
ಕಲಬುರಗಿ: ರಾಷ್ಟ್ರೀಯ ಸೇವಾ ಯೋಜನೆ (NSS)’ಅ’ ಮತ್ತು ಬ ಘಟಕ ಯುನಿಸೆಫ್ ಮತ್ತು ಮಹಾದೇವಪ್ಪ ರಾಂಪುರೆ ವೈದ್ಯಕೀಯ ಕಾಲೇಜ್, ನಗರ ಸಮುದಾಯ ಆರೋಗ್ಯ ಕೇಂದ್ರ ರಾಜಾಪೂರ, ಕಲಬುರಗಿ ಇವರ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಶ್ರೀಮತಿ ವೀರಮ್ಮ ಗಂಗಸಿರಿ ಪದವಿ ಪೂರ್ವಕಾಲೇಜಿನಲ್ಲಿ “ರಕ್ತಹೀನತೆ ಮುಕ್ತ ಪೌಷ್ಠಿಕ ಕರ್ನಾಟಕ” ಕುರಿತು ಜಾಗೃತಿ ಕಾರ್ಯಕ್ರಮ ನಡೆಯಿತು.
ಡಾ. ಸೌಮ್ಯ.ಹತ್ತಿ ಸಹಾಯಕ ಪ್ರಾಧ್ಯಾಪಕರು ಮಹಾದೇವಪ್ಪ ರಾಂಪುರೆ ವೈದ್ಯಕೀಯ ಕಾಲೇಜ್ ಕಲಬುರಗಿ ಯವರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಒಂದು ಗಂಟೆಯವರೆಗೆ ರಕ್ತ ಹೀನತೆಗೆ ಕಾರಣವೇನು? ಅದರಿಂದ ನಮ್ಮ ಆರೋಗ್ಯ ಹೇಗೆ ಕಾಪಾಡಿಕೊಳ್ಳಬೇಕು,ಆಹಾರ ಪದ್ಧತಿ ಕುರಿತು ಮಕ್ಕಳಿಗೆ ತಿಳಿಸಿ ಹೇಳಿದರು.
ಶ್ರೀಮತಿ ವೀರಮ್ಮ ಗಂಗಸಿರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಡಾ. ನಾಗೇಂದ್ರ ಮಸೂತಿ ಅವರು ಅಧ್ಯಕ್ಷೀಯ ಸ್ಥಾನವಹಿಸಿದ್ದರು.ಡಾ.ಸುಭಾಶ್ಚಂದ್ರ ದೊಡ್ಡಮನಿ ಅವರು ಕಾರ್ಯಕ್ರಮ ನಡೆಸಿಕೊಟ್ಟರು.ಡಾ. ರೇಣುಕಾ. ಹಾಗರಗುಂಡಗಿ NSS ಅಧಿಕಾರಿಗಳು ಪ್ರಸ್ತಾವಿಕ ನುಡಿಗಳನ್ನಾಡಿದರು. ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಶ್ರೀ ಬಸವರಾಜ ಗೋಣಿಯವರು ವಂದನಾರ್ಪಣೆ ಗೈದರು. ಶ್ರೀಮತಿ ರಶ್ಮಿ. ಶ್ರೀಮತಿ ಸಂತೋಷಿ. ಶ್ರೀಮತಿ ನೈನತಾರ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
