ಯೂಥ್ ಫಾರ್ ಸೇವಾ ಸಂಸ್ಥೆ ಮೂಲಕ ಟೆಕ್ಸಸ್ ಇನ್ಸ್ಟ್ರುಮೆಂಟ್ ಕಂಪನಿಯಿಂದ ಉಚಿತವಾಗಿ ಶಾಲಾ ಕಿಟ್ ವಿತರಣೆ : ಓದಿನಲ್ಲಿ ಉಜ್ವಲ ಭವಿಷ್ಯವಿದೆ

By admin

ಠಾಣಗುಂದಿ: ಓದುವಿಕೆ ಮನುಷ್ಯನನ್ನು ಉನ್ನತ ಮಟ್ಟದಲ್ಲಿ ಗುರುತಿಸುವಂತೆ ಮಾಡುವುದು. ಓ ದಿನಲ್ಲಿ ಹೆಚ್ಚು ಆಸಕ್ತಿವಹಿಸಿ ದೊಡ್ಡ ವ್ಯಕ್ತಿಗಳಾಗಿ ಬೆಳೆಯಿರಿ . ನಾವು ಕೂಡ ಕೆಳ ಹಂತದಿಂದಲೇ ಬಂದಿದ್ದು, ಶ್ರಮ ಇರುವ ಕಡೆ ಪ್ರತಿಫಲ ಇರುವುದೆಂದು ಯುತ್ ಫಾರ್ ಸೇವಾ ಸಂಸ್ಥೆ ಹುಬ್ಬಳ್ಳಿ ಅವರ ಮೂಲಕ ಆಗಮಿಸಿದ ಟೆಕ್ಸಸ್ ಇನ್ಸ್ಟ್ರುಮೆಂಟ್ ಬೆಂಗಳೂರು ಕಂಪನಿಯಿಂದ ಪ್ರಾ ತಿನಿಧಿಕವಾಗಿ ಆಗಮಿಸಿದ ಪ್ರತಿಕ್ಷಾ ಅಂಕುರ್,ಜಸ್ನೂರ್,ಗುನ್ ವರುಣ್ ಅಭಿಪ್ರಾಯ ಪಟ್ಟರು. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಠಾಣುಗುಂದಿಯಲ್ಲಿ ಇವರು ತಮ್ಮ ಕಂಪನಿಯಿಂದ ಶಾಲಾ ಮಕ್ಕಳಿಗೆ ಒಂದು ಲಕ್ಷ ರೂಪಾಯಿಗಿಂತ ಹೆಚ್ಚಿನ ಮೊತ್ತದ ಶಾಲಾ ಕಿಟ್ ವಿತರಿಸಿ ಮಾತನಾಡಿದರು. ಇದರ ಸದುಪಯೋಗ ಪಡೆದುಕೊಂಡು ಆದರ್ಶ ವ್ಯಕ್ತಿಗಳಾಗಿ ಸಮಾಜಮುಖಿ ಯಾಗಿ ಕೆಲಸ ಮಾಡಬೇಕೆಂದು ಹೇಳಿದರು.ಶಿಕ್ಷಕರಾದ ಶಿವಶಂಕರ್ ಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ಒಂದರಿಂದ ಎಂಟನೇ ತರಗತಿ ಓದುತ್ತಿರುವ ಠಾಣಗುಂದಿಯ 255 ಮಕ್ಕಳಿಗೆ ಬ್ಯಾಗ್, ಕಥೆ ಪುಸ್ತಕ ನೋಟ್ ಬುಕ್,ಪೆನ್ಸಿಲ್, ರಬ್ಬರ್,ಕಂಪಾಸ್, ಪೌಚ್ ಗಳನ್ನು ನೀಡಿದ್ದಾರೆಂದು ತಿಳಿಸಿದರು. ಫುಟ್ಪಾತ್ ಮತ್ತು ಮಿನಾಸ್ಪುರ ಶಾಲೆಗಳಿಗೆ ಕೂಡ ಅವರ ಸಂಸ್ಥೆಯ ಪ್ರತಿನಿಧಿಗಳು ಶಾಲಾ ಕಿಟ್ ಗಳನ್ನು ಈ ದಿನ ವಿತರಿಸುತ್ತಿದ್ದಾರೆಂದು ತಿಳಿಸಿ ದರು. ಸಾಮಾಜಿಕ ಜವಾಬ್ದಾರಿ ಪ್ರತಿಯೊಬ್ಬರ ಮೇಲೆ ಇರುತ್ತದೆ ಅದನ್ನು ನಾವು ಅರಿಯಬೇಕು. ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡಿದರು ಕೂಡ ಇದರ ಹಿಂದೆ ಹಲವಾರು ಜನರ ಪರಿಶ್ರಮ ಇರುವುದಂತೂ ಸತ್ಯ. ಇದರ ಸದುಪಯೋಗಪಡಿಸಿಕೊಳ್ಳಿ ರೆಂದು ಶಿಕ್ಷಕರಾದ ಶರಣಪ್ಪ ಅವರು ಸಲಹೆ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಹಿರಿಯ ಮುಖ್ಯ ಗುರುಗಳಾದ ಗೋಪಾಲಕೃಷ್ಣ ಅವರು ಮಾತನಾಡಿ, ಯೂಥ್ ಫಾರ್ ಸೇವಾ ಸಂಸ್ಥೆ ಹಾಗೂ ಟೇಕ್ಸಸ್ ಕಂಪನಿಗೆ ಊರಿನವರು ಹಾಗೂ ಶಾಲೆಯ ಕಡೆಯಿಂದ ಧನ್ಯವಾದ ಅರ್ಪಿಸಿದರು. ಪ್ರತಿಯೊಂದು ಕಂಪನಿ ಕೂಡ ಸಾಮಾಜಿಕ ಜವಾಬ್ದಾರಿಯನ್ನು ಅರಿಯುವಲ್ಲಿ ಮುಂದಾಗ ಬೇಕೆಂದರು. ಎಸ್‌ಡಿಎಂಸಿ ಅಧ್ಯಕ್ಷರಾದ ಹನುಮಂತ, ಪೋಷಕರು ಹಾಗೂ ಶಿಕ್ಷಕರಾದ ಚನ್ನಬಸವ, ವಿದ್ಯಾನಾಥ, ಭೀಮ್ಬಾಯಿ ಸುರೇಖಾ, ಜ್ಯೋತಿ, ರಾಜೇಂದ್ರ ಕುಮಾರ್ ಮತ್ತು ಅಡುಗೆ ಸಿಬ್ಬಂದಿಯವರಾದ ಲಕ್ಷ್ಮಿ,ರಂಗಮ್ಮ ಇದ್ದರು.