ಅಶ್ವಮೇಧಯಜ್ಞದಲ್ಲಿ ಋಷಿ ಮುನಿಗಳು

By admin


ಅಶ್ವಮೇಧಯಜ್ಞದಲ್ಲಿ ಋಷಿ ಮುನಿಗಳು. ವಿದ್ವಾಂಸರು, I
ಕಲಾಕಾರರು, ನೃತ್ಯಗಾರರು ಸಂಗೀತಕಾರರು,II
ಗಾಯಕರು,ಪುರೋಹಿತು. ಅರಸರು, ಸಾಮಂತರರು, ಸ್ನೇಹಿತರುI
ಬಂಧು ಬಳಗ, ಸೇನೆ, ಪ್ರಜೆಗಳು ಕಿಕ್ಕಿರಿದು ತುಂಬಿದ್ದರು;II
ಯಜ್ಞದ ವಿಧಿ ವಿಧಾಗಳು ಸಮಾಪ್ತವಾಗುತಿದಂತೆI
ವಾಲ್ಮೀಕಿ ಮುನಿ ಎದ್ದು ರಾಜಾ ರಾಮನಲ್ಲಿ ಕೋರಿದ: II
“ ಓ ಪ್ರಭು, ನನ್ನ ಶಿಷ್ಯ ಬಾಲಕರಿಬ್ಬರು ತಮ್ಮI
ಈ ಓಲಗದಲ್ಲಿ ರಾಮ ಚರಿತೆಯನ್ನು ಹಾಡುವರು, II
ಅವರಿಗೆ ಅಪ್ಪಣೆ ದಯಪಾಲಿಸು, ರಾಮನI
ಚರಿತೆ ಕೇಳಿ ಪುನಿತರಾಗಲಿ ವಸುಂಧರೆಯ ಜನ”II
ಕಂಡು ಬಾಲಕರನು ರಾಮನ ಮನ ನೊಂದಿತು,I
ಗಲಿಬಿಲಿಗೊಂಡರು ಭರತ, ಶತ್ರುಘ್ನ ಲಕ್ಷ್ಮಣ; II
ರಾಜ ಮಾತೆಯರಲಿ, ಅವರ ಪುತ್ರವಧುಗಳಲ್ಲಿI
ಸಂಚಲನ ಮೂಡಿತು, ಮನಸ್ಸು ಎಳೆಯಿತು;II
ಅವರಿಂದ ರಾಮನ ಚರಿತೆ ಲೋಕಗೀತೆI
ಕೇಳಿದ ಜನ ಆಶ್ಚರ್ಯಚಕಿತರಾದರು; II
ವಾಲ್ಮೀಕಿ ಶಿಷ್ಯ ಬಾಲಕರಿಗೆ ರಾಮನ ಚರಿತೆI
ಲೋಕಗೀತೆ ಹಾಡುವಂತೆ ಆದೇಶಿಸಿದ ರಾಜಾ ರಾಮ; II
ಕುಶ ಲವರು ಕರ ಮುಗಿದು ಗುರು ವಾಲ್ಮೀಕಿಗೆ ವಂದಿಸಿ ರಾಜನಲಿ, I
ನಮಸ್ಕರಿಸಿದರು ಸಕಲ ಸಭೀಕರಿಗೆ; II
ʻಸರಾಯುದಡದ ಅಯೋಧ್ಯಾನಗರಿ ರಾಜ, ದಶರಥ ಪುತ್ರ, I
ಇಕ್ಷ್ವಾಕುಕಣ್ಮಣಿ, ಪುರುಷೋತ್ತಮ ರಾಮನ ಕಥೆಯಿದು,II
ಕೇಳಿ ಪುನೀತರಾಗಿರಿ, ಪವಿತ್ರರಾಗಿರಿ ಹಾಡುವೆವು ನಾವುI
ಸೀತಾಪತಿ, ಅಯೋಧ್ಯಾ ನರೇಶನ ವ್ಯಥೆ ಕಥೆ” II
