
ಸೆಕ್ಯುಲರ್ ವಾಯ್ಸ್ ನ್ಯೂಸ್ ಯಾದಗಿರಿ
ಸಾಮಾಜಿಕ ಕಳಕಳಿ, ಹಿಡಿದ ಕೆಲಸವನ್ನು ನೆರವೇರಿಸಿಕೊಡದೆ ಬಿಡದ ವ್ಯಕ್ತಿ ಮಲ್ಲಯ್ಯ ಪೊಲಂಪಲ್ಲಿ. ಕನ್ನಡ ಪ್ರಭಾ ಪತ್ರಿಕೆಯ ತಾಲೂಕು ವರದಿಗಾರರಾಗಿ ತಮ್ಮ ಪತ್ರಿಕೆಯಲ್ಲಿ ಮಾನವೀಯ ವರದಿ ವಿಶ್ಲೇಷಣಾ ಬರಹಗಳೊಂದಿಗೆ ಪತ್ರಿಕಾ ಮಾಧ್ಯಮಕ್ಕೆ ವಿಶೇಷ ಚಾಪನ್ನು ನೀಡಿದ ವ್ಯಕ್ತಿ ಪೊಲಂಪಲ್ಲಿಯವರು ಎಂದು ಸಾಂಸ್ಕೃತಿಕ ಚಿಂತಕರಾದ ಡಾ. ಬಸವರಾಜ ಇಜೇರಿ ಹೇಳಿದರು.
ತಾಲೂಕಿನ ದೋರನಹಳ್ಳಿ ಗ್ರಾಮದ ಚಿಕ್ಕಮಠದಲ್ಲಿ ಸೃಜನಶೀಲ ಸಾಂಸ್ಕೃತಿಕ ಸಂಘದ ವತಿಯಿಂದ ನಡೆದ ರಂಗಭೂಮಿ ಬೆಳವಣಿಗೆಯಲ್ಲಿ ಮಾಧ್ಯಮಗಳ ಪಾತ್ರ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮನ್ನು ಉದ್ಘಾಟಿಸಿ ಮಾತನಾಡಿದರು.
ಸಾಮಾಜಿಕ, ರಾಜಕೀಯ ಮತ್ತು ಸಾಂಸ್ಕೃತಿಕ ವಲಯಗಳು ಅದೆಷ್ಟೇ ಕಲುಷಿತಗೊಂಡಿದ್ದರೂ ಅವುಗಳ ನಡುವೆಯೇ ಇದ್ದು ಅವುಗಳನ್ನು ಮಾನವೀಯಗೊಳಿಸುವ, ನ್ಯಾಯಬದ್ಧಗೊಳಿಸುವ ಹಾಗೂ ಆ ದಿಕ್ಕಿನಲ್ಲಿ ಜನಸಮುದಾಯಗಳನ್ನು ವೈಚಾರಿಕವಾಗಿ ಎಚ್ಚರಿಸಗೊಳಿಸುವುದಕ್ಕಾಗಿ ಚಳವಳಿ ಮಾದರಿಯಲ್ಲಿ ವರದಿ ಮಾಡುತ್ತಿರುವ ಪತ್ರಿಕಾ ಮಾಧ್ಯಮಗಳು ಪಾತ್ರ ಪ್ರಮುಖವಾಗಿದೆ ಎಂದರು.
