
ತಪಸ್ವಿಯು ರಾಮನಿಗೆ ತಿಳಿಸಿದ:” ಓ ಸಾರ್ವಭೌಮನೇ,I
ಕೇಳು ನಾನು ಬಂದ ಕಾರಣ, ಹೇಳುವೆ ನಿನಗೆ; II
ಕಳಿಸಿಹನು ಮಹಾತಂದೆ ನನ್ನ ನಿನ್ನ ಬಳಿ,I
ನಾನು ಅವನ ಪುತ್ರನಾಗಿದ್ದೆ ಹಿಂದಿನ ಜನ್ಮದಲಿ, ಓ ಶತ್ರು ಸಂಹಾರಕನೆ,II
ನಾನು ಮಾಯದಿ ಹುಟ್ಟಿದವ, ಓ ನಾಯಕನೇ, I
ನಾನು ಸಾವು, ಎಲ್ಲರನು ನಾಶಪಡಿಸುವವ; II
ಮಹಾತಂದೆ ಲೋಕಗಳ ಪ್ರಭು ಕಳಿಸಿಹನುI
ನಿನಗೆ ಸಂದೇಶ ಹೀಗೆ:ʻಓ ಸ್ನೇಹಿತನೆ, II
ನೀನು ಬಂದ ಕಾರ್ಯ ಪೂರ್ಣವಾಯಿತು, ನೀನೇ ಜಗ್ದರಕ್ಷಕ;I
ನಿನ್ನ ಮಾಯದಿ ನಾಶ ಪಡಿಸಿರುವಿ ಎಲ್ಲರನು; II
ಮಹಾಸಾಗರದ ಜಲದಲ್ಲಿದ್ದು ಜನ್ಮ ಕೊಟ್ಟಿರುವೆ ಎನಗೆ ನೀನು, I
ಅನಂತ ನಾಮ ಮಹಾಸರ್ಪ ಸೃಷ್ಠಿಸಿರುವೆ;II
ಮಧು ವ ಕೈತಾಭ ನಾಮ ಜೀವಿಗಳನ್ನು ಸೃಷ್ಠಿಸಿರುವೆ,I
ಅವಗಳ ಎಲಬುಗಳು ಇಂದು ಮಹಾಪರ್ವತ ಶ್ರೇಣಿಗಳಾಗಿವೆ;II
ಸೂರ್ಯತೇಜಿ ಸ್ವರ್ಗೀಯ ಕಮಲ ಸೃಷ್ಠಿಸಿ ಅದರಲ್ಲಿ I
ನನ್ನನು ಸೃಷ್ಠಿಸಿ ನೀಡಿದೆ ಎನಗೆ ವಿಶ್ವಸೃಷ್ಠಿ ಕಾರ್ಯ;II
ವಿಶ್ವದ ಎಲ್ಲ ಜೀವಗಳನ್ನು ನೀ ವೀಕ್ಷಿಸುತಿರುವಿ,I
ನಾನು ನಾಮ ಮಾತ್ರ, ನೀನೇ ಎನ್ನ ಸಕಲ ಬಲ; II
ನೀನೇ ಅಜೇಯಿ, ಶಾಶ್ವತ ನಿಸರ್ಗ,I
ಕಾರಣ, ನೀನೇ ಎಲ್ಲ ಜೀವಿಗಳ ರಕ್ಷಕ; II
ನಿನ್ನೀ ಸದ್ಗುಣ ಸ್ವಭಾವದಿಂದಾಗಿ ರಾಮನ ರೂಪದಲಿI
ಹನ್ನೊಂದು ಸಹಸ್ರ ಸಂವತ್ಸರ ಬಾಳಿದಿ; ಈಗ ಬಂತು II
ನೀನು ಮರಳುವ ಕಾಲ, ನಶ್ವರರೊಂದಿಗೆ ನೀI
ಬದುಕಿದ ಕಾಲ ಮುಗಿಯಿತು, ಮರಳು ಮಹಾತಂದೆಯತ್ತ;II
ಓ ರಾಜನೇ, ನಿನ್ನ ಮೂಲ ಸ್ವರೂಪಕ್ಕೆ I
ಮರಳು, ಸುಖವಾಗಿರು ಮಹಾತಂದೆಯಂತೆ!” II
ಕೇಳಿ ಮಹಾತಂದೆಯ ಸಂದೇಶ ಕಾಲನI
ಮೂಲಕ ರಾಮ ಮಹಾತಂದೆಗೆ ಉತ್ತರಿಸಿದನು: II