ಹೀಗೆ ರಾಮನ ಚರಿತೆ ಲೋಕಗೀತೆಯನು ಪ್ರಾರಂಭಿಸಿದರುI
ನುಡಿಸುತ ಏಕತಾರಾ ಸುಮಧುರ ಕಂಠದಿ ಕುಶ ಲವರು; II
ತಂದೆ ವಚನ ಪಾಲನೆ, ತಾಯಿ ವಚನ ಪಾಲನೆ ಅರಣ್ಯವಾಸ, I
ಯುದ್ಧ ಎಡರು ತೊಡರುಗಳು ರಾಮನ ಭಾಗ್ಯಗಾಥೆ;II
ದಂಡಕಾರಣ್ಯ, ಸೀತಾಹರಣ, ಕಿಷ್ಕಿಂಧಗಾಥೆ, ಲಂಕೆಗೆ ದಂಡಯಾತ್ರೆ, I
ಭಯಾನಕ ಯುದ್ಧ ರಾಮನ ಭಾಗ್ಯಗಾಥೆ;II
ರಾಕ್ಷಸ ವೀರ ರಾವಣರ ಸಂಹಾರ, ಸೀತೆಯI
ಬಿಡುಗಡೆ, ಅಗ್ನಿ ಪರೀಕ್ಷೆ ವ್ಯಥೆಗಳ ಸೀತೆಯಗಾಥೆ; II
ರಾಮನ ಪಟ್ಟಾಭೀಷೆಕ, ರಾಜ್ಯ ಸಮೃದ್ಧಿ, ಸೀತೆ ಬಯಕೆಯಂತೆ, I
ಲೋಕ ನಿಂದನೆಗಾಗಿ ಪುನಃ ಸೀತೆ ವಿರಹ ಗಾಥೆ;II
ಹೀಗೆ ರಾಮನ ಸತ್ಯ ನಿಷ್ಠೆ ಧರ್ಮ ನ್ಯಾಯ ಗುಣಗಾನ ಮಾಡುತ I
ಹಾಡಿದರು ವಾಲ್ಮೀಕಿ ಶಿಷ್ಯರು ಗುರು ಕಲಿಸಿದಂತೆ;II
ಕೇಳಿ ರಾಮನ ಚರಿತೆಯನು ರಾಜಾರಾಮI
ಬಾಲಕರ ಬಳಿಬಂದು ಕಣ್ಣಿರು ಹಾಕುತ ಲಾಲಿಸಿದ: II
“ಓ ಗುರು ವಾಲ್ಮೀಕಿ ಶಿಷ್ಯರೇ! ಧನ್ಯರು ನಿಮ್ಮI
ಗುರುಗಳು, ಜನ್ಮ ಕೊಟ್ಟ ತಂದೆ ತಾಯಿ; II
ನಿಮ್ಮ ತಂದೆ ತಾಯಿ ಯಾರು?I
ನಿಮ್ಮ ಹೆಸರೇನು? ನಿಮ್ಮ ಹಾಡು ಕೇಳಿ ಧನ್ಯನಾದೆ”. II
ಉತ್ತರಕಾಂಡ

ಅಶ್ವಮೇಧ ಯಜ್ಞ ಪೂರ್ಣಗೊಂಡ ನಂತರ ರಾಜಾರಾಮನಲ್ಲಿ ತನ್ನ ಶಿಷ್ಯರಿಂದ ರಾಮನ ಚರಿತೆ ಲೋಕಗೀತೆಯನ್ನು ಹಾಡಿಸಲು ಅಪ್ಪಣೆ ಕೇಳಿದ, ಲವ ಕುಶರು ರಾಮನನೊಳಗೊಂಡು ಅಲ್ಲಿ ನೆರೆದಿದ್ದ ಎಲ್ಲರೂ ಮಂತ್ರಮುಗ್ಧರಾಗುವಂತೆ ರಾಮ-ಸೀತೆ ವ್ಯಥೆಗಾಥೆಯನ್ನು ಹಾಡಿದರು, ಹಾಡು ಕೇಳಿ ಬೆರಗಾದ ರಾಮನು ಬಾಲಕರನ್ನು ಲಾಲಿಸಿದ ಪ್ರಸಂಗಗಳನ್ನುಆದಿಕವಿ ವಾಲ್ಮೀಕಿಯು ವಿವರಿಸಿರುವರು, ಇಲ್ಲಿ ರಾಮಾಯಣವು (1) ರಾಮ ಸೀತೆಯ ಇಬ್ಬರದೂ ವ್ಯಥೆಗಾಥೆ ಮತ್ತು (2)ದೈವದಾಟ, ಬಗ್ಗೆ ಆದಿಕವಿಯು ಹೀಗೆ ವ್ಯಕ್ತ ಪಡಿಸಿರುವರು: ಅಶ್ವಮೇಧಯಜ್ಞದಲ್ಲಿ ಋಷಿ ಮನಿಗಳು. ವಿದ್ವಾಂಸರು, ಕಲಾಕಾರರು, ನೃತ್ಯಗಾರರು ಸಂಗೀತಕಾರರು,ಗಾಯಕರು, ಪುರೋಹಿತು. ಅರಸರು, ಸಾಮಂತರರು, ಸ್ನೇಹಿತರು ಬಂಧು ಬಳಗ, ಸೇನೆ, ಪ್ರಜೆಗಳು ಕಿಕ್ಕಿರಿದು ತುಂಬಿದ್ದರು; ಯಜ್ಞದ ವಿಧಿ ವಿಧಾಗಳು ಸಮಾಪ್ತವಾಗುತಿದಂತೆ ವಾಲ್ಮೀಕಿ ಮುನಿಯು ಎದ್ದುನಿಂತು ರಾಜಾ ರಾಮನಲ್ಲಿ ಕೋರಿದರು “ ಓ ಪ್ರಭು, ನನ್ನ ಶಿಷ್ಯ ಬಾಲಕರಿಬ್ಬರು ತಮ್ಮ ಈ ಓಲಗದಲ್ಲಿ ʼರಾಮ ಚರಿತೆʼಯನ್ನು ಹಾಡುವರು, ಅವರಿಗೆ ಅಪ್ಪಣೆ ದಯಪಾಲಿಸು, ರಾಮನ ಚರಿತೆ ಕೇಳಿ ವಸುಂಧರೆಯ ಜನ ಪುನಿತರಾಗಲಿ.” ಬಾಲಕರನು ಕಂಡು ರಾಮನ ಮನ ನೊಂದಿತು, ಭರತ, ಶತ್ರುಘ್ನ ಮತ್ತು ಲಕ್ಷ್ಮಣ ಗಲಿಬಿಲಿಗೊಂಡರು; ರಾಜ ಮಾತೆಯರಲಿ, ಅವರ ಪುತ್ರವಧುಗಳಲ್ಲಿ ಸಂಚಲನ ಮೂಡಿತು, ಎಲ್ಲರ ಮನಸ್ಸು ಲವ ಕುಶರತ್ತ ಎಳೆಯಿತು; ಅವರಿಂದ ರಾಮನ ಚರಿತೆ ಲೋಕಗೀತೆ ಕೇಳಿದ ಜನ ಆಶ್ಚರ್ಯಚಕಿತರಾದರು; ರಾಜಾ ರಾಮನು ವಾಲ್ಮೀಕಿ ಮುನಿಯ ಕೋರಿಕೆ ಮನ್ನಿಸಿ ವಾಲ್ಮೀಕಿ ಶಿಷ್ಯ ಬಾಲಕರಿಗೆ ರಾಮನ ಚರಿತೆ ಲೋಕಗೀತೆ ಹಾಡುವಂತೆ ಆದೇಶಿಸಿದನು; ಕುಶ ಲವರು ಕರ ಮುಗಿದು ಗುರು ವಾಲ್ಮೀಕಿಗೆ, ವಂದಿಸಿ ರಾಜನಲಿ, ಸಕಲ ಸಭೀಕರಿಗೆ ನಮಸ್ಕರಿಸಿದರು; “ಸರ್ಯೂದಡದ ಅಯೋಧ್ಯಾನಗರಿ ರಾಜ, ದಶರಥ ಪುತ್ರ, ಇಕ್ಷ್ವಾಕುಕಣ್ಮಣಿ, ಪುರುಷೋತ್ತಮ ರಾಮನ ಕಥೆಯಿದು, ಕೇಳಿ ಪುನೀತರಾಗಿರಿ, ಪವಿತ್ರರಾಗಿರಿ ಹಾಡುವೆವು ನಾವು ಸೀತಾಪತಿ, ಅಯೋಧ್ಯಾ ನರೇಶನ ವ್ಯಥೆ ಕಥೆ” ಹೀಗೆ ಲವ ಕುಶರು ಏಕತಾರಾ ನುಡಿಸುತ ಸುಮಧುರ ಕಂಠದಿ ರಾಮನ ಚರಿತೆ ಲೋಕಗೀತೆಯನು ಹಾಡಲು ಪ್ರಾರಂಭಿಸಿದರು; ತಂದೆ ವಚನ ಪಾಲನೆ, ತಾಯಿ ವಚನ ಪಾಲನೆ, ಅರಣ್ಯವಾಸ, ಯುದ್ಧ ಎಡರು ತೊಡರುಗಳು ರಾಮನ ಭಾಗ್ಯಗಾಥೆಯನ್ನು ಲವ ಕುಶ ಹಾಡಿದರು; ದಂಡಕಾರಣ್ಯ, ಸೀತಾಹರಣ, ಕಿಷ್ಕಿಂಧಗಾಥೆ, ಲಂಕೆಗೆ ದಂಡಯಾತ್ರೆ, ಭಯಾನಕ ಯುದ್ಧ ರಾಮನ ಭಾಗ್ಯಗಾಥೆಯನ್ನು ಲವ ಕುಶ ಹಾಡಿದರು; ರಾಕ್ಷಸ ವೀರ ರಾವಣರ ಸಂಹಾರ, ಸೀತೆಯ ಬಿಡುಗಡೆ, ಅಗ್ನಿ ಪರೀಕ್ಷೆ ವ್ಯಥೆಗಳ ಸೀತೆಯಗಾಥೆಯನ್ನು ಲವ ಕುಶ ಹಾಡಿದರು; ರಾಮನ ಪಟ್ಟಾಭೀಷೆಕ, ರಾಮರಾಜ್ಯ ಸಮೃದ್ಧಿ, ಸೀತೆ ಬಯಕೆಯಂತೆ, ಲೋಕ ನಿಂದನೆಗಾಗಿ ಪುನಃ ಸೀತೆ ವಿರಹ ಗಾಥೆಯನ್ನು ಲವ ಕುಶ ಹಾಡಿದರು; ಹೀಗೆ ರಾಮನ ಸತ್ಯನಿಷ್ಠೆ ಧರ್ಮ ನೀತಿನ್ಯಾಯ ಗುಣಗಾನ ಮಾಡುತ ವಾಲ್ಮೀಕಿ ಶಿಷ್ಯರು ಗುರು ಕಲಿಸಿದಂತೆ ಹಾಡಿದರು; ರಾಮನ ಚರಿತೆಯನು ಕೇಳಿ ರಾಜಾರಾಮನು ಬಾಲಕರ ಬಳಿಬಂದು ಕಣ್ಣಿರು ಹಾಕುತ್ತ ಅವರನ್ನು ಲಾಲಿಸಿದನು “ ಓ ಗುರು ವಾಲ್ಮೀಕಿ ಶಿಷ್ಯರೇ! ನಿಮ್ಮ ಗುರುಗಳು ಧನ್ಯರು, ನಿಮಗೆ ಜನ್ಮ ಕೊಟ್ಟ ತಂದೆ ತಾಯಿ ಧನ್ಯರು; ನಿಮ್ಮ ತಂದೆ ತಾಯಿ ಯಾರು? ನಿಮ್ಮ ಹೆಸರೇನು? ನಿಮ್ಮ ಹಾಡು ಕೇಳಿ ಧನ್ಯನಾದೆನು.”
-ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ‌.