ಅಹಿಂದ ಸಮುದಾಯ ಬಿದಿಗಿಳಿಯಲು ಅವಕಾಶ ಕೊಡಬೇಡಿ: ಎಚ್ಚರಿಕೆ

By admin

ರಾಜಕೀಯ ಹಿನ್ನೆಲೆ ಇಲ್ಲದ ಸಾಮಾನ್ಯ ರೈತ ಕುಟುಂಬದಲ್ಲಿ ಜನಿಸಿದ ಹಿಂದುಳಿದ ವರ್ಗದ ಕುರುಬ ಜನಾಂಗದ ಶ್ರೀ ಸಿದ್ದರಾಮಯ್ಯ ನವರು ದಿವಂಗತ ದೇವರಾಜ ಅರಸು ನಂತರ ಸಂಪೂರ್ಣವಾಗಿ ಐದು ವರ್ಷಗಳ ಕಾಲ ಸುಭದ್ರವಾದ ಸರ್ಕಾರವನ್ನು ನಡೆಸಿ ರಾಜ್ಯದ ಎಲ್ಲಾ ಜನವರ್ಗದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದವರು,

ವಿಶ್ವಗುರು ಅಣ್ಣಾ ಬಸವಣ್ಣನ ಸಮಾಜಿಕ ಕ್ರಾಂತಿಯ ಆಶೆಯಗಳಂತೆ ಸರ್ಕಾರ ನಡೆಸಿದ ಮತ್ತು ನಡೆಸುತ್ತಿರುವ ಮಹನಾಯಕರಾಗಿ ಬೆಳೆದಿದ್ದು ಸಹಿಸಿಕೊಳ್ಳಲಾಗದ ಕುಬ್ಜ ಮನಸಿನ ಕೆಲವು ಪುರೋಹಿತ ಶಾಹಿ ಮನುವಾದಿ ನಾಯಕರು, ಪಕ್ಷಾತೀತವಾಗಿ ಒಂದಾಗಿ ಚಾಮುಂಡೇಶ್ವರಿ ಕ್ಷತ್ರೆದಲ್ಲಿ ಸೋಲಿಸಿದರು ಬಾದಾಮಿಯಲ್ಲಿ ಗೆದ್ದರು ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿ ಆಗುವ ಅವಕಾಶವನ್ನು ಕಿತ್ತಿಕೊಂಡ,ಚಾಮುಂಡೇಶ್ವರಿಯಲ್ಲಿ ಸೋಲಿಸಿದ ಹುಸಿ ಜಾತ್ಯತೀತ ಮನುವಾದಿಗಳು, ಕೊಟ್ಟ ಕುದರೆಯನ್ನು ಪಳಗಿಸಲಾಗದೆ ಮಡಚಿಬಿದ್ದಾಗ ವಿರೋಧ ಪಕ್ಷದ ನಾಯಕರಾಗಿ ಸರ್ಕಾರದ ಲೋಪದೋಷಗಳನ್ನು ಸಧನದ ಒಳಗೂ ಹೋರಗು ಗಟ್ಟಿಯಾಗಿ ತರೆದಿಡುವ ಮೂಲಕ ಜನರ ವಿಶ್ವಾಸವನ್ನು ಪಡೆದು ಅಭುತಪೂರ್ವ ಬಹುಮತದೊಂದಿಗೆ ಮತ್ತೆ ಮುಖ್ಯಮಂತ್ರಿಯಾಗಿ ಕರ್ನಾಟಕದ ಚರಿತ್ರೆಯಲ್ಲಿ ಐತಹಾಸಿಕ ದಾಖಲೆಯ ಬಜೆಟ್ ಗಳನ್ನು ಮಂಡಿಸಿ ಬಸವಾದಿ ಶರಣರ ಆಶೆಯಂತೆ ಸಂವಿಧಾನದ ದೇಹ ಉದ್ದೇಶಗಳಂತೆ ಸರ್ಕರವನ್ನು ನಡೆಸುತ್ತಿರುವದು ಅಧಿಕಾರ ವಂಚಿತ ಪುರೋಹಿತ ಶಾಹಿ ಮನುವಾದಿಗಳಿಗೆ ಸಹಿಸಲಾಗದೆ ಪ್ರತಿ ಬಾರಿಯಂತೆ ವಾಮಮಾರ್ಗದ ಮೂಲಕ ಮತ್ತೆ ಅಧಿಕಾರಕ್ಕೆರುವ ಕನಸಿಗೆ ಮನುವಾದಿ ಮನಸ್ಥಿತಿಯ ಕೇಂದ್ರ ಸರ್ಕಾರ ಸಂವಿಧಾನ ಬದ್ಧವಾದ ಬಸವಣ್ಣನಾಶೆಯ ಸರ್ಕಾರವನ್ನು ಕಿತ್ತೊಗೆದು ಹಿಂಬಾಗಿಲಿನ ಮೂಲಕ ಮತ್ತೆ ಮನುವಾದಿ ಸರ್ಕಾರವನ್ನು ತಂತ್ರಗಾರಿಕೆಯಿಂದ ತರಲು ತಮ್ಮ ತಾಳಕ್ಕೆ ತಕ್ಕಂತೆ ರಾಜ್ಯಪಾಲರನ್ನು ಬಳಸಿಕೊಳ್ಳುತ್ತಿರುವದು ದುರದೃಷ್ಟ ಕರವಾಗಿದೆ.

