ಬಾಪುಗೌಡ ನಗರದ ಲೇಔಟ್ ಎರಡೆರಡು ಬಾರಿ ಉದ್ಘಾಟನೆ, ತೆರಿಗೆ ಹಣ ಪೋಲು: ಆರೋಪ

By admin
ಶಹಪುರ -ನಗರಸಭೆ ವ್ಯಾಪ್ತಿಯಲ್ಲಿ ಬರುವ ಐಡಿಎಸ್ಎಂಟಿ ಲೇ ಔಟ್ ಎರಡೆರಡು ಸಾರಿ ಉದ್ಘಾಟನೆ ಆಗುತ್ತಿರುವುದು ಏಕೆ ಎನ್ನುವುದು ಗೊತ್ತಾಗುತ್ತಿಲ್ಲ. ಈಗಾಗಲೇ ಅದೇ ಸ್ಥಳದಲ್ಲಿ ಕೆಲವು ದಿನಗಳ ಹಿಂದೆ ಉಸ್ತುವಾರಿ ಸಚಿವರು ಕಲ್ಲು ಹಾಕಿ ಉದ್ಘಾಟನೆ ಮಾಡಿದ್ದಾರೆ. ಜುಲೈ 20 ರಂದು ಮತ್ತೆ ಲೇಔಟ್ ಉದ್ಘಾಟನೆ ಮಾಡುತ್ತಿರುವುದು ಸಾರ್ವಜರಿಕರ ತೆರಿಗೆ ಹಣದಿಂದ. ಇದು ಎಷ್ಟರ ಮಟ್ಟಿಗೆ ನ್ಯಾಯ ಎಂದು ಬಿಜೆಪಿ ನಗರ ಮಂಡಲ ಅಧ್ಯಕ್ಷರಾದ ಚಂದ್ರಶೇಖರ ಯಾಳಗಿ ಆರೋಪಿಸಿದ್ದಾರೆ.
ಈ ಸಂದರ್ಭದಲ್ಲಿ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿಕೆ ನೀಡಿರುವ ಚಂದ್ರಶೇಖರ್ ಯಾಳಗಿ,
ಸಚಿವರಾದ ಶರಣಬಸಪ್ಪಗೌಡ ದರ್ಶನಾಪುರ ಕ್ಷೇತ್ರದ ಅಭಿವೃದ್ಧಿ ಕಡೆ ಗಮನ ಕೊಡದೆ, ಕಾಂಗ್ರೆಸ್ ಸರಕಾರದ ದುರಾಡಳಿತವನ್ನು, ಭ್ರಷ್ಟಾಚಾರವನ್ನು ಮುಚ್ಚಿ ಹಾಕಲು ಇಂತಹ ಉದ್ಘಾಟನೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ. ಒಂದೇ ಕಾರ್ಯಕ್ರಮವನ್ನು ಎರಡೆರಡು ಸಾರಿ ಉದ್ಘಾಟನೆ ಮಾಡುವುದರಿಂದ ಸಾರ್ವಜನಿಕರ ಹಣ ಪೋಲಾಗುವುದು ಎಷ್ಟರಮಟ್ಟಿಗೆ ಸರಿ ಎಂದು ಕಿಡಿಕಾರಿದರು.