ದೇವರ ಹೆಸರಿನಲ್ಲಿ ಅನಾಗರಿಕ ಆಚರಣೆ ಸಲ್ಲದು

By admin

Contents
ಖ್ಯಾತ ‌ಲೇಖಕರು:-ಮುಕ್ಕಣ್ಣ ಕರಿಗಾರಮಕ್ಕಳು ಆಗದ ದಂಪತಿಗಳು ದೇವ ದೇವಿಯರಿಗೆ ಹರಕೆ ಹೊರುವುದು ಸಹಜ.ದೇವ ದೇವಿಯರು ಮಕ್ಕಳಾಗದವರಿಗೆ ಸಂತಾನ ಭಾಗ್ಯ ಕರುಣಿಸುವುದು ದೇವತಾ ಕಾರುಣ್ಯ ವಿಶೇಷ.ತಮಗೆ ಮಕ್ಕಳನ್ನು ಕರುಣಿಸಿದ ದೇವ ದೇವಿಯರಿಗೆ ಭಕ್ತರುಗಳು ಭಕ್ತಿಪೂರ್ವಕವಾಗಿ ವಿಶೇಷ ಸೇವೆ- ಪೂಜೆ ಸಲ್ಲಿಸಲಿ.ಆದರೆ ಮಕ್ಕಳನ್ನು ಮೇಲಿನಿಂದ ಎಸೆಯುವುದು ಮಾತ್ರ ಕ್ರೌರ್ಯ.ಇದಕ್ಕೆ ದೇವಸ್ಥಾನ ಮಂಡಲಿಗಳವರು ಅವಕಾಶ ಕೊಡಬಾರದು.ಮಕ್ಕಳಾಗದವರಿಗೆ ಸಂತಾನಭಾಗ್ಯ ಕರುಣಿಸಿ ಪವಾಡ ತೋರಿಸಿದ ದೇವರಿಗೆ ತನ್ನ ದೇವಸ್ಥಾನದ ಮೇಲಿನಿಂದ ಮಗುವನ್ನು ಎಸೆದು ಪವಾಡ ತೋರಿಸುವ ಅಗತ್ಯ ಇರುತ್ತದೆಯೆ ? ಯಾವ ದೇವರೂ ಇಂತಹ ಆಗ್ರಹಮಾಡುವುದಿಲ್ಲ.ಭಕ್ತರ ಅಜ್ಞಾನ ಅರ್ಚಕರುಗಳ ಮೂರ್ಖತನಗಳು ಇಂತಹ ಕೃತ್ಯಗಳ ಕಾರಣ.ಒಂದು ವೇಳೆ ಮೇಲಿನಿಂದ ಎಸೆದಾಗ ಎಳೆಮಗು ಹೆದರಿ ಹೃದಯಾಘಾತಕ್ಕೆ ತುತ್ತಾಗಿ ಸತ್ತರೆ? ಅಥವಾ ಆಯ ತಪ್ಪಿ ಕಂಬಳಿಯಲ್ಲಿ ಬೀಳುವ ಬದಲು ನೆಲಹಾಸು ಬಂಡೆಗೆ ಬಿದ್ದರೆ ? ಇಂತಹ ಘಟನೆಗಳೂ ನಡೆದಿವೆ.ಹೆತ್ತವರ ಹೆಡ್ಡತನ,ಅರ್ಚಕವರ್ಗದ ಮೂರ್ಖತನ ಎಳೆಕಂದಮ್ಮಗಳ ಬದುಕುಗಳೊಂದಿಗೆ ಚೆಲ್ಲಾಟವಾಡುತ್ತಿದೆ.ಸರಕಾರವು ಇಂತಹ ಕೃತ್ಯಗಳನ್ನು ನಿಷೇಧಿಸಬೇಕು.