
ಲೇಖಕರು-ಶ್ರೀಶೈಲ ಬಿರಾದಾರ ನಾಗನಟಗಿ
ಹಗಲಿರುಳು ಮಳೆ ಚಳಿ ಬಿಸಿಲೆನ್ನದೆ
ಮೈಮುರಿದು ಬೆವರು ಸುರಿಸಿ
ಬೆಳೆದ ಬೆಳೆಯನ್ನು ಕಿತ್ತುಕೊಳ್ಳುವ
ವರ್ತಕರು ದಲ್ಲಾಳಿಗಳು ದುಬಾರಿ
ಬೆಲೆಗೆ ಮಾರಿಕೊಂಡರು ರೈತರಿಗೆ
ಕಡಿಮೆ ಬೆಲೆಕೊಡುವ ದಗಲಬಾಜಿ
ದರೋಡೆಕೊರಿಂದ ರೈತರನ್ನು ರಕ್ಷಿಸಬೇಕೆಂದನು
ನಮ್ಮ ರಸ್ತಾಪೂರದ ಭೀಮಕವಿಗಳು.
ಭಾರತ ಗತಕಾಲದಿಂದಲೂ ಕೃಷಿ ಪ್ರಧಾನವಾದ ನಾಡು ,ಕೃಷಿ ಬಹುಸಂಖ್ಯಾತ ಪ್ರಜಗಳಿಗೆ ಉದ್ಯೋಗ ಕಲ್ಪಸಿ ದೇಶದ ಆರ್ಥಿಕತೆಗೆ ಭದ್ರ ಬುನಾದಿಯಾಗಿ ದೇಶದ ಬೆನ್ನೆಲುಬಾಗಿರುವ ರೈತರು ಎದುರಿಸುವ ಸಂಕಷ್ಟುಗಳು ಸ್ವತಃ ರೈತರಾಗಿ ಬಲ್ಲವರಾಗಿದ್ದ ದೇಶದ 5 ನೇ ಪ್ರದಾನಿಗಳಾದ ಶ್ರೀ ಚೌಧರಿ ಚರಣ್ ಸಿಂಗ್ ರವರು ಜುಲೈ 1979 ರಿಂದ ಜನವರಿ 1980ರವರೆಗೆ ಅಧಿಕಾರ ಮಾಡಿದ ಅಲ್ಪಾವಧಿಯಲ್ಲಿಯೇ ಜಮೀನ್ದಾರಿ ಪದ್ಧತಿಯ ನಿರ್ಮೂಲನೆಗೆ ಸೇರಿದಂತೆ ಸಾಕಷ್ಟು ರೈತ ಪರವಾಗಿ ಕೆಲಸ ಮಾಡಿದ್ದರಿಂದಾಗಿ ಅವರ ಸ್ಮರಣಾರ್ಥವಾಗಿ ಅವರ ಜನುಮ ದಿನವಾದ ಡಿಸೆಂಬರ್ 23 ರಂದು ರಾಷ್ಟ್ರೀಯ ರೈತರ ದಿನಾಚರಣೆಯಾಗಿ,ಕಿಸಾನ್ ದಿವಸವಾಗಿ ಕೇಂದ್ರ ಸರ್ಕಾರ 2001 ರಿಂದ ಆಚರಣೆ ಮಾಡಲಾಗುತ್ತಿದೆ,
