
ಖ್ಯಾತ ಲೇಖಕರು:– ಶ್ರೀಶೈಲ ಬಿರಾದಾರ ನಾಗನಟಗಿ
ಸೋಲಿಲ್ಲದ ಸರ್ದಾರ ಬಿರುದಾಂಕಿತ ಶ್ರೀ ಮಲ್ಲಿಕಾರ್ಜುನ ಖರ್ಗೆಜೀಯವರು ತಮ್ಮ ಸುಧೀರ್ಘ ಅವಧಿ ರಾಜಕೀಯ ಅಧಿಕಾರದಲ್ಲಿದ್ದರು ಯಾವುದೇ ದರ್ಪ ದೌಲತ್ತು ತೊರದೆ ಸರ್ವರಲ್ಲು ಸಮಧಾನ ಮತ್ತು ಸರಳತೆಯಿಂದ ವರ್ತಿಸುವ ಸಹನಾ ಮೂರ್ತಿ, ಸದಾ ತಂಗಾಳಿಯಂತೆ ಹಿತವಾಗಿ ಬಾಳಿದವರು, ಅಧಿಕಾರ ಸ್ಥಾನಮಾನಗಳಿಗಾಗಿ ಹಠಮಾಡಿ ಪಕ್ಷದ ವಿರುದ್ಧ ಬಂಡಾಯ ಹೇಳುವದು ಒತ್ತಟ್ಟಿಗಿರಲಿ, ಕನಸು ಮನಸಲ್ಲು ತುಸು ಅಸಮಾಧಾನವನ್ನು ವ್ಯಕ್ತಪಡಿಸದೆ,ಪಕ್ಷ ಕೊಟ್ಟ ಜವಾಬ್ದಾರಿಗಳನ್ನು ಪ್ರಮಾಣಿಕವಾಗಿ ನಿರ್ವಹಿಸಿದ ಕಾಂಗ್ರೆಸಿನ ನಿಜ ಕಟ್ಟಾಳು ಗಾಂಧಿ ಕುಟುಂಬದ ನಿಷ್ಠೆಗೆ ಪಾತ್ರರಾಗಿದ್ದಾರೆ, ಸ್ವಾತಂತ್ರ್ಯಕ್ಕಾಗಿ ಹೋರಾಡಿ ಸುದೀರ್ಘಕಾಲ ದೇಶದ ಆಡಳಿತವನ್ನು ನಡೆಸಿದ ಐತಿಹಾಸಿಕ ಕಾಂಗ್ರೆಸ್ ಪಕ್ಷದ ಆಧ್ಯಕ್ಷರಾಗದ ಮೇಲೆ ಸತತ ಸೋಲುಗಳಿಂದ ಕಂಗೆಟ್ಟಿರುವ ಪಕ್ಷಕ್ಕೆ ಗೆಲುವಿನ ನಗೆಬಿರುವಂತೆ ಮಾಡಿದ ಅನುಭವಿ ರಾಜಕಾರಣಿ.

