ಗುಲ್ಬರ್ಗ ವಿವಿಯಲ್ಲಿ ಎರಡು ದಿನಗಳ ಅಂತಾರಾಷ್ಟ್ರೀಯ ಸಮ್ಮೇಳನ

By admin

ಕಲಬುರಗಿ: ಇಲ್ಲಿನ‌ ಜ್ಞಾನ ಗಂಗೆಯ ಶೈಕ್ಷಣಿಕ ತವರುರಾದ ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಜ.೮ ರಿಂದ ಎರಡು ದಿನಗಳ ಕಾಲ ಅಂತಾರಾಷ್ಟ್ರೀಯ ಸಮ್ಮೇಳನ ನಡೆಯಲಿದೆ.
ಮಾನವನ ಆರೋಗ್ಯಾಭಿವೃದ್ಧಿಗೆ ಜೈವಿಕ ಹಾಗೂ ನ್ಯಾನೋ ತಂತ್ರ ಜ್ಞಾನದ ಸಂಯೋಜನೆಯಲ್ಲಿನ ಇತ್ತೀಚಿಗಿನ ಸಂಶೋಧನೆಗಳು ( ರೀಸೆಂಟ್ ಅಡ್ವಾನ್ಸಸ್ ಇನ್ ಬಯೋ- ನ್ಯಾನೋ ಕಾಂಪೋಸೈಟ್ಸ್ ಫಾರ್ ಎನಾನ್ಸಿಂಗ್ ಹ್ಯುಮನ್ ಹೆಲ್ತ್) ವಿಷಯದ ಮೇಲೆ ವಿವಿಯ ಡಾ.ಅಂಬೇಡ್ಕರ್ ಭವನದಲ್ಲಿ ನಡೆಯಲಿದೆ.
ಗುಲ್ಬರ್ಗ ವಿವಿ ಮತ್ತು ಯುನೈಟೆಡ್ ಕಿಂಗ್ ಡಂನ ಬ್ರಾಡ್ ಪ್ರೋರ್ಡ್ ವಿವಿ ಜಂಟಿ ಸಹಯೋಗದಲ್ಲಿ‌ ಹಮ್ಮಿಕೊಂಡೊರುವ ಈ ಸಮ್ಮೇಳನಕ್ಕೆ‌‌ ವಿವಿಯು ಸಕಲ‌ ಸಿದ್ದತೆ ಮಾಡಿಕೊಳ್ಳುತ್ತಿದೆ ಎಂದು ಗುಲ್ಬರ್ಗ ವಿವಿ ಕುಲಪತಿ ಡಾ.ದಯಾನಂದ ಅಗಸರ್ ಮತ್ತು ಬ್ರಾಡ್ ಪೋರ್ಡ್ ವಿವಿ ಕುಲಪತಿ ಪ್ರೋ.ಸಿರ್ಲೆ ಕಂಡೋನ್ ಅವರು ತಿಳಿಸಿದ್ದಾರೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶ, ವಿದೇಶಗಳಿಂದ ನೂರಾರು ವಿಜ್ಞಾನಿಗಳು, ಜೈವಿಕ ತಂತ್ರಜ್ಞರು, ನ್ಯಾನೋ ತಂತ್ರಜ್ಞರು, ಪರಿಣಿತರು ಭಾಗವಹಿಸಲಿದ್ದಾರೆ ಎಂದರು.
ರಾಜ್ಯದ ಉನ್ನತ ಸಚಿವ ಡಾ.ಸುಧಾಕರ ಅವರು ಜ.೮ ರಂದು ಬೆಳಗ್ಗೆ ೧೦ ಕ್ಕೆ ಸಮ್ಮೇಳನ ಉದ್ಘಾಟಿಸಲಿದ್ದಾರೆ. ಸಚಿವ‌ ಡಾ.ಶರಣಪ್ರಕಾಶ ಪಾಟೀಲ್, ಕೆಕೆಆರ್ ಡಿಬಿ ಅಧ್ಯಕ್ಷ ಡಾ.ಅಜಯಸಿಂಗ್ ಸೇರಿದಂತೆ ಅನೇಕರು ಭಾಗಬಹಿಸಲಿದ್ದಾರೆ.
ಎರಡು ದಿನಗಳ ಈ ಸಮ್ಮೇಳನದಲ್ಲಿ ನಡೆಯುವ ವಿವಿಧ ಕಾರ್ಯಕ್ರಮಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದ ಕುಲಪತಿ ಡಾ.ಅಗಸರ್ ಅವರು, ಜ.೯ ರಂದು ಸಂಜೆ ೪ ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ಸಚಿವ ಪ್ರಿಯಾಂಕ್ ಖರ್ಗೆ, ಕೆಕೆಆರ್ಡಿಬಿ ಅಧ್ಯಕ್ಷ ಡಾ.ಅಜಯಸಿಂಗ್ ಸೇರಿದಂತೆ ವಿವಿಧ‌ ವಿವಿಗಳ ಪ್ರಮುಖರು ಭಾಗವಹಿಸಲಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಕುಲಸಚಿವ‌ ಡಾ.ಶರಣಪ್ಪ ಸತ್ಯಂಪೇಟೆ, ಡಾ.ಲಿಂಗಪ್ಪ,ಮಾಧ್ಯಮ ವಿಭಾಗದ ಕುಮಾರಸ್ವಾಮಿ ಸೇರಿದಂತೆ ಇತರರು ಇದ್ದರು.