ಈ ನಾಡಿನ ಸಾಕ್ಷಿ ಪ್ರಜ್ಞೆಯಾಗಿ ಅಹಿಂದ ಜನವರ್ಗದ ಬಹುದೊಡ್ಡ ಶಕ್ತಿಯನ್ನು ಹೊಂದುಗುಡಿಸಿದ ಮಹನಾಯಕನ ಅತ್ತಿಕ್ಕುವ ಮೂಲಕ ಹಿಡಿ ರಾಜ್ಯದಲ್ಲಿ ಅಹಿಂದ ಜನವರ್ಗದ ಶಕ್ತಿಯನ್ನು ಚಿದ್ರಮಾಡಿ ಅಲ್ಲಲ್ಲಿ ಚದುರಿ ಹೋಗುವಂತೆ ಮಾಡಬೇಕೆನ್ನುವ ಹಿಡನ್ ಅಜಂಡಾವನ್ನೊಂದಿದ ಸಂಘಪರಿವಾರದ ಮನುವಾದಿ ಮನಸ್ಸಿನ ಕೇಂದ್ರ ಸರ್ಕಾರ ಈ ಕರ್ಮವನ್ನು ಖಂಡಿಸಿ ಅಹಿಂದ ಜನ ಸಮೂದಾಯಗಳು ಇವತ್ತು ರಾಜ್ಯಾದ್ಯಂತ ಮಾತ್ರವಲ್ಲದೆ ದೇಶದ ತುಂಬ ಬಿದಿಗಿಳಿದು ಸಿಎಮ್ ಶ್ರೀ ಸಿದ್ದರಾಮಯ್ಯನವರಿಗೆ ರಾಜ್ಯಪಾಲರು ನೀಡಿದ ನೋಟಿಸ್ ವಾಪಸ ಪಡೆದಕೊಳ್ಳಬೇಕೆಂಬ ಚಳುವಳಿಯನ್ನು ಮಾಡಬೇಕಾಗದ ಅನಿವಾರ್ತೆ ಅಹಿಂದ ಜನ ಸಮೂದಾಯಕ್ಕಿದೆ, ಹೀಗಾಗಿ ಅಹಿಂದ ಸಂಘಟಕರು ಮತ್ತು ಬಸವವಾದಿ ಚಿಂತಕರು ಮತ್ತು ಬುದ್ಧ ಬಸವ ಅಂಬೇಡ್ಕರ್ ಪೇರಿಯಾರ ನಾರಯಣಗುರು ಮೊದಲಾದ ಸಮಾಜಿಕ ಸುಧಾರಕರ ಅರಿವಿನ ಪ್ರಜ್ಞೆಯ ಜನಗಳು ಹೆಚ್ಚೆತ್ತು ಕೊಳ್ಳಬೇಕು,

