
ಬಂಧಿತ ಆರೋಪಿ ಶಿವಪ್ಪ

ಬಂಧಿತ ಆರೋಪಿ ಶಿವರಾಜ
ಶಹಾಪುರ:ತಾಲ್ಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ(ಟಿಎಪಿಸಿಎಂಎಸ್ ನ) ಆಹಾರ ಧಾನ್ಯ ಉಗ್ರಾಣ ಕೇಂದ್ರದಲ್ಲಿ ಸುಮಾರು $2.6ಕೋಟಿ ಮೌಲ್ಯದ 6 ಸಾವಿರ ಕ್ವಿಂಟಾಲ್ ಪಡಿತರ ಅಕ್ಕಿ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಶಹಾಪುರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಟಿಎಪಿಸಿಎಂಎಸ್ ನ ಹಿಂದಿನ ಮುಖ್ಯ ಕಾರ್ಯನಿರ್ವಾಹಕ ಶಿವರಾಜ ಗುಂಡಪ್ಪ ಹಾಲಗೇರಾ, ಈಗಿನ ಮುಖ್ಯ ಕಾರ್ಯನಿರ್ವಾಹಕ ಶಿವಪ್ಪ ಮಲ್ಲಪ್ಪ ಸುರಪುರ, ಅಬ್ದುಲ ನಬಿ ಮಹಿಮೂದ ಬೈರಿ ಶಹಾಪುರ ಹಾಗೂ ಮಲ್ಲಣ್ಣಗೌಡ ವೀರಣ್ಣಗೌಡ ಕೊಳ್ಳೂರ ಬಂಧಿತ ಆರೋಪಿಗಳು.
ಶಿವರಾಜ,ಶಿವಪ್ಪ ಅವರನ್ನು ಶನಿವಾರ ಬಂಧಿಸಿದೆ. ಅಬ್ದುಲ ನಬಿ, ಮಲ್ಲಣ್ಣಗೌಡ ಅವರನ್ನು ಭಾನುವಾರ ಬಂಧಿಸಿದೆ. ನಾಲ್ವರು ಆರೋಪಿಗಳನ್ನು ಸೋಮವಾರ ನ್ಯಾಯಲಯಕ್ಕೆ ಹಾಜರುಪಡಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಆರೋಪಿ ಅಬ್ದುಲ ನಬಿ ಹಾಗೂ ಮಲ್ಲಣ್ಣಗೌಡ ಅವರಿಂದ ಒಟ್ಟು ರೂ.2.60ಲಕ್ಷ ಜಪ್ತಿ ಮಾಡಿಕೊಂಡಿರುವುದಾಗಿ ಪೊಲೀಸ್ ಅಧಿಕಾರಿ ಒಬ್ಬರು ತಿಳಿಸಿದ್ದಾರೆ.
