
ಕೇಳಿ ಲಕ್ಷ್ಮಣನ ಸಲಹೆಯನ್ನು ರಾಮ ನುಡಿದ:“ಓ ಕರ್ತವ್ಯನಿಷ್ಠನೇ,I
ವೃತ್ರಿಯ ನಾಶದ ಚರಿತೆ ಹೇಳಿರುವಿ”. ಕೇಳಿ ರಾಮನ II
ನುಡಿ ಪ್ರೋತ್ಸಾಹದಿ ಲಕ್ಷ್ಮಣ ಮುಂದುವ ರೆಸಿದ:I
“ಇಂದ್ರಸಮೇತ ದೇವತೆಗಳು ವಿಷ್ಣುವಿಗೆ ಕೋರಿದರು, II
ಕೇಳಿ ದೇವತೆಗಳ ಕೋರಿಕೆ ಅವರಿಗೆ ನುಡಿದ ವಿಷ್ಣು:I
ʻವೃತ್ರಿಯೊಂದಿಗೆ ಎನ್ನ ಪ್ರಾಚೀನ ಸಂಬಂಧವಿದೆ, II
ಆ ಮಹಾ ಅಸುರನನ್ನು ವಧಿಸಲು ನನ್ನಿಂದ ಆಗದು,I
ವೃತ್ರಿನ ಸಂಹಾರ ಮಾಡುವ ಸಲಹೆ ನೀಡುವೆ ಇಂದ್ರನಿಗೆ,II
ಸಂಹಾರ ಮಾಡಬಹುದು ಇಂದ್ರ ವೃತ್ರಿಯನು, ನಿಸ್ಸಂದೇಹ;I
ಎನ್ನ ನೈಸರ್ಗಿಕ ಸತ್ವಗಳನ್ನು ಮಾಡುವೆ ಮೂರು ಭಾಗ, II
ಪ್ರವೇಶಿಸಲಿ ಮೊದಲನೇ ಭಾಗ ವಸವನ್ನು, ಎರಡನೇ ಭಾಗI
ವಜ್ರ-ಆಯುಧದಲಿ, ಭೂಮಿ ವಕ್ಷಸ್ಥಳದಲಿ II
ಮೂರನೇ ಭಾಗ; ಹೀಗೆ ವೃತ್ರಿಯು ನಾಶವಾಗುವನು, ತದ್ಮೂಲಕ I
ಇಂದ್ರ ನಾಶ ಪಡಿಸಲಿ ವೃತ್ರಿಯನ್ನುʼ. II
ಕೇಳಿ ವಿಷ್ಣುವಿನ ಸಲಹೆ ದೇವತೆಗಳು ಉತ್ತರಿಸಿದರು:I
ʻ ಓ ದೈತ ಸಂಹಾರಕನೆ, ಮಾಡುವೆವು ನಿನ್ನ ಸಲಹೆಯಂತೆʼ II
ಸಹಸ್ರಾಕ್ಷ ಇಂದ್ರನೊಂದಿಗೆ ದೇವತೆಗಳೆಲ್ಲರೂI
ಮಹಾ ಅಸುರ ವೃತ್ರಿಯ ಬಳಿ ಬಂದರು; II
ಲೋಕಗಳನ್ನೇ ನಾಶ ಪಡಿಸುವ ತೇಜದಲಿದ್ದ ವೃತ್ರಿ,I
ಕಂಡು ಭಯಭೀತರಾದ ದೇವತೆಗಳು ಆಡಿಕೊಂಡರು: II
ʻ ವೃತ್ರಿಯನು ನಾವು ಹೇಗೆ ವಧಿಸಬೇಕು?I
ನಾವು ಹೇಗೆ ಸೋಲಿನಿಂದ ಬಚಾವ ಆಗಬೇಕು? II
ಹೀಗೆ ಆಡಿಕೊಳ್ಳುತಿರುವಾಗ ದೇವತೆಗಳು, ಇಂದ್ರI
ವಜ್ರ-ಆಯುಧದಿಂದ ಹೊಡೆದ ವೃತ್ರಿಯ ತಲೆಗೆ; II
ಕಾಲಾಗ್ನಿ ಜ್ವಾಲೆಗಳಂತೆ ಪ್ರಜ್ವಲಿಸುತ ವಜ್ರ-ಆಯುಧ ಸೃಷ್ಠಿಸಿತು I
ಭಯವನ್ನು ಮೂರು ಲೋಕಗಳಲ್ಲಿ, ವೃತ್ರಿಯ ತಲೆಗೆ II
ಅಪ್ಪಳಿಸಿ;ಭಯದಿ ಇಂದ್ರ ಲೋಕಗಳಂತ್ಯಕೆ ಓಡಿದ I
ಬ್ರಾಹ್ಮಣ ಹತ್ಯೆಯು ಅವನ ಬೆನ್ನಟ್ಟಿತು, ಅವನ ಮನ ಹೊಕ್ಕಿತು;II
ಬ್ರಾಹ್ಮಣ ಹತ್ಯೆಪಾಪದಿ ದುಃಖಿತನಾದ ಇಂದ್ರ,I
ವೃತ್ರಿಯನ್ನು ಸಂಹಾರಿಸಿಯೂ ಸಂತಸ ಪಡಲಿಲ್ಲ ಇಂದ್ರ; II
ಇಂದ್ರನ ಕಳಕೊಂಡ ದೇವತೆಗಳು ಬಳಿ ಬಂದು ವಿಷ್ಣುವಿನ, I
ಅವನಲ್ಲಿ ಪರಾರ್ಥಿಸಿದರು:ʻ ಓ ಮಾಹಾ ಅಧಿಪತಿಯೇ,II
ನಿನ್ನ ಕೃಪೆದಿ ಇಂದ್ರ ಸಂಹರಿಸಿದ ವೃತ್ರಿಯನುI
ಆದರೆ ಇಂದ್ರನಿಗೆ ಬೆನ್ನಟ್ಟಿದೆ ಬ್ರಾಹ್ಮಣ ಹತ್ಯೆ ದೋಷ; II
ಮುಕ್ತಗೊಳಿಸು ಬ್ರಾಹ್ಮಣ ಹತ್ಯೆ ದೋಷದಿ ಇಂದ್ರನನ್ನುʼ.I
ದೇವತೆಗಳಿಗೆ ವಿಷ್ಣು ಉತ್ತರಿಸಿದ:ʻ II
ಮುಕ್ತಗೊಳಿಸುವೆ ನಾನು ಇಂದ್ರನ ಈ ಮಹಾಪಾಪದಿ, I
ಅರ್ಪಿಸಲಿ ಎನಗೆ ಅಶ್ವಮೇಧ ಯಜ್ಞ ಇಂದ್ರʼ. II
ಕೇಳಿ ವಿಷ್ಣುವಿನ ಮಾತು ದೇವತೆಗಳಿಗೆ ಸಿಕ್ಕಂತಾಯಿತುI
ಅಮೃತ, ಎಲ್ಲರೂ ಮರಳಿದರು ತ್ರಿವಿಶ್ತಪಕ್ಕೆ”. II
ಉತ್ತರಕಾಂಡ
ಲಕ್ಷ್ಮಣನು ರಾಮನಿಗೆ ಇಂದ್ರನು ವಿಷ್ಣುವಿನ ಸಲಹೆಯಂತೆ ವೃತ್ರಿಯನ್ನು ವಧಿಸಿದ, ಆದರೆ ಅವನಿಗೆ ಬ್ರಾಹ್ಮಣ ಹತ್ಯೆ ಮಹಾಪಾಪ ಅವನೂ ಅಜ್ಞಾತ ಸ್ಥಳಕ್ಕೆ ಹೋದಾಗ ಅದರ ಪರಿಹಾರಕ್ಕಾಗಿ ದೇವತೆಗಳು ಮರಳಿ ವಿಷ್ಣುವಿನ ಬಳ ಬಂದು ಉಪಶಮನ ಕೇಳಿದ ಕಥೆಯ ಪ್ರಸಂಗವನ್ನು ಆದಿಕವಿ ವಾಲ್ಮೀಕಿಯು ವಿವರಿಸಿರುವರು, ಇಲ್ಲಿ ರಾಮನಲ್ಲಿಯೂ ಹತ್ಯೆ ಪಾಪ ಪ್ರಜ್ಞೆ ಕಾಡುತ್ತಿರುವದರಿಂದ ಯಜ್ಞದ ಮೊರೆ ಹೋದ ಸೂಕ್ಷ್ಮತೆಯನ್ನು ಕವಿ ಹೀಗೆ ವ್ಯಕ್ತ ಪಡಿಸಿರುವರು: ಲಕ್ಷ್ಮಣನ ಸಲಹೆಯನ್ನು ಕೇಳಿ ರಾಮನು “ ಓ ಕರ್ತವ್ಯನಿಷ್ಠನೇ, ವೃತ್ರಿಯ ನಾಶದ ಚರಿತೆ ಹೇಳಿರುವಿ”ಎಂದು ಲಕ್ಷ್ಮಣನಿಗೆ ಮೆಚ್ಚುಗೆ ವ್ಯಕ್ತ ಪಡಿಸಿದನು; ರಾಮನ ಮೆಚ್ಚುಗೆ ಮಾತುಗಳಿಂದ ಪ್ರೋತ್ಸಾಹಗೊಂಡು ಲಕ್ಷ್ಮಣನು ವೃತ್ರಿಯ ಕಥೆಯನ್ನು ಮುಂದುವರೆಸಿದನು “ ಇಂದ್ರಸಮೇತ ದೇವತೆಗಳು ವೃತ್ರಿಯನ್ನು ತಡೆಯಲು ವಿಷ್ಣುವಿಗೆ ಕೋರಿದರು, ದೇವತೆಗಳ ಕೋರಿಕೆ ಕೇಳಿ ಅವರಿಗೆ ವಿಷ್ಣು ಸಲಹೆ ನೀಡಿದನು ʻವೃತ್ರಿಯೊಂದಿಗೆ ನನ್ನ ಪ್ರಾಚೀನ ಸಂಬಂಧವಿದೆ, ಆ ಮಹಾ ಅಸುರನನ್ನು ವಧಿಸಲು ನನ್ನಿಂದ ಆಗದು, ಆದರೆ ವೃತ್ರಿಯನ್ನು ಸಂಹಾರ ಮಾಡುವ ಸಲಹೆಯನ್ನು ಇಂದ್ರನಿಗೆ ನೀಡುವೆನು; ನಿಸ್ಸಂದೇಹ, ಇಂದ್ರನು ವೃತ್ರಿಯನ್ನು ಸಂಹಾರ ಮಾಡಬಹುದು; ನನ್ನ ನೈಸರ್ಗಿಕ ಸತ್ವಗಳನ್ನು ನಾನು ಮೂರು ಭಾಗ ಮಾಡುವೆನು, ಇಂದ್ರನು ಮೊದಲನೇ ಭಾಗ ವಸವನ್ನು, ಎರಡನೇ ಭಾಗ ವಜ್ರ-ಆಯುಧದಲಿ, ಮೂರನೇ ಭಾಗ ಭೂಮಿ ವಕ್ಷಸ್ಥಳದಲಿ ಪ್ರವೇಶಿಸಲಿ, ತದ್ಮೂಲಕ ಇಂದ್ರನು ನಾಶ ಪಡಿಸಲಿ ವೃತ್ರಿಯನ್ನುʼ ಹೀಗೆ ವೃತ್ರಿಯು ನಾಶವಾಗುವನು; ವಿಷ್ಣುವಿನ ಸಲಹೆ ಕೇಳಿ ದೇವತೆಗಳು ಉತ್ತರಿಸಿದರು ʻ ಓ ದೈತ ಸಂಹಾರಕನೆ, ನಾವು ನಿನ್ನ ಸಲಹೆಯಂತೆ ಮಾಡುವೆವು ʼ; ಸಹಸ್ರಾಕ್ಷ ಇಂದ್ರನೊಂದಿಗೆ ದೇವತೆಗಳೆಲ್ಲರೂ ಮಹಾ ಅಸುರ ವೃತ್ರಿಯ ಬಳಿ ಬಂದರು, ವೃತ್ರಿಯು ಲೋಕಗಳನ್ನೇ ನಾಶ ಪಡಿಸುವ ತೇಜದಲಿದ್ದನು, ಅದನ್ನು ಕಂಡು ಭಯಭೀತರಾದ ದೇವತೆಗಳು ಆಡಿಕೊಂಡರು ʻ ನಾವು ವೃತ್ರಿಯನು ಹೇಗೆ ವಧಿಸಬೇಕು? ನಾವು ಹೇಗೆ ಸೋಲಿನಿಂದ ರಕ್ಷಿಸಿಸಿ ಆಗಬೇಕು?