ಶ್ರೀಯುತರು 1942 ಜಲೈ 21 ರಂದು ಬಿದರ ಜಿಲ್ಲೆಯ ಬಾಲ್ಕಿ ತಾಲೂಕಿನ ವಡವಟ್ಟಿ ಗ್ರಾಮದ ಅಸ್ಪೃಶ್ಯ ದಲಿತ ಸಮುದಾಯದ ಶ್ರೀ ಮಾಪಣ್ಣ ಮತ್ತು ಸಾಬವ್ವ ದಂಪತಿಗಳ ಮಗನಾಗಿ ಜನಸಿದರು, ಸುಮಾರು ಐದಾರು ವರ್ಷದ ಬಾಲಕನಾಗಿರುವಾಗ ರಜಾಕಾರರ ದಾಳಿಗೆ ಬೆಂಕಿಗಾವುತಿಯಾದ ಗ್ರಾಮದ ಹಲವು ಗುಡಿಸಲುಗಳಲ್ಲಿ ಶ್ರೀ ಮಾಪಣ್ಣ ಖರ್ಗೆಯವರ ಗುಡಿಸಲು ಒಂದಾಗಿತ್ತು, ಈ ಅವಗಡದಲ್ಲಿ ಖರ್ಗೆ ತಾಯಿ ಮತ್ತು ಸಹೋದರಿ ಬೆಂಕಿಯಲ್ಲಿ ಬೆಂದು ಹೋಗುತ್ತಾರೆ, ಇದರಿಂದ ತುಂಬ ನೊಂದುಕೊಂಡ ಖರ್ಗೆ ಕುಟುಂಬ ರಜಕಾರರ ದಬ್ಬಾಳಿಕೆಯಿಂದ ಜೀವ ಉಳಿಸಿಕೊಳ್ಳಲು ಹುಮಾನಾಬಾದ್ ತಾಲೂಕಿನ ನಿಂಬೂರು ಗ್ರಾಮಕ್ಕೆ ಬಂದು ಸಂಬಂಧಿಕರ ಮನೆಯಲ್ಲಿ ಕೆಲವು ಕಾಲ ಉಳಿದು ತದನಂತರ ಗುಲ್ಬರ್ಗಕ್ಕೆ ಬಂದು ಎಮ್ ಎಸ್ ಕೆ ಮಿಲ್ಲ್ ನಲ್ಲಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ, ಹಿಗಾಗಿ ಕಲಬುರ್ಗಿಯೆ ಅವರ ಊರಾಗುವದು,ಕಲಬುರ್ಗಿಯ ನೂತನ ವಿಧ್ಯಾಲಯದಲ್ಲಿ ಪ್ರಾರ್ಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಮರಾಠಿಯಲ್ಲಿ ಮುಗಿಸಿ ಸೇಠ್ ಶಂಕರಲಾಲ್ ಲಾವೋಟಿ ಲಾಲಾ ಕಾಲೇಜಿನಲ್ಲಿ ಕಾನೂನು ಪದವಿ ಪಡೆದು , ನ್ಯಾಯವಾದಿ ಶ್ರೀ ಶಿವರಾಜ ಪಾಟೀಲ್ ರಲ್ಲಿ ಜೂನಿಯರ್ ವಕೀಲರಾಗಿ ವೃತ್ತಿಯನ್ನು ಆರಂಭಿದರು, ಕಾರ್ಮಿಕ ಸಂಘಟನೆಯ ಮೂಲಕ ಕಾರ್ಮಿಕ ಹೋರಾಟಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ, ಹೋರಾಟಗಳು ಅವರನ್ನು ರಾಜಕಿಯಕ್ಕೆ ಸೆಳೆಯುವಂತೆ ಮಾಡುತ್ತದೆ 1969ರಲ್ಲೇ ಗ್ರಹಸ್ಥಾಶ್ರಮಕ್ಕೂ ಮತ್ತು ಕಾಂಗ್ರೆಸ್ ಗು ಪಾದಾರ್ಪಣೆ ಮಾಡುತ್ತಾರೆ.