ಸ್ಮಾರ್ಟ್ ಫೋನ್ ಗಳು ಜನ ಸಾಮಾನ್ಯರ ಕೈಗೆ ಬಂದಾಗಿನಿಂದಲಂತೂ ರೈತರ ಪೋಟೋಗಳು ಇಲ್ಲಾ ರೈತರ ಹೊಡನಾಡಿಗಳಾದ ಬಸವನ ಮತ್ತು ಕೃಷಿ ಪರಿಕರಣಗಳೊಂದಿಗೆ ತಮ್ಮ ಪೋಟೊಗಳನ್ನು ಹಾಕಿ ರೈತರಿಗೆ ಶುಭಕೊರುವ ಸ್ಟೇಟ್ಸ್ ಗಳು ಅಪ್ಲೋಡ್ ಮಾಡುವದು ಇತ್ತಿಚಿಗೆ ಒಂದು ಪ್ಯಾಷನ್ ಆಗಿಬಿಟ್ಟಿದೆ ಆದರೂ ಒಂದು ಖುಷಿ ಎನದಂರೆ ಒಂದು ದಿನವಾದರು ರೈತರ ಬಗ್ಗೆ ಒಳ್ಳೆಯ ಅಭಿಪ್ರಾಯವಾದರು ವ್ಯಕ್ತಪಡಿಸುತ್ತಿದ್ದಾರಲ್ಲಾವೆಂಬುವದು, ಸರ್ಕಾರ ಮತ್ತು ಸಂಘಸಂಸ್ಥೆಗಳು ರೈತ ದಿನಾಚರಣೆಯ ಆಚರಣೆಮಾಡುತ್ತಿರುವದು ಬಹುತೇಕ ಇದೆ ರೀತಿಯದಾಗಿದೆ, ದಿನ ನಿತ್ಯ ಹೊಲಗದ್ದೆಗಳಲ್ಲಿ ದುಡಿಯುವ ನಿಜವಾದ ಬಹುತೇಕ ರೈತರಿಗೆ ರೈತರ ದಿನವಿರುವದೆ ಗೊತ್ತೆಯಿಲ್ಲಾ ಇನ್ನೂ ಆಚರಣೆಯ ಮಾತು ಆಡುವಂತಿಲ್ಲಾ,
“ದೇಶವಾಳುವ ಅರಸನಿಗೂ ಆಳಿಗೂ
ಮತ್ತು ಗಡಿಯ ಕಾಯುವ ಯೋದನಿಗೂ, ವ್ಯಾಪಾರಿಗೂ ಅಷ್ಟೇ ಅಲ್ಲದೆ ದೇಶದ ಎಲ್ಲಾ ಪ್ರಜಗಳಿಗೂ
ಅನ್ನ ನೀಡುವ ಅನ್ನಧಾತರು” ಈ ದೇಶದ ಬೆನ್ನೆಲುಬಾದ ರೈತರಿಗೆ ಒಂದು ದಿನನಿಗದಿಪಡಿಸಿ ಆತನಿಗೆಯೆ ಗೊತ್ತಾಗದಾಗೆ ಆಚರಣೆಮಾಡುವದು,ಮಾಜಿ ಪ್ರದಾನಿ ಶ್ರೀ ಚರಣಸಿಂಗ್ ರಿಗೆ ಅಪಮಾನ ಮಾಡಲೊ?ಅಥವಾ ಈ ದೇಶದ ರೈತರಿಗೆ ಅಪಮಾನ ಮಾಡಲೊ? ತಿಳಿಯದು ಆದರೆ ರೈತರ ದಿನಚಾರಣೆ ದೇಶದ ಪ್ರತಿಯೊಬ್ಬ ಪ್ರಜಗಳು ಹೆಮ್ಮೆಯಿಂದ ಆಚರಣೆ ಮಾಡಿ ಅವರಿಗೆ ಶುಭಕೊರಿ,ಅವರಿಗೆ ಸದಕಾಲ ಬೆನ್ನೆಲುಬಾಗಿ ನಿಲ್ಲವಂತಾಗಬೇಕು ಅಂದಾಗ ಮಾತ್ರ ದಿನಾಚರಣೆಗೊಂದು ಅರ್ಥ ಬರುತ್ತದೆ .