“ಓ ಕಾಲನೇ, ನೀನು ಎನ್ನ ಬಳಿ ಬಂದ ವ I
ಮಹಾತಂದೆ ಸಂದೇಶ ತಿಳಿದಿದಕ್ಕಾಗಿ ಧನ್ಯವಾದಗಳು,II
ನಿಮ್ಮ ನುಡಿಗಳು ಎನಗೆ ಸಂತೋಷ ನೀಡಿವೆ, I
ವಿಶ್ವದ ಒಳಿತಿಗಾಗಿ ನಾನು ಹುಟ್ಟಿದ್ದು, ಸಂತೋಷ ಎನಗೆ;II
ಮಹಾತಂದೆ ಸಂದೇಶವು ಸತ್ಯವಾಗಿದೆI
ಅವರ ಇಚ್ಚೆಯಂತೆ ಮರಳುವೆ ನಾನು ಅವರ ಬಳಿಗೆ”. II
ಉತ್ತರಕಾಂಡ
ತಪಸ್ವಿ ರೂಪದಲ್ಲಿ ಬಂದ ಸಾವು ರಾಮನಿಗೆ ಬ್ರಹ್ಮನ ಸಂದೇಶ ತಿಳಿಸುವ, ರಾಮ ತಾನು ಸ್ವತಃ ವಿಷ್ಣುವಿನ ಅವತಾರ, ಅಧರ್ಮಿಗಳನ್ನು ಸಂವಹರಿಸಿ ಧರ್ಮ ಮರುಸ್ಥಾಪನೆ ಕೆಲಸ ಪೂರ್ಣ ಮಾಡಿದ ಪ್ರಯುಕ್ತ ಪುನಃ ತನ್ನ ಮೂಲ ರೂಪಕ್ಕೆ ಮರಳು ಬ್ರಹ್ಮ ನೀಡಿದ ಸಂದೇಹವನ್ನು ತಪಸ್ವಿ ತಿಳಿಸಿದ ಪ್ರಸಂಗವನ್ನು ಆದಿಕವಿ ವಾಲ್ಮೀಕಿಯು ವಿವರಿಸಿರುವರು, ಅಲ್ಲದೇ (1) ರಾಮನು ವಿಷ್ಣುವಿನ ಅವತಾರ ಮತ್ತು (2) ಜಲಸಾಗರದಲ್ಲಿದ್ದ ವಿಷ್ಣುವು ಬ್ರಹ್ಮನಿಗೆ ಜನ್ಮಕೊಟ್ಟು ವಿಶ್ವ ಸೃಷ್ಠಿ ಕಾರ್ಯ ನೀಡಿದ ಎಂಬ ಅಂಶಗಳನ್ನು ಆದಿಕವಿಯು ಹೀಗೆ ವಿವರಿಸಸಿರುವರು. ತಪಸ್ವಿಯು ರಾಮನಿಗೆ ತಿಳಿಸಿದನು:” ಓ ಸಾರ್ವಭೌಮನೇ ನಾನು ಬಂದ ಕಾರಣ ಕೇಳು ನಿನಗೆ ಹೇಳುವೆ; ಮಹಾತಂದೆಯು ನನ್ನನ್ನು ನಿನ್ನ ಬಳಿ ಕಳಿಸಿಹನು, ಹಿಂದಿನ ಜನ್ಮದಲಿ ನಾನು ಅವನ ಪುತ್ರನಾಗಿದ್ದೆನು, ನಾನು ಮಾಯದಿಂದ ಹುಟ್ಟಿದವನು, ನಾನು ಸಾವು, ಎಲ್ಲರನು ನಾಶಪಡಿಸುವವನು; ಲೋಕಗಳ ಪ್ರಭು ಮಹಾತಂದೆ (ಬ್ರಹ್ಮ) ನಿನಗೆ ಸಂದೇಶ ಹೀಗೆ ಕಳಿಸಿರುನು:ʻಓ ಸ್ನೇಹಿತನೆ, ನೀನು ಬಂದ ಕಾರ್ಯ ಪೂರ್ಣವಾಯಿತು, ನೀನೇ ಜಗ್ದರಕ್ಷಕ; ನಿನ್ನ ಮಾಯದಿಂದ ಎಲ್ಲರನು ನಾಶ ಪಡಿಸಿರುವಿ; ಮಹಾಸಾಗರದ ಜಲದಲ್ಲಿದ್ದು ನನಗೆ ನೀನು ಜನ್ಮ ಕೊಟ್ಟಿರುವೆ, ನೀನು ಅನಂತ ನಾಮ ಮಹಾಸರ್ಪ ಸೃಷ್ಠಿಸಿರುವೆ; ಮಧು ಮತ್ತು ಕೈತಾಭ ನಾಮ ಸಬಲ ಜೀವಿಗಳನ್ನು ಸೃಷ್ಠಿಸಿರುವೆ, ಅವಗಳ ಎಲಬುಗಳು ಇಂದು ಮಹಾಪರ್ವತ ಶ್ರೇಣಿಗಳಾಗಿವೆ; ಸೂರ್ಯತೇಜಿ ಸ್ವರ್ಗೀಯ ಕಮಲ ಸೃಷ್ಠಿಸಿ ಅದರಲ್ಲಿ ನನ್ನನು ಸೃಷ್ಠಿಸಿ ನೀನು ನನಗೆ ವಿಶ್ವಸೃಷ್ಠಿ ಕಾರ್ಯ ನೀಡಿದೆ; ನೀನು ವಿಶ್ವದ ಎಲ್ಲ ಜೀವಗಳನ್ನು ವೀಕ್ಷಿಸುತಿರುವಿ, ನಾನು ನಾಮ ಮಾತ್ರ, ನೀನೇ ನನ್ನ ಸಕಲ ಬಲ; ನೀನೇ ಅಜೇಯಿ, ಶಾಶ್ವತ ನಿಸರ್ಗ, ಕಾರಣ, ನೀನೇ ಎಲ್ಲ ಜೀವಿಗಳ ರಕ್ಷಕ; ನಿನ್ನೀ ಸದ್ಗುಣ ಸ್ವಭಾವದಿಂದಾಗಿ ರಾಮನ ರೂಪದಲಿ ಹನ್ನೊಂದು ಸಹಸ್ರ ಸಂವತ್ಸರ ಬಾಳಿದಿ; ನಶ್ವರರೊಂದಿಗೆ ನೀನು ಮರಳುವ ಕಾಲ ಈಗ ಬಂತು,ನೀನು ಬದುಕಿದ ಕಾಲ ಮುಗಿಯಿತು, ನೀನು ಮಹಾತಂದೆಯತ್ತ ಮರಳು; ಓ ರಾಜನೇ, ನಿನ್ನ ಮೂಲ ಸ್ವರೂಪಕ್ಕೆ ಮರಳು, ಸುಖವಾಗಿರು ಮಹಾತಂದೆಯಂತೆ!” ರಾಮನು ಕಾಲನ ಮೂಲಕ ಮಹಾತಂದೆಯ ಸಂದೇಶ ಕೇಳಿ ಮಹಾತಂದೆಗೆ ಉತ್ತರಿಸಿದನು “ ಓ ಕಾಲನೇ, ನೀನು ನನ್ನ ಬಳಿ ಬಂದು ಮಹಾತಂದೆಯ ಸಂದೇಶ ತಿಳಿದಿದಕ್ಕಾಗಿ ಧನ್ಯವಾದಗಳು, ನಿಮ್ಮ ನುಡಿಗಳು ಎನಗೆ ಸಂತೋಷ ನೀಡಿವೆ, ವಿಶ್ವದ ಒಳಿತಿಗಾಗಿ ನಾನು ಹುಟ್ಟಿದ್ದು, ನನಗೆ ಸಂತೋಷ; ಮಹಾತಂದೆ ಸಂದೇಶವು ಸತ್ಯವಾಗಿದೆ ಅವರ ಇಚ್ಚೆಯಂತೆ ನಾನು ಅವರ ಬಳಿಗೆ ಮರಳುವೆನು”. ಅವತಾರಿ ಪುರುಷನಾಗಲಿ, ಸಾಮಾನ್ಯ ಜೀವಿಯಾಗಲಿ, ಹುಟ್ಟಿದ್ದು ಸಾಯಲೇಬೇಕು, ಆದರೆ ಅವರು ಮಾಡಿದ ಕಾರ್ಯಮಾತ್ರ ನೆನಪಾಗಿ ಉಳಿಯುತ್ತದೆ ಎಂಬ ಸತ್ಯದ ಅರಿವನ್ನು ಆದಿ ತತ್ವಜ್ಞಾನಿ ವಾಲ್ಮೀಕಿಯು ಜಗಕ್ಕೆ ಸಂದೇಶ ನೀಡಿರುವರು.
-ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ.