ಇಂತಹ ಅನಾಗರಿಕ ಆಚರಣೆಗಳನ್ನು ಪ್ರೋತ್ಸಾಹಿಸುವ ಅರ್ಚಕ ಮತ್ತು ದೇವಸ್ಥಾನ ಮಂಡಳಿಯ ಸದಸ್ಯರುಗಳಿಗೆ ಸೆರೆಮನೆ ಶಿಕ್ಷೆ ವಿಧಿಸಬೇಕು. ನಾವು ಪೀಠಾಧ್ಯಕ್ಷರಾಗಿರುವ ನಮ್ಮ ಮಹಾಶೈವ ಧರ್ಮಪೀಠದ ಶ್ರೀಕ್ಷೇತ್ರ ಕೈಲಾಸದ ಕ್ಷೇತ್ರೇಶ್ವರ ವಿಶ್ವೇಶ್ವರ ಶಿವನು ಸಹ ಸಂತಾನಭಾಗ್ಯ ಕರುಣಿಸುತ್ತ ಲೋಕಪ್ರಸಿದ್ಧನಾಗಿದ್ದಾನೆ.ನಾವು ಮಹಾಶೈವ ಧರ್ಮಪೀಠದಲ್ಲಿ ‘ ಶಿವೋಪಶಮನ ಕಾರ್ಯ’ ಪ್ರಾರಂಭಿಸಿ ಕೇವಲ ಎರಡು ವರ್ಷಗಳಾಗಿವೆ.ಎರಡು ವರ್ಷಗಳ ಈ ಅಲ್ಪ ಅವಧಿಯಲ್ಲಿಯೇ ಮಕ್ಕಳಾಗದೆ ಇದ್ದ ಮುವ್ವತ್ತು ಜನ ದಂಪತಿಗಳು ಸಂತಾನಭಾಗ್ಯ ಪಡೆದಿದ್ದಾರೆ.ನಮ್ಮ ಮಠಕ್ಕೆ ಸಂತಾನಾರ್ಥಿಗಳಾಗಿ ಬರುವವರಲ್ಲಿ ನೂರಕ್ಕೆ 95% ರಷ್ಟು ಜನರಿಗೆ ಮಕ್ಕಳಾಗಿವೆ.ಸಂತಾನಾರ್ಥಿ ದಂಪತಿಗಳು 21 ದಿನಗಳ ಕಾಲ ಮದ್ಯ ಮಾಂಸ ಸೇವನೆಯನ್ನು ಬಿಟ್ಟು ,ಶಿವಪೂಜೆ ಮಾಡಬೇಕು ಎನ್ನುವ ಒಂದೇ ನಿಬಂಧನೆಯ ಹೊರತು ಮತ್ತಾವ ನಿಯಮಗಳನ್ನು ನಾವು ವಿಧಿಸುವುದಿಲ್ಲ.ಈ ನಿಯಮ ಪಾಲಿಸದೆ ಇದ್ದ 5% ಜನರಿಗೆ ಮಕ್ಕಳಾಗಿಲ್ಲ.ಮದುವೆಯಾಗಿ 20 ವರ್ಷಗಳಾಗಿಯೂ ಮಕ್ಕಳಾಗದೆ ಇದ್ದವರಿಗೆ,ವೈದ್ಯರು ಮಕ್ಕಳಾಗುವುದಿಲ್ಲ ಎಂದು ಹೇಳಿದ ದಂಪತಿಗಳಿಗೆ ವಿಶ್ವೇಶ್ವರ ಶಿವನು ಮಕ್ಕಳನ್ನು ಕರುಣಿಸಿದ್ದಾನೆ.ಹಾಗಂತ ನಾವು ವಿಶ್ವೇಶ್ವರನ ಅನುಗ್ರಹದಿಂದ ಮಕ್ಕಳಾದವರಿಗೆ ಯಾವುದೇ ಹರಕೆ ತೀರಿಸಿ ಎನ್ನುವುದಿಲ್ಲ. ಮಕ್ಳಳನ್ನು ಕೊಡುವವನು ವಿಶ್ವೇಶ್ವರ ಶಿವ ,ಮಕ್ಕಳನ್ನು ಪಡೆಯುವವರು ಶಿವನ ಭಕ್ತರು.ಇದರಲ್ಲಿ ನಮ್ಮದೇನಿರುತ್ತದೆ ? ಇದು ನಮ್ಮ ನಿಲುವು.

