ಎಲ್ಲರ ಜಯ ಕೋರಿದರು….

By admin

ಚ್ಯವನ ಹೇಳಿದರು ಶತ್ರುಘ್ನನಿಗೆ ಲವನನ ಬಗ್ಗೆ, ಎಲ್ಲರು ಜಯ ಕೋರಿದರು I
ಶತ್ರುಘ್ನನಿಗೆ, ಬೇಗ ಗತಿಸಿತು ರಾತ್ರಿ; II
ನಿರ್ಮೋಡ ನಸುಕು ಬೆಳಗಿತು, ಆಹಾರ ಹುಡುಕಲುI
ರಾಕ್ಷಸ ಲವನ ನಗರ ದ್ವಾರ ದಾಟಿ ನಡೆದನು; II
ಯಮುನಾನದಿ ದಾಟಿ ಶತ್ರುಘ್ನ ಹಿಡಿದು ಧನುಷ್ಯI
ಗುರಿಯಿಟ್ಟು ನಿಂತನು ಮಧುಪುರದ್ವಾರದ ಬಳಿ; II
ಮಧ್ಯಾಹ್ನ ಹೊತ್ತಿಗೆ ಅಸಂಖ್ಯಾತ ಜೀವಿಗಳI
ಬೇಟೆ ಮಾಡಿ ಲವನ ಮರಳುತಿದ್ದ ನಗರಕ್ಕೆ; II
ಕಂಡನು ಲವನ ಬಿಲ್ಲು ಹೂಡಿ ಹಿಡಿದು ನಿಂತI
ಶತ್ರುಘ್ನನ ದ್ವಾರ ಬಳಿ,ಲವನ ಲಾಲಿಸಿದ: II
“ಅಸ್ತ್ರ ಹೂಡಿಕೊಂಡು ಮಾಡುವಿ ಏನು? ಓ ಕನಿಷ್ಠನೇ, I
ನಿನ್ನಂತ ಸಹಸ್ರವೀರರನು ಅವರ ಅಸ್ತ್ರಗಳ ಸಮೇತನುಂಗಿರುವೆ;II
ನಿನ್ನ ಸಾವು ಇಲ್ಲಿಗೆ ಕರೆದು ತಂದಿದೆ ನಿನ್ನ,I
ಪೂರ್ಣತುಂಬಿಲ್ಲ ಎನ್ನ ಹೊಟ್ಟೆ ಇನ್ನೂ, II
ನೀನಾಗಿಯೇ ಎನ್ನ ಬಾಯಿಗೆ ಬಿಳ್ಳುವೇಕೆ?I
ಓ ಮಹಾ ಮೂರ್ಖನೆ” ಗಹಗಹಸಿ ನಕ್ಕನು ಲವನ; II
ಕೇಳಿ ಲವನನ ಮಾತು ಶತ್ರುಘ್ನನ ಅಂಗಾಂಗಗಳಲಿI
ಸಿಟ್ಟಿನ ಅಲೆ ಸಂಚರಿಸಿತು, ಬಂದವು ಕಣ್ಣಿರು ಗಂಗಳಲಿ;II
ಕೋಪದಲಿ ಲವನನಿಗೆ ನುಡಿದ ಶತ್ರುಘ್ನ:I
“ಬಂದಿರುವೆ ನಾನೊಬ್ಬನೆ ನಿನ್ನೊಂದಿಗೆ ಯುದ್ಧಕ್ಕೆ! II
ನಾನು ದಶರಥಪುತ್ರ, ರಾಮನ ಸಹೋದರ,I
ಶತ್ರುಘ್ನ ಎನ್ನ ಹೆಸರು, ನಿನ್ನ ವಧಿಸುವ ಬಯಕೆ ಎನ್ನದು;II
ನಿನ್ನ ಸಂಹರಿಸಲು ಕಾಲ ಕರೆದು ತಂದಿದೆ ಎನ್ನ ಇಲ್ಲಿ,I
ಯುದ್ಧ ಮಾಡುವೆ ನಾ, ಸಿದ್ದನಾಗು ನಿನ್ನ ರಕ್ಷಣೆಗೆ ನೀ;II
ಸಕಲ ಜೀವಿಗಳ ಶತ್ರು ನೀ, ಬದುಕುಳಿಯಲಾರೆI