ಹಿಡಿ ದೇಶದಲ್ಲಿ ಮೋದಿಜಿಯವರ ದುರಾಡಳಿತವನ್ನು ಗಟ್ಟಿಯಾಗಿ ವಿರೋಧಿಸುವ ಕೆಲವೇ ಕೆಲವು ನಾಯಕರಲ್ಲಿ ಇವರು ಒಬ್ಬರಾಗಿದ್ದಾರೆ ಹೀಗಾಗಿ ಹೇಗಾದರು ಮಾಡಿ ಅವರ ಕಥೆಮುಗಿಸಬೇಕೆನ್ನುವ ಮೋದಿಜಿಯವರು ಮತ್ತು ಅವರ ಸರ್ಕಾರ ಸಂವಿಧಾನ ಬದ್ಧ ಅಧಿಕಾರ ಹೊಂದಿರುವ ರಾಜ್ಯಪಾಲರನ್ನು ದುರ್ಬಳಕೆ ಮಾಡಿಕೊಳ್ಳಲು ಮಾನ್ಯ ಗೌರವಾನ್ವಿತ ರಾಜ್ಯಪಾಲರು ಅವಕಾಶ ಕೊಡದೆ ಸಿಎಮ್ ಗೆ ನೀಡಿದ ನೋಟಿಸ್ ವಾಪಸ ಪಡೆದು ಕೊಳ್ಳಬೇಕು, ಮತ್ತು ಹುದ್ದೇಯ ಘನತೆಯನ್ನು ಎತ್ತಿಹಿಡಯಬೇಕು.

ಹಗರಣದ ತನಿಖೆಗೆ ನೇಮಕವಾದ ಆಯೋಗ ನಿಷ್ಪಕ್ಷಪಾತವಾಗಿ ತನಿಖೆ ನಡಿಸಲು ಸರ್ಕಾರ ಸಹಕರಿಸುವಂತೆ ಸೂಚಿಸಲಿ, ತನಿಖೆಯಿಂದ ಸತ್ಯ ಅಸತ್ಯ ಹೊರಬರಲಿ ಆದರೆ ರಾಜಕೀಯ ಕಾರಣಕ್ಕಾಗಿ ದುರಾಲೋಚನೆಯಿಂದ ರಾಜ್ಯ ಕಂಡ ಮಹಾನ್ ದಕ್ಷ ಪ್ರಮಾಣಿಕ ಆಡಳಿತಗಾರ ಶ್ರೀ ಸಿದ್ದರಾಮಯ್ಯ ನವರನ್ನು ಕಟ್ಟಿ ಹಾಕುವ ಕೇಲಸ ಮುಂದುವರಿದರೆ ರಾಜ್ಯಾದ್ಯಂತ ಹೋರಾಟ ಮಾಡಬೇಕಾಗುತ್ತದೆ ಶ್ರೀ ಸಿದ್ದರಾಮಯ್ಯ ನವರು ಜಾತಿ ಧರ್ಮಗಳಾಚೆ ಸರ್ವಧರ್ಮಗಳ ಸಮನ್ವಯದ ಜಾತ್ಯಾತೀತ ನಾಯಕರಾಗಿದ್ದಾರೆ, ಈ ನಾಡಿನ ನೆಲಮೂಲ ಜನಗಳ ಅಸ್ಮಿತಿಯಾಗಿದ್ದಾರೆ,ಅವರನ್ನು ದುರ್ಬಲಗೊಳಿಸುವ ಮೂಲಕ ಈ ನೆಲದ ಜನರ ಸಾಮಾಜಿಕ ಆಸೆಯವನ್ನು ಚಿದ್ರಮಾಡಿ ಪ್ರಭುತ್ವವನ್ನು ಎರುವ ಮೂಲಕ ಸಂವಿಧಾನದಾಕ್ಕೆ ಕೊಳ್ಳಿಹಿಡುವ ಕೆಲಸಕ್ಕೆ ಮಾನ್ಯ ಗೌರವಾನ್ವಿತ ರಾಜ್ಯಪಾಲರು ಅವಕಾಶ ನೀಡಬಾರದೆಂದು ಮಾಧ್ಯಮಗಳ ಮೂಲಕ ಮನವಿ ಮಾಡಿಕೊಂಡಿದ್ದಾರೆ, ಶ್ರೀ ಕನಕ ಯುವ ಸೇನೆಯ ಶಹಾಪೂರ ತಾಲೂಕ ಅದ್ಯಕ್ಷರು ಶರಣು ಪೂಜಾರಿ ಹುರಸಗುಂಡಗಿ.

– ಶ್ರೀ ಶರಣು ಪೂಜಾರಿ ಹುರಸಗುಂಡಗಿ
ಕನಕ ಯುವ ಸೇನೆ ಅಧ್ಯಕ್ಷರು, ಶಹಾಪುರ.