
ವಡಗೇರಾ:ತಾಲೂಕಿನ ತಡಿಬಿಡಿ ಗ್ರಾಮ ಪಂಚಾಯಿತಿಯಲ್ಲಿ ಕೆಲ ದಿನಗಳ ಹಿಂದೆ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿಕಾರ್ಜುನ ಸಂಗ್ವಾರ್, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಗೋವಿಂದ ರಾಥೋಡ್,ಸ್ವಚ್ಚ ಭಾರತ್ ಅಭಿಯಾನದ ಜಿಲ್ಲಾ ಸಂಯೋಜಕ ಶಿವುಕುಮಾರ ಶ್ರಮದಿಂದಾಗಿ ಪ್ಲಾಸ್ಟಿಕ್ ತ್ಯಾಜ್ಯ ವಸ್ತುಗಳನ್ನು ತ್ಯಜಿಸಬೇಕು ಎನ್ನುವ ಉದ್ದೇಶದಿಂದ ಒಂದು ಕೆಜಿ ಪ್ಲಾಸ್ಟಿಕ್ ಗೆ ಒಂದು ಕೆಜಿ ಸಕ್ಕರೆ ವಿತರಿಸುವ ಕಾರ್ಯಕ್ರಮವನ್ನು ತಡಿಬಿಡಿ ಗ್ರಾಮ ಪಂಚಾಯಿತಿ ವತಿಯಿಂದ ಚಾಲನೆ ನೀಡಲಾಗಿತ್ತು.
ಈ ವಿನೂತನ ಕಾರ್ಯಕ್ರಮವನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಪ್ರಿಯಾಂಕ ಖರ್ಗೆಯವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತಮ್ಮ ಫೇಸ್ ಬುಕ್ ಮತ್ತು ಎಕ್ಸ್ ಖಾತೆಯಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಇದು ರಾಜ್ಯದಲ್ಲಿಯೇ ಒಂದು ವಿಶಿಷ್ಟ ಅಭಿಯಾನವಾಗಿದ್ದು ಸ್ವಚ್ಛ ,ಸುಸ್ಥಿರ ಮತ್ತು ಪ್ಲಾಸ್ಟಿಕ್ ಮುಕ್ತ ಸಮಾಜ ನಿರ್ಮಾಣಕ್ಕೆ ನಾಂದಿ ಹಾಡಿದ ತಡಿಬಿಡಿ ಗ್ರಾಮ ಪಂಚಾಯಿತಿ.ಈ ಪಂಚಾಯಿತಿಯು ತಮ್ಮ ಗ್ರಾಮದ ಜನತೆಗೆ ಒಂದು ಕೆಜಿ ಪ್ಲಾಸ್ಟಿಕ್ ತ್ಯಾಜ್ಯದ ಬದಲಿಗೆ ಒಂದು ಕೆಜಿ ಸಕ್ಕರೆ ವಿತರಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದು ಇದೊಂದು ವಿಶಿಷ್ಟ ಅಭಿಯಾನವಾಗಿದೆ. ಇದು ರಾಜ್ಯಾದ್ಯಂತ ಮೆಚ್ಚುಗೆಗೆ ಪಾತ್ರವಾಗಿದೆ.ಇದು ಸಾರ್ವಜನಿಕರಲ್ಲಿ ಲಾಭ ತಂದು ಕೊಡುತ್ತದೆ. ಪ್ಲಾಸ್ಟಿಕ್ ತ್ಯಜಿಸಿ ಸುಸ್ಥಿರ ಅಭಿವೃದ್ಧಿಗೆ ಸಾಧ್ಯವಾಗಿದೆ ಎಂದು ಶ್ಲಾಘಿಸಿದ್ದಾರೆ.
ಜಿಲ್ಲೆಯಲ್ಲಿಯೇ ಇದೊಂದು ವಿಶಿಷ್ಟ ಅಭಿಯಾನ. ಪ್ಲಾಸ್ಟಿಕ್ ತ್ಯಾಜ್ಯ ವಸ್ತುಗಳನ್ನು ಸೂಕ್ತ ವಿಲೇವಾರಿ ಮಾಡಬೇಕು. ಇದೊಂದು ಮಾದರಿ ಅಭಿಯಾನವಾಗಿದ್ದು, ಪ್ಲಾಸ್ಟಿಕ್ ತ್ಯಾಜ್ಯವನ್ನು ತ್ಯಜಿಸಬೇಕು. ಬೀಸಾಡಿದ ಸೂಕ್ತ ಪ್ಲಾಸ್ಟಿಕ್ ಗಳನ್ನು ಸೂಕ್ತ ವಿಲೇವಾರಿ ಮಾಡಿಸಬೇಕು. ಸಚಿವರು ಈ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರಿಂದ ನಮಗೂ ಕೂಡ ಇಂತಹ ಕಾರ್ಯಕ್ರಮ ನಡೆಸುವ ಹುಮ್ಮಸ್ಸು ಬಂದಿದೆ.ಸಾರ್ವಜನಿಕರೂ ಕೂಡ ಸಹಕಾರ ನೀಡಬೇಕು.
ಶಿವಕುಮಾರ ಜಿಲ್ಲಾ ಸಂಯೋಜಕರು ಸ್ವಚ್ಛ ಭಾರತ ಅಭಿಯಾನ ಯಾದಗಿರಿ.
ಇಂತಹ ವಿನೂತನ ಕಾರ್ಯಕ್ರಮಕ್ಕೆ ಪಂಚಾಯತ್ ರಾಜ್ಯ ಸಚಿವರಾದ ಪ್ರಿಯಾಂಕ್ ಖರ್ಗೆ ರವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆ ಮಾಡಿ ಮೆಚ್ಚುಗೆ ಸೂಚಿಸಿ ಪ್ರೋತ್ಸಾಹಸಿದ್ದು ನಮ್ಮಲ್ಲಿ ತುಂಬಾ ಸಂತಸ ಮೂಡಿಸಿದ್ದು, ಇದರಿಂದ ಪ್ರೇರೇಪಣೆಗೊಂಡು ಮುಂದಿನ ದಿನಗಳಲ್ಲಿ ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಅನುಷ್ಠಾನ