1972 ರಲ್ಲಿ ಎಸ್ ಸಿ ಮೀಸಲು ಕ್ಷೇತ್ರವಾದ ಗುರುಮಿಟ್ಕಲ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಟಿಕೆಟ್ ಕೊಡಿಸಿ ಗೆಲ್ಲಿಸುವಲ್ಲಿ ಅಂದಿನ ರಾಜ್ಯಸಭೆಯ ಸದಸ್ಯರಾಗಿದ್ದ ನೇಹರು ಕುಟುಂಬದ ಆಪ್ತ ಹೈದ್ರಾಬಾದ್ ಕರ್ನಾಟಕದ ಗಾಂಧಿ ಶ್ರೀ ಕೊಲೂರು ಮಲ್ಲಪ್ಪಾಜಿಯವರ ಪಾತ್ರ ಬಹುದೊಡ್ಡದಾಗಿತ್ತೆಂದು ಇತಿಹಾಸದಿಂದ ತಿಳಿದು ಬರುತ್ತದೆ, ಇದೆ ಕ್ಷೇತ್ರದಿಂದ ಸತತ ಎಂಟು ಬಾರಿ ಮತ್ತು ಚಿತ್ತಾಪೂರ ವಿಧಾನಸಭೆಯಿಂದ ಒಮ್ಮೆ ಆಯ್ಕೆಯಾಗಿ ರಾಜ್ಯದಲ್ಲಿ ಶಿಕ್ಷಣ,ಗ್ರಾಮೀಣ ಅಭಿವೃದ್ಧಿ, ಕಂದಾಯ ,ಗೃಹ ಖಾತೆಗಳು ಸೇರಿದಂತೆ ವಿರೋಧ ಪಕ್ಷದ ನಾಯಕರಾಗಿ ರಾಜ್ಯದಲ್ಲಿ ಅಮೋಘವಾದ ಸೇವೆಯನ್ನು ಸಲ್ಲಿಸಿದ್ದಾರೆ,
2009 ಮತ್ತು 2014ರಲ್ಲಿ ಗುಲ್ಬರ್ಗಾ ಲೋಕಸಭಾ ಕ್ಷೇತ್ರ ದಿಂದ ಲೋಕಸಭೆಗೆ ಆಯ್ಕೆಯಾಗಿ ಕಾರ್ಮಿಕ ಮತ್ತು ರೈಲ್ವೆ ಸಚಿವರಾಗಿ ಮತ್ತು 2014 ರಿಂದ ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಸಭನಾಯಕರಾಗಿ ಕಾರ್ಯನಿರ್ವಹಿಸಿದ ಸೋಲಿಲ್ಲದ ಸರ್ದಾರನನ್ನು 2019ರಲ್ಲಿ ಪ್ರಪ್ರಥಮ ಬಾರಿ ಸೋಲು ಕಾಣಬೇಕಾಗುತ್ತದೆ,ಆದರೆ ಅವರ ಆ ಸೋಲು ಅಭಿವೃದ್ಧಿಯ ಸೊಲಲ್ಲಾ ಆದರೆ ಸೋಲಿಲ್ಲದ ಸರ್ದಾರನನ್ನೊಮ್ಮೆ ಸೋಲಿಸಲೇಬೇಕೆಂಬ ಮನುವಾದಿ ಮನಸ್ಸುಗಳ ಹಿಡನ್ ಅಜೆಂಡಾಕ್ಕೆ ಒಳಗಾದ ಪಕ್ಷದ ಅನೇಕ ನಾಯಕರುಗಳ ಪಕ್ಷಾಂತರವಾಗುವಂತ ವಾತಾವರ್ಣ ನಿರ್ಮಾಣವಾಗಿ ಅನೇಕ ನಾಯಕರು ಪಕ್ಷ ತೊರೆದಿದ್ದರಿಂದಾಗಿ ಮತ್ತು ಮತದಾರ ಪ್ರಭುಗಳು ಸಹ ಆ ನಿರ್ಮಿತ ಪರಸ್ಥಿತಿಗೆ ವಗ್ಗಿಕೊಂಡಿರುವದರಿಂದಾಗಿ ಐತಿಹಾಸಿಕ ಸೋಲಾಗುವದು,ಆದರು ಅವರ ಪಕ್ಷನಿಷ್ಟೆ ಮತ್ತು ಪ್ರಾಮಾಣಿಕತೆಗಾಗಿ ಪಕ್ಷ ಅವರನ್ನು ಕೈಬಿಡದೆ ರಾಜ್ಯಸಭೆಗೆ ಕಳಿಸಿ ಅಲ್ಲಿ ವಿರೋಧ ಪಕ್ಷದ ನಾಯಕನ್ನಾಗಿ ಮಾಡುತ್ತದೆ,ಕಾಂಗ್ರೆಸ್ ನ ಕಥೆ ಮುಗಿದೆ ಹೋಯಿತು ದೇಶದಲ್ಲಿ ಎನ್ನುವ ಪರಸ್ಥಿತಿಯಲ್ಲಿದ್ದಾಗ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ 2022ರಲ್ಲಿ ಆಯ್ಕೆಯಾಗುತ್ತಾರೆ, ಕಾಂಗ್ರೆಸ್ ಮುಕ್ತಮಾಡುವ ಬಿಜೆಪಿಯ ಸಂಕಲ್ಪವನ್ನು ಮುರಿಯಲು ಮತ್ತು ಮೋದಿಜೀಯವರ ಮನುವಾದಿ ಸರ್ವಾಧಿಕಾರಿ ಧೋರಣೆಯನ್ನು ಸದನದಲ್ಲೂ ಮತ್ತು ಹೊರಗು ಜನರ ಮುಂದಿಡುವ ಮೂಲಕ 2024ರ ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷ ಮೈ ಕೊಡವಿ ಮತ್ತೆ ಎದ್ದು ನಿಲ್ಲುವಂತೆ ಮಾಡಿದ್ದಾರೆ, ಭವಷ್ಯ ಮೈತ್ರಿಕೂಟಕ್ಕೆ ಸ್ಪಷ್ಟ ಬಹುಮತ ಬಂದಿದ್ದರೆ ಅವರೆ ಪ್ರಧಾನಿಯಾಗುತ್ತಿದ್ದರೆನೋ? ಇಲ್ಲಾ ಅನೇಕ ಬಾರಿ ಮುಖ್ಯಮಂತ್ರಿ ಆಗುವ ಅವಕಾಶ ಬಂದಿದ್ದರು ಮೇಲ್ವರ್ಗದ ಪುರೋಹಿತ ಶಾಹಿ ರಾಜಕೀಯ ತಂತ್ರಗಾರಿಕೆಗಳಿಂದ ತಪ್ಪಿ ಹೊದಂತೆ ಇಲ್ಲೂ ಪ್ರಧಾನಿ ಪಟ್ಟ ತಪ್ಪಿ ಹೋಗುತ್ತಿತ್ತೆನೋ?..ತಿಳಿಯದು,
ಆದರೆ ಸುಧೀರ್ಘ ಅವರ ರಾಜಕೀಯ ಜೀವನದಲ್ಲಿ ರಾಜ್ಯದ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದಾರೆ ,ವಿಶೇಷವಾಗಿ ಕೇಂದ್ರದ ಸಚಿವರಾಗಿದ್ದಾಗ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ನೀಡಿದ ಕೊಡುಗೆ ಅಪಾರವಾದ್ದಾಗಿದೆ, ಅದರಲ್ಲೂ 371 ಜೆ ಜಾರಿಗೆ ತರವುದರ ಮೂಲಕ ಕಲ್ಯಾಣ ಕರ್ನಾಟಕದ ಭಾಗ್ಯದ ಹೆಬ್ಬಾಗಿಲನ್ನೆ ತೆರೆದಿದ್ದಾರೆಂದರೆ ಅತಿಶೋಕ್ತಿಯಾಗಲಿಕ್ಕಿಲ್ಲಾ,371 j ಇಂದಾಗಿ ಕಲ್ಯಾಣ ಕರ್ನಾಟಕದಲ್ಲಿ ಇಂದು ಶಿಕ್ಷಣ ಉದ್ಯೋಗದಲ್ಲಿ ಅಮೂಲ ಗ್ರಹ ಕ್ರಾಂತಿಯೆ ಉಂಟಾಗಿದೆಂದರೆ ತಪ್ಪಾಗಲಿಕ್ಕಿಲ್ಲಾ,ಅವರ ಈ ಅಮೂಲ್ಯವಾದ ಕೆಲಸಕ್ಕೆ ಕಲ್ಯಾಣ ಕರ್ನಾಟಕದ ಜನ ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸಂಪೂರ್ಣ ಗೆಲುವನ್ನು ಕೊಡುವದರ ಮೂಲಕ ಅವರ ಋಣವನ್ನು ತಿರಿಸಿದ್ದಾರೆಂದರೆ ತಪ್ಪಾಗಲಿಕ್ಕಿಲ್ಲಾ,
ಸುಧೀರ್ಘ ಸುಮಾರು 55 ವರ್ಷಗಳ ರಾಜಕೀಯ ಜೀವನದಲ್ಲಿ ಸದಾ ಅಧಿಕಾರದಲ್ಲೆ ಇದ್ದ ನಾಯಕ ಬಹುಷ್ಯ ದೇಶದಲ್ಲಿ ಬೆರೊಬ್ಬರಿರಲಿಕ್ಕಿಲ್ಲಾ, ಆಸ್ತಿ ಮಿರಿ ಅಧಿಕ ಆದಾಯ ಗಳಿಕೆ, ಕಲ್ಯಾಣ ಕರ್ನಾಟಕದ ಎರಡನೇ ದರ್ಜೆಯ ಅಲವು ನಿಷ್ಠಾವಂತ ಅರ್ಹ ನಾಯಕರಿಗೆ ಸೂಕ್ತ ಸ್ಥಾನಮಾನ ಕೊಡಿಸಿಸುವಲ್ಲಿ ಮೌನವಹಿಸಿದ್ದಾರೆಂಬುವದು ಸೇರಿದಂತೆ ಅಲವು ಸಣ್ಣಪುಟ್ಟ ಆರೋಪಗಳಿದ್ದರು ಅವರೊಬ್ಬ ಮುತ್ಸದಿ ಮಹಾನಾಯಕನೆಂಬುವದು ಅಲ್ಲಗಳಿವಂತಿಲ್ಲಾ,ಕೆವಲ ಜಾತಿಯ ಕಾರಣಕ್ಕಾಗಿ ಮುಖ್ಯಮಂತ್ರಿ ಆಗದಿರುವದು ಪ್ರಜಾಪ್ರಭುತ್ವದ ಸಂವಿಧಾನಕ್ಕೆ ಹಿನ್ನಡೆಯಾಗಿದೆಂದರೆ ತಪ್ಪಾಗಲಿಕ್ಕಿಲ್ಲಾ ,ಪ್ರಸ್ತುತ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಸಂಪೂರ್ಣ ಬಹುಮತದ ಸರ್ಕಾರ ಹೊಂದಿರುವದರಿಂದಾಗಿ ಮುಖ್ಯಮಂತ್ರಿಗಳಾಗಿ ಸಾಮಾಜಿಕ ನ್ಯಾಯದ ಉಸಿರಾಗಿರುವ ಅಹಿಂದ ನಾಯಕ ಮಾನ್ಯ ಸಿದ್ದರಾಮಯ್ಯ ನವರು ಉತ್ತಮವಾದ ಸರ್ಕಾರವನ್ನು ನಡೆಸುತ್ತಿದ್ದರು ಅಧಿಕಾರ ಬದಲಾವಣೆಯ ಮಾತುಗಳು ಮಧ್ಯಾಮಗಳಲ್ಲಿ ಕೇಳಿ ಬರುತ್ತಿರುವದು