
ಕಲಬುರಗಿ: ಮನುಷ್ಯ ಆರೋಗ್ಯವಂತನಾಗಿರಲು ಸತ್ವಯುತ ಆಹಾರ ಸೇವನೆಯ ಅವಶ್ಯಕತೆ ಇದೆ.ಎಂದು ಶ್ರೀ ಬಸವೇಶ್ವರ ಆಯುರ್ವೇದಿಕ್ ಮಹಾವಿದ್ಯಾಲಯ ಕಲಬುರಗಿಯ ಸಹಾಯಕ ಪ್ರಾಧ್ಯಾಪಕರಾದ ಡಾ.ಅಶ್ವಿನಿ ಎಸ್.ಮಾಲಿಪಾಟೀಲ ಹೇಳಿದರು ಸತ್ಯಂ ಪದವಿ ಪೂರ್ವ ಕಾಲೇಜಿನಲ್ಲಿ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದ ರಾ.ಸೇ.ಯೋ.ಘಟಕಗಳು ಮತ್ತು UNICEF ಯುನಿಸೆಫ್ ಹಾಗೂ ಮಹಾದೇವಪ್ಪ ರಾಂಪುರೆ ವೈದ್ಯಕೀಯ ಮಹಾವಿದ್ಯಾಲಯದ ನಗರ ಸಮುದಾಯ ಆರೋಗ್ಯ ಕೇಂದ್ರ ರಾಜಾಪುರ ಕಲಬುರಗಿ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ “ರಕ್ತಹೀನತೆ ಮುಕ್ತ ಪೌಷ್ಟಿಕ ಕರ್ನಾಟಕ” ಕಾರ್ಯಕ್ರಮದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾತನಾಡಿದರು ಮುಂದುವರೆದು ಮಾತನಾಡಿದ ಅವರು ಇಂದು ಯುವಕ ಯುವತಿಯರು ಸತ್ವಯುತ ಆಹಾರ ಹಾಗೂ ಹಣ್ಣುಗಳನ್ನು ಸೇವಿಸುವದರಿಂದ ದೂರಸರಿದು ಝಂಕ್ ಪದಾರ್ಥಗಳ ಹಿಂದೆ ಬಿದ್ದು ತಮ್ಮಆರೋಗ್ಯವನ್ನು ಕೆಡಿಸಿಕೊಳ್ಳುತ್ತಿದ್ದಾರೆ ಅದರಲ್ಲೂ ವಿಶೇಷವಾಗಿ ಯುವಕ- ಯುವತಿಯರು ಹೆಚ್ಚಾಗಿ ಚಹಾ,ಕಾಫಿ ಸೇವನೆ ಮಾಡುವುದರಿಂದ ಹಸಿರು ತರಕಾರಿಗಳನ್ನು ಸೇವಿಸದೆ ಇರುವುದರಿಂದ ಹದಿಹರೆಯದ ವಯೋಮಾನದವರಲ್ಲಿ ರಕ್ತಹೀನತೆಯಂತಹ ತೊಂದರೆ ಹೆಚ್ಚಾಗುತ್ತಿವೆ ಎಂದು ಹೇಳಿದರು .
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯರಾದ ಡಾ.ಬಿ.ಹೆಚ್.ನಿರಗುಡಿ ಅವರು ಮಾತನಾಡುತ್ತಾ ಇಂದಿನ ಯುವಕ ಯುವತಿಯರಿಗೆ ಆರೋಗ್ಯದ ಬಗ್ಗೆ ಜಾಗೃತಿ ಮುಡಿಸುವ ಕಾರ್ಯಕ್ರಮಗಳ ಅವಶ್ಯಕತೆ ಇದೆ ಎಂದು ಹೇಳಿದರು
.ರಾ.ಸೇ.ಯೋ.ಕಾರ್ಯಕ್ರಮಾಧಿಕಾರಿ ಡಾ.ಮಹೇಶ ಗಂವ್ಹಾರ ಪ್ರಾಸ್ತಾವಿಕ ಮಾತುಗಳನ್ನಾಡಿ ಎಲ್ಲರನ್ನೂ ಸ್ವಾಗತಿಸಿದರು,ಕುಮಾರಿ ಭಾರತಿ ಹಾಗೂ ಸುಮಾ ಇವರು ಕಾರ್ಯಕ್ರಮ ನಿರುಪಿಸಿದರು ಡಾ.ವಿಶ್ವನಾಥ ದೇವರಮನಿ ವಂದಿಸಿದರು.ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಉಪನ್ಯಾಸಕರಾದ ಪ್ರೊ.ನಮ್ರತಾ ಹವಾ,ಪ್ರೊ.ಅಂಬಿಕಾ,ಪ್ರೊನಿರ್ಮಲಾ ಅಂಕಲಗಿ ವಿದ್ಯಾರ್ಥಿ – ವಿದ್ಯಾರ್ಥಿನಿಯರು ಭಾಗವಹಿಸಿದ್ದರು,
