
ಮುಂಜಾವಿನ ಬೆಳಕಿನಲ್ಲಿ ಸಭೆ ಸೇರಿತು ರಾಜ್ಯಭವನದಲಿI
ಗುರು ವಸಿಷ್ಠ, ರಾಜಪುರೋಹಿತ, ಮಂತ್ರಿಗಣ ವಪ್ರಜೆಗಳ;II
ಅವರ ಮಧ್ಯೆ ಸಿಂಹಾನರೂಢನಾಗಿದ್ದ ರಾಮ ಲಕ್ಷ್ಮಣನಿಗೆI
ನುಡಿದ:” ಓ ಸುಮಿತ್ರೇಯ, ಹೋಗು ನಗರ ದ್ವಾರ ಬಳಿ;II
ಕರೆದುಕೊಂಡು ಬಾ, ಯಾರಾದರೂ ದೂರುದಾರರಿದ್ದರೆ”.I
ರಾಜಾಜ್ಞೆಯಂತೆ ಹೋದ ದ್ವಾರ ಬಳಿ ಲಕ್ಷ್ಮಣ,II
ದೂರದಾರರನು ಆಹ್ವಾನಿಸಿದ ಲಕ್ಷ್ಮಣ,I
ಆದರೆ ಬರಲಿಲ್ಲ ಯಾರೂ ಮುಂದೆ; II
ರಾಮನ ಆಡಳಿತದಲಿ ಇರಲ್ಲಿಲ್ಲ ಬಡತನ,I
ರೋಗಪೀಡನೆ, ಅಯೋಧ್ಯೆಯು ಸಮೃದ್ಧ ನಾಡಾಗಿತ್ತು; II
ಮಕ್ಕಳಾಗಲಿ, ಯುವಕರರಾಗಲಿ, ಮಧ್ಯವಯಸ್ಕರಾಗಲಿ I
ಸಾವಿನ ಭಯವಿರಲಿಲ್ಲ ಅವರ ಹತ್ತಿರ ಸುಳಿಯಲಿಲ್ಲ ಸಾವು;II
ರಾಮನ ರಾಜ್ಯದಲ್ಲಿ ನೆಲಸಿತ್ತು ಸಮಾನತೆ; ಇದ್ದಿದ್ದಿಲI
ತಾರತಮ್ಯ, ಭೇದಭಾವಗಳು ಯಾವುದೇ ರೂಪದಲಿ; II
ನ್ಯಾಯದಿಂದ ವಂಚಿತರ್ಯಾರೂ ಇರಲಿಲ್ಲ ರಾಜ್ಯದಲಿ,I
ನ್ಯಾಯ ನೀತಿ ಧರ್ಮ ತುಂಬಿತ್ತು ರಾಮರಾಜ್ಯದಲಿ;II
ಮರಳಿದ ಲಕ್ಷ್ಮಣ ರಾಮನಿಗೆ ಅರುಹಿದ: I
“ ರಾಜ್ಯದಲ್ಲಿ ಯಾರೂ ದೂರದಾರರು ಇಲ್ಲ, ಅನ್ಯಾಯಪೀಡಿತರು ಕಾಣೆ.” II
ಕೇಳಿ ಲಕ್ಷ್ಮಣನ ನುಡಿ ರಾಮ ಉತ್ತರಿಸಿದ: I
“ಓ ಸುಮಿತ್ರೇಯ, ಹೋಗು ಮತ್ತೊಮ್ಮೆ, ನೋಡು ಸರಿಯಾಗಿ.II
ಇರಕೂಡದು ಅನ್ಯಾಯ ರಾಜ್ಯದಲಿ, I
ಯಾರಿಗಾದರೂ, ಯಾವ ರೂಪದಲ್ಲಿಯೂ, ಎನ್ನ ಪರವಾಗಿ ಹುಡುಕುಸರಿಯಾಗಿ”.II
ಹೋದ ಲಕ್ಷ್ಮಣ ಪುನಃ ನಗರ ದ್ವಾರ ಬಳಿ,I
ಕಂಡನು ಲಕ್ಷ್ಮಣ ಕುಳಿತ ನಾಯಿಯನು ದ್ವಾರ ಬಳಿ;II
ಅಸಂತುಷ್ಟ ನಾಯಿ ಸಹಾಯ ಕೋರುವಂತೆI
ದಿಟ್ಟಿಸಿತು ಲಕ್ಷ್ಮಣನ, ಲಕ್ಷ್ಮಣ ನುಡಿದ: II
“ ಓ ಸುದೈವಿಯೆ, ನೀನೇಕೆ ಇಲ್ಲಿ ಕುಳಿತಿರುವಿ,I