ಈ ದೇಶದ ಮೂರ ಅಂಗಗಳಾದ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ನಾಲ್ಕನೆಯ ಅಂಗವಾಗಿರುವ ಮಾಧ್ಯಮಗಳು ಸಹ ಸೇರಿ ನಾಲ್ಕು ಅಂಗಗಳು ಇವತ್ತು ರೈತ ದಿನಾಚರಣೆಯನ್ನು ಎಲ್ಲಿ ಹಾಗೂ ಯಾವರಿತಿಯಾಗಿ ಆಚರಣೆಮಾಡಿತ್ತಿವೆಯಂದು ತಮ್ಮೆಲ್ಲರಿಗೂ ತಿಳಿದಿರು ವಿಚಾರ ಅದೆನೆ ಇರಲಿ ಇವತ್ತು ನಿಜವಾದ ರೈತರಿರುವದು ಹೊಲಗದ್ದೆಗಳಲ್ಲಿ ಅಲ್ಲವೆ? ಹೊಲಗದ್ದೆಗಳಲ್ಲಿ ದುಡಿಯುವ ರೈತರ ಬಳಿ ಹೊಗಿ ಆತನಿಗೆ ಶಭುಕೊರಿ ನಿಮ್ಮ ದಿನಾಚರಣೆಯಿದೆಯಂದು ತಿಳಿಯಪಡಿಸಿ ಮತ್ತು ರೈತರ ಅಭಿವೃದ್ಧಿಗಾಗಿ ಸರ್ಕಾರಗಳ ನಿರ್ಧಾರಗಳು, ಯೋಜನೆಗಳ ತಿಳುವಳಿಕೆ ಮತ್ತು ಅದರ ಲಾಭವನ್ನು ಅವರಿಗೆ ಪ್ರಾಮಾಣಿಕವಾಗಿ ತಲುಪಿಸಬೇಕು ಸರ್ಕಾರ ತರುವ ಎಲ್ಲಾ ಯೋಜನೆಗಳು ಶಾಸಕಾಂಗದ ಪ್ರತಿನಿಧಿಗಳ ಹಿಂಬಾಲಕ ಕೆಲವೆ ಕೆಲವು ರೈತರ ಪಾಲಾಗಿ ಬಹುತೇಕ ರೈತರಿಗೆ ಅನ್ಯಾಯವಾಗುತ್ತಿರುವದು ಬದಲಾಗಬೇಕು,ರಾಜಕಾರಣಿಗಳ ಹಿಂಬಾಲಕ ರೈತರು ಬಿಟ್ಟರೆ ಸಾಮಾನ್ಯ ರೈತರಿಗೆ ಸರ್ಕಾರದ ಸೌಲಭ್ಯಗಳು ತಲುಪುವದೆ ಇಲ್ಲಾ ಒಂದು ವೇಳೆ ತಲುಪಿದರು ರಾಜಕೀಯ ನಾಯಕರ ಹಿಂಬಾಲಕರು ಅದರ ಅರ್ದಪಾಲು ಬಾಚಿಕೊಂಡಿರುತ್ತಾರೆ, ಈ ವ್ಯವಸ್ಥೆ ಬದಲಾಗದೆ ಅನ್ನಕೊಡುವ ಅನ್ನದಾತನ ಅರ್ದ ಅನ್ನಕಿತ್ತಕೊಂಡರೆ ರೈತ ಬದುಕ್ಯಾನು ಹೇಗೆ, ರೈತ ಬದುಕದಿದ್ದರೆ ಭವಷ್ಯದಲ್ಲಿ ದೇಶಕ್ಕೆ ಉಳಿಗಾಲವಿದೆಯೆ? ರೈತರನ್ನು ಬಲಿಕೊಟ್ಟು ಮೊಸಮಾಡಿ ಹಣಗಳಿಸಿದರೆ ಹಣತಿನ್ನಲು ಆಗುವದೆ ಯೋಚಿಸಿ ಬಂದುಗಳೆ,
