
ರಾಜಾ ಇಲನ ಕಥೆ ತಾತ್ಪರ್ಯ ತಿಳಿಸುತ ರಾಮ I
ಆದೇಶಿಸಿದ ಲಕ್ಷ್ಮಣನಿಗೆ:” ಕರೆ ಮುನಿಗಳ ಸಭೆ, II
ವಸಿಷ್ಠ, ವಾಮದೇವ, ಜಾಬಾಲಿ, ಕಶ್ಯಪ I
ಬ್ರಾಹ್ಮಣ ಮುನಿ ಮೇಧಾವಿಗಳನು ಸೇರಸು; II
ಓ ಲಕ್ಷ್ಮಣಾ, ಕಳೆದು ಕೊಳ್ಳುವೆ ಪರಂಪರೆ ಆಭರಣಗಳನ್ನು”. I
ಕೇಳುತ ಅಣ್ಣನ ಆದೇಶ ಲಕ್ಷ್ಮಣ ಕಾರ್ಯನಿರತನಾದ; II
ಸೇರಿಸಿದ ಮುನಿಗಳನ್ನು ರಾಮನ ಬಳಿ ಲಕ್ಷ್ಮಣ, I
ಎಲ್ಲ ಮುನಿ ವಿದ್ವಾನರು ಸಲ್ಲಿಸಿದರು ಗೌರವ ರಾಮನಿಗೆ;II
ಧರ್ಮನಿಷ್ಠೆಯ ರಾಮ ಅಶ್ವಮೇಧ ಯಜ್ಞ I
ಏರ್ಪಡಿಸುವಂತೆ ಮುನಿ, ವಿದ್ವಾಂಸರಲಿ ಕೋರಿದರು:II
ಅಶ್ವಮೇಧಯಜ್ಞ ಏರ್ಪಡಿಸಲು ಪುಲ್ಲಕಿತಗೊಂಡ ಮುನಿಗಳನು I
ಕಂಡು ರಾಮನು ತವಕದಿ ಲಕ್ಷ್ಮಣನಿಗೆ ನುಡಿದನು:II
“ ಓ ಅಜಾನುಬಾಹು ನಾಯಕನೇ, ಸುಗ್ರೀವನಿಗೆ ತಿಳಿಸು ಯಜ್ಞ ಸುದ್ಧಿ, I
ಹೋಗಲಿ ವಾನರರ ಜೊತೆ ಬಂದು ಸಂಭ್ರಮಿಸಿ;II
ಅಜಾತಶತ್ರು ವಿಭೀಷಣನಿಗೆ ಯಜ್ಞ ಸುದ್ಧಿ ತಿಳಿಸು I
ತನ್ನ ರಾಕ್ಷಸವೀರರೊಂದಿಗೆ ಹೋಗಲಿ ಬಂದು ಸಂಭ್ರಮಿಸಿ;II
ಎಲ್ಲ ರಾಜ, ಮಹಾರಾಜ, ಮಂಡಲಿಕ,ವಿದೇಶಗಳಲ್ಲಿರುವ I
ಬ್ರಾಹ್ಮಣರನು ಆಹ್ವಾನಿಸು ಅಶ್ವಮೇಧಯಜ್ಞ ಆಚರಣೆಗೆ, II
ಓ ಲಕ್ಷ್ಮಣಾ, ಎಲ್ಲ ಋಷಿ, ಮುನಿ, ತಪಸ್ವಿಗಳನ್ನು I
ಆಹ್ವಾನಿಸು ಯಜ್ಞಕ್ಕೆ, ಬಂದು ಆಶಿರ್ವದಿಸಲಿ; II
ನೃತ್ಯಕಾರ, ಕಲಾಕಾರ, ಚಿತ್ರಕಾರ, ಸಂಗೀತಕಾರ,ಗಾಯಕರನು I
ಆಹ್ವಾನಿಸು ಯಜ್ಞಕ್ಕೆ ಬರಲಿ ಸಹಪರಿವಾರದೊಂದಿಗೆ; II
ನೈಮಿಶಾ ಅರಣ್ಯದಲಿ ಗೋಮತಿನದಿ ದಡದ್ಮೇಲೆ I
ವಿಶಾಲವಾದ ಹಂದರವನ್ನು ಹಾಕಿರಿ,ಅದು ಪವಿತ್ರ ತಾಣ; II
ಶತ ಶತ ಗುಂಪಿನಲ್ಲಿ ನಿಪುಣ ಬ್ರಾಹ್ಮಣರು I
ನೆರವೇರಿಸಲಿ ಯಜ್ಞದ ಪ್ರಮುಖ ಕಾರ್ಯಗಳನ್ನು; II