ನಿರ್ಭಯದಿ ತಿಳಿಸು ನಿನಗಾದ ಅನ್ಯಾಯ.” II
ಕೇಳಿ ಲಕ್ಷ್ಮಣನ ನುಡಿ ನಾಯಿ ಅರುಹಿತು:I
“ಸಕಲ ಜೀವ ರಕ್ಷಕ ರಾಮನಿಗೆ ನಾನು ಅರುಹಬೇಕು”.II
ಕೇಳಿ ನಾಯಿ ಅರಿಕೆ ಲಕ್ಷ್ಮಣ ನುಡಿದ:I
“ಏನಾದರೂ ಸತ್ಯ ಹೇಳುವದಿದ್ದರೆ ನಡೆ ರಾಮನ ಬಳಿ.” ಕೇಳಿ ಲಕ್ಷ್ಮಣನ II
ನುಡಿ, ನಾಯಿ ಅರುಹಿತು:“ನಾವು ಕೀಳ ಕುಲದಲಿ ಹುಟ್ಟಿದ್ದರಿಂದ I
ನಮಗೆ ಪ್ರವೇಶ ನಿಷೇಧವಿದೆ ದೇವಾಲಯ,II
ಅರಮನೆ, ಮನೆಗಳಲ್ಲಿ; ಸಕಲ ಜ್ಞಾನ ವಿದ್ಯೆ ಕಲೆ ಬಲ್ಲವ ರಾಮ,I
ಸತ್ಯನಿಷ್ಠೆಯುಳ್ಳವ, ಸಕಲ ಜೀವಿಗಳ ರಕ್ಷಕ ರಾಮ; II
ಓ ಸುಮಿತ್ರೇಯ, ಹೋಗಿ ಹೇಳು ರಾಮನಿಗೆI
ಅವನ ಆಜ್ಞೆಯಿಲ್ಲದೇ ನಾ ಪ್ರವೇಶಿಸಲಾರೆ ಒಳಗೆ”.II
ರಾಮನ ಬಳಿ ಹೋಗಿ ಲಕ್ಷ್ಮಣ ತಿಳಿದI
ನಾಯಿ ಕೋರಿಕೆಯನು ಮರುಣಾಮಯಿ ರಾಮನಿಗೆ; II
ತಕ್ಷಣ ರಾಮ ನುಡಿದ ಲಕ್ಷ್ಮಣನಿಗೆ:I
“ಯಾರೇಯಾಗಿರಲಿ ಕರೆದು ಕೊಂಡು ಬಾ ಎನ್ನ ಬಳಿ”II
ಲಕ್ಷ್ಮಣ ತಕ್ಷಣ ಹಾಜರ ಪಡಿಸಿದ ರಾಮನ ಮುಂದೆI
ನಾಯಿಯನು,” ನಿವೇಧಿಸು” ಎಂದ ಲಕ್ಷ್ಮಣ ನಾಯಿಗೆ; II
ನಾಯಿ ಅರುಹಿತು ರಾಮನಲ್ಲಿ:” ಸಕಲ ಪ್ರಾಣಿಗಳ ಸ್ವಾಮಿ ವI
ರಕ್ಷಕನು ರಾಜ, ಎಲ್ಲರೂ ಮಲಗಿದಾಗ ಅವನುIIII
ಎಚ್ಚರಿರುವನು; ಕಾನೂನ ರಕ್ಷಣೆ, ಆಡಳಿತ, I
ಧರ್ಮರಕ್ಷಣೆ, ರಾಜನ ಧರ್ಮ ಅವನಿಲ್ಲದೇ ಪ್ರಜೆಗಳು ಬದುಕಲಾರರು, II
ರಾಜನೇ ಎಲ್ಲರ ತಂದೆ;ಧರ್ಮವೇ ಲೋಕಗಳ ರಕ್ಷಕI
ಧರ್ಮವೇ ಸರ್ವಶ್ರೇಷ್ಠ, ಓ ರಾಜನೇ; II
ದಾನ, ಸಹಾನುಭೂತಿಗಳು ಧರ್ಮದ ಸದ್ಗುಣಗಳುI
ಓ ರಾಮಾ ಇದೆಲ್ಲವನ್ನೂ ಬಲವ ನೀನು,II
ಓ ರಾಜನೇ, ತಲೆಬಾಗಿಸದೇ ನಾನುI
ನಿನ್ನಲ್ಲಿ ಅರಹುತಿರುವೆ, ಕ್ಷಮಿಸು.” II
ಕೇಳಿ ನಾಯಿಯ ಅರಿಕೆ ರಾಮ ಉತ್ತರಿಸಿದನು:I
