
ಕಲಬುರಗಿ: ನಗರದ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕಗಳು ಮತ್ತು UNICEF ಹಾಗೂ ಮಹಾದೇವಪ್ಪ ರಾಂಪುರೆ ವೈದ್ಯಕೀಯ ಮಹಾವಿದ್ಯಾಲಯದ ನಗರ ಸಮುದಾಯ ಅರೋಗ್ಯ ಕೇಂದ್ರ ಇವುಗಳ ಸಹಯೋಗದೊಂದಿಗೆ ಸರಕಾರಿ ಪದವಿ ಪೂರ್ವ ಕಾಲೇಜು ಜೇವರ್ಗಿ ಕಾಲೋನಿ ಕಲಬುರಗಿಯಲ್ಲಿ ಅಯೋಜಿಸಿದ್ದ ರಕ್ತಹಿನತೆ ಮುಕ್ತ ಪೌಷ್ಠಿಕ ಕರ್ನಾಟಕ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿ ಗಳಾಗಿ ಭಾಗವಹಿಸಿ ಹಸಿರು ತರಕಾರಿ ಸೇವಿಸುವುದರ ಮೂಲಕ ಪೌಷ್ಟಿಕ ಆಹಾರವನ್ನು ಸೇವನೆ ಮಾಡುವುದರ ಮೂಲಕ ರೋಗ ನಿರೊಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು ಇಂದು ಯುವಕರು ಝಂಕ್ ಫುಡ್ ಗಳ ಹಿಂದೆ ಬಿದ್ಸಿರುವುದು ದುರದೃಷ್ಟಕರ ಎಂದು ಹೇಳಿದರು .ಕಾರ್ಯಕ್ರಮದ ಅಧ್ಯಕ್ಷ ತೆಯನ್ನು ಕಾಲೇಜಿನ ಪ್ರಾಚಾರ್ಯರಾದ ಡಾ.ಸುಜಾತಾ ಬಂಡೇಶರಡ್ಡಿ ವಹಿಸಿಕೊಂಡಿದ್ದರು. ಡಾ.ಸುಭಾಸ ದೊಡ್ಡಮನಿ ಸ್ವಾಗತಿಸಿದರು,ರಾ.ಸೇ.ಯೋ.ಕಾರ್ಯಕ್ರಮಾಧಿಕಾರಿಗಳಾದ ಡಾ.ಮಹೇಶ ಗಂವ್ಹಾರ ಪ್ರಾಸ್ತಾವಿಕ ಮಾತುಗಳನ್ನಾಡಿದರು,ಡಾ.ಪ್ರೇಮಚಂದ್ ಚವ್ಹಾಣ ವಂದಿಸಿದರು .NSS ಅಧಿಕಾರಿ ಡಾ.ರೇಣುಕಾ .ಹೆಚ್.ಡಾ.ಪ್ರತಿಭಾ ಸಂಗಾಪುರೆ,ಉಪನ್ಯಾಸಕರಾದ ಶ್ರೀಮತಿ ವಿಜಯಲಕ್ಮಿ ಹಳ್ದಿ,ಕಾಲೇಜಿನ ಉಪನ್ಯಾಸಕರು ಹಾಗೂ NSS ಅಧಿಕಾರಿಗಳಾದ ಶ್ರೀ ನಾಮದೇವ ಕಡಕೋಳ ಮತ್ತು ಸಿಬ್ಬಂದಿ ,ವಿದ್ಯಾರ್ಥಿ,ವಿದ್ಯಾರ್ಥಿನಿಯರು ಭಾಗವಹಿಸಿದ್ದರು ಎಂದು ಮಹಾವಿದ್ಯಾಲಯದ ನ್ಯಾಕ್ ಸಂಯೋಜಕರಾದ ಡಾ. ಮೋಹನರಾಜ್ ಪತ್ತಾರ ಪತ್ರಿಕಾ ಪ್ರಕಟಣೆಗಾಗಿ ತಿಳಿಸಿದ್ದಾರೆ.
