
ಸೆಕ್ಯುಲರ್ ವಾಯ್ಸ್ ನ್ಯೂಸ್ ಶಹಾಪುರ
ಸಿಎಂ ಸಿದ್ದರಾಮಯ್ಯನವರ ಆಪ್ತರು, ಕರ್ನಾಟಕ ಕಾಂಗ್ರೆಸ್ ಪಕ್ಷದ ರಾಜ್ಯ ಉಪಾಧ್ಯಕ್ಷರು, ಕುರುಬ ಸಮಾಜದ ಹಿರಿಯ ಮುಖಂಡರಾದ ಮರಿಗೌಡ ಹುಲ್ಕಲ್(64) ರವರು ಹೃದಯಾಘಾತದಿಂದ ನಿಧನರಾದರು.
ಮಂಗಳವಾರ ರಾತ್ರಿ 8:00 ಗಂಟೆ ಸುಮಾರು ಸ್ಪಂದನ ಆಸ್ಪತ್ರೆಯಲ್ಲಿ ಎದೆ ನೋವಿನಿಂದ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು.
ಮರಿಗೌಡ ಹುಲ್ಕಲ್ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿಯೂ, ಯಾದಗಿರಿ ಜಿಲ್ಲೆಯ ಹತ್ತು ವರ್ಷಗಳ ಕಾಲ ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದು,
ಪ್ರಸ್ತುತ ತೊಗರಿ ನಿಗಮದ ಅಧ್ಯಕ್ಷರಾಗಿ ಸರಕಾರ ನೇಮಕಗೊಳಿಸಿತ್ತು.
ಪತ್ನಿ, ಐದು ಜನ ಪುತ್ರಿಯರು ಮತ್ತು ಒಬ್ಬ ಪುತ್ರನಿದ್ದು, ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ಇಂದು ಹುಲ್ಕಲ್ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಗಣ್ಯರ ಸಂತಾಪ: ಜಿಲ್ಲಾ ಉಸ್ತುವಾರಿ ಸಚಿವ, ಶಾಸಕ ಶರಣಬಸಪ್ಪಗೌಡ ದರ್ಶನಾಪುರ, ಕಾಂಗ್ರೆಸ್ ಹಿರಿಯ ಮುಖಂಡರಾದ ಶರಣಪ್ಪ ಸಲಾದಪುರ, ದೇವೇಂದ್ರಪ್ಪಗೌಡ ಗೌಡಗೇರಿ, ಗ್ಯಾರಂಟಿ ಯೋಜನಾ ಸಮಿತಿ ತಾಲೂಕು ಅಧ್ಯಕ್ಷ ಗೌಡಪ್ಪಗೌಡ ಆಲ್ದಾಳ, ನಾಗಪ್ಪ ಕೇಶಿರಾಜ, ಶೇಖರ ದೊರೆ ಕಕ್ಕಸಗೇರಾ, ಮರೆಪ್ಪ ಪ್ಯಾಟಿ, ಕಾಂಗ್ರೆಸ್ ಯುವ ಮುಖಂಡರಾದ ಶಾಂತಗೌಡ ಮಾಲಿಪಾಟೀಲ್ ಮುಡಬೂಳ, ಅಜೀಮ್ ಜಮಾದಾರ, ಮಾನಪ್ಪ ನಾಟೇಕಾರ ಸೇರಿದಂತೆ ಜಿಲ್ಲೆಯ ಮುಖಂಡರು ಸಂತಾಪ ಸೂಚಿಸಿದ್ದಾರೆ.
