
ಹನ್ನೆರಡು ಸಂವತ್ಸರಗಳ ನಂತರ ಶತ್ರುಘ್ನI
ಅಯೋಧ್ಯೆಗೆ ಮರಳಿದ ಲಘು ಸೈನ್ಯ ಭದ್ರತೆಯೊಂದಿಗೆ;II
ನೂರು ರಥ, ಮಂತ್ರಿಗಣ, ಸೈನ್ಯಮುಖ್ಯಸ್ಥರಗಳೊಂದಿಗೆI
ಶತ್ರುಘ್ನ ನಡೆದ ಅಯೋಧ್ಯೆಗೆ ರಾಮನ ಭೇಟಿಗೆ; II
ರಘುಕುಲಜ ಪಯಣದ ಹದಿನೈದು ಹಂತಗಳ ದಾಟಿI
ತಲುಪಿದ ವಾಲ್ಮೀಕಿ ಮುನಿ ಆಶ್ರಮ, ಹಿಂದೆ ತಂಗಿದ್ದ ಸ್ಥಳ;II
ಮುನಿಗಳು ಸ್ವಾಗತಿಸಿ ಉಪಚರಿಸಿದರು ನೀರು ಕೊಟ್ಟು ,I
ವಿಶ್ರಮಿಸುವ ಶತ್ರುಘ್ನನಿಗೆ ವಾಲ್ಮೀಕಿ ಮುನಿ ಲಾಲಿಸಿದರು:II
“ಲವನ ವಧಿಸಿ ಮಹಾ ಕಾರ್ಯ ಮಾಡಿರುವಿ,I
ಎಂಥೆಂತಹವರು ಸೋತು ಹೋಗಿದ್ದರು ಲವನಿಗೆ;II
ಲವನ ವಧಿಸಿ ಲೋಕಗಳನ್ನು ಭಯ ಮುಕ್ತಗೊಳಿಸಿದಿI
ರಾಮ ಬಹು ಸಾಹಸದಿ ವಧಿಸಿದ ರಾವಣನ, II
ನೀನು ಆಟವಾಡಿದಂತೆ ವಧಿಸಿದಿ ಲವನಾಸುರನI
ಒಬ್ಬನೇ ಸೈನ್ಯವನ್ನು ಬಳಿಸದೇ ವಧಿಸಿದಿ ಲವನಾಸುರನ;II
ಓ ರಾಜಕುಮಾರ, ವಸವನ ಸಭೆಯಲ್ಲಿ ಇದ್ದೇI
ನಿನ್ನ ವ ಲವನಾಸುನ ರೋಚಕ ಯುದ್ಧ ನೋಡಿದೆ;II
ಕಂಡು ನಿನ್ನ ತಲೆಮೇಲೆ ಕಿರೀಟI
ಸಂತೋಷವಾಯಿತು ಎನಗೆ, ಓ ಶತ್ರುಘ್ನ.” II
ಅರ್ಪಿಸಿದರು ವಾಲ್ಮೀಕಿ ಮುನಿ ಶತ್ರುಘ್ನನಿಗೆI
ಫಲ ಪುಷ್ಪ, ತೋರಿದರು ಪರಂಪರೆ ಆತಿಥ್ಯ; II
ಸಂತೋಷದಿ ಫಲಹಾರ ಸೇವಿಸುವಾಗ ಶತ್ರುಘ್ನನI
ಕಿವಿಗಳಿಗೆ ಅಪ್ಪಳಿಸಿತು ಇಂಪಾದ ಲೋಕಗೀತೆ,II
ರಾಮನ ಬದುಕಿನ ಘಟನೆಗಳ ಸುಮಧುರ ಲೋಕಗೀತೆI
ತಂತಿನಾದಗಳ ಮಧ್ಯೆ ನುಸುಳಿ ಸೂಸುತಿತ್ತು;II
ಕೇಳಿ ರಾಮನ ಚರಿತೆ ಕಣ್ಣೀರು ಸುರಿಸಿದ ಶತ್ರುಘ್ನ,
ತಲೆದೂಗುತ ಶತ್ರುಘ್ನನ ಸಹಚರರು ಅನಂದಿಸಿದರು;II
“ ಅದ್ಭುತ” ವೆಂದರು ಸಹಚರರು, ಆಡಿಕೊಂಡರುI
ಪರಸ್ಪರ:”ಏನಿದು? ನಾವೆಲ್ಲಿದ್ದೇವೆ?, ಇದು ಭ್ರಮೇಯೇ?II
ಇದು ಕನಸೇ? ಮಹಾಕಾವ್ಯವನು ಕೇಳುತಿದ್ದೇವೆ ಕನಸಿನಲ್ಲಿ!”I
ಉಧ್ಗರಿಸುತ ಲಾಲಿಸಿದರು ಸಹಚರರು ಶತ್ರುಘ್ನನ: II