ಖ್ಯಾತ ‌ಲೇಖಕರು:-ಮುಕ್ಕಣ್ಣ ಕರಿಗಾರ

ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನಲ್ಲಿ ದೇವರ ಹೆಸರಿನಲ್ಲಿ ಅನಾಗರಿಕ ಕೃತ್ಯ ಒಂದು ನಡೆದಿದೆ.ಹೊಳೆಹಂಗರಗಿ ಗ್ರಾಮದ ಕಲ್ಮೇಶ್ವರ ದೇವಸ್ಥಾನದ ಅರ್ಚಕ ಮಗು ಒಂದನ್ನು ದೇವಸ್ಥಾನದ ಮೇಲಿನಿಂದ ಎಸೆದಿದ್ದು ಮಗುವಿನ ತಂದೆ ತಾಯಿಗಳು ಕಂಬಳಿಯಲ್ಲಿ ಮಗುವನ್ನು ಹಿಡಿದುಕೊಂಡಿದ್ದಾರೆ.ಕಲ್ಮೇಶ್ವರ ದೇವಸ್ಥಾನದ ಅರ್ಚಕ ಕಲ್ಮೇಶ‌ ಕಟಗೇರಿ ಈ ಘನಕಾರ್ಯವನ್ನು ತನ್ನ ಫೇಸ್ ಬುಕ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾನಂತೆ!( ಕನ್ನಡಪ್ರಭ ಬುಧವಾರ 17,07.2024 ಪುಟ 14). ಇದು ಖಂಡನಾರ್ಹ ಕೃತ್ಯ ಮಾತ್ರವಲ್ಲ,ಅನಾಗರಿಕ ಆಚರಣೆ ಕೂಡ.ನಾಗರಿಕ ಸಮಾಜ ಇಂತಹ ಕೃತ್ಯಗಳನ್ನು ಖಂಡಿಸಲೇಬೇಕು.

ಗ್ರಾಮೀಣ ಪ್ರದೇಶದ ಜನರಲ್ಲಿ ಹಲವು ಮೂಢನಂಬಿಕೆಗಳಿವೆ.ಮಕ್ಕಳಾಗದ ದಂಪತಿಗಳು ತಮಗೆ ಮಗುವಾದರೆ ಆ ಮಗುವನ್ನು ದೇವಸ್ಥಾನದ ಮೇಲಿಂದ ಎಸೆಯುವ ಹರಕೆ ಹೊರುವುದು ಕೂಡ ಅಂತಹ ಮೂಢ ನಂಬಿಕೆಗಳಲ್ಲಿ ಒಂದು.ಇದು ಕಲ್ಮೇಶ್ವರ ದೇವಸ್ಥಾನದಲ್ಲಿ ಮಾತ್ರವಲ್ಲ,ಇತರ ಕೆಲವು ದೇವಸ್ಥಾನಗಳಲ್ಲೂ ಆಚರಣೆಯಲ್ಲಿರುವ ಸಾಮಾಜಿಕ ಅನಿಷ್ಟ,ಮೌಢ್ಯದ ಪರಾಕಾಷ್ಠೆ.