“ನಿರ್ಭಯದಿ ಕೇಳು, ನಾನೇನು ಮಾಡಲಿ ನಿನಗೆ.”II
ನಾಯಿ ಉತ್ತರಿಸಿತು ರಾಮನಿಗೆ: “ಓ ರಾಜನೇ,I
ಧರ್ಮಬದ್ಧನಾಗಿ ಎನಗೆ ನ್ಯಾಯ ನೀಡು: ಸರ್ವತಸಿದ್ದ ಹೆಸರಿನ ಬ್ರಾಹ್ಮಣ II
ಈಡರಿಸಿಕೊಳ್ಳಿತಿಹನು ತನ್ನ ಎಲ್ಲ ಬಯಕೆಗಳನುI
ಭಿಕ್ಷೆಯಿಂದ, ಅವನು ಗಾಯಗೊಳಿಸಿಹನು II
ಎನ್ನ ತಲೆಗೆ ವಿನಾಕಾರಣ”ಕೇಳಿ ನಾಯಿ ಅರಿಕೆ I
ರಾಮನು ಕರೆಯಿಸಿಕೊಂಡ ಆ ಬ್ರಾಹ್ಮಣನ,II
ಉತ್ತರಕಾಂಡ
ರಾಮನ ದರಬಾರದಲ್ಲಿ ನಾಯಿಗೆ ನ್ಯಾಯ ಕೇಳಲು ರಾಮನು ಅವಕಾಶ ಕೊಟ್ಟ, ಬ್ರಾಹ್ಮಣನೊಬ್ಬನು ತನಗೆ ವಿನಾಕಾರಣ ತಲೆಗೆ ಹೊಡೆದು ಗಾಯಗೊಳಿಸಿದ್ದಕ್ಕಾಗಿ ನಾಯಿಯು ರಾಮನ ಮುಂದೆ ತನಗೆ ನ್ಯಾಯ ಕೋರಿದ ಪ್ರಸಂಗವನ್ನುಆದಿಕವಿ ವಾಲ್ಮೀಕಿಯು ಹೀಗೆ ವಿವರಿಸಿರುವರು:
ಮುಂಜಾವಿನ ಬೆಳಕಿನಲ್ಲಿ ರಾಜ್ಯಭವನದಲಿ ಗುರು ವಸಿಷ್ಠ, ರಾಜಪುರೋಹಿತ, ಮಂತ್ರಿಗಣ ಮತ್ತು ಪ್ರಜೆಗಳ ಸಭೆ ಸೇರಿತು; ಅವರ ಮಧ್ಯೆ ಸಿಂಹಾನರೂಢನಾಗಿದ್ದ ರಾಮನು ಲಕ್ಷ್ಮಣನಿಗೆ ಆದೇಶಿಸಿದನು ” ಓ ಸುಮಿತ್ರೇಯ, ನಗರ ದ್ವಾರ ಬಳಿ ಹೋಗು, ಅಲ್ಲಿ ಯಾರಾದರೂ ದೂರುದಾರರಿದ್ದರೆ ಅವರನ್ನು ಕರೆದುಕೊಂಡು ಬಾ”. ರಾಜಾಜ್ಞೆಯಂತೆ ಲಕ್ಷ್ಮಣನು ದ್ವಾರ ಬಳಿ ಹೋದನು, ದೂರದಾರರನು ಕೂಗಿ ಕರೆದನು, ಆದರೆ ಯಾರೂ ಮುಂದೆ ಬರಲಿಲ್ಲ; ರಾಮನ ಆಡಳಿತದಲಿ ಅಯೋಧ್ಯೆಯು ಸಮೃದ್ಧ ನಾಡಾಗಿತ್ತು, ಅಲ್ಲಿ ಬಡತನ, ರೋಗಪೀಡನೆಗಳು ಇರಲ್ಲಿಲ್ಲ ಮಕ್ಕಳಾಗಲಿ, ಯುವಕರರಾಗಲಿ, ಮಧ್ಯವಯಸ್ಕರಾಗಲಿ ಅಅವರಲ್ಲಿ ಸಾವಿನ ಭಯವಿರಲಿಲ್ಲ, ಸಾವು ಅವರ ಹತ್ತಿರ ಸುಳಿಯಲಿಲ್ಲ; ರಾಮನ ರಾಜ್ಯದಲ್ಲಿ ಸಮಾನತೆ ನೆಲಸಿತ್ತು; ತಾರತಮ್ಯ, ಭೇದಭಾವಗಳು ಯಾವುದೇ ರೂಪದಲಿ ಇದ್ದಿದ್ದಿಲ; ರಾಜ್ಯದಲಿ ನ್ಯಾಯದಿಂದ ಯಾರೂ ವಂಚಿತರಾಗಿದ್ದಲ್ಲ; ರಾಮರಾಜ್ಯದಲಿ ನ್ಯಾಯ ನೀತಿ ಧರ್ಮ ತುಂಬಿತ್ತು; ಲಕ್ಷ್ಮಣನು ಮರಳಿಬಂದು ರಾಮನಿಗೆ ಅರುಹಿದನು “ ರಾಜ್ಯದಲ್ಲಿ ಯಾರೂ ದೂರದಾರರು ಇಲ್ಲ, ಅನ್ಯಾಯಪೀಡಿತರು ಕಾಣುತಿಲ್ಲ.” ಲಕ್ಷ್ಮಣನ ವರದಿ ಕೇಳಿ ರಾಮನು ಸಂತೋಷದಿಂದ ರಾಮನು ಕೋರಿದನು “ಓ ಸುಮಿತ್ರೇಯ, ಮತ್ತೊಮ್ಮೆ ಹೋಗು, ಅಲ್ಲಿ ಸರಿಯಾಗಿ ನೋಡು; ರಾಜ್ಯದಲಿ ಯಾರಿಗಾದರೂ ಅನ್ಯಾಯ ಯಾವ ರೂಪದಲ್ಲಿಯೂ ಆಗಿರಕೂಡದು, ನನ್ನ ಪರವಾಗಿ ಸರಿಯಾಗಿ ಹುಡುಕು”. ರಾಜಾರಾಮನ ಕೋರಿಕೆಮೇರೆಗೆ ಲಕ್ಷ್ಮಣನು ಪುನಃ ನಗರ ದ್ವಾರ ಬಳಿ ಹೋದನು, ಲಕ್ಷ್ಮಣನು ನಾಯಿಯನು ದ್ವಾರ ಬಳಿ ಕುಳಿತಿದ್ದನ್ನು ಕಂಡನು; ಆ ಅಸಂತುಷ್ಟ ನಾಯಿಯು ಸಹಾಯ ಕೋರುವಂತೆ ಲಕ್ಷ್ಮಣನ್ನು ದಿಟ್ಟಿಸಿ ನೋಡಿತು, ಆ ನಾಯಿಯನ್ನು ಕಂಡು ಲಕ್ಷ್ಮಣನು ಅದಕ್ಕೆ ಹೇಳಿದನು “ ಓ ಸುದೈವಿಯೆ, ನೀನೇಕೆ ಇಲ್ಲಿ ಕುಳಿತಿರುವಿ, ನಿನಗಾದ ಅನ್ಯಾಯ ನಿರ್ಭಯದಿಂದ ನನಗೆ ತಿಳಿಸು.” ಲಕ್ಷ್ಮಣನ ನುಡಿಗಳನ್ನು ಕೇಳಿ ನಾಯಿ ಅವನಿಗೆ ಕೇಳಿತು“ಸಕಲ ಜೀವ ರಕ್ಷಕ ರಾಮನಿಗೆ ನಾನು ಅರುಹಬೇಕು”. ನಾಯಿಯ ಅರಿಕೆಯನ್ನು ತಿಳಿದ ಲಕ್ಷ್ಮಣ ನಾಯಿಗೆ ತಿಳಿಸಿದನು “ಏನಾದರೂ ಸತ್ಯ ಹೇಳುವದಿದ್ದರೆ ರಾಮನ ಬಳಿ ನಡೆ.” ಲಕ್ಷ್ಮಣನ ಮಾತುಗಳನ್ನು ತಿಳಿದು ನಾಯಿಯು ಲಕ್ಷ್ಮಣನಿಗೆ ಅರುಹಿತು “ನಾವು ಕೀಳ ಕುಲದಲಿ ಹುಟ್ಟಿದ್ದರಿಂದ ನಮಗೆ ದೇವಾಲಯ, ಅರಮನೆ, ಮನೆಗಳಲ್ಲಿ ಪ್ರವೇಶ ನಿಷೇಧವಿದೆ; ಸಕಲ ಜ್ಞಾನ ವಿದ್ಯೆ ಕಲೆ ಬಲ್ಲವ ರಾಮ, ಸತ್ಯನಿಷ್ಠೆಯುಳ್ಳವ, ಸಕಲ ಜೀವಿಗಳ ರಕ್ಷಕ ರಾಮನು,ಅವನಿಗೆ ಹೋಗಿ ಹೇಳು, ಅವನ ಆಜ್ಞೆಯಿಲ್ಲದೇ ನಾನು ದ್ವಾರದ ಒಳಗೆ ಪ್ರವೇಶಿಸಲಾರೆ”. ನಾಯಿ ಕೋರಿಕೆಯನು ಲಕ್ಷ್ಮಣನು ಮರುಣಾಮಯಿ ರಾಮನ ಬಳಿ ಹೋಗಿ ಅವನಿಗೆ ತಿಳಿದನು; ನಾಯಿಯ ಸಂದೇಶ ಕೇಳಿದ ತಕ್ಷಣ ರಾಮನು ಲಕ್ಷ್ಮಣನಿಗೆ ಆದೇಶಿಸಿದನು“ಾದು ಯಾರೇಯಾಗಿರಲಿ ಅವರನ್ನು ನನ್ನ ಬಳಿ ಕರೆದು ಕೊಂಡು ಬಾ.” ರಾಮನ ಆದೇಶದಂತೆ ಲಕ್ಷ್ಮಣನು ತಕ್ಷಣ ನಾಯಿಯನು ರಾಮನ ಮುಂದೆ ಹಾಜರ ಪಡಿಸಿದನು ಹಾಗು ” ನಿವೇಧಿಸು” ಎಂದ ಲಕ್ಷ್ಮಣ ನಾಯಿಗೆ ತಿಳಿಸಿದನು; ನಾಯಿಯು ರಾಮನಲ್ಲಿ ಅರುಹಿತು” ರಾಜನು ಸಕಲ ಪ್ರಾಣಿಗಳ ಸ್ವಾಮಿ ಮತ್ತು ರಕ್ಷಕನು, ಎಲ್ಲರೂ ಮಲಗಿದಾಗ ಅವನು ಎಚ್ಚರಿರುವನು; ಕಾನೂನ ರಕ್ಷಣೆ, ಆಡಳಿತ, ಧರ್ಮ ರಕ್ಷಣೆ, ರಾಜನ ಧರ್ಮ ಅವನ ಹೊಣೆ, ಅವನಿಲ್ಲದೇ ಪ್ರಜೆಗಳು ಬದುಕಲಾರರು, ರಾಜನೇ ಎಲ್ಲರ ತಂದೆ; ಓ ರಾಜನೇ, ಧರ್ಮವೇ ಲೋಕಗಳ ರಕ್ಷಕ, ಧರ್ಮವೇ ಸರ್ವಶ್ರೇಷ್ಠ, ದಾನ, ಸಹಾನುಭೂತಿಗಳು ಧರ್ಮದ ಸದ್ಗುಣಗಳು; ಓ ರಾಮಾ, ನೀನು ಇದೆಲ್ಲವನ್ನೂ ಬಲವನು; ಓ ರಾಜನೇ, ನಾನು ನಿನ್ನ ಮುಂದೆ ನಾನು ತಲೆಬಾಗಿಸದೇ ನಿನ್ನಲ್ಲಿ ಅರಹುತಿರುವೆನು, ಕ್ಷಮಿಸು.” ನಾಯಿಯ ಅರಿಕೆ ಕೇಳಿದ ರಾಮನು ಅದಕ್ಕೆ ಉತ್ತರಿಸಿದನು “ನಿರ್ಭಯದಿ ಕೇಳು, ನಿನಗೆ ನಾನೇನು ಮಾಡಲಿ.” ರಾಮನಿಗೆ ನಾಯಿ ಉತ್ತರಿಸಿತು” ಓ ರಾಜನೇ, ಧರ್ಮಬದ್ಧನಾಗಿ ನನಗೆ ನ್ಯಾಯ ನೀಡು, ಸರ್ವತಸಿದ್ದ ಹೆಸರಿನ ಬ್ರಾಹ್ಮಣನು ತನ್ನ ಎಲ್ಲ ಬಯಕೆಗಳನು ಭೀಕ್ಷೆಯಿಂದ ಈಡರಿಸಿಕೊಳ್ಳಿತಿರುವನು, ಅವನು ನನ್ನ ತಲೆಗೆ ವಿನಾಕಾರಣ ಗಾಯಗೊಳಿಸಿರುವನು” ನಾಯಿಯ ದೂರು ಕೇಳಿದ ರಾಮನು ಆ ಬ್ರಾಹ್ಮಣನನ್ನು ಸಭೆಗೆ ಕರೆಯಿಸಿಕೊಂಡನು;
.. ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ.
