
ಲಕ್ಷ್ಮಣನ ತ್ಯಾಗ ಮಾಡಿ ರಾಮ ದುಃಖದಲಿI
ನುಡಿದ ಪ್ರಜೆ ವ ಗುರು ಮುನಿಗಳಿಗೆ: II
“ಇಂದು, ವೀರ ಭರತನಿಗೆ ಅಯೋಧ್ಯೆಯI
ಪಟ್ಟಗಟ್ಟಿ ಅರಣ್ಯಕ್ಕೆ ಹೋಗಬೇಕೆಂದು ಬಯಸಿದ್ದೇನೆ, II
ಲಕ್ಷ್ಮಣ ಹೋದ ಮಾರ್ಗದಲ್ಲಿಯೇ ಹೊರಡಲುI
ಇಂದೇ ತಡಮಾಡದೇ ಪೂರ್ವ ತಯ್ಯಾರಿ ಮಾಡಿಕೊಳ್ಳುವೆ”. II
ನಿತ್ರಾಣನಾದ ರಾಮನ ನುಡಿಗಳನ್ನು ಕೇಳಿ ಭರತI
ನುಡಿದ: “ ಸತ್ಯದ ಮೇಲೆ ಪ್ರತಿಜ್ಞೆ ಮಾಡುವೆ ನಾನು, II
ಓ ರಾಜನೇ, ನೀನಿಲ್ಲದ ರಾಜ್ಯ ನಿರಾಕರಿಸುವೆ,I
ನಾನು ಬರುವೆ ನೀನಿದ್ದಲ್ಲಿಯೇ, ನಿನ್ನೊಂದಿಗೆ; II
ಕೋಸಲರಾಜ್ಯದ ಉತ್ತರ ವ ದಕ್ಷಿಣಕ್ಕೆ ಪಟ್ಟಗಟ್ಟು I
ವೀರ ಕುಶ ವ ಲವರನ್ನು, ಶತ್ರುಘ್ನನಿಗೆ ಬರುವಂತೆಆದೇಶಿಸು; II
ತಡಮಾಡದೇ ಹೊರಡೋಣ ನಾವುI
ನಾಲ್ವರೂ ಸಹೋದರರು, ಬೇಗ ಘೋಷಿಸು.” II
ಕೇಳಿ ಭರತ ಅರಿಕೆ, ಪ್ರಜೆಗಳು ಹೌಹಾರಿದರು, I
ದುಃಖದ ವಾತಾವರಣ ಹಬ್ಬಿತು, ವಸಿಷ್ಠರು ನುಡಿದರು: II
“ಓ ರಾಮನೇ, ದುಃಖೀಸಬೇಡಾ, ಅರಿತುಕೋ ಜನರ ಬಯಕೆ, I
ಅವರನ್ನು ದುಃಖಕ್ಕೆ ತಳ್ಳಬೇಡಾ, ಪೂರೈಸು II
ಜನರ ಬಯಕೆ”; ಕೇಳಿ ವಸಿಷ್ಠರ ಮಾತು ರಾಮ, ಜನರಿಗೆ ನುಡಿದ:I
“ನನ್ನಿಂದ ನೀವು ಬಯಸುವದೇನು?” ಕೇಳಿ ರಾಮನII
ಪ್ರಶ್ನೆ ಜನರು ನುಡಿದರು: “ ನೀನು ನಮ್ಮನು ತೊರೆಯುವದಾದರೆ, I
ಕರೆದುಕೊಂಡು ಹೋಗು ನಿನ್ನೊಂದಿಗೆ, ನೀನು ನಿನ್ನ II
ಪ್ರಜೆಗಳನ್ನು ಪ್ರೀತಿಸುವದಾದರೆ, ಕರೆದೊಯ್ಯು ನಮ್ಮನು I
ನಮ್ಮ ಹೆಂಡತಿ ಮಕ್ಕಳೊಂದಿಗೆ ನಿನ್ನೊಂದಿಗೆ; II
ಅರಣ್ಯ ಬರಲಿ, ಸಾಗರ ಬರಲಿ, ಮರಳುಗಾಡ ಬರಲಿ I
ಬರುವೆವು ನಾವು ನಿನ್ನೊಂದಿಗೆ,ತೊರೆಯಬೇಡಾ ನಮ್ಮನು ನೀ; II
ಓ ರಾಜನೇ, ಇದು ನಮ್ಮ ಮಹಾ ಬಯಕೆ,I
ಅದಲ್ಲಿಯೇ ನಮ್ಮ ಸುಖ ಸಂತೋಷ ಅಡಗಿದೆ.” II
ಕೇಳಿ ಜನರ ಅರಿಕೆ, ರಾಮ ಉತ್ತರಿಸಿದ ಜನರಿಗೆ: I