ರೈತ ತನ್ನ ಮಗನಿಗೆ ಶಾಲೆಗೆ ಸೇರಿಸಲೂ ಹೋದಾಗ ಕಟ್ಟಬೇಕಾದ ವಿದ್ಯಾರ್ಥ ಶಾಲಾ ಫೀ ನಿಂದ ಹಿಡಿದು ಆಸ್ಪತ್ರೆ ಬಿಲ್ಲು ಕಟ್ಟುವಾಗ,ದಿನ ನಿತ್ಯದ ದಿನ ಬಳಕೆಯ ವಸ್ತುಗಳು ಮತ್ತು ಕೃಷಿ ಪರಿಕರಗಳ ವ್ಯಾಪರ ವೈವಾಟು ಸೇರಿದಂತೆ ಎಲ್ಲಾ ಸಂದರ್ಭಗಳಲ್ಲಿ ರೈತರಿಗೆ ಎಲ್ಲ ವರ್ಗದ ಜನಗಳು ಮೊಸ ಮಾಡುತ್ತಿರುವಾಗ ಅವರ ದಿನಾಚರೆಣೆಯಂದಾದರು ಆತನಿಗೆ ಒಳಿತನ್ನು ಮಾಡುವ ಮನಭಾವನೆಯಿಲ್ಲದೆ ಯಾಂತ್ರಿಕವಾಗಿ ಒಂದು ಸ್ಟೇಟ್ಸ್ ಹಾಕಿಕೊಂಡರೆ ರೈತರಿಗೆ ಲಾಭವಾದಿತ್ತೆ ಮತ್ತು ಚೌದರಿ ಚರಣ ಸಿಂಗ್ ರವರ ಆತ್ಮಕ್ಕೆ ಶಾಂತಿ ದೊರಕಿತೆಯೇ, ರೈತರಿಗೆ ಖುಷಿಯು ಇಲ್ಲಾ ಸಂಭ್ರಮವಿಲ್ಲಾ ಯಾವ ಅನುಕೂಲವು ಇಲ್ಲದೆ ರೈತರ ದಿಚಾರಣೆ ಮಾಡುವದು ಯಾವ ಪುರಷ್ಯಾರ್ಥಕ್ಕಾಗಿ?
”ಒಕ್ಕಲಿಗ ಒಕ್ಕದಿದ್ದರೆ ಬಿಕ್ಕುವದು ಜಗವೆಲ್ಲಾ ” ಎಂಬ ವಾಣಿಯ ಮರೆತು ನಮ್ಮ ಸರಕಾರಗಳು ಮತ್ತು ಪ್ರಜಗಳು ಮಾಡುತ್ತಿವೆ ಆತನಿಗೆ ನಿತ್ಯ ದ್ರೊವಾ , ಆತ ಬೆಳೆದ ಯಾವ ಬೆಳೆಗೂ ಸೂಕ್ತವಾದ ಬೆಲೆ ನಿಗದಿಮಾಡದೆ ನಮ್ಮ ಸರ್ಕಾರಗಳು ಮಾಡುತ್ತಿವೆ ಮೊಸ , ರೈತ ಬೆಳೆಯುವ ಬೆಳೆಗಳನ್ನು ಬಿಟ್ಟು ಉಳಿದೆಲ್ಲಾ ಉತ್ಪಾದನೆಗಳ ಪ್ರತಿಯೊಂದು ವಸ್ತುಗಳಿಗು ಒಂದು ನಿರ್ದಿಷ್ಟಬೆಲೆ ನಿಗದಿಮಾಡುವ ಅಧಿಕಾರ ಸರಕಾರ ಹಾಗೂ ಆ ಉತ್ಪಾದನೆಯ ಸಂಸ್ಥೆಗಳು ಹೊಂದಿವೆ, ತಮಗೆ ಬೇಕಾದ ಬೆಲೆಯನ್ನು ನಿಗದಿಪಡಿಸುತ್ತವೆ, ದೇಶದ ಜನರಿಗೆ ಅನ್ನವ ನೀಡುವ ರೈತನಿಗೆ ತನ್ನ ಬೆಳೆಗೆ ತಾನು ಬೆಲೆಕಟ್ಟುವ ಅಧಿಕಾರವಿಲ್ಲಾ ಹೋಗಲಿ ಆ ಅಧಿಕಾರ ಕೊಡದಿದ್ದರು ಪರವಾಗಿಲ್ಲಾ ಸರಕಾರಗಳಾದರು ಸೂಕ್ತವಾದ ವೈಜ್ಞಾನಿಕ ಬೆಲೆ ನಿಗದಿಮಾಡ ಬೇಕಲ್ಲವೆ? ಅದು ಮಾಡದೆ ಆತನಿಗೆ ಒಂದು ದಿನಾಚರಣೆ ಮಾಡುವದು ಆತನಿಗೆನು ಲಾಭವಿದೆ, ಯಾವ ಪುರಷ್ಯಾರ್ಥಕ್ಕೆ ಬೇಕು ಆತನಿಗೆ ಈ ದಿನಾಚರಣೆ, ಕಳೆದ ವರ್ಷಕ್ಕೆ ಹೊಲಿಸಿಕೊಂಡರೆ ಈ ಬಾರಿ ಮಳೆಯಿಲ್ಲದೆ ಬೆಳಯು ಕಮರಿ ಇಳುವರಿ ಕುಂಟಿತವಾಗಿವೆ,ಉತ್ಪಾದನೆ ಕಡಿಮೆಯಾದಾಗ ಬೆಲೆ ಏರಿಕೆಯಾಗುವದು ಅರ್ಥಶಾಸ್ತ್ರ ಸಾಮಾನ್ಯ ತತ್ವ ನಮ್ಮ ಸರ್ಕಾರಗಳ ಗಮನಕ್ಕಿಲ್ಲವೆ? ಉದಾಹರಣೆಗೆ ಹೇಳುವದಾದರೆ ಹತ್ತಿಯ ಇಳುವರಿ ಕಳೆದ ವರ್ಷಕ್ಕೆ ಹೋಲಿಸಿ ಕೊಂಡರೆ ಅರ್ದದಷ್ಟು ಕಡಿಮೆಯಾಗಿದೆ ಅರ್ಥಶಾಸ್ತ್ರದ ತತ್ವದಂತೆ ಬೆಲೆ ಹೆಚ್ಚಾಗ ಬೇಕಲ್ಲವೆ? ವಿಪರ್ಯಾಸವೆಂದರೆ ಕಳೆದ ವರ್ಷಕ್ಕಿಂತ ಕಡಿಮೆ ಆಗಿದ್ದು ಯಾಕೆ? ಮೆಣಿಸಿನ ಕಾಯಿ ಬೆಲೆಯು ಅಷ್ಟೆ, ಭತ್ತಕ್ಕೆ ಮಾತ್ರ ಉತ್ತಮ ಬೆಲೆಯಿದೆ ಉಳಿದ ಬೆಳೆ ಬೆಳೆದ ರೈತರ ಪಾಡೇನು,ಇಳುವರಿ ಕಡಿಮೆಯಾಗಿ ಬೆಲೆ ಕಡಿಮೆಯಾದ ದರದಲ್ಲಿಯೆ, ರೈತ ಬೆಳೆ ಬೆಳೆಯಲು ಬಳಸುವ ಔಷದ ರಸಗೊಬ್ಬರಗಳು ಮತ್ತು ಇನ್ನಿತರ ಪರಿಕರಗಳ ಬೆಲೆ ಕಡಿಮೆಮಾಡುವರಾ? ಇಲ್ಲವಲ್ಲಾ ಹೀಗಿದ್ದಾಗ ರೈತರ ಬದುಕು ಸುಧಾರಿಸಿತು ಹೇಗೆ?