ಮಕ್ಕಳು ಆಗದ ದಂಪತಿಗಳು ದೇವ ದೇವಿಯರಿಗೆ ಹರಕೆ ಹೊರುವುದು ಸಹಜ.ದೇವ ದೇವಿಯರು ಮಕ್ಕಳಾಗದವರಿಗೆ ಸಂತಾನ ಭಾಗ್ಯ ಕರುಣಿಸುವುದು ದೇವತಾ ಕಾರುಣ್ಯ ವಿಶೇಷ.ತಮಗೆ ಮಕ್ಕಳನ್ನು ಕರುಣಿಸಿದ ದೇವ ದೇವಿಯರಿಗೆ ಭಕ್ತರುಗಳು ಭಕ್ತಿಪೂರ್ವಕವಾಗಿ ವಿಶೇಷ ಸೇವೆ- ಪೂಜೆ ಸಲ್ಲಿಸಲಿ.ಆದರೆ ಮಕ್ಕಳನ್ನು ಮೇಲಿನಿಂದ ಎಸೆಯುವುದು ಮಾತ್ರ ಕ್ರೌರ್ಯ.ಇದಕ್ಕೆ ದೇವಸ್ಥಾನ ಮಂಡಲಿಗಳವರು ಅವಕಾಶ ಕೊಡಬಾರದು.ಮಕ್ಕಳಾಗದವರಿಗೆ ಸಂತಾನಭಾಗ್ಯ ಕರುಣಿಸಿ ಪವಾಡ ತೋರಿಸಿದ ದೇವರಿಗೆ ತನ್ನ ದೇವಸ್ಥಾನದ ಮೇಲಿನಿಂದ ಮಗುವನ್ನು ಎಸೆದು ಪವಾಡ ತೋರಿಸುವ ಅಗತ್ಯ ಇರುತ್ತದೆಯೆ ? ಯಾವ ದೇವರೂ ಇಂತಹ ಆಗ್ರಹಮಾಡುವುದಿಲ್ಲ.ಭಕ್ತರ ಅಜ್ಞಾನ ಅರ್ಚಕರುಗಳ ಮೂರ್ಖತನಗಳು ಇಂತಹ ಕೃತ್ಯಗಳ ಕಾರಣ.ಒಂದು ವೇಳೆ ಮೇಲಿನಿಂದ ಎಸೆದಾಗ ಎಳೆಮಗು ಹೆದರಿ ಹೃದಯಾಘಾತಕ್ಕೆ ತುತ್ತಾಗಿ ಸತ್ತರೆ? ಅಥವಾ ಆಯ ತಪ್ಪಿ ಕಂಬಳಿಯಲ್ಲಿ ಬೀಳುವ ಬದಲು ನೆಲಹಾಸು ಬಂಡೆಗೆ ಬಿದ್ದರೆ ? ಇಂತಹ ಘಟನೆಗಳೂ ನಡೆದಿವೆ.ಹೆತ್ತವರ ಹೆಡ್ಡತನ,ಅರ್ಚಕವರ್ಗದ ಮೂರ್ಖತನ ಎಳೆಕಂದಮ್ಮಗಳ ಬದುಕುಗಳೊಂದಿಗೆ ಚೆಲ್ಲಾಟವಾಡುತ್ತಿದೆ.ಸರಕಾರವು ಇಂತಹ ಕೃತ್ಯಗಳನ್ನು ನಿಷೇಧಿಸಬೇಕು.ಇಂತಹ ಅನಾಗರಿಕ ಆಚರಣೆಗಳನ್ನು ಪ್ರೋತ್ಸಾಹಿಸುವ ಅರ್ಚಕ ಮತ್ತು ದೇವಸ್ಥಾನ ಮಂಡಳಿಯ ಸದಸ್ಯರುಗಳಿಗೆ ಸೆರೆಮನೆ ಶಿಕ್ಷೆ ವಿಧಿಸಬೇಕು.

ನಾವು ಪೀಠಾಧ್ಯಕ್ಷರಾಗಿರುವ ನಮ್ಮ ಮಹಾಶೈವ ಧರ್ಮಪೀಠದ ಶ್ರೀಕ್ಷೇತ್ರ ಕೈಲಾಸದ ಕ್ಷೇತ್ರೇಶ್ವರ ವಿಶ್ವೇಶ್ವರ ಶಿವನು ಸಹ ಸಂತಾನಭಾಗ್ಯ ಕರುಣಿಸುತ್ತ ಲೋಕಪ್ರಸಿದ್ಧನಾಗಿದ್ದಾನೆ.ನಾವು ಮಹಾಶೈವ ಧರ್ಮಪೀಠದಲ್ಲಿ ‘ ಶಿವೋಪಶಮನ ಕಾರ್ಯ’ ಪ್ರಾರಂಭಿಸಿ ಕೇವಲ ಎರಡು ವರ್ಷಗಳಾಗಿವೆ.