
ಯಾದಗಿರಿ : ಪ್ರತಿಯೊಬ್ಬ ವಸತಿ ರಹಿತರ ಆರೊಗ್ಯ ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದ್ದು, ಈ ಕೇಂದ್ರಕ್ಕೆ ಸಕಲ ಸೌಕರ್ಯ ಕಲ್ಪಿಸಲು ಸದಾ ಸಿದ್ದ ಎಂದು ಶಹಾಪುರ ನಗರಸಭೆ ಪೌರಾಯುಕ್ತ ರಮೇಶ ಬಡಿಗೇರ ಅವರು ಅಭಿಪ್ರಾಯಪಟ್ಟರು.
ಶಹಾಪುರ ನಗರದಲ್ಲಿನ ವಸತಿ ರಹಿತರ ಆಶ್ರಯ ಕೇಂದ್ರದಲ್ಲಿ ನಗರ ವಸತಿ ರಹಿತರ ಮೇಲ್ವಿಚಾರಣಾ ಸಮಿತಿ ಸಭೆ ಹಾಗೂ ಆರೊಗ್ಯ ತಪಾಸಣೆ ಶಿಬಿರವನ್ನು ಸಸಿಗೆ ನೀರು ಹಾಕುವುದರ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಯಾರೇ ವಸತಿ ರಹಿತರು ಹೊಸದಾಗಿ ದಾಖಲಾದಲ್ಲಿ ಅವರ ಮಾಹಿತಿ ಪೊಲಿಸ್ ಠಾಣೆಗೆ ವರದಿ ಮಾಡಲು ತಿಳಿಸಿದರು.
ಸಮುದಾಯ ಸಂಘಟನಾಧಿಕಾರಿಗಳಾದ ಅಶೋಕ ಬಿಲಗುಂದ ರವರು ಮಾತನಾಡಿ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಡೇ-ನಲ್ಮ ಅಡಿಯಲ್ಲಿ ಸ್ಥಾಪಿತವಾದ ಈ ಕೇಂದ್ರ ವಸತಿ ರಹಿತರು ಸದ್ಬಳಕೆ ಮಾಡಿಕೊಳ್ಳಲು ತಿಳಿಸಿದರು.
ಭಾರತಾಂಬೆ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ದಿ ಸಂಸ್ಥೆಯ ಸಹಯೋಗದೊಂದಿಗೆ ನಡೆದ ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿಯಾದ ಭೀಮಾಶಂಕರ ಬೆನಕನಹಳ್ಳಿ ರವರು ಸಂಸ್ಥೆ ನಡೆದು ಬಂದದಾರಿ ವಿವರಿಸುತ್ತಾ ಇಲ್ಲಿಯವರೆಗೆ ಜಿಲ್ಲೆಯಲ್ಲಿ 5000ಕ್ಕೂ ಹೆಚ್ಚು ನಿರಾಶ್ರಿತರಿಗೆ ಆಶ್ರಯ ನೀಡಿದ ಜಿಲ್ಲೆಯ ಪ್ರತಿಷ್ಠಿತ ಸಂಸ್ಥೆಯಾಗಿದ್ದು, ಎಲೆಮರೆಕಾಯಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ನಗರ ಅಭಿಯಾನ ವ್ಯವಸ್ಥಾಪಕರಾದ ಗುರು ತಳವಾರ, ಭೀಮಾಶಂಕರ ಕಟ್ಟಿಮನಿ, ಸಮುದಾಯ ಸಂಪನ್ಮೂಲ ವ್ಯಕ್ತಿಗಳಾದ ಕವಿತಾ, ಸಂಗೀತಾ, ಯುವ ನಾಯಕರಾದ ರಾಮು, ಪ್ರದೀಪ ಅಣಬಿ, ಸುನಿಲ ಹಳಿಸಗರ, ಭೀಮರಾಯ ಬಡಿಗೇರ, ಕಾಶಿರಾಜ ಹಳಿಸಗರ, ಭೀಮು ಕನ್ಯೆಕೋಳೂರು, ಭೀಮರಾಯ ಕಟ್ಟಿಮನಿ ಕೇಂದ್ರದ ಕೇರಟೇಕರ್ ಗಳಾದ ಮಲ್ಲಪ್ಪ ರೋಜಾ, ಮಲ್ಲಿಕಾರ್ಜುನ, ಮರೆಮ್ಮ ಕಟ್ಟಿಮನಿ ಉಪಸ್ಥಿತರಿದ್ದರು.
