ಸಿಎಂ ಸಿದ್ದರಾಮಯ್ಯನವರನ್ನು ಕೆಳಗಿಳಿಸಲು ಪ್ರಯತ್ನಿಸಿದರೆ ಉಗ್ರ ಹೋರಾಟ

By admin

ಸೆಕ್ಯುಲರ್ ವಾಯ್ಸ್ ನ್ಯೂಸ್ ಯಾದಗಿರಿ

ನೊಂದವರ ಪಾಲಿಗೆ,ಬಡವರಿಗೆ, ಮಹಿಳೆಯರಿಗೆ, ವಿದ್ಯಾರ್ಥಿಗಳಿಗೆ, ಹಸಿದವರ ಪಾಲಿಗೆ ಅನ್ನರಾಮಯ್ಯರಾಗಿ ಕಾರ್ಯಕ್ರಮ ಕೊಟ್ಟದ್ದಕಾಗಿಯೇ, ಹೆಜ್ಜೆ ಹೆಜ್ಜೆಗೂ ಅಪಪ್ರಚಾರಕ್ಕೆ ದುಷ್ಟರ ಕೋಪಕ್ಕೆ ಗುರಿಯಾದವರೇ ಸಿಎಂ. ಸಿದ್ದರಾಮಯ್ಯನವರು ಅನ್ನಿಸುತ್ತದೆ ಎಂದು ಕರ್ನಾಟಕ ಯುವ ಕುರುಬರ ಸಂಘದ ಮಹಿಳಾ ರಾಜ್ಯಾಧ್ಯಕ್ಷರಾದ ಮಂಜುಳಾ ನಾರಾಯಣ ಬಿಜೆಪಿ-ಜೆಡಿಎಸ್ ವಿರುದ್ಧ ಕಿಡಿಕಾರಿದರು.

ಪತ್ರಿಕಾ ಹೇಳಿಕೆಯಲ್ಲಿ ಮಾತನಾಡಿದ ಅವರು,

ದೇವರಾಜ ಅರಸು ಅವರನ್ನು ಬಿಟ್ರೆ ಐದು ವರ್ಷ ಸತತವಾಗಿ ಕಪ್ಪು ಚುಕ್ಕಿ ಇಲ್ಲದೆ ಆಡಳಿತ ನಡೆಸಿ ಎರಡನೇ ಅವಧಿಗೆ ಮುಖ್ಯ ಮಂತ್ರಿಯಾದವರು ಸಿದ್ದರಾಮಯ್ಯನವರು. ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ಸಲ್ಲದ ಕುತಂತ್ರ ನಡೆಸುತ್ತಿದಾರೆ.ಧರ್ಮ-ಧರ್ಮಗಳ ಮಧ್ಯೆ ಬೆಂಕಿಹಚ್ಚಿ ಓಟು ಕೇಳಿಲ್ವಾಲ್ಲ, ಅದುಕೋಸ್ಕರ ಅವ್ರನ್ನ ಕೆಳಗೆ ಇಳಿಸಬೇಕಾ.ಮೇಲ್ವರ್ಗದವರಿಗೆ ಗೊಡ್ಡು ಸಲಾಂ ಹೊಡೆದು ರಾಜಕಾರಣ ಮಾಡಲಿಲ್ಲ. ಕೊಟ್ಟ ಅಷ್ಟು ಗ್ಯಾರಂಟಿಗಳನ್ನು ಈಡೇರಿಸಿ ನುಡಿದಂತೆ ನಡೆದರು.
ಬಡವರ ಪ್ರತಿನಿಧಿಯಾಗಿ ದೇಶದಲ್ಲಿ ನಂಬರ್ ಒನ್ ಮುಖ್ಯ ಮಂತ್ರಿಯಾದರು. ಯಾವ ಕಾರಣಕ್ಕೆ ಅವರನ್ನು
ಮುಖ್ಯಮಂತ್ರಿ ಸ್ಥಾನದಿಂದ
ಕೆಳಗೆ ಇಳಿಸುವದಕ್ಕೆ ಕುತಂತ್ರ ಮಾಡಿದ್ದಾರೆ ಆರೋಪಿಸಿದರು.ಸಿದ್ದರಾಮಯ್ಯನವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಲು ಪ್ರಯತ್ನಿಸಿದರೆ ಕುರುಬ ಸಮುದಾಯದಿಂದ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.