
ರಾಮ ಹೇಳಿದ ಇಲನ ಕಥೆ ಹುಟ್ಟಿತು ಕುತೂಹಲ ಲಕ್ಷ್ಮಣ ಭರತರಲಿ, I
ರಾಮನಲ್ಲಿ ಅವರು ಕೈಮುಗಿದು ಕೋರಿದರು: II
“ಆಕ್ರೂರ ರಾಜಾ ಇಲ, ಹೇಗೆ ವರ್ತಿಸುತಿದ್ದ I
ಸ್ತ್ರೀಯಾದಾಗ, ಮಾರನೆ ಮಾಸ ಪುರುಷನಾದಾಗ?” II
ಸಹೋದರರ ಕುತೂಹಲ ತಿಳಿದು ರಾಮ ನುಡಿದ: I
“ಮೊದಲನೇ ಮಾಸದಲಿ ಸ್ತ್ರೀಯಾದಾಗ ಇಲ, II
ತನ್ನ ಸೇವಕಿಯರ ಮಧ್ಯೆ ಕಾಲ ಕಳೆದ, ನಂತರದಲಿ I
ಭೂಮಂಡಳದ ಕಮಲಾಕ್ಷಿ ಸುಂದರ ಸ್ತ್ರೀಯಾದಳು, II
ದಟ್ಟಾರಣ್ಯ ಹೊಕ್ಕು ಬರಿಗಾಲಲಿ ಸುತ್ತಿದಳು I
ಗಿಡ ಗಂಟಿ ಬಳ್ಳಿ, ಆಟವಾಡಿದಳು ಉಯ್ಯಾಲೆಯಲಿ; II
ಇತ್ತು ಆ ಅರಣ್ಯದ ಪರ್ವತ ಬಳಿ I
ವಿಭಿನ್ನ ಹಕ್ಕಿಗಳ ಸುಂದರ ಸರೋವರ; II
ಅಲ್ಲಿ ಇಲನಿಗೆ ಬುಧನ ಭೇಟಿಯಾಯಿತು, I
ಆಕಾಶದಲಿ ಹೊಳೆವ ಚಂದ್ರನ ಪುತ್ರ ಬುಧ; II
ಮಾರ್ಗ ಅಸಾಧ್ಯಜಲದಲಿ ಬುಧ ಮಗ್ನನಿದ್ದ ತಪಸಿನಲಿ, I
ಅವನಲ್ಲಿ ಸಹಾನುಭೂತಿ,ದಾನಿ ಸ್ವಭಾವಗಳಿದ್ದವು; II
ಇಲ ತನ್ನ ಅತಿಸುಂದರ ಸ್ತ್ರೀರೂಪದಲಿ I
ಜಲಕ್ರೀಡೆವಾಡುತಿದ್ದ ಜತೆಗಾರ ಸ್ತ್ರೀಯರೊಂದಿಗೆ; II
ಕಂಡು ಅತಿ ಸುಂದರ ಸ್ತ್ರೀಯನು ಬುಧ ಕಾಮಮೋಹಿತನಾದ, I
ಇಂದ್ರಿ ನಿಯಂತ್ರಣ ಕಳಕೊಂಡು ನಿಂತ ಸರೋವರದಲಿ; II
ನೋಡಿ ತ್ರಿಲೋಕ ಸುಂದರಿ ರೂಪ ಇಲನ, ಬುಧ ಮನದಲಿ ಚಟಪ ಡಿಸಿದ: I
ʻದೇವಲೋಕ ಸ್ತ್ರೀಗಿಂತ ಸುಂದರಿ ಯಾರಿವಳು?, II
ಕಂಡಿಲ್ಲ ನಾನು ಇಂತಹ ಸುಂದರಿಯನ್ನು I
ದೇವ, ನಾಗ,ಅಸುರ ಪತ್ನಿ ವ ಅಪ್ಸರೆಯರಲ್ಲಿ;II
ಅವಳು ಯಾರನ್ನು ಮದುವೆಯಾಗಿರದಿದ್ದರೆ, I
ಅವಳು ಎನಗೆ ತಕ್ಕ ಮಡದಿಯಾಗುವಳುʼ II
ಹೀಗೆ ಬುಧ ಯೋಚನೆಯಲಿದ್ದಾಗ, ಆ ಸ್ತ್ರೀಯರು ಹೊರ ಬಂದು I
ನೀರಿನಿಂದ ಬುಧನಿಂದ ದೂರ ಹೊರಟಿದ್ದರು;II
ಬುಧ ಅವರನ್ನು ಕೂಗಿ ಕರೆದ, ಬಂದರು ಸ್ತ್ರೀಯರು I
ಬುಧನ ಬಳಿ ಬಂದು ಕೈ ಮುಗಿದರು;II
ಬುಧ ಲಾಲಿಸಿದ ಸ್ತ್ರೀಯರನು:ಲೋಕಗಳಲ್ಲಿಯೇ ಅತಿಸುಂದರ ಸ್ತ್ರೀ, I
ಇವಳು ಯಾರು? ಹಿಂಜರಿಯದೇ ಎನಗೆ ತಿಳಿಸಿ.ʼ II
