
ಅಶ್ವಮೇಧ ಯಜ್ಞ ಮುಗಿಯಿತು, ಸೀತೆಯ ದರ್ಶನವಾದರೂI
ರಾಮನ ತೊರೆದು ಭೂಗರ್ಭ ಸೇರಿಯಾಯಿತು ಸೀತೆ;II
ದುಃಖದ ಸುಳಿಯಲ್ಲಿ ಸಿಕ್ಕ ರಾಮ ಸೀತೆಗಾಗಿ ಹಂಬಲಿಸಿI
ಹಾತೊರೆದ ಕತ್ತಲು ಕಳೆಯಿತು ವಾಲ್ಮೀಕಿ ಆಶ್ರಮದಲಿ; II
ಮುಂಜಾವು ಆಗುತಿದ್ದಂತೆ ಸೇರಿಸಿದ ರಾಮI
ಋಷಿ ಮುನಿ ವಿದ್ವಾನ ಸ್ನೇಹ ಸಂಬಂಧಿಗಳನ; II
ಕೋರಿದ ಮಕ್ಕಳಿಗೆ ಹಾಡುವಂತೆ ರಾಮಾಯಣ ಹಾಡಿನಲ್ಲಿ I
ಪುನಃ ಪುನಃ ನೆನಪಿಸಿಕೊಂಡ ಸೀತೆಯನು ರಾಮ;II
ಎಲ್ಲರೂ ಸಂತೈಸಿದರು ರಾಮನ, ಮರಳಿದರುI
ಅಯೋಧ್ಯೆಗೆ ಸೀತೆಯ ವ್ಯಥೆ ದುಃಖದಲಿ; II
ಬದುಕೆ ಮರಳುಗಾಡಾದ ರಾಮನಿಗೆ ಮರುಮದುವೆI
ಇಚ್ಚೆಯಾಗಲಿಲ್ಲ, ಕಳೆದ ಬದುಕು ಸೀತೆಯ ನೆನಪಿನಲಿ;II
ಬಹಳ ಕಾಲದವರೆಗೆ ರಾಮ ಪ್ರಜೆಹಿತ ರಾಜ್ಯಬಾರI
ನೀಡಿದ, ಧರ್ಮ ಕಾರ್ಯಗಳು ಮಾಡಿದ ನಿರಂತರ; II
ಮಾಡಿಸಿದ ವಜಮೇಧಯಜ್ಞ, ವಾಜಪೇಯ, ಅಗ್ನಿಸ್ತೋಮ,I
ಅತಿರಥ ವ ಗೋಸವ ಯಜ್ಞಗಳನು ರಾಮ; II
ನಿತ್ಯ ಪ್ರಜಾ ದರ್ಶನ, ಧರ್ಮ ನ್ಯಾಯ ನೀತಿ,I
ರಾಮನ ಆಡಳಿತದ ವಿಧಿ ತತ್ವಗಲಾಗಿದ್ದವು; II
ನಿಯತಿಯಂತೆ ಋತುಗಳು ತಮ್ಮ ಧರ್ಮ ಪಾಲಿಸಿದವು,I
ತುಂಬಿತ್ತು ರಾಜ್ಯ ಸಮೃದ್ಧದಿ, ನೋಡಿ ರಾಮನ ಆಡಳಿತ; II
ಸ್ಪಂದಿಸುವದು ನಿಸರ್ಗ ಪ್ರಭಿನ ಗುಣ ಆಡಳಿತಕ್ಕೆI
ತಕ್ಕಂತೆ, ರಾಮರಾಜ್ಯವು ಮೀರಿತ್ತು ಸ್ವರ್ಗಸುಖ;II
ವಿಪತ್ತುಗಳಿಲ್ಲ, ಮಹಾಮಾರಿಗಳಿಲ್ಲ, ಎತ್ತನೋಡಿದರುI
ಧರ್ಮ ನ್ಯಾಯ ನೀತಿಗಳ ಜಯಕಾರ;II
ಆದರೆ, ಕಾಲ ಕಳೆದಂತೆ ಕೌಶಲ್ಯ, ಸುಮಿತ್ರಾ, ಕೈಕೆಯಿ ಮುಪ್ಪಡರಿ ಹಣ್ಣಾದರು, I