ಸತ್ಯವಾಗಿದ್ದರೆ, ಬದಲಾವಣೆ ಮಾಡುವದು ಖಚಿತವಾದರೆ ಸಾಮಾಜಿಕ ನ್ಯಾಯಕ್ಕಾಗಿ ಮಾನ್ಯ ಸಿದ್ದರಾಮಯ್ಯ ನವರು ಅತ್ಯಂತ ಸಂತೋಷದಿಂದಲೇ ಅಧಿಕಾರ ತ್ಯಾಗಮಾಡಿ ಮುಖ್ಯಮಂತ್ರಿ ರೆಸ್ ನಲ್ಲಿರುವ ಡಿಕೆಶಿ ಸೇರಿದಂತೆ ಇತರ ಅಲವು ನಾಯಕರು ಬೆಂಬಲಿಸುವ ಮೂಲಕ ಅವಿರೋಧವಾಗಿ ಖರ್ಗೆಜಿಯವರಿಗೆ ಮುಖ್ಯಮಂತ್ರಿ ಯಾಗಿಸಿ ಸಾಮಾಜಿಕ ನ್ಯಾಯ ಮತ್ತು ಸಾಮಾಜಿಕ ಸಮತೊಲನಕ್ಕೆ ಕಾಂಗ್ರೆಸ್ ಪಕ್ಷ ಬದ್ದವಾಗಿದೆಂದು ನಿರೂಪಿಸುವ ಮೂಲಕ ಈ ಮಣ್ಣಿನ ಮಗನಿಗೆ ನ್ಯಾಯ ದೊರಕಿಸಿ ಕೊಟ್ಟರೆ,ಸಿದ್ದರಾಮಯ್ಯ ಸೇರಿದಂತೆ ರಾಜ್ಯದ ಎಲ್ಲಾ ಕಾಂಗ್ರೆಸ್ ಪಕ್ಷದ ನಾಯಕರು ಹಾಗೂ ಪಕ್ಷದ ಘನತೆ ಮತ್ತು ಗೌರವ ದುಪ್ಪಟ್ಟಾಗುವದರ ಜೊತೆಗೆ ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ನಿಜ ಅರ್ಥದೊರಕಿಸಿದಂತಾಗುತ್ತದೆ.ಹಾಗೆಯೆ ಪ್ರಾದೇಶಿಕ ಅಸಮಾನತೆಯನ್ನು ಹೊಗಲಾಡಿಸಿದಂತಾಗುವದು, ಖರ್ಗೆ ಮುಖ್ಯಮಂತ್ರಿ ಆಗಬೇಕೆನ್ನುವ ಕಲ್ಯಾಣ ಕರ್ನಾಟಕದ ಕಲಬುರ್ಗಿಯ ಜನಗಳ ಕನಸು ನನಸಾಗುವದೆಂಬ ಆಶೆಯಕ್ಕೆ ಚುರು ಬರವಸೆ ಹುಟ್ಟಿದೆ,ಅದು ಹಿಡೆರಲೆಂಬುವದು ಈ ಭಾಗದ ಸಮಸ್ತ ಅವರಭಿಮಾನಿಗಳು ಆಶೆಯಿಂದ ಕಾಯುತ್ತಿದ್ದಾರೆ,’ಕಾಲಾಯ ತಸ್ಮಯ ‘ ಕಾಲಕ್ಕಾಗಿ ಕಾಯಲೆ ಬೇಕು. ಯಾವುದೇ ಸಂರ್ಭದಲ್ಲು ಸಹನೆ ಕಳೆದುಕೊಳ್ಳದೆ ಶಾಂತ ಸರೋವರದಾಗೆ ತಾಳ್ಮೆಯಿಂದಿರುವ ಶ್ರಿಯುತರಿಗೆ ನಿಧಾನವೆ ಪ್ರಧಾನವೆಂನ್ನುವಂತೆ ತಡವಾಗಿಯಾದರು ಕರುನಾಡ ಮುಖ್ಯಮಂತ್ರಿಗಳಾಗುವ ಭಾಗ್ಯ ಬರಲಿ ಎಂಬ ಆಶೆಯೊಂದಿಗೆ ಸೋಲಿಲ್ಲದ ಸರ್ದಾರ ರವರ ಹುಟ್ಟು ಹಬ್ಬಕ್ಕೆ ಹಾರ್ದಿಕ ಶುಭಾಷಯಗಳು ಕೊರುವೆನು.