ಎರಡು ವರ್ಷಗಳ ಈ ಅಲ್ಪ ಅವಧಿಯಲ್ಲಿಯೇ ಮಕ್ಕಳಾಗದೆ ಇದ್ದ ಮುವ್ವತ್ತು ಜನ ದಂಪತಿಗಳು ಸಂತಾನಭಾಗ್ಯ ಪಡೆದಿದ್ದಾರೆ.ನಮ್ಮ ಮಠಕ್ಕೆ ಸಂತಾನಾರ್ಥಿಗಳಾಗಿ ಬರುವವರಲ್ಲಿ ನೂರಕ್ಕೆ 95% ರಷ್ಟು ಜನರಿಗೆ ಮಕ್ಕಳಾಗಿವೆ.ಸಂತಾನಾರ್ಥಿ ದಂಪತಿಗಳು 21 ದಿನಗಳ ಕಾಲ ಮದ್ಯ ಮಾಂಸ ಸೇವನೆಯನ್ನು ಬಿಟ್ಟು ,ಶಿವಪೂಜೆ ಮಾಡಬೇಕು ಎನ್ನುವ ಒಂದೇ ನಿಬಂಧನೆಯ ಹೊರತು ಮತ್ತಾವ ನಿಯಮಗಳನ್ನು ನಾವು ವಿಧಿಸುವುದಿಲ್ಲ.ಈ ನಿಯಮ ಪಾಲಿಸದೆ ಇದ್ದ 5% ಜನರಿಗೆ ಮಕ್ಕಳಾಗಿಲ್ಲ.ಮದುವೆಯಾಗಿ 20 ವರ್ಷಗಳಾಗಿಯೂ ಮಕ್ಕಳಾಗದೆ ಇದ್ದವರಿಗೆ,ವೈದ್ಯರು ಮಕ್ಕಳಾಗುವುದಿಲ್ಲ ಎಂದು ಹೇಳಿದ ದಂಪತಿಗಳಿಗೆ ವಿಶ್ವೇಶ್ವರ ಶಿವನು ಮಕ್ಕಳನ್ನು ಕರುಣಿಸಿದ್ದಾನೆ.ಹಾಗಂತ ನಾವು ವಿಶ್ವೇಶ್ವರನ ಅನುಗ್ರಹದಿಂದ ಮಕ್ಕಳಾದವರಿಗೆ ಯಾವುದೇ ಹರಕೆ ತೀರಿಸಿ ಎನ್ನುವುದಿಲ್ಲ. ಮಕ್ಳಳನ್ನು ಕೊಡುವವನು ವಿಶ್ವೇಶ್ವರ ಶಿವ ,ಮಕ್ಕಳನ್ನು ಪಡೆಯುವವರು ಶಿವನ ಭಕ್ತರು.ಇದರಲ್ಲಿ ನಮ್ಮದೇನಿರುತ್ತದೆ ? ಇದು ನಮ್ಮ ನಿಲುವು.

ದೇವರ ದಯೆಯಿಂದ ಮಕ್ಕಳನ್ನು ಪಡೆದವರು ದೇವರುಗಳಿಗೆ ಬೆಳ್ಳಿ ಕಣ್ಣುಗಳನ್ನು ಮಾಡಿಸಬಹುದು,ಬೆಳ್ಳಿ ತೊಟ್ಟಿಲು ನೀಡಬಹುದು,ಮಗುವಿನ ತೂಕದ ಸಕ್ಕರೆ ದೇವಸ್ಥಾನಕ್ಕೆ ನೀಡಬಹುದು,ಅನುಕೂಲಸ್ಥರು ಮಗುವಿನ ತುಲಾಭಾರ ಮಾಡಿ ಆ ಹಣವನ್ನು ದೇವಸ್ಥಾನಕ್ಕೆ ನೀಡಬಹುದು,ಅನ್ನದಾಸೋಹ ಮಾಡಿಸಬಹುದು,ಶ್ರೀಮಂತರು ದೇವಸ್ಥಾನಕ್ಕೆ ಅವಶ್ಯಕವಿರುವ ಯಾವುದೇ ದೇಣಿಗೆ- ಕಾಣಿಕೆ ನೀಡಬಹುದು ಆದರೆ ಮಕ್ಕಳನ್ನು ದೇವಸ್ಥಾನದ ಮೇಲಿನಿಂದ ಎಸೆಯುವುದು ಮಾತ್ರ ತಪ್ಪು,ಅನಾಗರಿಕ ಆಚರಣೆ.