಮ ಜನರ ಸಂತೈಕೆಗಾಗಿ,I
ನನ್ನ ಬಯಕೆ ಈಡರಿಕೆಗಾಗಿ, ಎನ್ನ ತೊರೆದ ಎನ್ನ ಪತಿ; II
ರಾಮನ ಆದೇಶದಂತೆ ಎನ್ನನು ಗಂಗಾನದಿ ದಡ ಅರಣ್ಯದಲಿI
ಆಶ್ರಮ ಬಳಿ ಬಿಟ್ಟು ಹೋದ ಲಕ್ಷ್ಮಣII
ಭಾರದ ಹೃದಯದಿ”. ಕೇಳಿ ಸೀತೆಯ ವ್ಯಥೆ ಸೀತೆಗೆ ನುಡಿದ ವಾಲ್ಮೀಕಿ I
“ಇದು ನಿನ್ನ ಭಾಗ್ಯ,‘ಎಲ್ಲವೂ ದೈವದಾಟ, II
ಯಾರಿಂದಲೂ ದೈವ ಜಯಸಲು ಸಾಧ್ಯವಿಲ್ಲ’,
‘ನಿನ್ನ ತಂದೆ ಜನಕರಾಜನಿಗೆ ವಾರ್ತೆ ಕಳಿಸಬೇಕೇ?”. II
ಸೀತೆ ತಾನು ಭಗವನ್ ವಾಲ್ಮೀಕಿ ಆಶ್ರಮಕ್ಕೆಹೆರಿಗೆಗೆ ಬಂದಿರುವೆ, I
ಸುಖವಾಗಿದ್ದೇನೆಂದು ತಂದೆಗೆ ತಿಳಿಸಲು ಅರುಹಿದಳು; II
ಸೀತೆಯನ್ನು ಭಗವನ್ ವಾಲ್ಮೀಕಿ ಗಂಡಕಿನದಿದಡದ ತನ್ನ I
ಚಿತ್ವನ ಆಶ್ರಮಕ್ಕೆ ಕರೆದು ತಂದರು ಮಮ್ಮೊಕ್ಕಳೊಂದಿಗೆ II
ವಾಲ್ಮೀಕಿ ಮುನಿ ಜತೆಯಲಿ ಸೀತೆಯನ್ನು ಕಂಡು I
ಆಶ್ರಮದಲ್ಲಿ ಎಲ್ಲರೂ ಸಂತೋಷ ಪಡುವರು.II
ತವರು ಮನೆಗೆ ಹೆರಿಗೆಗೆ ಬರುವ ಹೆಣ್ಣುಮಗಳಂತೆ I
ಸೀತೆಯನ್ನು ಮುನಿಮಾತೆ ರತ್ನಮಾಲ ಬರಮಾಡಿಕೊಂಡಳು,II
ಸೀತೆಯೊಂದಿಗೆ ಅವರು ಆಶ್ರಮದಲ್ಲಿದದ್ದುI
ಅವರ ಭಾಗ್ಯವೆಂದು ಸಂತೋಷಪಟ್ಟರು; II
ಆಶ್ರಮದಲ್ಲಿ ನಿತ್ಯ ಸೀತೆಗೆ ವಿಭಿನ್ನ ಹೂಗಳು, ಹಣ್ಣು ಹಂಪಲI
ಜೇನು ಪೌಷ್ಠಿಕ ಆಹಾರಗಳನ್ನು ತಂದು ಕೊಡುತಿದ್ದರು,II
ವಾಲ್ಮೀಕಿ ಮೊಮ್ಮಕ್ಕಳು ಗೋಮತಿ, ಕುಶಜ ಆಶ್ರಮದಲ್ಲಿ I
ಸೀತೆಗೆ ಯಾವುದೇ ಕೊರತೆ ಆಗದಂತೆ ಸೇವೆ ಸಲ್ಲಿಸಿದರು; II
ಸದಾ ಕಾಡಿತ್ತು ರಾಮನ ನೆನಪು ಸೀತೆಯನು, I