“ ಓ ರಾಜಕುಮಾರ, ಪ್ರಶ್ನಿಸುತ್ತಿರುವೆಯಾ ವಾಲ್ಮೀಕಿI
ಮುನಿಯನ್ನು!” ಅವರಿಗೆ ಶತ್ರುಘ್ನ ಉತ್ತರಿಸಿದ: II
“ ಓ ಸೈನಿಕರೆ, ಸಾಧ್ಯವೇ ಪ್ರಶ್ನಿಸಲು ವಾಲ್ಮೀಕಿ ಮುನಿಯನ್ನು! I
ಘಟಿಸಿವೆ ವಿಷ್ಮರಿಗೆಯಗಳು ಈ ಆಶ್ರಮದಲಿ”.II
ಹೀಗೆ ನುಡಿಯುತ ಶತ್ರುಘ್ನ ಸೇರಿದI
ಗುಡಿಸಲು, ಕಳೆಯಲು ರಾತ್ರಿ ವಾಲ್ಮೀಕಿ ಆಶ್ರಮದಲಿ.II
ಉತ್ತರಕಾಂಡ
ಶತ್ರುಘ್ನನು ಹನ್ನೆರಡು ವರ್ಷಗಳ ನಂತರ ಮಧುಪುರನಗರದಿಂದ ಅಯೋಧ್ಯೆಗೆ ರಾಮನ ಭೇಟಿಗೆ ಮರಳುವಾಗ ದಾರಿ ಮಧ್ಯೆ ಪುನಃ ವಾಲ್ಮೀಕಿ ಆಶ್ರಮದಲ್ಲಿ ರಾತ್ರಿ ಕಳೆಯಲು ಬರುವ, ಅಲ್ಲಿ ಅವನು ವಾಲ್ಮೀಕಿ ಮುನಿಯಿಂದ ಆತಿಥ್ಯ ಸ್ವೀಕರಿಸಿದ ಹಾಗು ಅಲ್ಲಿ ರಾಮನ ಚರಿತೆಯ ಲೋಕಗೀತೆ ಕೇಳಿ ಆನಂದ ಬಾಷ್ಪ ಸುರಿಸಿದ ಪ್ರಸಂಗವನ್ನು ಆದಿಕವಿ ವಾಲ್ಮೀಕಿಯು ವಿವರಿಸಿರುವರು, ಇಲ್ಲಿ ಶತ್ರುಘ್ನನು ಮೊದಲು ಬಾರಿ ವಾಲ್ಮೀಕಿ ಆಶ್ರಮಕ್ಕೆ ಭೇಟಿಕೊಟ್ಟಾಗ ಅಲ್ಲಿ ಲವ ಕುಶರ ಜನ್ಮವಾಗಿತ್ತು ಆದರೆ ಎರಡನೇ ಸಲ ಭೇಟಿಕಾಲಕ್ಕೆ ಅವರು ಹನ್ನೆರಡು ವರ್ಷದ ಬಾಲಕರಾಗಿದ್ದರು ಎಂಬ ಸಂಗತಿಯನ್ನು ಕವಿಗಳು ಪರೋಕ್ಷವಾಗಿ ವ್ಯಕ್ತ ಪಡಿಸಿರುವರು. ಹನ್ನೇರಡು ಸಂವತ್ಸರಗಳ ನಂತರ ಶತ್ರುಘ್ನನು ಲಘು ಸೈನ್ಯ ಭದ್ರತೆಯೊಂದಿಗೆ ಅಯೋಧ್ಯೆಗೆ ಮರಳಿದನು: ನೂರು ರಥ, ಮಂತ್ರಿಗಣ, ಸೈನ್ಯಮುಖ್ಯಸ್ಥರಗಳೊಂದಿಗೆ ಶತ್ರುಘ್ನನು ರಾಮನ ಭೇಟಿಗಾಗಿ ಅಯೋಧ್ಯೆಗೆ ನಡೆದನು; ರಘುಕುಲದ ಶತ್ರುಘ್ನನು ಪಯಣದ ಹದಿನೈದು ಹಂತಗಳ ದಾಟಿ ಹಿಂದೆ ತಾನು ತಂಗಿದ್ದ ಸ್ಥಳ ವಾಲ್ಮೀಕಿ ಮುನಿ ಆಶ್ರಮ ತಲುಪಿದನು; ವಾಲ್ಮೀಕಿ ಮುನಿಗಳು ಶತ್ರುಘ್ನನನ್ನು ಸ್ವಾಗತಿಸಿ ನೀರು ಕೊಟ್ಟು ಉಪಚರಿಸಿದರು, ಆಶ್ರದಲ್ಲಿ ವಿಶ್ರಮಿಸುವ ಶತ್ರುಘ್ನನಿಗೆ ವಾಲ್ಮೀಕಿ ಮುನಿ ಲಾಲಿಸಿದರು “ಲವನಾಸುರನ ವಧಿಸಿ ನೀನು ಮಹಾ ಕಾರ್ಯ ಮಾಡಿರುವಿ, ಲವನಿಗೆ ಎಂಥೆಂತಹವರು ಸೋತು ಹೋಗಿದ್ದರು, ನೀನು ಲವನ ವಧಿಸಿ ಲೋಕಗಳನ್ನು ಭಯ ಮುಕ್ತಗೊಳಿಸಿರುವಿ, ರಾಮನು ರಾವಣನ ವಧಿಸಿಸಲು ಬಹು ಸಾಹಸ ಪಟ್ಟನು,ಆದರೆ ನೀನು ಆಟವಾಡಿದಂತೆ ಲವನಾಸುರನ ವಧಿಸಿದಿ, ಸೈನ್ಯವನ್ನು ಬಳಿಸದೇ ನೀನು ಒಬ್ಬನೇ ಯುದ್ಧ ಮಾಡಿ ಲವನಾಸುರನ ವಧಿಸಿರುವೆ; ಓ ರಾಜಕುಮಾರ, ವಸವನ ಸಭೆಯಲ್ಲಿ ನಾನು ಇದ್ದೇ ಹಾಗು ನಿನ್ನ ಮತ್ತು ಲವನಾಸುರನ ರೋಚಕ ಯುದ್ಧ ನೋಡಿದೆನು; ನಿನ್ನ ತಲೆಮೇಲೆ ಕಿರೀಟ ಕಂಡು ನನಗೆ ಸಂತೋಷವಾಯಿತು” ವಾಲ್ಮೀಕಿ ಮುನಿಯು ಶತ್ರುಘ್ನನಿಗೆ ಫಲ ಪುಷ್ಪ ಅರ್ಪಿಸಿದರು, ತಮ್ಮ ಆತಿಥ್ಯ ಪರಂಪರೆ ತೋರಿದರು; ಶತ್ರುಘ್ನನು ಸಂತೋಷದಿ ಫಲಹಾರ ಸೇವಿಸುವಾಗ ಇಂಪಾದ ಲೋಕಗೀತೆ ಅವನ ಕಿವಿಗಳಿಗೆ ಅಪ್ಪಳಿಸಿತು, ತಂತಿನಾದಗಳ ಮಧ್ಯೆ ನುಸುಳಿ ಸೂಸುತಿತ್ತು ರಾಮನ ಬದುಕಿನ ಘಟನೆಗಳ ಸುಮಧುರ ಲೋಕಗೀತೆ; ರಾಮನ ಚರಿತೆ ಕೇಳಿ ಶತ್ರುಘ್ನನು ಕಣ್ಣೀರು ಸುರಿಸಿದನು, ಶತ್ರುಘ್ನನ ಸಹಚರರು ಅದನ್ನು ಕೇಳಿ ಅನಂದಿಸಿದರು ಹಾಗು “ ಅದ್ಭುತ” ವೆಂದರು ಸಹಚರರು, ಅದರಂತೆ ಅವರು ಪರಸ್ಪರ ”ಏನಿದು? ನಾವೆಲ್ಲಿದ್ದೇವೆ?, ಇದು ಭ್ರಮೇಯೇ? ಇದು ಕನಸೇ? ಮಹಾಕಾವ್ಯವನು ಕೇಳುತಿದ್ದೇವೆ ಕನಸಿನಲ್ಲಿ!” ಎಂದು ಆಡಿಕೊಂಡರು; ಸಹಚರರು ಶತ್ರುಘ್ನನನ್ನು ಉಧ್ಗರಿಸುತ ಲಾಲಿಸಿದರು “ ಓ ರಾಜಕುಮಾರ, ಪ್ರಶ್ನಿಸುತ್ತಿರುವೆಯಾ ವಾಲ್ಮೀಕಿ ಮುನಿಯನ್ನು!” ಅವರಿಗೆ ಶತ್ರುಘ್ನ ಉತ್ತರಿಸಿದನು “ ಓ ಸೈನಿಕರೆ, ವಾಲ್ಮೀಕಿ ಮುನಿಯನ್ನು ಪ್ರಶ್ನಿಸಲು ಸಾಧ್ಯವೇ! ವಿಷ್ಮಯಗಳು ಈ ಆಶ್ರಮದಲಿ ಘಟಿಸಿವೆ” ಹೀಗೆ ನುಡಿಯುತ ವಾಲ್ಮೀಕಿ ಆಶ್ರಮದಲಿ ರಾತ್ರಿ ಕಳೆಯಲು ಶತ್ರುಘ್ನನು ಗುಡಿಸಲು ಸೇರಿದನು.
.. ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ.