ಸ್ವರ್ಗ ಸೇರಿದರು ಒಬ್ಬೊಬ್ಬರಾಗಿ; II
ತಾಯಂದಿರ ನೆನಪಿನಲ್ಲಿ ರಾಮ ಕಟ್ಟಿಸಿದI
ಕೆರೆ ಕಟ್ಟೆ, ತೆರೆದ ದಾಸೋಹ ಅರವಟ್ಟಿಗೆಗಳನು; II
ತಂದೆ ತಾಯಿ ವ ಸೀತೆ ಹೆಸರಿನಲಿ ದಾನ, ಕೊಡಿಗೆಗಳನ್ನುI
ನೀಡಿದ ಸಾಧಕರಿಗೆ, ಪ್ರಜೆಗಳಿಗೆ, ವೃದ್ಧರಿಗೆ;II
ಧರ್ಮದ ಕಾರ್ಯದಲ್ಲಿ, ಪ್ರಜೆಗಳ ಸೇವೆಯಲ್ಲಿI
ಕಾಲ ಕಳೆದ ಪ್ರಭು ರಾಮ ಸೇವಕರ ಸೇವಕನಂತೆ;II
ಉತ್ತರಕಾಂಡ
ಸೀತೆ ದುಃಖದಲ್ಲಿ ಅಯೋಧ್ಯೆಗೆ ಮರಳಿದ ರಾಮನು ತನ್ನ ರಾಜ್ಯಬಾರದಲ್ಲಿ ನಿರತನಾದ,ಯಜ್ಞಗಳನ್ನು ಮಾಡಿಸಿದ, ಕಾಲಾಂತರದಲ್ಲಿ ತಾಯಂದಿರರ ಮರಣ ಕಂಡ, ತಂದೆ ತಾಯಿ, ಸೀತೆಯರ ಹೆಸರಿನಲ್ಲಿ ದಾನಗಳನ್ನು ಮಾಡಿದ, ಕೆರೆ ಕಟ್ಟೆ ಇತ್ಯಾದಿ ಲೋಕೋಪಯೋಗಿ ಕೆಲಸಗಳನ್ನು ಮಾಡಿದ, ಸ್ವರ್ಗಮೀರಿಸಿದ ಕಲ್ಯಾಣದ ರಾಮರಾಜ್ಯ ಸ್ಥಾಪಿಸಿದ ಪ್ರಸಂಗಗಳ ವಿವರಣೆಯನ್ನುಆದಿಕವಿ ವಾಲ್ಮೀಕಿಯು ನೀಡಿರುವರು, ಅಲ್ಲದೆ (1) ರಾಮನ ವ್ಯಥೆ, (2) ಪ್ರಜಾಹಿತ ರಾಜ್ಯಬಾರ ಮತ್ತು (3) ಲೋಕೋಪಯೋಗಿ ಕಾರ್ಯ ಅಂಶಗಳನ್ನು ಆದಿಕವಿ ಹೀಗೆ ವಿವರಿಸಿರುವರು: ಅಶ್ವಮೇಧ ಯಜ್ಞ ಮುಗಿಯಿತು, ಸೀತೆಯ ದರ್ಶನವಾದರೂ ರಾಮನ ತೊರೆದು ಸೀತೆಯು ಭೂಗರ್ಭ ಸೇರಿಯಾಯಿತು; ದುಃಖದ ಸುಳಿಯಲ್ಲಿ ಸಿಕ್ಕ ರಾಮನು ಸೀತೆಗಾಗಿ ಹಂಬಲಿಸಿ ಹಾತೊರೆದ ವಾಲ್ಮೀಕಿ ಆಶ್ರಮದಲಿ ರಾತ್ರಿ ಕಳೆದನು; ಮುಂಜಾವು ಆಗುತಿದ್ದಂತೆ ರಾಮನು ಋಷಿ ಮುನಿ ವಿದ್ವಾನ ಸ್ನೇಹ ಸಂಬಂಧಿಗಳನ್ನು ಸೇರಿಸಿದನು; ರಾಮಾಯಣ ಹಾಡುವಂತೆ ಮಕ್ಕಳಿಗೆ ಕೋರಿದನು,ಹಾಡಿನಲ್ಲಿ ಪುನಃ ಪುನಃ ರಾಮನು ಸೀತೆಯನು ನೆನಪಿಸಿಕೊಂಡನು; ಎಲ್ಲರೂ ರಾಮನ ಸಂತೈಸಿದರು, ಸೀತೆಯ ವ್ಯಥೆ ದುಃಖದಲಿ ಅಯೋಧ್ಯೆಗೆ ಮರಳಿದರು; ಬದುಕೆ ಮರಳುಗಾಡಾದ ರಾಮನಿಗೆ ಮರುಮದುವೆ ಇಚ್ಚೆಯಾಗಲಿಲ್ಲ, ಸೀತೆಯ ನೆನಪಿನಲಿ ರಾಮನು ತನ್ನ ಬದುಕು ಕಳೆದ;ಬಹಳ ಕಾಲದ ವರೆಗೆ ರಾಮನು ಪ್ರಜೆಹಿತ ರಾಜ್ಯಬಾರ ನೀಡಿದನು, ನಿರಂತರ ಧರ್ಮ ಕಾರ್ಯಗಳನ್ನು ಮಾಡಿದನು; ವಜಮೇಧಯಜ್ಞ, ವಾಜಪೇಯ, ಅಗ್ನಿಸ್ತೋಮ, ಅತಿರಥ ಮತ್ತು ಗೋಸವ ಯಜ್ಞಗಳನು ರಾಮನು ಮಾಡಿಸಿದನು; ನಿತ್ಯ ಪ್ರಜಾ ದರ್ಶನ, ಧರ್ಮ ನ್ಯಾಯ ನೀತಿ, ರಾಮನ ಆಡಳಿತದ ವಿಧಿ ತತ್ವಗಳಾಗಿದ್ದವು; ನಿಯತಿಯಂತೆ ಋತುಗಳು ತಮ್ಮ ಧರ್ಮ ಪಾಲಿಸಿದವು, ರಾಮನ ಆಡಳಿತದಲ್ಲಿ ರಾಜ್ಯ ಸಮೃದ್ಧಯಿಂದ ತುಂಬಿತ್ತು, ನಿಸರ್ಗ ಸಹಕಾರ ಗುಣವು ಆಡಳಿತಕ್ಕೆ ತಕ್ಕಂತೆ ಸ್ಪಂದಿಸುವದು, ರಾಮರಾಜ್ಯವು ಸ್ವರ್ಗಸುಖವನ್ನು ಮೀರಿತ್ತು; ವಿಪತ್ತುಗಳಿಲ್ಲ, ಮಹಾಮಾರಿಗಳಿಲ್ಲ, ಎತ್ತನೋಡಿದರು ಧರ್ಮ ನ್ಯಾಯ ನೀತಿಗಳ ಜಯಕಾರ;ಆದರೆ ಕಾಲ ಕಳೆದಂತೆ ಕೌಶಲ್ಯ, ಸುಮಿತ್ರಾ, ಕೈಕೆಯಿ ಮುಪ್ಪಡರಿ ಹಣ್ಣಾದರು, ಒಬ್ಬೊಬ್ಬರಾಗಿ ಸ್ವರ್ಗ ಸೇರಿದರು; ತಾಯಂದಿರ ನೆನಪಿನಲ್ಲಿ ರಾಮನು ಕೆರೆ ಕಟ್ಟೆ, ತೆರೆದ ದಾಸೋಹ ಅರವಟ್ಟಿಗೆಗಳನ್ನು ಕಟ್ಟಿಸಿದನು; ತಂದೆ ತಾಯಿ ಮತ್ತು ಸೀತೆಯ ಹೆಸರಿನಲ್ಲಿ ಸಾಧಕರಿಗೆ, ಪ್ರಜೆಗಳಿಗೆ, ವೃದ್ಧರಿಗೆ ದಾನ, ಕೊಡಿಗೆಗಳನ್ನು ನೀಡಿದನು; ಧರ್ಮದ ಕಾರ್ಯದಲ್ಲಿ, ಪ್ರಜೆಗಳ ಸೇವೆಯಲ್ಲಿ ಪ್ರಭು ರಾಮನೂ ಸೇವಕರ ಸೇವಕನಂತೆ ಕಾಲ ಕಳೆದನು.
-ಡಾ. ಅರ್ಜುನ ಯ. ಪಂಗಣ್ಣವರ, ವಾಲ್ಮೀಕಿ ಸಾಹಿತ್ಯ ಚಿಂತಕ.