ಕೇಳಿ ಬುಧನ ವಿನಮ್ರ ಅರಕೆ, ಉತ್ತರಿಸಿದರು ಸ್ತ್ರೀಯರು: I
ʻಅವಳು ಅವಿವಾಹಿತ ರಾಜಕುಮಾರಿ, ನಮ್ಮ ಜೊತೆಗಾರ್ತಿʼ.II
ಕೇಳಿ ಉತ್ತರ ಸ್ತ್ರೀಯರಿಂದ ಬುಧ ತನ್ನ ತ್ರಿಕಾಲಜ್ಞಾನದಿ I
ತಿಳಿದ ರಾಜಾ ಇಲನ ಕಥೆ, ಹೇಳಿದ ಆ ಸ್ತ್ರೀಯರಿಗೆ: II
ʻನೀವು ಕಿಂಪುರುಷಿಗಳಾಗಿ ವಾಸಿಸಿ ಆ ಪರ್ವತವಲಯದಲಿ, I
ಬೇರು ಗೆಡ್ಡೆ ಹಣ್ಣು ತಪಲ್ಲು ತಿಂದು ಬದುಕಿರಿ, II
ಕಿಂಪಪುರುಷರು ನಿಮ್ಮ ಪತಿಗಳಾಗುವರುʼ ಕೇಳಿ ಬುಧನ ಆಜ್ಞೆ I
ಸ್ತ್ರೀಯರಾಗಿದ್ದ ಪುರುಷರು ಕಿಂಪುರುಷಿಗಳಾದರು; II
ಕಿಂಪುರುಷಿಗಳಾಗಿ ರಾಜಾ ಇಲ ವ ಅವನ ಸಂಗಡಿಗರು I
ವಾಸವಾದರು ಆ ಪರ್ವತ ವಲಯದ ಇಳಿಜಾರಗಳಲ್ಲಿ”. II
ಉತ್ತರಕಾಂಡ
ರಾಮನು ಲಕ್ಷ್ಮಣ ಮತ್ತು ಭರತನಿಗೆ ಶಿವ ಪಾರ್ವತಿಯಿಂದ ವರ ಪಡೆದ ಇಲ ಮತ್ತು ಅವನ ಸಂಗಡಿಗರು ಸೋಮಪುತ್ರ ಬುಧನಿಗೆ ಬೇಟಿಯಾದಾಗ ಅವನು ಅವರಿಗೆ ಕಿಂಪುರುಷಿಯಾಗಿ ಆ ಪರ್ವತ ಪ್ರದೇಶದಲ್ಲಿ ಇರಲು ಹೇಳಿದ ಕಥೆಯನ್ನು ಆದಿಕವಿ ವಾಲ್ಮೀಕಿಯು ಹೀಗೆ ವಿವರಿಸಿರುವರು:ರಾಮ ಹೇಳಿದ ಇಲನ ಕಥೆಯು ಲಕ್ಷ್ಮಣ ಮತ್ತು ಭರತರಲಿ ಕುತೂಹಲ ಹುಟ್ಟಿಸಿತು, ಅವರು ರಾಮನಲ್ಲಿ ಕೈಮುಗಿದು ಕೋರಿದರು “ ಆಕ್ರೂರ ರಾಜಾ ಇಲನು ಸ್ತ್ರೀಯಾದಾಗ, ಮಾರನೆ ಮಾಸ ಪುರುಷನಾದಾಗ ಹೇಗೆ ವರ್ತಿಸುತಿದ್ದನು?” ಸಹೋದರರ ಕುತೂಹಲ ತಿಳಿದು ರಾಮ ಅವರಿಗೆ ವಿವರಿಸಿದನು “ ಮೊದಲನೇ ಮಾಸದಲಿ ಸ್ತ್ರೀಯಾದಾಗ ಇಲನು ತನ್ನ ಸೇವಕಿಯರ ಮಧ್ಯೆ ಕಾಲ ಕಳೆದನು, ನಂತರದಲಿ ಭೂಮಂಡಳದ ಕಮಲಾಕ್ಷಿ ಸುಂದರ ಸ್ತ್ರೀಯಾಗಿ ದಟ್ಟಾರಣ್ಯ ಹೊಕ್ಕು ಬರಿಗಾಲಲಿ ಸುತ್ತಿದಳು, ಗಿಡ ಗಂಟಿ ಬಳ್ಳಿ ಉಯ್ಯಾಲೆಯಲಿ ಆಟವಾಡಿದಳು; ಆ ಅರಣ್ಯದ ಪರ್ವತ ಬಳಿ ವಿಭಿನ್ನ ಹಕ್ಕಿಗಳ ಸುಂದರ ಸರೋವರವಿತ್ತು; ಅಲ್ಲಿ ಇಲನಿಗೆ ಬುಧನ ಭೇಟಿಯಾಯಿತು: ಬುಧನು ಆಕಾಶದಲಿ ಹೊಳೆವ ಚಂದ್ರನ ಪುತ್ರನು; ಯಾರಿಂದಲೂ ತಲುಪಲು ಸಾಧ್ಯವಿಲ್ಲದ ಜಲ ತಾಣದಲಿ ಬುಧನು ತಪಸಿನಲಿ ಮಗ್ನನಿದ್ದನು,ಅವನಲ್ಲಿ ಸಹಾನುಭೂತಿ,ದಾನಿ ಸ್ವಭಾವಗಳಿದ್ದವು; ಇಲನು ತನ್ನ ಅತಿಸುಂದರ ಸ್ತ್ರೀರೂಪದಲಿ ಜತೆಗಾರ ಸ್ತ್ರೀಯರೊಂದಿಗೆ ಜಲಕ್ರೀಡೆವಾಡುತಿದ್ದನು; ಅತಿ ಸುಂದರ ಸ್ತ್ರೀಯನು ಕಂಡು ಬುಧನು ಕಾಮಮೋಹಿತನಾದನು, ಬುಧನು ತನ್ನ ಇಂದ್ರಿ ನಿಯಂತ್ರಣ ಕಳಕೊಂಡು ಸರೋವರದಲಿ ನಿಂತನು; ತ್ರಿಲೋಕ ಸುಂದರಿ ರೂಪದಲಿ ಇಲನ ನೋಡಿ ಬುಧನು ಮನದಲಿ ಚಟಪಡಿಸಿದನು ʻಯಾರಿವಳು, ದೇವಲೋಕದ ಸ್ತ್ರೀಗಿಂತ ಸುಂದರಿ? ನಾನು ಇಂತಹ ಸುಂದರಿಯನ್ನು ದೇವ ನಾಗ,ಅಸುರ ಪತ್ನಿಯರನು ಮತ್ತು ಅಪ್ಸರೆಯರಲ್ಲಿ ಕಂಡಿಲ್ಲ; ಅವಳು ಯಾರನ್ನು ಮದುವೆಯಾಗಿರದಿದ್ದರೆ, ಅವಳು ನನಗೆ ತಕ್ಕ ಮಡದಿಯಾಗುವಳು.ʼ ಹೀಗೆ ಬುಧನು ಯೋಚನೆಯಲಿದ್ದಾಗ ಆ ಸ್ತ್ರೀಯರು ನೀರಿನಿಂದ ಹೊರ ಬಂದು ಬುಧನಿಂದ ದೂರ ಹೊರಟಿದ್ದರು; ಬುಧನು ಅವರನ್ನು ಕೂಗಿ ಕರೆದನು, ಸ್ತ್ರೀಯರು ಬುಧನ ಕರೆ ಕೇಳಿ ಅವನ ಬಳಿ ಬಂದು ಕೈ ಮುಗಿದರು; ಆ ಸದ್ಗುಣಿ ಬುಧನು ಸ್ತ್ರೀಯರನು ಲಾಲಿಸಿದ ʻಲೋಕಗಳಲ್ಲಿಯೇ ಅತಿಸುಂದರ ಸ್ತ್ರೀ, ಇವಳು ಯಾರು? ಹಿಂಜರಿಯದೇ ನನಗೆ ತಿಳಿಸಿ.ʼ ಬುಧನ ವಿನಮ್ರ ಕೇಳಿ ಅರಕೆ ಸ್ತ್ರೀಯರು ಅವನಿಗೆ ಉತ್ತರಿಸಿದರು ʻಅವಳು ಅವಿವಾಹಿತ ರಾಜಕುಮಾರಿ, ನಮ್ಮ ಜೊತೆಗಾರ್ತಿʼ. ಆ ಸ್ತ್ರೀಯರಿಂದ ಉತ್ತರ ಕೇಳಿ ಬುಧನು ತನ್ನ ತ್ರಿಕಾಲಜ್ಞಾನದಿಂದ ರಾಜಾ ಇಲನ ಕಥೆಯನ್ನು ತಿಳಿದನು, ಬುಧನು ಆ ಸ್ತ್ರೀಯರಿಗೆ ಆಜ್ಞಾಪಿಸಿದನು ʻನೀವು ಕಿಂಪುರುಷಿಗಳಾಗಿ ವಾಸಿಸಿ ಆ ಪರ್ವತವಲಯದಲಿ, ಬೇರು ಗೆಡ್ಡೆ ಹಣ್ಣು ತೊಪ್ಪಲ್ಲು ತಿಂದು ಬದುಕಿರಿ, ಕಿಂಪಪುರುಷರು ನಿಮ್ಮ ಪತಿಗಳಾಗುವರು.ʼ ಸೋಮಪುತ್ರ ಬುಧನ ಆಜ್ಞೆಮೇರಿಗೆ ಸ್ತ್ರೀಯರಾಗಿದ್ದ ಪುರುಷರು ಕಿಂಪುರುಷಿಗಳಾದರು; ಕಿಂಪುರುಷಿಗಳಾಗಿ ರಾಜಾ ಇಲ ಮತ್ತು ಅವನ ಸಂಗಡಿಗರು ಆ ಪರ್ವತ ವಲಯದ ಇಳಿಜಾರಗಳಲ್ಲಿ ವಾಸವಾದರು”.
-ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ.