ದುಃಖವನ್ನು ಕೆಲಕ್ಷಣ ಮರೆತಳು ಸೀತೆ ಆಶ್ರಮ ಪಕ್ಷಿ ಪ್ರಾಣಿಜೊತೆ; II
ಸೀತೆ ತನ್ನ ಗರ್ಭಿಣಿ ಅವಸ್ಥೆಯನ್ನು ತನ್ನ ಇಚ್ಛೆಯಂತೆ ಕಳೆದಳುI
ವಾಲ್ಮೀಕಿ ಋಷಿ ಆಶ್ರಮದಲ್ಲಿ; II
ಕಂಡಳು ಮುನಿ ಪತ್ನಿ ರತ್ನಮಾಲ ಸೀತೆಯನ್ನು ಸ್ವಂತ ಮಗಳಂತೆ, I
ಹೇಳಿದಳು ನಿತ್ಯ ಅವಳಿಗೆ ಸತ್ಸಂಗದ ಕಥೆಗಳನ್ನುII
ಸೀತೆಗೆ ವಾಲ್ಮೀಕಿ ಮುನಿ ಆಶ್ರಮದ ಆತಿಥ್ಯ I
ಅವಳ ತವರು ಮನೆಯನ್ನು ಮರೆಸಿತ್ತು.II
ಉತ್ತರಕಾಂಡತಾನು ಮೊಮ್ಮಕ್ಕಳೊಂದಿಗೆ ವಿಪಸಾ ನದಿ (ಇಂದಿನ ಬಿಯಾಸ್‌ ನದಿ) ದಡದಲ್ಲಿದ್ದ ತನ್ನ ಆಶ್ರಮದಿಂದ ಚಿತ್ವನ ಆಶ್ರಮದತ್ತ ಪಯಣಿಸುವಾಗ ಗಂಗಾನದಿ ದಡದ ಅರಣ್ಯಪ್ರದೇಶದಲ್ಲಿ ಆದಿಕವಿ ವಾಲ್ಮೀಕಿಯು ಸೀತೆಯ ಅಸಹಾಯಕತೆಯನ್ನು ಕಂಡು, ಅವಳಿಂದ ವಿಷಯ ತಿಳಿದು, ಅವಳನ್ನು ತನ್ನ ಚಿತ್ವನ ಆಶ್ರಮಕ್ಕೆ ಕರೆತಂದು, ಕುಟುಂಬದ ಮತ್ತು ಆಶ್ರಮದ ಎಲ್ಲ ಸದಸ್ಯರು ಸೀತೆಯನ್ನು ತಮ್ಮ ಮಗಳಂತೆ ನೋಡಿಕೊಂಡ ಪ್ರಸಂಗವನ್ನು ಹೀಗೆ ವಿವರಿಸಿರುವರು:

ಮೊಮ್ಮಕ್ಕಳೊಂದಿಗೆ ವಿಪಸಾನದೀ ಆಶ್ರಮ ದಿಂದ ಚಿತ್ವನ ಆಶ್ರಮಕ್ಕೆ ಭಗವನ್ ವಾಲ್ಮೀಕಿಯು ಮರಳುತಿದ್ದನು, ಅರಣ್ಯದಲ್ಲಿ ಗರ್ಭಿಣಿ ಸೀತೆಯನ್ನು ಕಂಡು ಮೊಮ್ಮಕ್ಕಳು ಆಶ್ಚರ್ಯದಿಂದ ವಾಲ್ಮೀಕಿ ಮುನಿಗೆ ತಿಳಿಸಿದರು; ಕೈಯಲಿ ಕಮಂಡಲ ಹಿಡಿದು ವಾಲ್ಮೀಕಿ ಮುನಿಯು ಸೀತೆಯಿದ್ದ ಗಂಗಾನದಿ ದಡ ಅರಣ್ಯ ಪ್ರದೇಶಕ್ಕೆ ಧಾವಿಸಿದನು; ವಾಲ್ಮೀಕಿ ಮುನಿಯು ಸೀತೆಯನ್ನು ಲಾಲಿಸಿದ “ಓ ಕಂದಾ ಸೀತೆ, ಹೀಗೆ ನೀನು ಅರಣ್ಯದಲ್ಲಿ! ಕಾರಣವೇನು?” ವಾಲ್ಮೀಕಿಮುನಿಗಳ ಪಾದಕ್ಕೇರಗಿ ಕೈಮುಗಿದು ಸೀತೆಯು ಅವರಿಗೆ ಉತ್ತರಿಸಿದಳು ” ಭಗವನ್ ವಾಲ್ಮೀಕಿ, ಹೆರಿಗೆ ದಿನಗಳನ್ನು ಋಷಿ ಆಶ್ರಮದಲಿ ಕಳೆವ ಬಯಕೆಯನ್ನು ನಾನು ನನ್ನ ಬಯಕೆಯನು ಪತಿ ರಾಮನಿಗೆ ತಿಳಿಸಿದೆನು, ನನ್ನ ಈ ಬಯಕೆ ಕೇಳಿ ರಾಮನು ಖಿನ್ನಿತನಾದನು, ಮಾರನೆಯದಿನ ತನ್ನ ಸ್ನೆಹಿತರಿಂದ ರಾಜ್ಯದ ಆಗುಹೋಗುಗಳ ಬಗ್ಗೆ ವಿಚಾರಿಸುವಾಗ, ಅವನ ಸ್ನೇಹಿತನೊಬ್ಬನು ʼಪರಪುರುಷನ ವಶದಲ್ಲಿದ್ದ ಸೀತೆಯನ್ನು ರಾಮ ಸ್ವೀಕರಿಸಿದ್ದು ಕೆಟ್ಟ ನಿದರ್ಶನʼ ಎಂದು ಜನರಾಡುವ ನಿಂದನೆಯನ್ನು ರಾಮನಿಗೆ ತಿಳಿಸಿದನು; ಎಲ್ಲವನ್ನು ಬಲ ರಾಮನು ಜನರನ್ನು ಸಂತೈಸುವದಕ್ಕಾಗಿ,ನನ್ನ ಬಯಕೆ ಈಡರಿಕೆಗಾಗಿ ನನ್ನನ್ನು ತೊರೆದನು; ರಾಮನ ಆದೇಶದಂತೆ ನನ್ನನು ಗಂಗಾನದಿ ದಡ ಅರಣ್ಯದಲಿ ಋಷಿ ಆಶ್ರಮ ಬಳಿ ಲಕ್ಷ್ಮಣ ಭಾರದ ಹೃದಯದಿಂದ ಬಿಟ್ಟು ಹೋದನು”. ಸೀತೆಯ ವ್ಯಥೆಯನ್ನು ಕೇಳಿ ವಾಲ್ಮೀಕಿ ಮುನಿಯು “ಇದು ನಿನ್ನ ಭಾಗ್ಯ, ಎಲ್ಲವೂ ದೈವದಾಟ, ಯಾರಿಂದಲೂ ದೈವ ಜಯಸಲು ಸಾಧ್ಯವಿಲ್ಲ, ನಿನ್ನ ತಂದೆ ಜನಕ ರಾಜನಿಗೆ ವಾರ್ತೆ ಕಳಿಸಬೇಕೇ?” ಎಂದು ಸಂತೈಸುತ್ತ ಸೀತೆಯನ್ನು ಪ್ರಶ್ನಿಸಿದರು. ಸೀತೆಯು ತಾನು ಭಗವನ್ ವಾಲ್ಮೀಕಿ ಆಶ್ರಮಕ್ಕೆ ಹೆರಿಗೆಗೆ ಬಂದಿರುವೆನು, ಇಲ್ಲಿ ಸುಖವಾಗಿದ್ದೇನೆಂದು ತಂದೆಗೆ ತಿಳಿಸಲು ಭಗವನ್ ವಾಲ್ಮೀಕಿಗೆ ಅರುಹಿದಳು; ಮೊಮ್ಮಕ್ಕಳೊಂದಿಗೆ ಸೀತೆಯನ್ನು ಭಗವನ್ ವಾಲ್ಮೀಕಿಯು ಗಂಡಕಿ ನದಿದಡದ ತನ್ನ ಚಿತ್ವನ ಆಶ್ರಮಕ್ಕೆ ಕರೆದು ತಂದರು, ವಾಲ್ಮೀಕಿ ಮುನಿ ಜತೆಯಲಿ ಸೀತೆಯನ್ನು ಕಂಡು ಆಶ್ರಮದಲ್ಲಿ ಎಲ್ಲರೂ ಸಂತೋಷ ಪಡುವರು. ತವರು ಮನೆಗೆ ಹೆರಿಗೆಗೆ ಬರುವ ಹೆಣ್ಣುಮಗಳಂತೆ ಸೀತೆಯನ್ನು ಮುನಿಮಾತೆ ರತ್ನಮಾಲಳು ಬರಮಾಡಿಕೊಂಡಳು, ಸೀತೆಯೊಂದಿಗೆ ಅವರು ತಮ್ಮ ಆಶ್ರಮದಲ್ಲಿದದ್ದು ಅವರ ಭಾಗ್ಯವೆಂದು ಸಂತೋಷಪಟ್ಟರು; ವಾಲ್ಮೀಕಿ ಮೊಮ್ಮಕ್ಕಳು ಗೋಮತಿ ಮತ್ತು ಕುಶಜಳು ಆಶ್ರಮದಲ್ಲಿದ್ದ ಸೀತೆಗೆ ನಿತ್ಯ ವಿಭಿನ್ನ ಹೂಗಳು, ಹಣ್ಣು ಹಂಪಲ, ಜೇನು ಪೌಷ್ಠಿಕ ಆಹಾರಗಳನ್ನು ತಂದು ಕೊಡುತಿದ್ದರು ಹಾಗು ಅವರು ಆಶ್ರಮದಲ್ಲಿ ಸೀತೆಗೆ ಯಾವುದೇ ಕೊರತೆ ಆಗದಂತೆ ನೋಡಿಕೊಂಡರು; ರಾಮನ ನೆನಪು ಸೀತೆಯನು ಸದಾ ಕಾಡುತಿತ್ತು, ಸೀತೆಯು ಆಶ್ರಮದಲ್ಲಿ ಪಕ್ಷಿ ಪ್ರಾಣಿಗಳೊಂದಿಗೆ ಆಡುತ ದುಃಖವನ್ನು ಕೆಲಕ್ಷಣ ಮರೆಯುತಿದ್ದಳು; ಸೀತೆಯು ತನ್ನ ಗರ್ಭಿಣಿ ಅವಸ್ಥೆಯನ್ನು ತನ್ನ ಇಚ್ಛೆಯಂತೆ ವಾಲ್ಮೀಕಿ ಋಷಿ ಆಶ್ರಮದಲ್ಲಿ ಕಳೆದಳು; ವಾಲ್ಮೀಕಿ ಮುನಿ ಪತ್ನಿ ರತ್ನಮಾಲಳು ಸೀತೆಯನ್ನು ತನ್ನ ಸ್ವಂತ ಮಗಳಂತೆ ಕಂಡಳು ಹಾಗು ನಿತ್ಯ ಅವಳಿಗೆ ಸತ್ಸಂಗದ ಕಥೆಗಳನ್ನು ಹೇಳಿದಳು; ಸೀತೆಗೆ ವಾಲ್ಮೀಕಿ ಮುನಿ ಆಶ್ರಮದ ಆತಿಥ್ಯವು ಅವಳ ತವರು ಮನೆಯನ್ನು ಮರೆಸಿತ್ತು.
.. ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ‌.