“ಹಾಗೆ ಆಗಲಿ” ಎನ್ನುತ ರಾಮ ಅದೇಕ್ಷಣದಲಿ ತೀರ್ಮಾನಿಸಿದ,II
ರಾಮನು ದಕ್ಷಿಣ ಕೋಸಲಕ್ಕೆ ಕುಶನ ಪಟ್ಟಗಟ್ಟಿದI
ಲವನನ್ನು ಉತ್ತರ ಕೋಸಲಕ್ಕೆ ಪಟ್ಟಗಟ್ಟಿದ; II
ಇಬ್ಬರೂ ರಾಜಕುಮಾರರನು ಮಡಿಲಲ್ಲಿ ಕೂಡ್ರಿಸಿಕೊಂಡುI
ರಾಮ ಕುಳಿತ ಅಯೋಧ್ಯಾ ಸಿಂಹಾನದ್ಮೇಲೆ; II
ಕುದುರೆಗಳನ್ನು ರಥಗಳನ್ನು ಆನೆ, ಆಭರಣಗಳನ್ನು,I
ಸೈನ್ಯವನ್ನು ಸಮನಾಗಿ ಹಂಚಿದ ಕುಶ ಲವರಲ್ಲಿ ರಾಮ; II
ಅವರನ್ನು ಅವರವರ ರಾಜಧಾನಿಗಳಿಗೆI
ಜನರೊಂದಿಗೆ ಕಳುಹಿಸಿದ ರಾಮ ಸಂತೋಷದಿ; II
ತಕ್ಷಣ ಅಯೋಧ್ಯಗೆ ಬರುವಂತೆ ಶತ್ರುಘ್ನನ್ನುI
ಕರೆ ತರಲು ದೂತರನ್ನು ಕಳಿಸಿದ ರಾಮ. II
ಉತ್ತರಕಾಂಡ
ರಾಮನು ರಾಜ್ಯ ತೊರೆದು ಲಕ್ಷ್ಮಣ ಬಳಿ ಹೋಗುವ ನಿರ್ಧಾರ ತಿಳಿದು ಭರತ ಮತ್ತು ಪ್ರಜೆಗಳು ರಾಮನೊಂದಿಗೆ ಹೊರಡಲು ಹಠ ಮಾಡಿದ ಹಾಗು ಲವ, ಕುಶರನ್ನು ಕೋಸಲ ರಾಜ್ಯ ಇಬ್ಭಾಗಿಸಿ ಅವರನ್ನು ಪ್ರತ್ಯೇಕ ರಾಜ್ಯಕೆಕೆ ಪಟ್ಟಗಟ್ಟಿದ ಮತ್ತು ಶತ್ರುಘ್ನಿಗೂ ಅಯೋಧಯೆಗ ಬರುವಂತೆ ತಿಳಿಸಿದ ಘಟನೆಗಳನ್ನುಆದಿಕವಿ ವಾಲ್ಮೀಕಿಯು ಹೀಗೆ ವಿವರಿಸಿರುವರು: ಲಕ್ಷ್ಮಣನನ್ನು ತ್ಯಾಗ ಮಾಡಿ ರಾಮನು ದುಃಖದಲಿ ಪ್ರಜೆ ಮತ್ತು ಗುರು ಮುನಿಗಳಿಗೆ ಅರುಹಿದನು “ ಇಂದು, ವೀರ ಭರತನಿಗೆ ಅಯೋಧ್ಯೆಯ ಪಟ್ಟಗಟ್ಟಿ ಅರಣ್ಯಕ್ಕೆ ಹೋಗಬೇಕೆಂದು ಬಯಸಿದ್ದೇನೆ, ಲಕ್ಷ್ಮಣ ಹೋದ ಮಾರ್ಗದಲ್ಲಿಯೇ ಹೊರಡಲು ಇಂದೇ ತಡಮಾಡದೇ ಪೂರ್ವ ತಯ್ಯಾರಿ ಮಾಡಿಕೊಳ್ಳುವೆ”. ನಿತ್ರಾಣನಾದ ರಾಮನ ನುಡಿಗಳನ್ನು ಕೇಳಿ ಭರತನು “ಓ ರಾಜನೇ, ನಾನು ಸತ್ಯದ ಮೇಲೆ ಪ್ರತಿಜ್ಞೆ ಮಾಡುವೆ, ನಾನು ನೀನಿಲ್ಲದ ರಾಜ್ಯವನ್ನು ನಿರಾಕರಿಸುವೆನು;ನೀನಿದ್ದಲ್ಲಿಯೇ, ನಿನ್ನೊಂದಿಗೆ ನಾನು ಬರುವೆನು; ಕೋಸಲರಾಜ್ಯದ ಉತ್ತರ ಮತ್ತು ದಕ್ಷಿಣಕ್ಕೆ ವೀರ ಕುಶ ಮತ್ತು ಲವರನ್ನು ಪಟ್ಟಗಟ್ಟು, ಶತ್ರುಘ್ನನಿಗೆ ಅಯೋಧ್ಯೆಗೆ ಬರುವಂತೆ ಆದೇಶಿಸು; ತಡಮಾಡದೇ ನಾವು ನಾಲ್ವರೂ ಸಹೋದರರು ಹೊರಡೋಣ, ಬೇಗ ಘೋಷಿಸು.” ಎಂದು ರಾಮನಲ್ಲಿ ಕೋರಿದನು; ಭರತನ ಅರಿಕೆ ಕೇಳಿ ಪ್ರಜೆಗಳು ಹೌಹಾರಿದರು, ದುಃಖದ ವಾತಾವರಣ ಹಬ್ಬಿತು, ಈ ಮಧ್ಯೆ ವಸಿಷ್ಠರು ರಾಮನಿಗೆ ಹೇಳಿದರು “ ಓ ಪ್ರೀಯ ರಾಮನೇ, ದುಃಖೀಸಬೇಡಾ, ಜನರ ಬಯಕೆ ಅರಿತುಕೋ, ಅವರನ್ನು ದುಃಖಕ್ಕೆ ತಳ್ಳಬೇಡಾ, ಜನರ ಬಯಕೆ ಪೂರೈಸು.” ವಸಿಷ್ಠರ ಮಾತು ರಾಮನು ಜನರಿಗೆ ಲಾಲಿಸಿದನು “ ನನ್ನಿಂದ ನೀವು ಬಯಸುವದೇನು?” ರಾಮನ ಪ್ರಶ್ನೆಯನ್ನು ಕೇಳಿದ ಜನರು “ ನೀನು ನಮ್ಮನು ತೊರೆಯುವದಾದರೆ ನಮ್ಮನ್ನೂ ನಿನ್ನೊಂದಿಗೆ ಕರೆದುಕೊಂಡು ಹೋಗು, ನೀನು ನಿನ್ನ ಪ್ರಜೆಗಳನ್ನು ಪ್ರೀತಿಸುವದಾದರೆ, ನಮ್ಮನು ನಮ್ಮ ಹೆಂಡತಿ ಮಕ್ಕಳೊಂದಿಗೆ ನಿನ್ನೊಂದಿಗೆ ಕರೆದೊಯ್ಯು; ಅರಣ್ಯ ಬರಲಿ, ಸಾಗರ ಬರಲಿ, ಮರಳುಗಾಡ ಬರಲಿ ನಾವು ನಿನ್ನೊಂದಿಗೆ ಬರುವೆವು, ನಮ್ಮನು ನೀನು ತೊರೆಯಬೇಡಾ; ಇದು ನಮ್ಮ ಮಹಾ ಬಯಕೆ, ಅದಲ್ಲಿಯೇ ನಮ್ಮ ಸುಖ ಸಂತೋಷ ಅಡಗಿದೆ” ಎಂದು ಹಲಬಿದರು. ಜನರ ಅರಿಕೆಯನ್ನು ಕೇಳಿದ ರಾಮನು “ಹಾಗೆ ಆಗಲಿ”ಎಂದು ಅವರಿಗೆ ಉತ್ತರಿಸಿದ ಹಾಗು ರಾಮನು ಅದೇ ಕ್ಷಣದಲಿ ದಕ್ಷಿಣ ಕೋಸಲಕ್ಕೆ ಕುಶನನ್ನು, ಲವನನ್ನು ಉತ್ತರ ಕೋಸಲಕ್ಕೆ ಪಟ್ಟಗಟ್ಟಿದನು ಹಾಗು ಇಬ್ಬರೂ ರಾಜಕುಮಾರರನು ಮಡಿಲಲ್ಲಿ ಕೂಡ್ರಿಸಿಕೊಂಡು ರಾಮನು ಅಯೋಧ್ಯಾ ಸಿಂಹಾನದ್ಮೇಲೆ ಕುಳಿತನು; ರಾಮನು ಕುಶ ಲವರಲ್ಲಿ ಕುದುರೆಗಳನ್ನು ರಥಗಳನ್ನು ಆನೆ, ಆಭರಣಗಳನ್ನು, ಸೈನ್ಯವನ್ನು ಸಮನಾಗಿ ಹಂಚಿದನು; ರಾಮನು ಸಂತೋಷದಿಂದ ಅವರನ್ನು ಅವರವರ ರಾಜಧಾನಿಗಳಿಗೆ ಜನರೊಂದಿಗೆ ಕಳುಹಿಸಿದನು; ತಕ್ಷಣ ಅಯೋಧ್ಯಗೆ ಬರುವಂತೆ ಶತ್ರುಘ್ನನ್ನು ಕರೆ ತರಲು ರಾಮನು ದೂತರನ್ನು ಕಳಿಸಿದನು.
-ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ.
