ಕುರಿಗಾರರಿಗೆ ಗುರುತಿನ ಚೀಟಿ, ಬಂದೂಕು ಲೈಸೆನ್ಸ್ ನೀಡುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದ ಮುಖ್ಯಮಂತ್ರಿಗಳು, ಹರ್ಷ ವ್ಯಕ್ತಪಡಿಸಿದ ಮಾಳಪ್ಪ ಕೆಂಭಾವಿ

By admin


ಶಹಾಪುರ : ಇತ್ತೀಚಿಗೆ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು,ಸಿಇಓ ಸಭೆಯನ್ನು ವಿಧಾನಸಭೆಯ ಸಭಾಂಗಣದಲ್ಲಿ ಮುಖ್ಯಮಂತ್ರಿಗಳು ಕರೆದಿದ್ದು, ಸಂಚಾರಿ ಕುರಿಗಾರರಿಗೆ
ಬಂದೂಕು ಲೈಸೆನ್ಸ್ ಮತ್ತು ಗುರುತಿನ ಚೀಟಿ ಕೊಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ. ಕುರಿಗಾರರ ಸಮಸ್ಯೆಗಳನ್ನು ತಿಳಿದುಕೊಂಡ ಮುಖ್ಯಮಂತ್ರಿಗಳು ಬಂದೂಕು ಲೈಸೆನ್ಸ್ ಮತ್ತು ಗುರುತಿನ ಚೀಟಿಯನ್ನು ನೀಡಿರುವುದು ಕೆಂಭಾವಿಯ ಶ್ರೀ ರೇವಣಸಿದ್ದೇಶ್ವರ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾದ ಮಾಳಪ್ಪ ಕೆಂಭಾವಿ ಹರ್ಷ ವ್ಯಕ್ತಪಡಿಸಿದ್ದಾರೆ. ಪತ್ರಿಕಾ ಹೇಳಿಕೆ ನೀಡಿದ ಅವರು, ಇತ್ತೀಚಿಗೆ ಬೆಂಗಳೂರಿನಲ್ಲಿ ಕುರಿಗಾರರ ಸಂವಾದ ಕಾರ್ಯಕ್ರಮದಲ್ಲಿ ಕುರಿಗಾರರ ಸಮಸ್ಯೆಗಳನ್ನು ಆಲಿಸಿ ಈ ಕುರಿತು ಜಿಲ್ಲಾಧಿಕಾರಿಗಳಿಗೆ ಆದೇಶಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅರಣ್ಯ ಪ್ರದೇಶದಲ್ಲಿ ಅಧಿಕಾರಿಗಳು ಕುರಿಗಾರರ ಮೇಲೆ ದೌರ್ಜನ್ಯಗೈಯುತ್ತಿದ್ದರು. ಈ ನಿರ್ಧಾರದಿಂದ ಸಂಚಾರಿ ಕುರಿಗಾರರಿಗೆ ಅನುಕೂಲವಾಗಲಿದ್ದು, ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.