
ಯಾದಗಿರಿ ರೈಲ್ವೆ ನಿಲ್ದಾಣಕ್ಕೆ ಕಲಬುರಗಿ-ಬೆಂಗಳೂರು ವಂದೇ ಭಾರತ್ ಎಕ್ಸ್ಪ್ರೇಸ್ ರೈಲು (22231/22232) ನಿಲುಗಡೆಯ ವಿಚಾರವಾಗಿ ಜಿಲ್ಲೆಯ ಜನರ ವಿಶ್ವಾಸ ಜೋತೆಗೆ ಚಲ್ಲಾಟವಾಡುತ್ತಿರುವ ರೈಲ್ವೆ ಇಲಾಖೆಯ ನಡೆಯನ್ನು ತಿರ್ವವಾಗಿ ಖಂಡಿಸಿ ಪತ್ರಿಕಾ ಹೇಳಿಕೆ ನೀಡಿರುವ ಕರವೇ ಜಿಲ್ಲಾಧ್ಯಕ್ಷರಾದ ಟಿ.ಎನ್.ಭೀಮುನಾಯಕರವರು
ಯಾದಗಿರಿ ರೈಲ್ವೆ ನಿಲ್ದಾಣದ ಕಲಬುರಗಿ-ಬೆಂಗಳೂರು ವಂದೇ ಭಾರತ್ ಎಕ್ಸ್ಪ್ರೇಸ್ ರೈಲು ನಿಲುಗಡೆಗೆ ಮತ್ತು ಇನ್ನೂ ಅನೇಕ ಪ್ರಮುಖ ವಾರದ ರೈಲುಗಳು ಹಾಗೂ ಪ್ರತಿನಿತ್ಯದ ರೈಲುಗಳು ನಮ್ಮ ಜಿಲ್ಲೆಯಲ್ಲಿ ನಿಲುಗಡೆಯಾಗಬೇಕು ಮತ್ತು ಯಾದಗಿರಿ ರೈಲ್ವೆ ನಿಲ್ದಾಣವು ಸಿ ಗ್ರೇಡ್ ನಿಂದ ಬಿ ಗ್ರೇಡಗೆ ಮೇಲ್ದರ್ಜೆಗೆ ಏರಿಸಬೇಕು ಹಾಗೂ ಕೇಲವು ಮೂಲಭೂತ ಸೌಕರ್ಯ ಒದಗಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿ ಮಾರ್ಚ 12ರಂದು ಯಾದಗಿರಿ ರೈಲ್ವೆ ನಿಲ್ದಾಣದಲ್ಲಿ ಪ್ರತಿಭಟನೆ ಮಾಡಲಾಗಿತ್ತು ಎಂದು ಹೇಳಿದರು
ಏಚ್ಚೇತ್ತುಕೊಂಡ ಸಂಭAಧಪಟ್ಟ ರೈಲ್ವೆ ಅಧಿಕಾರಿಗಳು ಈ ಕೂಡಲೇ ಮೇಲಧಿಕಾರಿಗಳ ಗಮನಕ್ಕೆ ತಂದು ಕಲಬುರಗಿ-ಬೆಂಗಳೂರು ವಂದೇ ಭಾರತ್ ಎಕ್ಸ್ಪ್ರೇಸ್ ರೈಲು ನಿಲುಗಡೆಗೆ ಕ್ರಮವಹಿಸುತ್ತೇವೆ ನಿಮ್ಮ ಬೇಡಿಕೆಗಳನ್ನು ಇಡೇರಿಸುವುದಾಗಿ ತಿಳಿಸಿದರು
ಅದರಂತೆ ರೈಲ್ವೆ ಕೇಂದ್ರ ಇಲಾಖೆಯು ವಂದೇ ಭಾರತ್ ಎಕ್ಸ್ಪ್ರೇಸ್ ರೈಲು (20-07-2024) ನಿಲುಗಡೆಯಾವುದೆಂದು ತಿಳಿಸಿ ಮತ್ತೆ ದಿನಾಂಕ 18-07-2024ರಂದು ರದ್ದುಗೊಳಿಸುವುದಾಗಿ ತಿಳಿಸಿರುವುದು ಮತ್ತು ಹಲವುಬಾರಿ ಜಿಲ್ಲೆಗೆ ಅನ್ಯಾಯವಾಗುತ್ತಿರುವುದು ನೋಡಿದರೆ ಜಿಲ್ಲೆಯ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೋರತೆಯೇ ಕಾರಣವೆಂದು ನೇರವಾಗಿ ಆರೋಪಿಸಿದರು,
ಈಗಲಾದರೂ ಜನಪ್ರತಿನಿಧಿಗಳು ಏಚ್ಚೆತ್ತುಕೊಂಡು ಸಂಭAದಪಟ್ಟ ರೈಲ್ವೆ ಅಧಿಕಾರಿಗಳು ಜಿಲ್ಲೆಯನ್ನು ಕಡೆಗಣಿಸುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ರೈಲು ನಿಲುಗಡೆಗಡೆ ಪಾರದರ್ಶಕವಾಗಿ ಮುಂದೆಯಾಗಬೇಕೆAದು ಹೇಳಿದರು
ಈ ಒಂದು ರೈಲ್ವೆ ಇಲಾಖೆಯ ವಿಳಂಬ ನೀತಿಯನ್ನು ಕರವೇ ತೀರ್ವವಾಗಿ ವಿರೋಧಿಸುತ್ತದೆ ಆದಕಾರಣ ವಂದೇ ಭಾರತ್ ಎಕ್ಸ್ಪ್ರೇಸ್ ರೈಲು ಮತ್ತು ಇನ್ನೂ ಅನೇಕ ಪ್ರತಿನಿತ್ಯದ, ಪ್ರಮುಖ ವಾರದ ರೈಲುಗಳು ನಿಲ್ಲಿಸುವಂತೆ ಒತ್ತಾಯಿಸಿ
ಜುಲೈ 22ರಂದು ಯಾದಗಿರಿ ರೈಲ್ವೆ ನಿಲ್ದಾಣದಲ್ಲಿ ರೈಲು ತಡೆದು ಪ್ರತಿಭಟಣೆ ಮಾಡಲಾಗುವುದೆಂದು ಎಚ್ಚರಿಸಿದರು,
ಈ ಸಂಧರ್ಭದಲ್ಲಿ ಕರವೇ ಮುಖಂಡರಾದ ಮಲ್ಲು ಮಾಳಿಕೇರಿ, ಸಿದ್ದುನಾಯಕ ಹತ್ತಿಕುಣಿ, ವಿಶ್ವರಾಧ ದಿಮ್ಮೆ, ಅಂಬ್ರೇಶ ಹತ್ತಿಮನಿ, ಸಂತೋಷಕುಮಾರ ನಿರ್ಮಲ್ಕರ್, ವಿಶ್ವರಾಜ್ ಹೊನಿಗೇರಾ, ಸುರೇಶ ಬೆಳಗುಂದಿ, ಕಾಶಿನಾಥ್ ನಾನೇಕ, ಉಪಸ್ಥಿತರಿದ್ದರು
