ಡೆಂಗಿ ಜ್ವರ ಹರಡದಂತೆ ತಡಿಬಿಡಿ ಗ್ರಾಮದಲ್ಲಿ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಿದ ನೀವು ಮಲ್ಲಿಕಾರ್ಜುನ್ ಸಂಗ್ವಾರ್

By admin
ವಡಗೇರಾ :
ಮಳೆಗಾಲದಲ್ಲಿ ಹೆಚ್ಚು ನೀರು ಸಂಗ್ರಹಿಸುವುದರಿಂದ ಒಂದೇ ಸ್ಥಳದಲ್ಲಿ ನೀರು ಸಂಗ್ರಹಿಸುವುದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇದೆ.ನೀರು
 ಬದಲಿಸಬೇಕು ಯ.ಸ್ವಚ್ಛತೆ ಕಾಪಾಡಿ ಸಾಂಕ್ರಾಮಿಕ ರೋಗಗಳು ಬಾರದಂತೆ ಮುಂಜಾಗ್ರತೆ ವಹಿಸಬೇಕೆಂದು  ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿಕಾರ್ಜುನ ಸಂಗ್ವಾರ  ಹೇಳಿದರು.ತಾಲ್ಲೂಕಿನ ತಡಿಬಿಡಿ ಗ್ರಾಮಕ್ಕೆ ಭೇಟಿ ನೀಡಿ ವಿವಿಧ ಬಡಾವಣೆಗಳಲ್ಲಿ ಸಂಚರಿಸಿ, ಮನೆ ಮನೆ ಭೇಟಿ ನೀಡಿ ಸ್ವಚ್ಛತೆ ವ್ಯವಸ್ಥೆ ಪರಿಶೀಲಿಸಿದರು.
ಸಾರ್ವಜನಿಕರು ತಮ್ಮ ಮನೆಗಳಲ್ಲಿ ಪದೇಪದೇ ನೀರನ್ನು ಬದಲಿಸಬೇಕು ಚಿಕ್ಕ ಮಕ್ಕಳು ಗರ್ಭಿಣಿಯರು ತಾಯಂದಿರು ನೀರನ್ನು ಕಾಯಿಸಿ ಕುಡಿಯಬೇಕು ಚರಂಡಿ ನೀರುಗಳನ್ನು ಸ್ವಚ್ಛಗೊಳಿಸಿ ಸೊಳ್ಳೆಗಳು ಬಾರದಂತೆ ಮುಂಜಾಗ್ರತೆ ವಹಿಸಬೇಕು ಎಂದು ಗ್ರಾಮಸ್ಥರಿಗೆ ಸ್ವಚ್ಛತೆ ಅರಿವು ಮೂಡಿಸಿದರು.
ಈ ವೇಳೆ ಆರೋಗ್ಯ ಸಿಬ್ಬಂದಿಗಳು, ಗ್ರಾಮ ಪಂಚಾಯಿತಿ ಅಧ್ಯಕ್ಷ ಉಮಾರೆಡ್ಡಿ, ಪಿಡಿಒ ಗೋವಿಂದ್ ರಾಥೋಡ್, ಆಶಾ ಕಾರ್ಯಕರ್ತೆಯರು, ಟಿಐಇಸಿ ದುರ್ಗೇಶ್ ಹಾಗೂ ಆರೋಗ್ಯ ಸಿಬ್ಬಂದಿಗಳು, ಗ್ರಾಮದ ಮುಖಂಡರು ಇದ್ದರು.
ಡೆಂಗೇ ಜ್ವರ ಹೆಚ್ಚುತ್ತಿರುವ ಪರಿಣಾಮ ಗ್ರಾಮದಲ್ಲಿ ಸಾರ್ವಜನಿಕರು ಸ್ವಚ್ಛತೆಗೆ ಆದ್ಯತೆ ಕೊಡಬೇಕು, ಮನೆಯ ಸುತ್ತಮುತ್ತ ಪರಿಸರವನ್ನು ಸ್ವಚ್ಛತವಾಗಿ ಇಟ್ಟುಕೊಳ್ಳಬೇಕು. ಮಳೆಗಾಲ ಮುಗಿಯುವವರೆಗೂ ಕೂಡ ನೀರು ಸಂಗ್ರಹವಾಗದಂತೆ ಕ್ರಮ ವಹಿಸಬೇಕು. ನೀರು ಸಂಗ್ರಹವಾಗಿ ಒಂದೇ ಸ್ಥಳದಲ್ಲಿ ನಿಲ್ಲುವುದರಿಂದ  ಸಾಂಕ್ರಾಮಿಕ ರೋಗಗಳು ಹರಡುವ ಸಂಭವವಿರುತ್ತದೆ. ಇದರಿಂದ ಗ್ರಾಮಸ್ಥರು ಎಚ್ಚರಿಕೆ ವಹಿಸಬೇಕು. ಮಕ್ಕಳು ಹಾಗೂ ವಯಸ್ಕರ ಬಗ್ಗೆ ಗಮನ ಹರಿಸಬೇಕು.
-ಶಿವುಕುಮಾರ 
ಜಿಲ್ಲಾ  ಸಂಯೋಜಕರು 
 ಸ್ವಚ್ಛ ಭಾರತ್ ಅಭಿಯಾನ ಯಾದಗಿರಿ.