ಉಪನ್ಯಾಸಕರಾದ ರಾಘವೇಂದ್ರ ಹಾರಣಗೇರಾ ಮಾತನಾಡಿ, ಮೂಲಭೂತವಾಗಿ ವೃತಿ ಹಾಗೂ ಹವ್ಯಾಸಿ ಎನ್ನುವ ಕವಲುಗಳನ್ನು ಹೊಂದಿರುವ ಕನ್ನಡ ರಂಗಭೂಮಿಯ ಬೆಳವಣಿಗೆಗೆ ಪೂರಕವಾಗಿ ಪತ್ರಿಕೆಗಳು ಮಹತ್ವದ ಕೆಲಸವನ್ನು ಕಾಲಕಾಲಕ್ಕೆ ಮಾಡುತ್ತಲೇ ಬಂದಿವೆ ಎಂದು ತಿಳಿಸಿದರು.ಚಲನಚಿತ್ರ ಹಾಗೂ ಟಿವಿಯಂತಹ ಮನರಂಜನಾತ್ಮಕ ದೃಶ್ಯಮಾಧ್ಯಮಗಳ ಹೊಡೆತವನ್ನು ಸಹಿಸಿಕೊಂಡೂ ರಂಗಕಲೆ ಇನ್ನೂ ಜನರ ನಡುವೆ ಪ್ರಚಲಿತದಲ್ಲಿ ಇದೆ ಎನ್ನುವುದಕ್ಕೆ ಪರೋಕ್ಷವಾಗಿ ಅಕ್ಷರ ಮಾಧ್ಯಮಗಳೂ ಕಾರಣವಾಗಿವೆ ಎಂದು ಹೇಳಿದರು.
ಪ್ರಶಸ್ತಿ ಪುರಸ್ಕೃತ ಮಲ್ಲಯ್ಯ ಪೋಲಂಪಲ್ಲಿ ಮಾತನಾಡಿ, ರಂಗಭೂಮಿ ಕಲಾವಿದ ಶ್ರೀನಿವಾಸ ಕಶೇಟ್ಟಿಯವರು ಸಂಘವನ್ನು ಕಟ್ಟಿಗೊಂಡು ಗ್ರಾಮೀಣ ಪ್ರದೇಶಗಳಲ್ಲಿ ರಂಗಭೂಮಿ ಕುರಿತು ಜಾಗೃತಿ ಮೂಡಿಸುವ ಕಾರ್ಯಗಳನ್ನು ಮಾಡುವ ಜೊತೆಗೆ ಸಾಧಕರನ್ನು ಗುರುತಿಸಿ ಗೌರವಿಸುತ್ತಿರುವ ಕಾರ್ಯ ಮಾದರಿಯಾಗಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಗ್ರಾಮದ ಮಕ್ಕಳ ರೂಲ್ ಮಾಡಲ್ ಕೀರು ಚಿತ್ರವನ್ನು ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಪತ್ರಕರ್ತ ವಿಶಾಲ ಶಿಂಧೆ,ಬಸವರಾಜ ಕರೆಗಾರ,ನಾಗರಾಜ ಕೊಟೆ,ಗ್ರಾಮದ ಮಹಾಂತಪ್ಪ ನಂದಿಕೋಲ, ಸಿದ್ದು ಗಣೇರ್ ,ಮಲ್ಲಿಕಾರ್ಜುನ ಪೂಜಾರಿ,ಮಹಾಂತೇಶ ಮಲಗೊಂಡ,ಹಳ್ಳೆಪ್ಪ ಬಾಯಿಗೊಳ,ಬಿರಪ್ಪ ಕೊಂತಲ,ಮೌನೇಶ ಕೊಂತಲ್,ಸಿದ್ದು,ಶ್ರೀಧರ ಕಂಚಗಾರ,ಅಯ್ಯಪ್ಪ ದೊರೆ,
ಅವಿನಾಶ ಪೋಲಂಪಲ್ಲಿ ಸೇರಿದಂತೆ ಇತರರು ಇದ್ದರು
ಸಂಘದ ಅಧ್ಯಕ್ಷ ಶ್ರೀನಿವಾಸ ಕಶೇಟ್ಟಿ ದೋರನಹಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಸಿದ್ಧಾರೂಢ ಶಾಲೆಯ ಮುಖ್ಯಗುರು ಯಮನಪ್ಪ ಮುಕುಡಿ ಸ್ವಾಗತಿಸಿದರು.
ಮಹೇಶ ಪತ್ತಾರ ಕಾರ್ಯಕ್ರಮ ನಿರೂಪಿಸಿದರು ವಂದಿಸಿದರು
