
ಹಿಂದುಳಿದ ಪ್ರದೇಶ ಎಂಬ ಹಣೆಪಟ್ಟಿ ಹೊತ್ತುಕೊಂಡು ದೇಶಕ್ಕೆ ಸ್ವತಂತ್ರ ದೊರಕಿದ ಒಂದು ವರ್ಷ ಒಂದು ತಿಂಗಳ ನಂತರ ಸ್ವತಂತ್ರವಾದ ಈ ಪ್ರದೇಶದ ಜನರು ಶಿಕ್ಷಣ, ಬಡತನ,ಅನಕ್ಷರಸ್ಥರಾಗಿ,ಮೂಢನಂಬಿಕೆ ಯುಳ್ಳವರಾಗಿ, ಅಂಧಕರಾದಲ್ಲಿ ಬದುಕು ನಡೆಸುತ್ತಿದ್ದ ಈ ಭಾಗದ ಜನರ ಬಾಳಿನಲ್ಲಿ ಮಿನುಗುತಾರೆಯಂತೆ ಬೆಳಕನ್ನು ಮೂಡಿಸಿದವರು ಎಂದರೇ ಅವರೇ ಶ್ರೀ ಮಹಾದೇವಪ್ಪ ರಾಂಪುರೇ ಅವರು , ದೂರದ ಮಹಾರಾಷ್ಟ್ರದ ಕುಂಬಾರಿ ಗ್ರಾಮದಿಂದ ಆಕಸ್ಮಿಕವಾಗಿ ಕಲಬುರಗಿಗೆ ಆಗಮಿಸಿದ ಅವರು ಓರ್ವ ಸ್ವತಂತ್ರ ಹೋರಾಟಗಾರರು, ಶಿಕ್ಷಣ ಪ್ರೇಮಿಗಳು ,ಚಿಂತಕರು, ತಾವು ಯಾವ ಉದ್ದೇಶ ಹೊತ್ತುಕೊಂಡು ಕಲಬುರಗಿಗೆ ಬಂದಿದ್ದರೋ ಅದನ್ನು ಬಿಟ್ಟು ಇಲ್ಲಿ ಜನಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಇಲ್ಲಿಯ ತಾರದೇವಿ ಅವರೊಂದಿಗೆ ವಿವಾಹ ವಾಗಿ ತಮ್ಮ ವೈವಾಹಿಕ ಬದುಕನ್ನು ಪ್ರಾರಂಭಿಸಿ ಐದು ಜನ ಮಕ್ಕಳಿಗೆ ಜನ್ಮ ನೀಡಿ ತುಂಬು ಕುಟುಂಬದ ಬದುಕನ್ನು ಬಾಳಿದವರು.
ಕೃಷಿಕ, ಶಿಕ್ಷಣ ತಜ್ನರಾಗಿದ್ದ ಅವರು ಸಮಾಜ ಸೇವೆಗೆ ಮಹತ್ವ ನೀಡಿದವರು.
1956 ರಲ್ಲಿ ಮೈಸೂರಿನ ವಿಧಾನಪರಿಷತ್ತಿನ ಸದಸ್ಯರಾಗುವುದರ ಮೂಲಕ ತಮ್ಮ ರಾಜಕೀಯ ಜೀವನ ಪ್ರಾಂಭಿಸಿದ ಮಹನೀಯರು ಮುಂದೆ 2,3& 4 ನೇ ಲೋಕಸಭೆಯ ಸದಸ್ಯರಾಗಿ ಆಯ್ಕೆಯಾಗುವುದರ ಮೂಲಕವಾಗಿ ತಮ್ಮ ಅಪಾರ ಜನಪ್ರಿಯತೆಯನ್ನು ಸಾಬೀತು ಪಡೆಸಿದವರು.
ತಮ್ಮ ರಾಜಕೀಯ ಜೀವನದಲ್ಲಿ ಅನೇಕ ಉನ್ನತವಾದ ಸ್ಥಾನಗಳನ್ನು ಅಲಂಕರಿಸಿದರು ಎಂದಿಗೂ ತಮ್ಮ ಕರ್ತವ್ಯ, ಜವಾಬ್ದಾರಿಯನ್ನು ಮರೆತವರಲ್ಲ ,ಅಷ್ಟೇ ಅಲ್ಲದೇ ಅವರು ಭಾರತೀಯ ರೆಡ್ ಕ್ರಾಸ್, ಸೆನೆಟ್, ಸಿಂಡಿಕೇಟ್ ಸದಸ್ಯರಾಗಿ,ಸ್ಕೌಟ್ ಮತ್ತು ಗೈಡ್ ನ ಗುಲಬರ್ಗಾ ಜಿಲ್ಲೆಯ ಕಾರ್ಯದರ್ಶಿ ಗಳಾಗಿ,ಎಮ್.ಎಸ್.ಕೆ.ಮಿಲ್ಲನ ಸಂಸ್ಥಾಪಕ ಅಧ್ಯಕ್ಷರಾಗಿ,ಶಹಾಬಾದನ ಸಿಮೆಂಟ್ ಫ್ಯಾಕ್ಟರಿಯ ಮಜ್ದೂರ ವಿಭಾಗದ ಉಪಾಧ್ಯಕ್ಷರಾಗಿ ಸೇವೆಸಲ್ಲಿಸಿದವರು.
ಈ ಭಾಗದ ಜನರು ಶಿಕ್ಚಣಕ್ಕಾಗಿ ದೂರದ ಹೈದ್ರಾಬಾದ್, ಧಾರವಾಡ ಮೊದಲಾದ ಕಡೆಗೆ ಹೋಗಿ ಪರದಾಡುವುದನ್ನು ಕಂಡು 1958 ರಲ್ಲಿ ಅಂದಿನ ಜಿಲ್ಲಾಧಿಕಾರಿಕಾರಿಗಳಾದ ಶ್ರೀ.ನಾಗರಾಜರಾವ್ ಅವರ ಸಹಕಾರದೊಂದಿಗೆ ಇಲ್ಲಿನ ವರ್ತಕರು,ರೈತರು,ಸಮಾಜ ಸುಧಾರಕರು, ಚಿಂತಕರ ನೆರವಿನೊಂದಿಗೆ ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯನ್ನು ಹುಟ್ಟುಹಾಕಿದರು.
ಹೀಗೆ ಅವರು ಇಲ್ಲಿನ ಜನರ ಬಾಳಿನಲ್ಲಿ ಶಿಕ್ಷಣದ ಜ್ಯೋತಿ ಬೆಳಸಿದವರು ಎಂದರೇ ಅತಿಶೋಕ್ತಿಯಾಗಲಾರದು .ಅವರು ಕೇವಲ ಸಂಸ್ಥೆಯನ್ನು ಪ್ರಾರಂಭಿಸಿ ಕೈಕಟ್ಟಿ ಕುಳಿತುಕೊಳ್ಳದೇ ಇಲ್ಲಿನ ಜನರಿಗೆ ಅವಶ್ಯವಾಗಿ ಬೇಕಾಗಿದ್ದ ವೈದ್ಯಕೀಯ, ಇಂಜಿನಿಯರಿಂಗ್, ಕಾನೂನು ಹೀಗೆ ಅನೇಕ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿಬೆಳೆಸಿದರು.
ಈ ಭಾಗದ ಮಹಿಳೆಯರು ಶಿಕ್ಷಣದಿಂದ ವಂಚಿತರಾಗಿರುವುದನ್ನು ಮನಗೊಂಡ ಇವರು ಹೆಣ್ಣು ಮಕ್ಕಳಿಗಾಗಿ ನಗರದ ಹೃದಯಭಾಗದಲ್ಲಿ ಗಂಗಸಿರಿ ಕುಟುಂಬದವರ ಸಹಾಯದೊಂದಿಗೆ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯವನ್ನು ಪ್ರಾರಂಭಿಸಿ ಮಹಿಳೆಯರ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿದ ಮಹನೀಯರು ಇದು ಇಡಿ ರಾಜ್ಯದಲ್ಲಿಯೇ ಎರಡನೇ ಮಹಿಳಾ ಮಹಾವಿದ್ಯಾಲಯ ಎಂಬ
ಹೆಗ್ಗಳಿಕೆ ಪಡೆದಿದೆ. ಇಂದು ನ್ಯಾಕ್ ನ ನಾಲ್ಕನೇ ಆವೃತ್ತಿಯಲ್ಲಿ A++ ಗ್ರೇಡ್ ಪಡೆದ ರಾಜ್ಯದ ಪ್ರಥಮ ಮಹಿಳಾ ಮಹಾವಿದ್ಯಾಲಯ ಎನ್ನುವದು ಒಂದು ಹೆಮ್ಮೆಯ ವಿಷಯವಾಗಿದೆ.

