ರಾಮ ತಲೆತಗ್ಗಿಸಿ ಮೌನವಾಗಿ ಕುಳಿತನು….

By admin


ಚಂದ್ರನಿಗೆ ಗ್ರಹಣ ಹಿಡಿದಂತೆ ರಾಮ ತಲೆತಗ್ಗಿಸಿI
ಮೌನವಾಗಿ ಕುಳಿತಿದ್ದನ್ನು ಕಂಡು ಲಕ್ಷ್ಮಣ ನುಡಿದ: II
“ನನ್ನ ವಿಷಯದಲ್ಲಿ ದುಃಖಿಸಬೇಡಾ,ಒಳಪಟ್ಟಿರುವೆI
ಈಗಾಗಲೆ ಕಠಿಣ ಪರೀಕ್ಷೆಗೆ,ಭೂತದಲಿವೆ ಅದರ ಬೇರು, II
ನಿರ್ಭೀಡವಾಗಿ ವಧಿಸು ನನ್ನ, ಬದ್ಧನಾಗು ನಿನ್ನ ವಚನಕ್ಕೆI
ತಮ್ಮ ವಚನ ಪಾಲಿಸದವರು ಸೇರಲಿ ನರಕ! II
ಓ ಮಹಾರಾಜನೇ, ನಿನ್ನಲಿ ನನ್ನ ಬಗ್ಗೆ ವಾತ್ಸಲ್ಯವಿದ್ದರೂ,I
ನನ್ನಲಿ ಒಳ್ಳೆಯದನ್ನು ಕಂಡಿದ್ದರೂ, ವಿಮುಖನಾಗದಿರು II
ನಿನ್ನ ವಚನದಿ!”ದುಃಖಪೀಡಿತ ಮನಸ್ಸಿನಿಂದ ರಾಮ ಕರೆದನುI
ತನ್ನ ಮಂತ್ರಿಗಣ, ಗುರು, ಪುರೋಹಿತರನು; II
ತಿಳಿಸಿದವರಿಗೆ ತನ್ನ ವ ತಪಸ್ವಿ ಸಂವಾದ I
ಸಂಧರ್ಭದಲಿ ದುರ್ವಾಸಮುನಿ ಬಂದ ಸಂಗತಿ, II
ಲಕ್ಷ್ಮಣ ವಚನ ಬ್ರಷ್ಟತೆ ವಿಷಯ; ಕೇಳಿ ಎಲ್ಲರೂ ನಿಶಬ್ದರಾದರು, I
ಆದರೆ ವಸಿಷ್ಠರು ನುಡಿದರು: “ಓ ರಾಜನೇ, ತಿಳಿಯಿತು II
ನಮಗೆ ನೀನು ಲಕ್ಷ್ಮಣನಿಂದ ಬೇರ್ಪಡುವ ವಿಪತ್ತು,I
ವಿಪತ್ತು ದುಃಖ ತಂದಿದೆ ನಿನಗೆ, ವಚನ ಬ್ರಷ್ಟನಾಗಬೇಡಾ, II
ತೊರೆ ಲಕ್ಷ್ಮಣನ, ಸಾವು ಮಹಾ ಬಲಶಾಲಿ; I
ವಚನ ಪಾಲಿಸದಿದ್ದರೆ ಸದ್ಗುಣ ನಾಶವಾಗುವದು, II
ನಾಶವಾಗುವವು ಮೂರೂ ಲೋಕಗಳI
ಸಜೀವ, ನಿರ್ಜೀವ ವಸ್ತುಗಳು;II
ಓ ನರಸಿಂಹನೇ, ಲೋಕಗಳ ಕಲ್ಯಾಣಕ್ಕಾಗಿ,I
ಉಳುವಿಗಾಗಿ ತ್ಯಾಗ ಮಾಡು ಲಕ್ಷ್ಮಣನ; II
ತನ್ನ ಕರ್ತವ್ಯ ಸಂಬಂಧಿ ಮಾತುಗಳನ್ನು ಕೇಳಿದI
ರಾಮ ಸಭೀಕರ ಮಧ್ಯೆ ನುಡಿದ ಲಕ್ಷ್ಮಣನಿಗೆ: II