ಕೆಲವು ವರ್ಷಗಳ ಹಿಂದೆ ಅಮೆರಿಕ ,ಇರಾನ ಹಾಗೂ ಐರೋಪ್ಯ ರಾಷ್ಟ್ರಗಳು ನಮ್ಮ ದಕ್ಷಿಣ ಭಾರತದ ರೈತರು ಬೆಳೆದ ಭತ್ತದಲ್ಲಿ ಕೆಮಿಕಲ್ ಅಂಶ ಅತಿಹೆಚ್ಚುಯಿದೆ ಎಂದು ಅದು ಆರೋಗ್ಯಕ್ಕೆ ಆನಿಕಾರವೆಂದಳಿ ತಿರಸ್ಕಾರಮಾಡಿತ್ತು ಆರೋಗ್ಯಕ್ಕೆ ಆನಿಕಾರವಾಗುವಂತ ಕೆಮಿಕಲ್ ಗಳನ್ನು ನೀಡುವ ಕಂಪನಿಗಳ ವಿರುದ್ಧ ನಮ್ಮ ಸರ್ಕಾರಗಳು ಯಾವ ಕ್ರಮಗಳು ಕೈಗೊಂಡಿವೆ ಅದು ರೈತರಿಗೆ ತಿಳಿಯದು, ಕೃಷಿ ವಿವಿಗಳು ಏನು ಕೆಲಸಮಾಡುತ್ತಿವೆ ಹಾಗೂ ಕೃಷಿ ಇಲಾಖೆಯು ಏನು ನಿದ್ದೆ ಮಾಡುತ್ತಿವೆಯೊ ಗೊತ್ತಿಲ್ಲಾ, ಸ್ವಾತಂತ್ರ್ಯ ಪಡೆದು ೭೫ ವರ್ಷಗಳು ಗತಿಸಿದರು ನಮ್ಮ ರೈತರು ಯಾವರಿತಿಯಾಗಿ ಕೃಷಿ ಮಾಡಬೇಕೆನ್ನುವ ವೈಜ್ಞಾನಿಕವಾದ ಜ್ಞಾನವನ್ನು ನೀಡವಲ್ಲಿ ಕೃಷಿ ಇಲಾಖೆ ಹಾಗೂ ಕೃಷಿ ವಿವಿಗಳು ಸಾಕಷ್ಟು ಶ್ರಮವಹಿಸಿದ್ದರು ರೈತನಿಗೆ ಆತ್ಮೀಯವಾಗದಿರುವದು ನಮ್ಮ ರೈತರ ದೌರ್ಬಗ್ಯವೆ ಆಗಿದೆ ,
ಎಲ್ಲರೂ ಬದುಕುವದು ಅವನಿಂದ ಎನ್ನುವದು ಎಲ್ಲರೂ ಮರೆತು ಎಲ್ಲರೂ ಮಾಡುತ್ತಿದ್ದೆವೆ ಆತನಿಗೆ ಮೊಸ,ಇನ್ನೂ ಮುಂದಾದರು ನಾವು ತಿನ್ನುವ ಪ್ರತಿ ತುತ್ತಿನಲ್ಲಿಯು ಆತನ ಬೆವರಿನ ಹನಿಗಳಿವೆ ಎನ್ನುವದು ನೆನಪಿಸಿಕೊಂಡು ಮೊಸಮಾಡದೆಯಿರೊಣ ಅನ್ನದಾತನಿಗೆಂದು ಈ ದಿನ ಸಂಕಲ್ಪ ಮಾಡಿಕೊಂಡು ಆ ನಿಟ್ಟಿನಲ್ಲಿ ನಮ್ಮ ರೈತರಿಗೆ ನಮ್ಮನಮ್ಮ ಕೈಲಾದಷ್ಟು ಸಹಾಯ ಮಾಡೊದು ಆಗದೆಯಿದ್ದರು ಮೊಸಮಾಡೊದು ಕಡಿಮೆ ಮಾಡಿಕೊಳ್ಳೊಣ.
– ಶ್ರೀಶೈಲ ಬಿರಾದಾರ ನಾಗನಟಗಿ
9008659817