ಇಂದು ನೀ ಎನ್ನ ಪ್ರಹಾರದಿ, ಜೀವಿಸಲಾರೆʼ.II
ಕೇಳಿ ಶತ್ರುಘ್ನನ ಎಚ್ಚರಿಕೆ ಮಾತುI
ರಾಕ್ಷಸ ಲವನಾಸುರ ಉತ್ತರಿಸಿದ ಶತ್ರುಘ್ನನಿಗೆ: II
“ಎನ್ನ ಸುದೈವ ಕರೆತಂದಿದೆ ನಿನ್ನ ಇಲ್ಲಿಗೆ,I
ಓ ತಿಳಿಗೇಡಿಯೇ, ರಾಮನು ರಾವಣನ ವಧಿಸಿದ, II
ರಾವಣ ಎನ್ನ ಚಿಕ್ಕಮ್ಮನ ಸಹೋದರ,I
ಕಳೆದುಕೊಂಡ ಪ್ರಾಣ ಕೆವಲ ಒಂದು ಹೆಣ್ಣಿಗಾಗಿ;II
ರಾವಣ ಕುಟುಂಬ ನಾಶ ತಂದಿದೆ ಎನಗೆ ದುಃಖ, I
ಅದರ ಸೇಡು ತೆಗೆದುಕೊಂಡಲ್ಲ ನಾನು, ಪಡಬೇಡಾ ಅತೀ ವಿಶ್ವಾಸ;II
ಹುಲ್ಲು ಬಣಿವೆ ಸುಟ್ಟು ಹಾಕಿದಂತೆ ಸುಟ್ಟು ಹಾಕುವೆI
ನಿಮ್ಮೇಲ್ಲರನೂ, ಹಟ್ಟಿದವರನು ವ ಹುಟ್ಟುವವರನು;II
ಓ ಕುಹೂಕ ಬುದ್ಧಿಯವನೆ, ಸ್ವೀಕರಿಸುವೆ ನಿನ್ನ ಆಹ್ವಾನ,I
ಒಂದು ಕ್ಷಣ ತಡೆ, ತರುವೆ ನಿನ್ನ ಸಂಹರಿಸುವ ಅಸ್ತ್ರ.” II
ತಕ್ಷಣ ಶತ್ರುಘ್ನ ಲವನಾಸುರನಿಗೆ ಉತ್ತರಿಸಿದ:I
“ಏನು, ನನ್ನಿಂದ ತಪ್ಪಿಸಿಕೊಂಡೆ ಹೊರಟೆಯಾ? II
ಶತ್ರುವನ್ನು ಬಿಟ್ಟುಕೊಡದವನು ಚಾಣಾಕ್ಷ ವೀರI
ಶತ್ರುವನ್ನು ಹಾಯಾಗಿ ಬಿಟ್ಟುಕೊಡುವವ ಮುಠ್ಠಾಳನು;II
ಕಾಯುತ್ತಿದೆ ನಿನ್ನ ಹತ್ಯೆಗಾಗಿ ಈ ಬಾಣI
ತ್ರಿಲೋಕ ಶತ್ರುವೇ, ಕಳಿಸುವೆ ನಿನ್ನ ಯಮಲೋಕಕ್ಕೆ”.II
ಉತ್ತರಕಾಂಡ

ಶತ್ರುಘ್ನನು ಮಧುಪುರ ದ್ವಾರದ ಬಳಿ ಬಾಣ ಹೂಡಿ ಲವನಾಸುರನಿಗಾಗಿ ಕಾಯುತಿದ್ದ, ಬೇಟೆ ಮಾಡಿಕೊಂದು ಲವನಾಸುರನು ಮಧ್ಯಾಹ್ನದ ಹೊತ್ತಿಗೆ ನಗರಕ್ಕೆ ಮರಳುವಾಗ ಶತ್ರುಘ್ನನ್ನು ನೋಡಿ ಅವನ್ನು ಲಾಲಿಸಸಿದ ಮತ್ತು ಇಬ್ಬರ ನಡುವಿ ಸಂವಾದ ಪ್ರಸಂಗವನ್ನು ಆದಿಕವಿ ವಾಲ್ಮೀಕಿಯುವಿವರಿಸಿರುವರು, ಲವನಾಸುರನು ರಾವಣನನು ತನ್ನ ಚಿಕ್ಕಮ್ಮನ ಸಹೋದರ ಮತ್ತು ಅವನು ಕೆವಲ ಒಂದು ಹೆಣ್ಣಿಗಾಗಿ ಪ್ರಾಣ ಕಳೆದುಕೊಂಡ ವಿಷಯವನ್ನು ಆದಿಕವಿ ಇಲ್ಲಿ ಹೀಗೆ ಪ್ರಸ್ತಾಪಿಸಿರುವರು: ಚ್ಯವನ ಮುನಿಯು ಶತ್ರುಘ್ನನಿಗೆ ಲವನನ ಸಾಮರ್ಥ್ಯ ಬಗ್ಗೆ ಹೇಳಿದರು, ಎಲ್ಲರು ಶತ್ರುಘ್ನನಿಗೆ ಜಯಕೋರಿದರು, ರಾತ್ರಿಯೂ ಬೇಗ ಗತಿಸಿತು; ನಿರ್ಮೋಡ ನಸುಕು ಬೆಳಗಿತು, ಆಹಾರ ಹುಡುಕಲು ರಾಕ್ಷಸ ಲವನಾಸುರನು ನಗರ ದ್ವಾರ ದಾಟಿ ನಡೆದನು; ಇತ್ತ ಶತ್ರುಘ್ನನು ಧನುಷ್ಯ ಹಿಡಿದು ಗುರಿಯಿಟ್ಟು ಯಮುನಾನದಿ ದಾಟಿ ಮಧುಪುರದ್ವಾರದ ಬಳಿ ಲವನಾಸುರನಿಗಾಗಿ ಕಾದು ನಿಂತನು; ಮಧ್ಯಾಹ್ನದ ಹೊತ್ತಿಗೆ ಅಸಂಖ್ಯಾತ ಜೀವಿಗಳ ಬೇಟೆ ಮಾಡಿ ಲವನನು ನಗರಕ್ಕೆ ಮರಳುತಿದ್ದನು; ಲವನಾಸುರನು ದ್ವಾರ ಬಳಿ ಬಿಲ್ಲು ಹೂಡಿ ಹಿಡಿದು ನಿಂತ ಶತ್ರುಘ್ನನನ್ನು “ಓ ಕನಿಷ್ಠನೇ, ಅಸ್ತ್ರ ಹೂಡಿಕೊಂಡು ನೀನು ಏನು ಮಾಡುವಿ? ನಿನ್ನಂತ ಸಹಸ್ರವೀರರನು ಅವರ ಅಸ್ತ್ರಗಳ ಸಮೇತ ನಾನು ನುಂಗಿರುವೆನು; ನಿನ್ನ ಸಾವು ನಿನ್ನನು ಇಲ್ಲಿಗೆ ಕರೆದು ತಂದಿದೆ, ನನ್ನ ಹೊಟ್ಟೆ ಇನ್ನೂ ಪೂರ್ಣತುಂಬಿಲ್ಲ, ನೀನಾಗಿಯೇ ನನ್ನ ಬಾಯಿಗೆ ಬಿಳ್ಳುವೇಕೆ?,ಓ ಮಹಾ ಮೂರ್ಖನೆ” ಎಂದು ಲಾಲಿಸುತ್ತ ಗಹಗಹಸಿ ನಕ್ಕನು; ಲವನನ ಅಹಂಕಾರದ ಮಾತುಗಳನ್ನು ಕೇಳಿ ಶತ್ರುಘ್ನನ ಅಂಗಾಂಗಗಳಲಿ ಸಿಟ್ಟಿನ ಅಲೆ ಸಂಚರಿಸಿತು, ಕಣ್ಣುಗಳಲಿ ಕಣ್ಣಿರು ಬಂದವು; ಕೋಪದಲಿ ಶತ್ರುಘ್ನನು ಲವನನಿಗೆ ಉತ್ತರಿಸಿದನು “ನಾನೊಬ್ಬನೆ ನಿನ್ನೊಂದಿಗೆ ಯುದ್ಧಕ್ಕೆ ಬಂದಿರುವೆನು! ನಾನು ದಶರಥಪುತ್ರ, ರಾಮನ ಸಹೋದರ, ಶತ್ರುಘ್ನ ನನ್ನ ಹೆಸರು, ನಿನ್ನ ವಧಿಸುವ ಬಯಕೆ ನನ್ನದು; ನಿನ್ನ ಸಂಹರಿಸಲು ನನ್ನನು ಇಲ್ಲಿಗೆ ಕಾಲ ಕರೆದು ತಂದಿದೆ,ನಾನು ಯುದ್ಧ ಮಾಡುವೆನು, ನೀನು ನಿನ್ನ ರಕ್ಷಣೆಗೆ ಸಿದ್ದನಾಗು; ನೀನು ಸಕಲ ಜೀವಿಗಳ ಶತ್ರು, ಇಂದು ನೀನು ನನ್ನ ಪ್ರಹಾರದಿಂದ ಬದುಕುಳಿಯಲಾರೆ, ಜೀವಿಸಲಾರೆʼ. ಶತ್ರುಘ್ನನ ಎಚ್ಚರಿಕೆ ಮಾತು ಕೇಳಿ ರಾಕ್ಷಸ ಲವನಾಸುರನು ಅವನಿಗೆ ಉತ್ತರಿಸಿದನು “ಓ ತಿಳಿಗೇಡಿಯೇ, ನಿನ್ನನು ಇಲ್ಲಿಗೆ ನನ್ನ ಸುದೈವ ಕರೆತಂದಿದೆ, ರಾಮನು ರಾವಣನ ವಧಿಸಿದನು, ರಾವಣ ನನ್ನ ಚಿಕ್ಕಮ್ಮನ ಸಹೋದರ, ಅವನು ಕೆವಲ ಒಂದು ಹೆಣ್ಣಿಗಾಗಿ ಪ್ರಾಣ ಕಳೆದುಕೊಂಡನು; ರಾವಣ ಕುಟುಂಬ ನಾಶ ಸುದ್ಧಿ ನನಗೆ ದುಃಖ ತಂದಿದೆ, ನಾನು ಅದರ ಸೇಡು ತೆಗೆದುಕೊಂಡಿಲ್ಲ, ನೀನು ಅತೀವಿಶ್ವಾಸ ಪಡಬೇಡಾ; ಹುಲ್ಲು ಬಣಿವೆ ಸುಟ್ಟು ಹಾಕಿದಂತೆ ನಾನು ನಿಮ್ಮೇಲ್ಲರನೂ ಸುಟ್ಟು ಹಾಕುವೆನು, ಹಟ್ಟಿದವರನು ಮತ್ತು ಹುಟ್ಟುವವರನು ಸೇರಿಸಿ; ಓ ಕುಹೂಕ ಬುದ್ಧಿಯವನೆ, ನಿನ್ನ ಆಹ್ವಾನ ಸ್ವೀಕರಿಸುವೆನು, ಒಂದು ಕ್ಷಣ ತಡೆ, ನಿನ್ನ ಸಂಹರಿಸುವ ಅಸ್ತ್ರ ತರುವೆನು.” ತಕ್ಷಣ ಶತ್ರುಘ್ನನು ಲವನಾಸುರನಿಗೆ “ಏನು, ನನ್ನಿಂದ ತಪ್ಪಿಸಿಕೊಂಡೆ ಹೊರಟೆಯಾ? ಶತ್ರುವನ್ನು ಬಿಟ್ಟುಕೊಡದವನು ಚಾಣಾಕ್ಷ ವೀರನು, ಶತ್ರುವನ್ನು ಹಾಯಾಗಿ ಬಿಟ್ಟುಕೊಡುವವ ಮುಠ್ಠಾಳನು;ನಿನ್ನ ಹತ್ಯೆಗಾಗಿ ನನ್ನ ಈ ಬಾಣ ಕಾಯುತ್ತಿದೆ; ತ್ರಿಲೋಕ ಶತ್ರುವೇ, ನಾನು ನಿನ್ನ ಯಮಲೋಕಕ್ಕೆ ಕಳಿಸುವೆನು.”

-ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ‌.