“ಧರ್ಮನಾಶವಾಗದಿರಲು, ಓ ಸುಮಿತ್ರೇಯ, I
ಮಾಡುವೆ ನಿನ್ನನ್ನು ಗಡಿಪಾರ, ಮರಣ ಸಮ ಅದೇಶ”. II
ಕೇಳಿ ರಾಮನ ಆದೇಶ ಲಕ್ಷ್ಮಣ ತಕ್ಷಣ ಅಳುತ್ತ ಸ್ಥಳ ತೊರೆದನು, I
ಅರಮನೆಗೆ ಮರಳದ; ಸರ್ಯು ನದಿ ದಡಕ್ಕೆ II
ಬಂದು ಲಕ್ಷ್ಮಣ, ಇಂದ್ರಿಗಳನ್ನು ತ್ಯಾಗಮಾಡಿ, I
ಕೈಮುಗಿದು ಕುಳಿತು ಮಗ್ನನಾದ ಧ್ಯಾನದಲ್ಲಿ;II
ಶ್ವಾಸಕ್ರಿಯೆಯನ್ನು ಸ್ತಬ್ಧಗೊಳಿಸಿದ ಲಕ್ಷ್ಮಣ,I
ತ್ಯಾಗಮಾಡಿದ ದೇಹವನು, ಮರಳಿದ ಬ್ರಹ್ಮ ಸತ್ವಕ್ಕೆ. II
ಉತ್ತರಕಾಂಡ

ಲಕ್ಷ್ಮಣನು ತನ್ನ ವಚನ ಬ್ರಷ್ಟತೆಗೆ ಅಣ್ಣ ರಾಮನಿಂದ ಶಿಕ್ಷೆ ಕೋರಿದ, ರಾಮನು ಪ್ರಜೆ, ಮುನಿ ಗುರುಗಳ ಸಮಕ್ಷಮದಲ್ಲಿ ಲಕ್ಷ್ಮಣನಿಗೆ ಗಡಿಪಾರು ಆದೇಶ ನೀಡಿದ ಮತ್ತು ಲಕ್ಷ್ಮಣ ತಕ್ಷಣ ಸರಯೂ ನದಿ ಬಳಿ ಬಂದು ಧ್ಯಾನದಲಿ ಕುಳಿತು ತನ್ನ ದೇಹ ತ್ಯಾಗ ಮಾಡಿದ ಘಟನೆಗಳನ್ನು ಆದಿಕವಿ ವಾಲ್ಮೀಕಿಯು ಹೀಗೆ ವಿವರಿಸಿರುವರು: ಚಂದ್ರನಿಗೆ ಗ್ರಹಣ ಹಿಡಿದಂತೆ ರಾಮ ತಲೆತಗ್ಗಿಸಿ ಮೌನವಾಗಿ ಕುಳಿತಿದ್ದನ್ನು ಕಂಡು ಲಕ್ಷ್ಮಣ ನುಡಿದನು “ಓ ಮಹಾರಾಜನೇ, ನನ್ನ ವಿಷಯದಲ್ಲಿ ದುಃಖಿಸಬೇಡಾ, ಒಳಪಟ್ಟಿರುವೆ ಈಗಾಗಲೆ ಕಠಿಣ ಪರೀಕ್ಷೆಗೆ, ಅದರ ಬೇರು ಭೂತದಲಿವೆ, ನೀನು ನನ್ನನ್ನು ನಿರ್ಭೀಡವಾಗಿ ವಧಿಸು ಮತ್ತು ನಿನ್ನ ವಚನಕ್ಕೆ ಬದ್ಧನಾಗು, ತಮ್ಮ ವಚನ ಪಾಲಿಸದವರು ನರಕ ಸೇರಲಿ! ನಿನ್ನಲಿ ನನ್ನ ಬಗ್ಗೆ ವಾತ್ಸಲ್ಯವಿದ್ದರೂ, ನನ್ನಲಿ ಒಳ್ಳೆಯದನ್ನು ಕಂಡಿದ್ದರೂ, ನಿನ್ನ ವಚನದಿಂದನೀನು ವಿಮುಖನಾಗದಿರು!” ದುಃಖಪೀಡಿತ ಮನಸ್ಸಿನಿಂದ ರಾಮನು ತನ್ನ ಮಂತ್ರಿಗಣ, ಗುರು, ಪುರೋಹಿತರನು ಕರೆದನು ಹಾಗು ಅವರಿಗೆ ದುರ್ವಾಸಮುನಿ ಬಂದದ್ದು, ತನ್ನ ಮತ್ತು ತಪಸ್ವಿ ಮಧ್ಯೆ ನಡೆದ ಸಂವಾದ ಸಂಧರ್ಭದಲಿ ಲಕ್ಷ್ಮಣನಿಂದ ನಡೆದ ವಚನ ಬ್ರಷ್ಟತೆ ವಿಷಯವನ್ನು ತಿಳಿಸಿದನು; ರಾಮನಿಂದ ವಿಷಯ ತಿಳಿದು ಎಲ್ಲರೂ ನಿಶಬ್ದರಾದರು, ಆದರೆ ವಸಿಷ್ಠರು ರಾಮನಿಗೆ ನುಡಿದರು: “ಓ ರಾಜನೇ, ನೀನು ಲಕ್ಷ್ಮಣನಿಂದ ಬೇರ್ಪಡುವ ನಿನ್ನ ವಿಪತ್ತು ನಮಗೆ ತಿಳಿಯಿತು; ನಿನಗೆ ವಿಪತ್ತು ದುಃಖವನ್ನು ತಂದಿದೆ, ನೀನು ವಚನ ಬ್ರಷ್ಟನಾಗಬೇಡಾ, ನೀನು ಲಕ್ಷ್ಮಣನನ್ನು ತೊರೆ, ಸಾವು ನಮ್ಮೆಲ್ಲರಿಗಿಂತ ಮಹಾ ಬಲಶಾಲಿ; ವಚನ ಪಾಲಿಸದಿದ್ದರೆ ಸದ್ಗುಣ ನಾಶವಾಗುವದು; ಮೂರೂ ಲೋಕಗಳ ಸಜೀವ, ನಿರ್ಜೀವ ವಸ್ತುಗಳು ನಾಶವಾಗುವವು; ನೀನು ಲೋಕಗಳ ಕಲ್ಯಾಣಕ್ಕಾಗಿ, ಅವುಗಳ ಉಳುವಿಗಾಗಿ ಲಕ್ಷ್ಮಣನ ತ್ಯಾಗ ಮಾಡು; ತನ್ನ ಕರ್ತವ್ಯ ಸಂಬಂಧಿ ಮಾತುಗಳನ್ನು ಕೇಳಿದ ರಾಮನು ಸಭೀಕರ ಮಧ್ಯೆ ಲಕ್ಷಣನಿಗೆ “ಓ ಸುಮಿತ್ರೇಯ, ಧರ್ಮನಾಶವಾಗದಿರಲು ನಾನು ನಿನ್ನನ್ನು ಗಡಿಪಾರ ಮಾಡುವೆ, ಅದು ನಿನಗೆ ಮರಣ ಸಮ ಅದೇಶ” ಎಂದು ಆದೇಶಿಸಿದನು. ರಾಮನ ಆದೇಶ ಕೇಳಿದ ಲಕ್ಷ್ಮಣನು ತಕ್ಷಣ ಅಳುತ್ತ ಸ್ಥಳ ತೊರೆದು ಅರಮನೆಗೆ ಮರಳಿದನು; ಸರ್ಯೂ ನದಿ ದಡಕ್ಕೆ ಬಂದು ಲಕ್ಷ್ಮಣ ತನ್ನ ಇಂದ್ರಿಗಳನ್ನು ತ್ಯಾಗಮಾಡಿ, ಕೈಮುಗಿದು ಕುಳಿತು ಧ್ಯಾನದಲ್ಲಿ ಮಗ್ನನಾದನು; ಶ್ವಾಸಕ್ರಿಯೆಯನ್ನು ಸ್ತಬ್ಧಗೊಳಿಸಿದ ಲಕ್ಷ್ಮಣನು ತನ್ನ ದೇಹವನು ತ್ಯಾಗಮಾಡಿದನು ಹಾಗು ಬ್ರಹ್ಮ ಸತ್ವಕ್ಕೆ ಮರಳಿದನು.
-ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ‌.