ʼ ದೇವತೆಗಳು ಹೀಗೆ ಆಡಿಕೊಳ್ಳುತಿರುವಾಗ, ಇಂದ್ರನು ವಜ್ರ-ಆಯುಧದಿಂದ ವೃತ್ರಿಯ ತಲೆಗೆ ಹೊಡೆದನು; ವೃತ್ರಿಯ ತಲೆಗೆ ಅಪ್ಪಳಿಸಿದ ವಜ್ರ-ಆಯುಧವು ಕಾಲಾಗ್ನಿ ಜ್ವಾಲೆಗಳಂತೆ ಪ್ರಜ್ವಲಿಸುತ ಮೂರು ಲೋಕಗಳಲ್ಲಿ ಭಯವನ್ನು ಸೃಷ್ಠಿಸಿತು; ಭಯದಿಂದ ಇಂದ್ರನು ಲೋಕಗಳಂತ್ಯಕೆ ಓಡಿ ಹೋದನು, ಬ್ರಾಹ್ಮಣಹತ್ಯೆಯು ಅವನ ಬೆನ್ನಟ್ಟಿತು, ಅವನ ಮನ ಹೊಕ್ಕಿತು; ಬ್ರಾಹ್ಮಣ ಹತ್ಯೆಪಾಪದಿಂದ ದುಃಖಿತನಾದ ಇಂದ್ರನು ವೃತ್ರಿಯನ್ನು ಸಂಹಾರಿಸಿಯೂ ಸಂತಸ ಪಡಲಿಲ್ಲ; ಇಂದ್ರನನ್ನು ಕಳಕೊಂಡ ದೇವತೆಗಳು ವಿಷ್ಣುವಿನ ಬಳಿ ಬಂದು ಅವನಲ್ಲಿ ಪ್ರಾರ್ಥಿಸಿದರುʻ ಓ ಮಾಹಾ ಅಧಿಪತಿಯೇ, ನಿನ್ನ ಕೃಪೆಯಿಂದ ಇಂದ್ರನು ವೃತ್ರಿಯನು ಸಂಹರಿಸಿದನು,ಆದರೆ ಇಂದ್ರನಿಗೆ ಬ್ರಾಹ್ಮಣ ಹತ್ಯೆ ದೋಷವು ಬೆನ್ನಟ್ಟಿದೆ; ಇಂದ್ರನನ್ನು ಬ್ರಾಹ್ಮಣ ಹತ್ಯೆ ದೋಷದಿಂದ ಮುಕ್ತಗೊಳಿಸು ʼ; ದೇವತೆಗಳಿಗೆ ವಿಷ್ಣು ಉತ್ತರಿಸಿದನು ʻ ಇಂದ್ರನು ನನಗೆ ಅಶ್ವಮೇಧ ಯಜ್ಞ ಅರ್ಪಿಸಲಿ, ನಾನು ಇಂದ್ರನನ್ನು ಈ ಮಹಾಪಾಪದಿಂದ ಮುಕ್ತಗೊಳಿಸುವೆನುʼ; ವಿಷ್ಣುವಿನ ಸಲಹೆಗಳನ್ನು ಕೇಳಿ ದೇವತೆಗಳಿಗೆ ಅಮೃತ ಸಿಕ್ಕಂತಾಯಿತು, ಎಲ್ಲರೂ ತ್ರಿವಿಶ್ತಪಕ್ಕೆ ಮರಳಿದರು”.
-ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ.
