ರಾಮನು ಲಕ್ಷ್ಮಣನ ಬೊಧನೆಯನ್ನು ಕೇಳಿ…

By admin


ಬಂದು ಲಕ್ಷ್ಮಣನ ಬಳಿ ರಾಮ ನುಡಿದ ಅವನಿಗೆ:I
“ಕಠಿಣ ಇಂದಿನ ದಿನಗಳಲ್ಲಿ ಪಡೆಯುವದು ನಿನ್ನಂತಹ ಬಂಧುವನು, II
ಓ ಪ್ರೀಯ ಸಹೋದರಾ, ನಿನ್ನಲಿದೆ ಧೀಮಂತಿಕೆ ವರI
ಎನ್ನ ಮನದಾಳ ತಿಳಿಯುವ ಜಾಣ್ಮೆ ನಿನ್ನಲಿದೆ; II
ಓ ಸುಮೀತ್ರೇಯ, ಇಂದಿಗೆ ನಾಲ್ಕು ದಿನಗಳುI
ಗತಿಸಿದವು, ಎನಗೆ ತಿಳಿಬೇಕಾಗಿದೆ ಜನರ ಇಚ್ಚೆ; II
ಸೇರಿಸು ಸಭೆ, ಕೂಡಿಸು ಪ್ರಜೆ, ಮಂತ್ರಿI
ರಾಜಗುರು, ಪರೋಹಿತ,ಸಂಬಂಧಿಗಳನ್ನು, II
ಚರ್ಚಿಸಬೇಕಿದೆ ರಾಜ್ಯ, ಪ್ರಜೆಗಳ ಕಾರ್ಯ ಕಲಾಪ, I
ಪ್ರಜೆಗಳಿಗೆ ನಿತ್ಯ ಸೇವೆಸಲ್ಲಿಸದ ರಾಜ ಸೇರುವನು ಗಾಢ ನರಕ;II
ಹೇಳುವೆ ಅದಕ್ಕೆ ಸಂಬಂಧಿಸಿದಂತೆ ರಾಜಾ ನೃಗನ ಕಥೆ:I
ಶುದ್ಧ ಹೃದಯದ ಸತ್ಯನಿಷ್ಠೆಯ ರಾಜನಾಗಿದ್ದ ನೃಗನು,II
ಪುಷ್ಕರಣ ಯಾತ್ರೆಗೆ ಬ್ರಾಹ್ಮಣರು ಹೋಗುವಾಗI
ರಾಜನು ದಾನ ಮಾಡಿದ ಅವರಿಗೆ ಶತ ಸಹಸ್ರ ಆಕಳು; II
ಆಕಸ್ಮಿಕವಾಗಿ ಬಡ ಬ್ರಾಹ್ಮಣನೊಬ್ಬನಿಗೆ ಸೇರಿದ I
ಆಕಳು ಕರುವಿನೊಂದಿಗೆ ಹೋಯಿತು ದಾರಿ ತಪ್ಪಿಸಿಕೊಂಡು; II
ಆಹಾರ ನಿದ್ರೆ ನೀರಡಕೆಯಿಲ್ಲದೇ ಆ ಬ್ರಹ್ಮಣI
ಹುಡಿಕಿದ ಕಳೆದು ಹೋದ ಆಕಳು ವ ಕರು:II
ಬಹಳ ಮಾಸಗಳವರೆಗೆ ಹುಡಿಕಿ ಸುಸ್ತಾದ ಸಿಗಲಿಲ್ಲ I
ಆ ಬ್ರಹ್ಮಣನಿಗೆ ಆಕಳು ವ ಕರು; ಆ ಬ್ರಾಹ್ಮಣ II
ಒಂದು ದಿನ ಕಂಖಾಲ ಬಳಿ ಇನ್ನೊಬ್ಬ ಬ್ರಾಹ್ಮಣನ ದನದ ಕೊಟ್ಟಡಿಯಲಿ I
ಕಂಡನು ವಯಸ್ಸಾದ ಸ್ವಸ್ಥ ಆಕಳು; II
ʻಶಬಲ ಬಾʼಎಂದು ಕರೆದನು ಆ ಬಡ ಬ್ರಾಹ್ಮಣ ದ್ವನಿಗುರುತಿಸಿ I
ಬ್ರಾಹ್ಮಣನ ಅವನ ಹಿಂಬಾಲಿಸಿತು ಆ ಆಕಳು;II
ಕಂಡು ಆಕಳು ಇನ್ನೊಬ್ಬನ ಬೆನ್ನಟಿದ ದೃಶ್ಯI
ಆಶ್ರಮದಿ ಹೊರ ಬಂದು ಬ್ರಾಹ್ಮಣ ಗದ್ದರಿಸಿದ: II
“ ಅದು ಎನ್ನ ಆಕಳು, ಕೊಟ್ಟಿರುವನು ರಾಜ ಎನಗೆ ದಾನ”I
ಇಬ್ಬರೂ ಬ್ರಾಹ್ಮಣ ಮಧ್ಯೆ ಶುರುವಾಯಿತು ಜಗಳ; II
ಆಕಳೊಂದಿಗೆ ನ್ಯಾಯಕ್ಕಾಗಿ ಬಂದರು ರಾಜನ ಬಳಿ,I
ಆದರೆ ಬ್ರಾಹ್ಮಣರಿಗೆ ಸಿಗಲಿಲ್ಲ ರಾಜನ ಪ್ರವೇಶ;II
ರಾಜನಿಗಾಗಿ ದ್ವಾರ ಬಳಿ ಬಹಳ ದಿನಗಳವರೆಗೆ ಕಾದರು, I
ಕೊನೆಗೆ ಕೆಂಡ- ಮಂಡಲವಾಗಿ ರಾಜಾ ನೃಗನಿಗೆ ನೀಡಿದರು ಶಾಪ:II
“ ನಮ್ಮ ಜಗಳ ಕೇಳಲು ಅವಕಾಶ ಕೊಡದ ನೀನುI
ಹಲ್ಲಿಯಾಗು, ಸಕಲ ಜೀವಿಗಳಿಗೆ ಕಾಣದಂತೆ, II
ಶತ ಸಹಸ್ರ ಸಂವತ್ಸರಗಳವರೆಗೆ ತಗ್ಗಿನಲ್ಲಿI
ಮುಚ್ಚಿಕೊಂಡಿರು ಯುಗದ ಅಂತ್ಯದವರೆಗೆ” II
ಹೀಗೆ ಶಾಪ ನೀಡಿ ಬ್ರಾಹ್ಮಣದ್ವಯರು ತಮ್ಮಲ್ಲಿಯೇ I
ಜಗಳ ಬಗೆ ಹರಿಸಿಕೊಂಡು ಪಡೆದ ಮುದಿ ಆಕಳ ಬಡಬ್ರಾಹ್ಮಣ; II
ಓ ಲಕ್ಷ್ಮಣಾ, ರಾಜಾ ನೃಗ ಇಂದಿಗೂ ಹಲ್ಲಿಯಾಗಿ ಬದುಕಿರುವನು, I
ಆಲಿಸಬೇಕು ನಾವು ಪ್ರಜೆಗಳ ಸಮಸ್ಯೆ; II
ಹೊರಡು ಬೇಗ ಯಾರಾದರೂ ದ್ವಾರ ಬಳಿI
ನ್ಯಾಯಕ್ಕಾಗಿ ನಿಂತಿದ್ದರೆ ಬಾ ಕೆರೆದು ಕೊಂಡು”. II
ಉತ್ತರಕಾಂಡ

ರಾಮನು ಲಕ್ಷ್ಮಣನ ಬೊಧನೆಯನ್ನು ಕೇಳಿ ತಾನು ಸೀತೆಯ ದುಃಖದಲ್ಲಿ ನಾಲ್ಕು ದಿನಗಳವರೆಗೆ ಪ್ರಜೆ ಮತ್ತು ರಾಜ್ಯದ ಕಾರ್ಯಕಲಾಪಗಳನ್ನು ನಡೆಸಿರುವದಿಲ್ಲ ಕಾರಣ ತಾನೂ ರಾಜಾ ನೃಗನಂತೆ ಪ್ರಜೆಗಳ ಶಾಪಕ್ಕೆ ಒಳಗಾಗಬಾರದೆಂದು ತನ್ನ ಬಳಿ ಪ್ರಜೆಗಳನ್ನು ಕರೆದು ತರಲು ಹೇಳಿದ ಪ್ರಸಂಗವನ್ನುಆದಿಕವಿ ವಾಲ್ಮೀಕಿಯು ವಿವರಿಸಿರುವರು, ಇಲ್ಲಿ ಆದಿಕವಿ (1) ರಾಜನಾದವನ್ನು ಜನತಾ ದರ್ಶನ ಮಾಡಬೇಕು ಮತ್ತು (2) ನ್ಯಾಯ ಸಿಗದ ಪ್ರಜೆಗಳ ಶಾಪ ರಾಜನನ್ನು ಬಾದಿಸುವದು, ಎಂಬ ಅಂಶಗಳನ್ನು ಹೀಗೆ ವಿವರಿಸಿರುವರು: ರಾಮನು ಲಕ್ಷ್ಮಣನ ಬಳಿ ಬಂದು ಅವನಿಗೆ ಅರುಹಿದನು “ಇಂದಿನ ದಿನಗಳಲ್ಲಿ ನಿನ್ನಂತಹ ಬಂಧುವನು ಪಡೆಯುವದು ಕಠಿಣ; ಓ ಪ್ರೀಯ ಸಹೋದರಾ, ಧೀಮಂತಿಕೆ ವರವು ನಿನ್ನಲಿದೆ, ನನ್ನ ಮನದಾಳವನ್ನು ತಿಳಿಯುವ ಜಾಣ್ಮೆಯೂ ನಿನ್ನಲಿದೆ; ಓ ಸುಮೀತ್ರೇಯ, ದುಃಖದಲ್ಲಿ ಇಂದಿಗೆ ನಾಲ್ಕು ದಿನಗಳು ಗತಿಸಿದವು, ನನಗೆ ಜನರ ಇಚ್ಚೆ ತಿಳಿಬೇಕಾಗಿದೆ; ನೀನು ಸಭೆಯನ್ನು ಸೇರಿಸು, ಪ್ರಜೆ ಮಂತ್ರಿ ರಾಜಗುರು ಪರೋಹಿತ ಮತ್ತು ಸಂಬಂಧಿಗಳನ್ನು ಸಭೆಗೆ ಕೂಡಿಸು, ರಾಜ್ಯದ ಮತ್ತು ಪ್ರಜೆಗಳ ಕಾರ್ಯ ಕಲಾಪಗಳನು ಚರ್ಚಿಸಬೇಕಿದೆ; ಪ್ರಜೆಗಳಿಗೆ ನಿತ್ಯ ಸೇವೆಸಲ್ಲಿಸದ ರಾಜ ಗಾಢ ನರಕವನ್ನು ಸೇರುವನು; ಅದಕ್ಕೆ ಸಂಬಂಧಿಸಿದಂತೆ ನಾನು ರಾಜಾ ನೃಗನ ಕಥೆ ಹೇಳುವೆ:ʻನೃಗನು ಶುದ್ಧ ಹೃದಯದ ಸತ್ಯನಿಷ್ಠೆಯ ರಾಜನಾಗಿದ್ದನು; ಪುಷ್ಕರಣ ಯಾತ್ರೆಗೆ ಬ್ರಾಹ್ಮಣರು ಹೋಗುವಾಗ ರಾಜನು ಅವರಿಗೆ ಶತ ಸಹಸ್ರ ಆಕಳುಗಳನ್ನು ದಾನ ಮಾಡಿದನು; ಆಕಸ್ಮಿಕವಾಗಿ ಬಡ ಬ್ರಾಹ್ಮಣನೊಬ್ಬನಿಗೆ ಸೇರಿದ ಆಕಳು ತನ್ನ ಕರುವಿನೊಂದಿಗೆ ದಾರಿ ತಪ್ಪಿಸಿಕೊಂಡು ಹೋಯಿತು; ಆಹಾರ ನಿದ್ರೆ ನೀರಡಕೆಯಿಲ್ಲದೇ ಆ ಬ್ರಹ್ಮಣನು ಕಳೆದು ಹೋದ ತನ್ನ ಆಕಳು ಮತ್ತು ಕರುವನ್ನು ಹುಡಿಕಿದನು, ಆದರೆ ಬಹಳ ಮಾಸಗಳವರೆಗೆ ಆ ಬ್ರಹ್ಮಣನಿಗೆ ಆಕಳು ಮತ್ತು ಕರುಗಳನ್ನು ಹುಡಿಕಿ ಸುಸ್ತಾದನು, ಅವು ಸಿಗಲಿಲ್ಲ; ಒಂದು ದಿನ ಆ ಬ್ರಾಹ್ಮಣನು ಕಂಖಾಲ ಬಳಿಯಿದ್ದ ಇನ್ನೊಬ್ಬ ಬ್ರಾಹ್ಮಣನ ದನದ ಕೊಟ್ಟಡಿಯಲಿ ವಯಸ್ಸಾದ ಸ್ವಸ್ಥ ಆಕಳನ್ನು ಕಂಡನು; ಆ ಬಡ ಬ್ರಾಹ್ಮಣನು ʻಶಬಲ ಬಾʼಎಂದು ಕೂಗಿ ಕರೆದನು, ಆ ಬ್ರಾಹ್ಮಣನ ದ್ವನಿಗುರುತಿಸಿ ಆ ಆಕಳು ಅವನ ಹಿಂಬಾಲಿಸಿತು; ತನ್ನ ಕೊಟ್ಟಡಿಯ ಆಕಳು ಇನ್ನೊಬ್ಬನ ಬೆನ್ನಟಿದ ದೃಶ್ಯ ಕಂಡು ಬ್ರಾಹ್ಮಣನು ಆಶ್ರಮದಿಂದ ಹೊರ ಬಂದು ಹೀಗೆ ಗದ್ದರಿಸಿದನು ʻಅದು ನನ್ನ ಆಕಳು, ರಾಜನು ಅದನ್ನು ನನಗೆ ದಾನ ಕೊಟ್ಟಿರುವನುʼ; ಇಬ್ಬರೂ ಬ್ರಾಹ್ಮಣ ಮಧ್ಯೆ ಆ ಆಕಳಕ್ಕಾಗಿ ಜಗಳ ಶುರುವಾಯಿತು; ಅವರಿಬ್ಬರೂ ಆಕಳೊಂದಿಗೆ ನ್ಯಾಯಕ್ಕಾಗಿ ರಾಜನ ಬಳಿ ಬಂದರು, ಆದರೆ ಬ್ರಾಹ್ಮಣರಿಗೆ ರಾಜನನ್ನು ಭೇಟಿಯಾಗುವ ಅವಕಾಶ ಸಿಗಲಿಲ್ಲ: ಅವರು ರಾಜನಿಗಾಗಿ ದ್ವಾರ ಬಳಿ ಬಹಳ ದಿನಗಳವರೆಗೆ ಕಾದರು, ರಾಜನ ದರ್ಶನ ಸಿಗದೇ ಇದ್ದದಕ್ಕಾಗಿ ಅವರು ಕೊನೆಗೆ ಕೆಂಡ- ಮಂಡಲವಾಗಿ ರಾಜಾ ನೃಗನಿಗೆ ಶಾಪ ನೀಡಿದರುʻ ನಮ್ಮ ಜಗಳ ಕೇಳಲು ಅವಕಾಶ ಕೊಡದ ನೀನು ಸಕಲ ಜೀವಿಗಳಿಗೆ ಗೋಚರಿಸದಂತೆ ಹಲ್ಲಿಯಾಗು, ಶತ ಸಹಸ್ರ ಸಂವತ್ಸರಗಳವರೆಗೆ, ಯುಗದ ಅಂತ್ಯದವರೆಗೆ ತಗ್ಗಿನಲ್ಲಿ(ಕಂದಕದಲ್ಲಿ) ಮುಚ್ಚಿಕೊಂಡಿರುʼ. ಹೀಗೆ ಶಾಪ ನೀಡಿ ಬ್ರಾಹ್ಮಣದ್ವಯರು ತಮ್ಮಲ್ಲಿಯೇ ಜಗಳ ಬಗೆ ಹರಿಸಿಕೊಂಡು ಆ ಬಡಬ್ರಾಹ್ಮಣನು ಕೊನೆಗೆ ತನ್ನ ಮುದಿ ಆಕಳನ್ನು ಹಿಂಪಡೆದನು; ಓ ಲಕ್ಷ್ಮಣಾ, ರಾಜಾ ನೃಗನು ಇಂದಿಗೂ ಹಲ್ಲಿಯಾಗಿ ಬದುಕಿರುವನು, ನಾವು ಪ್ರಜೆಗಳ ಸಮಸ್ಯೆಗಳನ್ನು ಆಲಿಸಬೇಕು; ಬೇಗ ಹೊರಡು, ಯಾರಾದರೂ ದ್ವಾರ ಬಳಿ ನ್ಯಾಯಕ್ಕಾಗಿ ನಿಂತಿದ್ದರೆ ನೀನು ಅವರನ್ನು ನನ್ನ ಬಳಿ ಕೆರೆದು ಕೊಂಡುಬಾ”.
.. ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ‌.