
ಕಾಂಗ್ರೆಸ್ ಸರಕಾರವೂ ತನ್ನ ಮಾತಿನಂತೆ ಶಕ್ತಿ ಯೋಜನೆ ಜಾರಿಗೆ ತಂದಿದೆ ಅದರಿಂದ ಮಹಿಳೆಯರಿಗೆ ಅನುಕೂಲವಾಗುತ್ತದೆ ಎಂದು ಅದು ಭಾವಿಸುತ್ತಿರ ಬಹುದು ಆದರೆ ಬಸ್ಸುಗಳೆ ಇಲ್ಲದೆ ಶಕ್ತಿ ಯೋಜನೆ ಜಾರಿ ಮಾಡಿದರೆ ಏನು ಉಪಯೋಗ…? ಈ ಯೋಜನೆ ಜಾರಿಗೆ ಬರುವ ಮೊದಲು ಬಸ್ಸುಗಳು ಸಮಯಕ್ಕೆ ಸರಿಯಾಗಿ ಬರುತ್ತಿದ್ದವು ಆದರೆ ಇಗಾ ಸಮಯ ಪ್ರಜ್ಞೆ, ಮನುಷತ್ವ ಎಲ್ಲ ಬಸ್ಸಿನ ಚಾಲಕರು ಮರೆತಿದ್ದಾರೋ ಅಥವಾ ಈ ಸರಕಾರನೆ ಮರೆತಿದೆಯೋ ಗೊತ್ತಿಲ್ಲ ಒಂದು ಬಸ್ಸಿಗಾಗಿ ಮೂರರಿಂದ ನಾಲ್ಕು ಗಂಟೆ ಕಾಯಬೇಕು ಆಗ ಒಂದು ಬಸ್ಸು ಬರೊತ್ತೆ, ಅದು ಕೂಡ ಒಮ್ಮೆ ನಿಲ್ಲೋತ್ತೆ ಒಮ್ಮೊಮ್ಮೆ ಹಾಗೆ ಹೋರಡತ್ತೆ. ಅದರ ಮೇಲೆ ಮನುಷ್ಯತ್ವ ಮೀರಿ ಮಹಿಳೆಯರೊಂದಿಗೂ ಮಾತನಾಡುತ್ತಾರೆ ಬಸ್ಸಿನ ಚಾಲಕರು ಹಾಗೂ ಈ ಪುರುಷ ಪ್ರಧಾನದ ಪುರುಷರು. ಬಸ್ಸು ಫ್ರೀ ಅದಾಗಿಂದ ಸುಮ್ ಸುಮ್ನೆ ತಿರುಗಾಡುತ್ತಾರೆ, ಕೆಲಸ ಇಲ್ಲಾ, ತವರು ಮನೆಗೆ ಹೋಗುತ್ತಾರೆ, ಜಾತ್ರೆಗೆ ತಿರುಗುತ್ತಾರೆ, ಇವರಿಂದಾನೆ ಬಸ್ಸುಗಳು ಕಡಿಮೆ ಆಗಿವೆ, ಬಸ್ ಗಳು ಸ್ಟಾಪಿಗೆ ಸರಿಯಾಗಿ ನಿಲ್ಲಿಸುತ್ತಿಲ್ಲ ಅಂತ ಮಹಿಳೆಯರ ಸ್ವಾಭಿಮಾನಕ್ಕೆ ದಕ್ಕೆ ಮಾಡುತ್ತಿದ್ದಾರೆ. ಅಲ್ಲಾ ಸ್ವಾಮಿ ಈ ಯೋಜನೆ ಬರುವ ಮೊದಲು ಮಹಿಳೆಯರು ಜಾತ್ರೆ, ಮಾರುಕಟ್ಟೆ, ತವರು ಮನೆಗೆ ದಾರಿ ಮರೆತ್ತಿದ್ದಾರ.? ಅಥವಾ ನೀವು ಕುರುಡರಾಗಿದ್ದರಾ.? ಸರಕಾರಿ ಬಸ್ಸುಗಳ ವ್ಯವಸ್ಥೆ ನಮ್ಮ ದೇಶದಲ್ಲಿ ಯಾವ ರೀತಿ ಇದೆ ಇತ್ತು ಅಂತ ನಮಗೆಲ್ಲ ತಿಳಿದಿದೆ. ಇಗಲು ಕೆಲವು ಹಳ್ಳಿಗಳಿಗೆ ಬಸ್ ಗಳೆ ಇಲ್ಲಾ ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕುಗಳ ಹಳ್ಳಿ ಗಳೆ ಕಡೆ ಹೋಗಿ ನೋಡಿ ಬಸ್ ವ್ಯವಸ್ಥೆ ಇದಿಯಾ ಇಲ್ಲವ ಎಂದು ತಿಳಿಯುತ್ತದೆ. ಇದು ಉದಾಹರಣೆ ಎಷ್ಟೇ ಇನ್ನು ಸುಮಾರು ಹಳ್ಳಿಗಳಿಗೆ ಬಸ್ಸಿನ ವ್ಯವಸ್ಥೆಯೆ ಇಲ್ಲಾ ಇದರ ಸಲುವಾಗಿ ವಿದ್ಯಾರ್ಥಿಗಳಿಗೆ ಸಮಸ್ಯೆ ಉಂಟಾಗುತ್ತಿದೆ. ಹಾಗೆ ವಿದ್ಯಾರ್ಥಿಗಳು ಬಸ್ಸುಗಳಿಗಾಗಿ ಹೋರಾಟವು ಸಹ ಮಾಡಿದ್ದರು ಊರಿಗೆ ಒಂದೋ ಎರಡೊ ಬಸ್ ಬಿಟ್ಟಿತು ಸರಕಾರ ಇಗಾ ಒಂದು ಕಡೆ ಶಕ್ತಿ ಯೋಜನೆ ಜಾರಿ ಮಾಡಿ ಇನ್ನೊಂದಡೆ ಬಸ್ಸುಗಳು ಕಮ್ಮಿ ಮಾಡಿದೆ. ಇದಕ್ಕೆ ಈ ಪುರುಷ ಪ್ರಧಾನದ ಸಮಾಜ ಮಹಿಳೆಯರನ್ನ ಹೊಣೆ ಮಾಡುತ್ತಿದೆ. ಬೆಳ್ಳಿಗೆ ಆದರೆ ಸಾಕು ದಿನಗುಲಿಗಾಗಿ ಕೆಲಸಕ್ಕೆ ಹೋಗುವ ಮಹಿಳೆಯರು, ಶಾಲೆಗೆ ಹೋಗುವ ವಿದ್ಯಾರ್ಥಿನಿಗಳಿಗೆ ಬಸ್ಸುಗಳ ವ್ಯವಸ್ಥೆ ಇಲ್ಲದಂತಾಗಿದೆ ಮಹಿಳೆಯರನ್ನ ಕಂಡರೆ ಸಾಕು ಬಸ್ಸುಗಳು ನಿಲ್ಲಿಸದೆ ಹೊರಡುತ್ತವೆ.
ಬಸ್ಸಿಗಾಗಿ ಗಂಟೆಗಟ್ಟಲೆ ಕಾಯಿದು ಬೇಸತ್ತು ಹೋಗುತ್ತಾರೆ ಮಹಿಳೆಯರು ಆಟೋ ರಿಕ್ಷಶಾಗಳಿಗೆ ಜಾಸ್ತಿ ಹಣ ನೀಡುವುದು ಬೇಡ ಅಂತ ಬಸ್ಸನ್ನ ಆಯ್ಕೆ ಮಾಡಿಕೊಳ್ಳುತ್ತಾರೆ. ಮಹಿಳೆಯರು ಹಾಗಂದ ಮಾತ್ರಕ್ಕೆ ಅವರಿಗೆ ಹಣ ಕೊಟ್ಟು ಪ್ರಯಾಣಿಸುವ ಸಾಮರ್ಥ್ಯ ಇಲ್ಲಾ ಎಂದಲ್ಲ ಈ ಹಣ ಉಳಿಸಿದರೆ ಮಕ್ಕಳಿಗೆ ಅಥವಾ ಮನೆಗೆ ಉಪಯೋಗ ಆಗಬಹುದು ಹಣ ಉಳಿಸುತ್ತಾರೆ ತಿಳಿದುಕೊಳ್ಳಿ. ಮೊದಲು ಬಸ್ಸಿಗಾಗಿ ಹೋರಾಟ ಮಾಡಿ ಶಕ್ತಿಯೋಜನೆ ಜಾರಿ ತಡೆಯುವುದಕ್ಕೆ ಮಹಿಳೆಯರ ಜೊತೆ ಅಲ್ಲಾ. ಸರಕಾರ ಬಸ್ಸುಗಳನ್ನು ಜಾಸ್ತಿ ಮಾಡಬೇಕು ಒಂದು ಇಲ್ಲಾ ಈ ಯೋಜನೆ ಇಲ್ಲಿಗೆ ತಡೆಯಲಿ ಹಣ ಕೊಟ್ಟು ಪ್ರಯಾಣಿಸುವ ಸಾಮರ್ಥ್ಯ ನಮ್ಮಲ್ಲಿ ಇದೆ ಎಂದು ಪ್ರತಿ ಮಹಿಳೆಯು ಸಹ ಹೇಳುತ್ತಿದ್ದಾಳೆ ಅದರಲ್ಲಿ ನಾನು ಸಹ.
ಲೇಖಕಿ: ನೇಹಾ ಸಜ್ಜನ್, ಮಾಲಗತ್ತಿ