ಹೀಗೆ ತಮ್ಮ ಅಧ್ಯಕ್ಷ ಅವಧಿಯಲ್ಲಿ ಯಾವಾಗಲೂ ಶಿಕ್ಷಣ ಸಂಸ್ಥೆಯ ಅಭಿವೃದ್ಧಿಗಾಗಿ, ನೌಕರರ ಹಿತಾಸಕ್ತಿ ಕಾಪಾಡುವುದಕ್ಕಾಗಿ ಚಿಂತಿಸುತ್ತಿದ್ದರು ಎಂದು ಇವರನ್ನು ಹತ್ತಿರದಿಂದ ಬಲ್ಲವರಾಗಿದ್ದ ಅವರ ಒಡನಾಡಿಗಳು ಅವರನ್ನು ಸ್ಮರಿಸುತ್ತಾರೆ, ಅಂದು ಅವರು ಹಚ್ಚಿದ ಶಿಕ್ಷಣದ ಜ್ಯೋತಿಯಿಂದಾಗಿ ಇಂದು ಕಲಬುರಗಿ ನಗರ ಒಂದು ಎಜ್ಯೂಕೇಶನಲ್ ಹಬ್ ಆಗಿ ಇಂದು ಸುಮಾರು ಐದು ವಿಶ್ವವಿದ್ಯಾಲಯಗಳು,ನಾಲ್ಕು ವೈದ್ಯಕೀಯ ಮಹಾವಿದ್ಯಾಲಯಗಳನ್ನು ಅನೇಕ ಇಂಜಿನಿಯರಿಂಗ್, ಪಾಲಿಟೆಕ್ನಿಕ್, ಬಿ.ಇಡಿ.ಡಿ.ಇಡಿ ಕಾನೂನು ಮಹಾವಿದ್ಯಾಲಯಗಳು .ಬೆಳೆದು ಈ ಭಾಗದ ವಿದ್ಯಾರ್ಥಿಗಳು ಇಂದು ಎಲ್ಲಾ ಕ್ಷೇತ್ರಗಳಲ್ಲಿ ಉನ್ನತ ಹುದ್ದೆಗಳನ್ನು ಪಡೆದುಕೊಂಡು ನಾಡಿನುದ್ದಕ್ಕೂ ಸೇವೆ ಸಲ್ಲಿಸುತ್ತಿದ್ದಾರೆ,
ಇಂದು ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ವಿವಿಧ ಮಹಾವಿದ್ಯಾಲಯಗಳಲ್ಲಿ ಕಲಿತ ವಿದ್ಯಾರ್ಥಿಗಳು ,ಸಚಿವರಾಗಿ,ಮುಖ್ಯಮಂತ್ರಿಗಳಾಗಿ,ವಿಜ್ಞಾನಿಗಳಾಗಿ,ಸಮಾಜ ಸುಧಾರಕರಾಗಿ ,ಕ್ರಿಡಾಪಟುಗಳಾಗಿ,ವಿವಿಧ ಕ್ಷೇತ್ರಗಳಲ್ಲಿ ರಾಷ್ಟ್ರ ಅಂತರಾಷ್ಟ್ರೀಯ ಮಟ್ಟದಲ್ಲಿ ಮಿನುಗುತ್ತಿದ್ದಾರೆ.ಇಂದು ಭಾರತದ ಭೂ ಪುಟದಲ್ಲಿ ಕಲಬುರಗಿಗೆ ಒಂದು ಸ್ಥಾನವಿದೆ ಎಂದರೇ ಅದಕ್ಕೆ ಕಾರಣ ಲಿಂಗೈಕ್ಯ ಮಹಾದೇವಪ್ಪ ರಾಂಪುರೇ ಅವರೇ ಕಾರಣಿಕರ್ತರು ಎಂದು ಹೆಮ್ಮೆಯಿಂದ ಹೇಳುತ್ತೆನೆ.
ಇಂದು ದಿನಾಂಕ 1-08-2024 ರಂದು ಸಂಸ್ಥೆಯ ಇಂದಿನ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ತಿನ ಸದಸ್ಯರಾದ ಶ್ರೀ ಶಶೀಲ ನಮೋಶಿ ಉಪಾಧ್ಯಕ್ಚರಾದ ಶ್ರೀ ರಾಜಾ ಭೀಮಳ್ಳಿ ಕಾರ್ಯದರ್ಶಿಗಳು,ಜಂಟಿ ಕರ್ಯಾದರ್ಶಿಗಳು ಹಾಗೂ ಆಡಳಿತ ಮಂಡಳಿಯ ಸರ್ವ ಸದಸ್ಯರ ನೇತೃತ್ವದಲ್ಲಿ 2023-24 ನೇ ಶೈಕ್ಷಣಿಕ ಸಾಲಿನಲ್ಲಿ ನಿವೃತ್ತರಾದ ಬೋಧಕ – ಬೋಧಕೇತರ ಸಿಬ್ಬಂದಿ ವರ್ಗದವರಿಗೆ ಗೌರವ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದರ ಮೂಲಕವಾಗಿ ಅವರ ಜನ್ಮದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತದೆ.

ಲೇಖಕರು: ಡಾ.ಮಹೇಶ ಎಮ್.ಗಂವ್ಹಾರ
ಮುಖ್ಯಸ್ಥರು, ಸಮಾಜಶಾಸ್ತ್ರ ವಿಭಾಗ
ಶ್ರೀಮತಿ ವಿ.ಜಿ.ಮಹಿಳಾ ಮಹಾವಿದ್ಯಾಲಯ, ಕಲಬುರಗಿ.
