
ವಿಜಯಪುರ:ಆಧುನಿಕ ಸಂಕೀರ್ಣವಾದ ಮಾನವ ಸಮಾಜಕ್ಕೆ ಸಮಾಜಶಾಸ್ತçದ ಜ್ಞಾನ ತುಂಬಾ ಅಗತ್ಯವಾಗಿದ್ದು ಪ್ರಸ್ತುತವಾಗಿ ಸಮಾಜದ ಎಲ್ಲಾ ಆಯಾಮಗಳ ಆದ್ಯತೆಗಳನ್ನು, ಸವಾಲುಗಳನ್ನು ಅವಲೋಕಿಸಿ ಜ್ಞಾನ, ಕೌಶಲ್ಯಾಧಾರಿತ, ಉದ್ಯೋಗ ಆಧಾರಿತವಾಗಿ ಸಮಾಜಶಾಸ್ತç ಪಠ್ಯಪುಸ್ತಕ ರಚನೆಯಾಗಬೇಕು ಎಂದು ಕರ್ನಾಟಕ ರಾಜ್ಯ ಅಕ್ಕಮಹಾದೇವಿ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಬಿ.ಕೆ. ತುಳಸಿಮಾಲಾ ಅಭಿಪ್ರಾಯಪಟ್ಟರು.

ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ವಿಶ್ವವಿದ್ಯಾಲಯದ ಜಿ.ಎಫ್.ಎ.ಟಿ.ಎಮ್ ಸಭಾಂಗಣದಲ್ಲಿ ವಿಶ್ವವಿದ್ಯಾಲಯ ಮತ್ತು ಸಮಾಜಶಾಸ್ತçದ ಅಧ್ಯಾಪಕರ ಸಂಘ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ “ಸಮಾಜಶಾಸ್ತç ಪಠ್ಯಕ್ರಮ” ಎಂಬ ವಿಷಯವನ್ನು ಒಂದು ದಿನದ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು ಸಮಾಜಶಾಸ್ತç ಸಮಾಜವಿಜ್ಞಾನಗಳ ತಾಯಿ ಮಾತ್ರವಲ್ಲ ವಿಜ್ಞಾನ ಕ್ಷೇತ್ರಕ್ಕೂ ಸಮಾಜಶಾಸ್ತçದ ಜ್ಞಾನ ತುಂಬಾ ಅಗತ್ಯವಾಗಿದೆ. ಹೊಸದಾಗಿ ರಚನೆಯಾಗುವ ಸಮಾಜಶಾಸ್ತç ಪಠ್ಯಕ್ರಮದಲ್ಲಿ ವಿದ್ಯಾರ್ಥಿಗಳ ಸ್ಪರ್ಧಾತ್ಮಕ ಜಗತ್ತಿಗೆ ಪೂರಕವಾದ ಅಧ್ಯಯನಗಳಿರಲಿ, ಪ್ರಾಯೋಗಿಕ ಅಧ್ಯಯನಕ್ಕೆ ಮಹತ್ವ ಕೊಡಬೇಕು, ಆಧುನಿಕ ತಂತ್ರಜ್ಞಾನ, ಕೌಶಲ್ಯಗಳನ್ನು ಅಧ್ಯಯನದ ಕಲಿಕೆಯಲ್ಲಿ ವಿದ್ಯಾರ್ಥಿಗಳು ಅಳವಡಿಸಿಕೊಳ್ಳುವಂತಾಗಬೇಕು ಎಂದು ತಿಳಿಸಿದರು.
ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳು ಹಾಗೂ ನಿವೃತ್ತ ಪ್ರಾಂಶುಪಾಲರಾದ ಪ್ರೊ. ರಾಘವೇಂದ್ರ ಗುಡಗುಂಟಿ ಅವರು ಸಮಾಜಶಾಸ್ತç ವಿಷಯದ ಪಠ್ಯಕ್ರಮ ರಚನೆಯ ಸ್ವರೂಪ ಕುರಿತು ಉಪನ್ಯಾಸ ನೀಡಿ ಸಮಾಜಶಾಸ್ತç ವಿಷಯವು ಕೇವಲ ಪರೀಕ್ಷಾ ದೃಷ್ಟಿಯಿಂದ ಅಲ್ಲದೆ ಜ್ಞಾನದ ದೃಷ್ಟಿಯಿಂದ ತುಂಬಾ ಮಹತ್ವದ್ದಾಗಿದೆ. ಸಮಾಜದ ರಾಜಕೀಯ, ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ ಮುಂತಾದ ಕ್ಷೇತ್ರಗಳಲ್ಲಿನ ಮನುಷ್ಯನ ಸಾಧನೆ, ಚಟುವಟಿಕೆಗಳು, ಸಂಘರ್ಷಗಳು, ಪರಿವರ್ತನೆಗಳು, ಸಮಸ್ಯೆಗಳು ಹಾಗೂ ಅವುಗಳಿಗೆ ಪರಿಹಾರಗಳು ಮುಂತಾದವುಗಳ ಬಗ್ಗೆ ವೈಜ್ಞಾನಿಕವಾಗಿ ಸಮಗ್ರ ಅಧ್ಯಯನ ಮಾಡಿ ವಿಶ್ಲೇಷಿಸುವ ಸಮಾಜಶಾಸ್ತç ಪ್ರಸ್ತುತವಾಗಿ ಎಲ್ಲಾ ಕ್ಷೇತ್ರಗಳಲ್ಲಿ ತುಂಬಾ ಮಹತ್ವ ಪಡೆದುಕೊಳ್ಳುತ್ತಿದೆ. ಇಂತಹ ಸಂದರ್ಭದಲ್ಲಿ ಪ್ರಸ್ತುತ ಜ್ಞಾನ ಜಗತ್ತಿಗೆ ಪೂರಕವಾಗುವಂತೆ ಮತ್ತು ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ಎಲ್ಲಾ ರೀತಿಯಿಂದ ಅನುಕೂಲವಾಗುವಂತೆ ಪಠ್ಯ ರಚನೆಯಾಗಬೇಕೆಂದು ಸಲಹೆ ನೀಡಿದರು.
ಕಾರ್ಯಗಾರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಕುಲಸಚಿವ ಶಂಕರಗೌಡ ಸೋಮನಾಳ ಅವರು ಮಾತನಾಡಿ ಸಮಾಜಶಾಸ್ತçವು ಇಂದು ಎಲ್ಲಾ ಕ್ಷೇತ್ರಗಳಲ್ಲಿ ಪ್ರಾಮುಖ್ಯತೆ ಪಡೆದುಕೊಳ್ಳುತ್ತಿದ್ದು ವ್ಯಕ್ತಿಯ ವ್ಯಕ್ತಿತ್ವ, ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಸಮಾಜಶಾಸ್ತç ಜ್ಞಾನ ಅತ್ಯವಶ್ಯಕವಾಗಿದೆ. ಸಮಾಜಶಾಸ್ತç ಕೇವಲ ಬೋಧನಾ ವಿಷಯವಾಗಿ ಮಾತ್ರವಲ್ಲ ಆಯ್.ಎ.ಎಸ್, ಕೆ.ಎ.ಎಸ್. ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಮುಖ ಅಧ್ಯಯನ ವಿಷಯವಾಗಿರುವುದು ತುಂಬಾ ಹೆಮ್ಮೆಯ ಸಂಗತಿ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಮಾಜವಿಜ್ಞಾನಗಳ ಡೀನ್‌ರಾದ ಪ್ರೊ. ಶಾಂತದೇವಿ ಟಿ. ಅವರು ಮಾತನಾಡಿ ಸಮಾಜಶಾಸ್ತç ಅಧ್ಯಯನದಲ್ಲಿ ಪ್ರಾಯೋಗಿಕ ಅಧ್ಯಯನ ಹೆಚ್ಚು ಹೆಚ್ಚು ನಡೆಯಬೇಕು. ಆಧುನಿಕ ಮಾಹಿತಿ ತಂತ್ರಜ್ಞಾನದ ಕೌಶಲ್ಯಗಳನ್ನು ಅಳವಡಿಸಿಕೊಂಡು ಆಧುನಿಕ ಜಗತ್ತಿಗೆ ಸಮಾಜಶಾಸ್ತçದ ಜ್ಞಾನ ವಿಸ್ತರಿಸಿಕೊಳ್ಳುತ್ತಾ ತೆರೆದುಕೊಳ್ಳಬೇಕಾಗಿದೆ ಎಂಧು ತಿಳಿಸಿದರು.
ಸಮಾರಂಭದಲ್ಲಿ ನಿವೃತ್ತಿ ಹೊಂದಿದ ಅಧ್ಯಾಪಕರಾದ ಡಾ. ಚಿದಾನಂದ ಕುಳಗೇರಾ ಮತ್ತು ಬಿ.ಬಿ. ಹಚಡದ್ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು. ಡಾ. ಮಹೇಶ ಗಂವ್ಹಾರ ಅವರು ಕಾರ್ಯಗಾರ ಕುರಿತು ಪ್ರಾಸ್ತಾವಿಕ ಮಾತನಾಡಿದರು. ಡಾ. ಅಶ್ವಿನಿ ಪಾಟೀಲ ನಿರ್ವಹಿಸಿದರು. ಈ ಸಂದರ್ಭದಲ್ಲಿ ಡಾ. ಭಾರತಿ ಹೊಸಟ್ಟಿ, ಪ್ರೊ. ನಾನಾಗೌಡ ಎಚ್, ಡಾ. ಪ್ರಜ್ಞಾ ಕೆ.ವಿ., ಡಾ. ಹಾಜಿ ಬೇಗಂ, ಶ್ರೀನಿವಸರಡ್ಡಿ, ರಾಜೀವ್ ಎಮ್, ರೇಣುಕಾ ರಡ್ಡಿ, ಹಸೀನಾ ಬೇಗಂ, ರಾಮಚಂದ್ರ ದಿಕ್ಷಿತ್, ರಾಘವೇಂದ್ರ ಹಾರಣಗೇರಾ, ಧನರಾಜ ರಾಠೋಡ್, ಡಾ. ಸಬೀಯಾ, ಎಸ್. ಆರ್. ಕಲ್ಯಾಣಶೆಟ್ಟಿ, ರತ್ನವ್ವ ಹಾದಿಮನಿ, ಡಾ. ಸುಜ್ಞಾನಿ, ಡಾ. ಸುನೀತಾ ಜಾದವ, ಶಿವಲೀಲಾ ಹಿರೇಮಠ, ಶಾಲಿನಿ, ಶೋಭಾ, ಜಯಶ್ರೀ ಮುಂತಾದವರು ಉಪಸ್ಥಿತರಿದ್ದರು.