ಓ ಲಕ್ಷ್ಮಣಾ, ಅಶ್ವಮೇಧಯಜ್ಞಕ್ಕೆ ಬಂದರ್ಯಾರು I
ಅಸಂತುಷ್ಟ ಅತೃಪ್ತರಾಗಿ ಮರಳದಂತೆ ಸತ್ಕರಿಸಬೇಕು; II
ಕಳಿಸು ಮುಂಜಿತವಾಗಿ ಶತ ಸಹಸ್ರ ಉತ್ತಮ ಅಕ್ಕಿ, ಎಳ್ಳೇಣ್ಣೆ, I
ಅವರಿಕಾಳು,ಕಡಲೆಕಾಳು, ಉಪ್ಪು, ಎಣ್ಣೆ ಸುಗಂಧದ್ರವ್ಯII
ಮೂಟೆಗಳನ್ನು, ಓ ಲಕ್ಷ್ಮಣಾ; ಭರತನು ಒಯ್ಯಲಿ ಮೊದಲು I
ಚಿನ್ನ ಬೆಳ್ಳಿ ಆಭರಣಗಳನ್ನು, ಭರತಜೊತೆ ಹೋಗಲಿ ಅಡಿಗೆ II
ಭಟರು, ಸ್ತ್ರೀಯರು, ನೃತ್ಯಕಾರರು, ಮೋಜುಗಾರರು; I
ಭದ್ರತೆಗಾಗಿ ಹೋಗಲಿ ಸೈನಿಕರು ಭರತನ ಸುತ್ತುವರೆದು, II
ಜೊತೆಯಾಗಲಿ ಅಂಗಡಿಕಾರರು,ಮಕ್ಕಳು, ವೃದ್ಧರು, I
ಕಲ್ಲುಕುಟಿಗರು, ಬಡಗಿಗಳು; ಮಕ್ಕಳು, ಸ್ತ್ರೀಯರು, II
ಬ್ರಾಹ್ಮಣರು ಸಾಗಲಿ ಅವರೊಂದಿಗೆ ಎನ್ನ ಪತ್ನಿ ಸೀತೆಯ I
ಚಿನ್ನದ ಮೂರ್ತಿಯನ್ನುಸ್ಥಾಪಿಸಲಿ ಅಲ್ಲಿ; ಬಲಿ ಅರ್ಪಿಸುವ II
ನಿಪುಣರು ಹೋಗಲಿ ಭರತನ ಜೊತೆ ಓ ಲಕ್ಷ್ಮಣಾ, I
ಭದ್ರತಾ ಸಿಬ್ಬಂದಿಗೆ ಪೂರಯಸು ಎಲ್ಲ ಅಗತ್ಯಗಳನ್ನು; II
ಸಿಗಲಿ ಭದ್ರತೆ, ಸುಗ್ರೀವ, ವಾನರ ವೀರರಿಗೆ, I
ವಿಭೀಷಣ ವ ರಾಕ್ಷಸರಿಗೆ, ಋಷಿ ಮುನಿ, ಸ್ತ್ರೀಯರಿಗೆ, ಎಲ್ಲರಿಗೂ”. II
ಉತ್ತರಕಾಂಡ
ರಾಮನು ಲಕ್ಷ್ಮಣನಿಗೆ ಮುನಿಗಳನ್ನು ಸಭೆಗೆ ಸೇರಿಸಲು ಆಜ್ಞೆ ಮಾಡಿದ, ಅದರಂತೆ ಲಕ್ಷ್ಮಣನು ಮುನಿ, ವಿದ್ವಾನರ ಸಭೆ ಸೇರಿಸಿದ, ಸಭೆಯಲ್ಲಿ ಮುನಿಗಳು ಅಶ್ವಮೇಧಯಜ್ಞ ಏರ್ಪಡಿಸಲು ತೋರಿಸಿದ ಉತ್ಸಾಹ ಕಂಡು ರಾಮನು ತನ್ನೆಲ್ಲ ಮಿತ್ರರಿಗೆ, ಪ್ರಜೆಗಳಿಗೆ, ಸ್ತ್ರೀಯರಿಗೆ ,ವೃದ್ಧರಿಗೆ ಮಕ್ಕಳಿಗೆ ಮತ್ತು ಋಷಿ ಮುನಿಗಳಿಗೆ ಯಜ್ಞಕ್ಕೆ ಆಮಂತ್ರಣ ನೀಡುವಂತೆ, ಯಜ್ಞವನ್ನು ಗೋಮತಿ ನದಿದಡದ ನೈಮಿಶಾ ಅರಣ್ಯ ಪ್ರದೇಶದಲ್ಲಿ ಏರ್ಪಡಿಸುವಂತೆ, ಅಲ್ಲಿ ಸೀತೆಯ ಚಿನ್ನದ ಮೂರ್ತಿ ಸ್ಥಾಪಿಸಲು ಹೇಳಿದ ಮತ್ತು ಬಂದ ಎಲ್ಲ ಅತಿಥಿಗಳಿಗೆ ಸತ್ಕಾರ ಸನ್ಮಾನ ನೀಡುವ ಮತ್ತು ಅವರ ರಕ್ಷಣೆಯ ಭದ್ರತೆಯನ್ನು ಏರ್ಪಡಿಸಲು ಆದೇಶಿಸಿದ ಪ್ರಸಂಗವನ್ನು ಆದಿಕವಿ ವಾಲ್ಮೀಕಿಯು ವಿವರಿಸಿರುವರು, ಇಲ್ಲಿ ಮೂಡಿ ಬರುವ (1) ಅಸವಮೇಧ ಯಜ್ಞ ನಡೆಸುವ ತಾಣ (2) ಸಕಲರಿಗೂ ಆಮಂತ್ರಣ (3) ಎಲ್ಲರ ರಕ್ಷಣೆಯ ಭದ್ರತೆ ಮತ್ತು (4) ಯಜ್ಞಸ್ಥಳದಲ್ಲಿ ಸೀತೆಯ ಚಿನ್ನದ ವಿಗ್ರಹ ಪ್ರಮುಖ ಅಂಶಗಳು ಹೀಗೆ ವಿವರಿಸಿರುವರು: ರಾಜಾ ಇಲನ ಕಥೆ ತಾತ್ಪರ್ಯ ತಿಳಿಸುತ ರಾಮನು ಆದೇಶಿಸಿದ ಲಕ್ಷ್ಮಣನಿಗೆ:” ಓ ಲಕ್ಷ್ಮಣಾ ಮುನಿಗಳ ಸಭೆ ಕರೆದು ವಸಿಷ್ಠ, ವಾಮದೇವ, ಜಾಬಾಲಿ, ಕಶ್ಯಪ ಬ್ರಾಹ್ಮಣ ಮುನಿ ಮೇಧಾವಿಗಳನು ಸೇರಸು,ನಾನು ಪರಂಪರೆ ಆಭರಣಗಳನ್ನು ಕಳೆದು ಕೊಳ್ಳುವೆ”. ಅಣ್ಣನ ಆದೇಶದಂತೆ ಲಕ್ಷ್ಮಣ ಕಾರ್ಯನಿರತನಾದನು; ಲಕ್ಷ್ಮಣನು ಮುನಿಗಳನ್ನು ರಾಮನ ಬಳಿ ಸೇರಿಸಿದನು, ಎಲ್ಲ ಮುನಿ ವಿದ್ವಾನರು ರಾಮನಿಗೆ ಗೌರವ ಸಲ್ಲಿಸಿದರು; ಧರ್ಮನಿಷ್ಠೆಯ ರಾಮನು ಅಶ್ವಮೇಧ ಯಜ್ಞ ಏರ್ಪಡಿಸುವಂತೆ ಮುನಿ, ವಿದ್ವಾಂಸರಲಿ ಕೋರಿದರು; ಅಶ್ವಮೇಧಯಜ್ಞ ಏರ್ಪಸಲು ಪುಲ್ಲಕಿತಗೊಂಡ ಮುನಿಗಳನು ನೋಡಿ ರಾಮನು ತವಕದಲ್ಲಿ ಲಕ್ಷ್ಮಣನಿಗೆ ನುಡಿದನು “ ಓ ಅಜಾನುಬಾಹು ನಾಯಕನೇ, ಸುಗ್ರೀವನಿಗೆ ತಿಳಿಸು ಯಜ್ಞ ಸುದ್ಧಿ, ಅವನು ವಾನರರ ಜೊತೆ ಬಂದು ಸಂಭ್ರಮಿಸಿ ಹೋಗಲಿ; ಅಜಾತಶತ್ರು ವಿಭೀಷಣನಿಗೆ ಯಜ್ಞ ಸುದ್ಧಿ ತಿಳಿಸು ತನ್ನ ರಾಕ್ಷಸವೀರರೊಂದಿಗೆ ಬಂದು ಸಂಭ್ರಮಿಸಿ ಹೋಗಲಿ; ಎಲ್ಲ ರಾಜ, ಮಹಾರಾಜ, ಮಂಡಲಿಕ, ವಿದೇಶಗಳಲ್ಲಿರುವ ಬ್ರಾಹ್ಮಣರನು ಅಶ್ವಮೇಧಯಜ್ಞ ಆಚರಣೆಗೆ ಆಹ್ವಾನಿಸು; ಎಲ್ಲ ಋಷಿ, ಮುನಿ, ತಪಸ್ವಿಗಳನ್ನು ಆಹ್ವಾನಿಸು ಯಜ್ಞಕ್ಕೆ, ಬಂದು ಆಶಿರ್ವದಿಸಲಿ; ನೃತ್ಯಕಾರ, ಕಲಾಕಾರ, ಚಿತ್ರಕಾರ, ಸಂಗೀತಕಾರ,ಗಾಯಕರನು ಆಹ್ವಾನಿಸು ಅವರು ಯಜ್ಞಕ್ಕೆ ಸಹಪರಿವಾರದೊಂದಿಗೆ ಬರಲಿ; ನೈಮಿಶಾ ಅರಣ್ಯದಲಿ ಗೋಮತಿನದಿ ದಡದ್ಮೇಲೆ ವಿಶಾಲವಾದ ಹಂದರವನ್ನು ಹಾಕಿರಿ,ಅದು ಯಜ್ಞಮಾಡಲು ಪವಿತ್ರ ತಾಣ; ಶತ ಶತ ಗುಂಪಿನಲ್ಲಿ ನಿಪುಣ ಬ್ರಾಹ್ಮಣರು ಯಜ್ಞದ ಪ್ರಮುಖ ಕಾರ್ಯಗಳನ್ನು ನೆರವೇರಿಸಲಿ; ಅಶ್ವಮೇಧಯಜ್ಞಕ್ಕೆ ಬಂದವರು ಯಾರೂ ಅಸಂತುಷ್ಟ ಅತೃಪ್ತರಾಗಿ ಮರಳದಂತೆ ಸತ್ಕರಿಸಬೇಕು; ಮುಂಜಿತವಾಗಿ ಶತ ಸಹಸ್ರ ಉತ್ತಮ ಅಕ್ಕಿ, ಎಳ್ಳೇಣ್ಣೆ, ಅವರಿಕಾಳು, ಕಡಲೆಕಾಳು, ಉಪ್ಪು, ಎಣ್ಣೆ ಸುಗಂಧದ್ರವ್ಯ ಮೂಟೆಗಳನ್ನು ಕಳಿಸು; ಭರತನು ಮೊದಲು ಚಿನ್ನ ಬೆಳ್ಳಿ ಆಭರಣಗಳನ್ನು ಒಯ್ಯಲಿ, ಅಡಿಗೆ ಭಟರು, ಸ್ತ್ರೀಯರು, ನೃತ್ಯಕಾರರು,ಮೋಜುಗಾರರು ಭರತನೊಂದಿಗೆ ಹೋಗಲಿ; ಭದ್ರತೆಗಾಗಿ ಸೈನಿಕರು ಭರತನ ಸುತ್ತುವರೆದು ಹೋಗಲಿ, ಅವರೊಂದಿಗೆ ಜೊತೆಯಾಗಲಿ ಅಂಗಡಿಕಾರರು,ಮಕ್ಕಳು, ವೃದ್ಧರು, ಕಲ್ಲುಕುಟಿಗರು, ಬಡಗಿಗಳು, ಮಕ್ಕಳು, ಸ್ತ್ರೀಯರು ಮತ್ತು ಬ್ರಾಹ್ಮಣರು ಸಾಗಲಿ; ನನ್ನ ಪತ್ನಿ ಸೀತೆಯ ಚಿನ್ನದ ಮೂರ್ತಿಯನ್ನು ಅಲ್ಲಿ ಸ್ಥಾಪಿಸಲಿ; ಬಲಿ ಅರ್ಪಿಸುವ ನಿಪುಣರು ಭರತನ ಜೊತೆ ಹೋಗಲಿ; ಓ ಲಕ್ಷ್ಮಣಾ,ಭದ್ರತಾ ಸಿಬ್ಬಂದಿಗೆ ಎಲ್ಲ ಅಗತ್ಯಗಳನ್ನುಪೂರೈಸು; ಸುಗ್ರೀವ, ವಾನರ ವೀರರಿಗೆ, ವಿಭೀಷಣ ಮತ್ತು ರಾಕ್ಷಸರಿಗೆ, ಋಷಿ ಮುನಿಗಳಿಗೆ, ಸ್ತ್ರೀಯರಿಗೆ, ಎಲ್ಲರಿಗೂ ಭದ್ರತೆ ಸಿಗಲಿ.”
-ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ.
