
ಸೆಕ್ಯುಲರ್ ವಾಯ್ಸ್ ನ್ಯೂಸ್ ಯಾದಗಿರಿ
ಜಿಲ್ಲೆಯ ಹತ್ತಿಕುಣಿ ಗ್ರಾಮದಲ್ಲಿ ಆರೋಗ್ಯ ಮೇಳ ಕಾರ್ಯಕ್ರಮ ವಿಶ್ವ ಅಂಗಾಂಗ ದಾನಿಗಳ ದಿನಾಚರಣೆ ಮಹತ್ವದ ಕುರಿತು ಹಮ್ಮಿಕೊಳ್ಳಲಾಯಿತು ಎಂದು ಯಾದಗಿರಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಅವರು ತಿಳಿಸಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಪ್ರಾ.ಆ.ಕೇಂದ್ರ ಹತ್ತಿಕುಣಿ ಇವುಗಳ ಸಹಯೋಗದಲ್ಲಿ ಆರೋಗ್ಯ ಮೇಳ ಕುರಿತು ಗ್ರಾಮ ಪಂಚಾಯತ್ ಅಧ್ಯಕ್ಷರು ಶ್ರೀಮತಿ ಅನ್ನಪೂರ್ಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಯಾದಗಿರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ.ಎಮ್.ಎಸ್.ಪಾಟಿಲ್ ಅವರು ಮಾತನಾಡಿದರು, ಅಂಗಾಂಗ ದಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಅಂಗಾಂಗ ದಾನದ ತಪ್ಪು ಕಲ್ಪನೆಗಳ ಬಗ್ಗೆ ಜನರಿಗೆ ಅರಿವು ಮೂಡಿಸಲು ಜಾಗತಿಕವಾಗಿ ಪ್ರತಿ ವರ್ಷ ಆಗಸ್ಟ್ 13 ರಂದು ವಿಶ್ವ ಅಂಗದಾನ ದಿನವನ್ನು ಆಚರಿಸಲಾಗುತ್ತದೆ. ಈ ಉದಾತ್ತ ಘಟನೆಯಲ್ಲಿ ತೊಡಗಿರುವ ಸಂಸ್ಥೆಗಳ ಏಕೈಕ ಗುರಿಯು ಮುಖ್ಯವಾಗಿ ಹೆಚ್ಚಿನ ಜೀವಗಳನ್ನು ಉಳಿಸಲು ಮರಣದ ನಂತರ ಅಂಗಗಳನ್ನು ದಾನ ಮಾಡುವ ಪ್ರಾಮುಖ್ಯತೆಯ ಬಗ್ಗೆ ಜನರನ್ನು ಪ್ರೋತ್ಸಾಹಿಸುವುದು ಮತ್ತು ಶಿಕ್ಷಣ ನೀಡುವುದು. ಮೂತ್ರಪಿಂಡಗಳು, ಹೃದಯ, ಮೇದೋಜ್ಜೀರಕ ಗ್ರಂಥಿ, ಕಣ್ಣು ಮತ್ತು ಶ್ವಾಸಕೋಶದಂತಹ ಅಂಗಾAಗಗಳನ್ನು ದಾನ ಮಾಡುವುದರಿಂದ ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿರುವ ಜನರ ಜೀವವನ್ನು ಉಳಿಸಬಹುದು ಅಂಗಾಂಗ ಲಭ್ಯತೆಯ ಕೊರತೆಯಿಂದ ಅನೇಕ ನಿರ್ಗತಿಕ ರೋಗಿಗಳು ಪ್ರಾಣ ಕಳೆದುಕೊಳ್ಳುತ್ತಾರೆ. ಒಂದು ಉಪಕ್ರಮವು ಹೃದಯಗಳು, ಮೂತ್ರಪಿಂಡಗಳು, ಮೇದೋಜ್ಜೀರಕ ಗ್ರಂಥಿ, ಶ್ವಾಸಕೋಶಗಳು, ಯಕೃತ್ತುಗಳು, ಕರುಳುಗಳು, ಕೈಗಳು, ಮುಖಗಳು, ಅಂಗಾAಶಗಳು, ಮೂಳೆ ಮಜ್ಜೆ ಮತ್ತು ಕಾಂಡಕೋಶ ದಾನ ಮಾಡುವ ಮೂಲಕ ಎಂಟು ಜೀವ ಉಳಿಸಬಹುದು ಎಂದು ಸಲಹೆ ನೀಡಿದರು.
ಜಿಲ್ಲಾ ಮಲೇರಿಯಾ ನಿಯಂತ್ರಣಾ ಅಧಿಕಾರಿಗಳಾದ ಡಾ.ಸಾಜೀದ್ ಅವರು ಮಾತನಾಡಿ, ಮಳೆಗಾಲ ಆರಂಭವಾಗಿರುವುದರಿಂದ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗುತ್ತವೆ ಹಾಗೂ ಸೊಂಕಿತ ಸೊಳ್ಳೆಗಳ ಕಚ್ಚುವುದರಿಂದ ರೋಗ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಆದ್ದರಿಂದ ಮನೆಯ ಒಳಗೆ ಮತ್ತು ಹೊರಗೆ ಸ್ವಚ್ಛತೆ ಕಾಪಡಿಕೊಳ್ಳುವಂತೆ, ನೀರು ನಿಲ್ಲದಂತೆ, ಲಾರ್ವಾಗಳು ಉತ್ಪತ್ತಿ ಆಗದಂತೆ, ನೋಡಿಕೊಳ್ಳುವುದು. ವಿಶ್ರಾಂತಿ ಪಡೆಯುವಾಗ ತಪ್ಪದೆ ಸೊಳ್ಳೆ ಪರದೆ ಹಾಗೂ ಸೊಳ್ಳೆ ನಿರೋದಕಗಳನ್ನು ಬಳಸುವಂತೆ ಹಾಗೂ ಯಾವುದೇ ಜ್ಬರ ವಿರಲಿ ಸಮೀಪದ ಆಸ್ಪತ್ರೆ ಹೋಗಿ ರಕ್ತ ಪರೀಕ್ಷೆ ಮಾಡಿಸಿಕೋಡು ಚಿಕಿತ್ಸೆ ಪಡೆಯಬೆಕೇಂದು ತಿಳಿಸಿದರು.
ಯಾದಗಿರಿ ತಾಲ್ಲೂಕ ಆರೋಗ್ಯ ಅಧಿಕಾರಿಗಳಾದ ಡಾ.ಹನುಮಂತ ರೆಡ್ಡಿ ಮದನಿ ಮಾತನಾಡಿ ಮಾತನಾಡಿ, ಕ್ಷಯರೋಗ ಒಂದು ಸಾಂಕ್ರಮಿಕ ರೋಗವಾಗಿದ್ದು, ಕ್ಷಯರೋಗಿಯು ಕೆಮ್ಮುವುದರಿಂದ ಗಾಳಿಯ ಮುಖಾಂತರ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಸತತವಾಗಿ 2ವಾರ ಮೇಲ್ಪಟ್ಟ ಕೆಮ್ಮು ಇದ್ದರೆ, ಸಾಂಯಕಾಲ ಜ್ವರ ಬರುತ್ತಿದ್ದರೆ, ರಕ್ತ ಮಿಶ್ರಿತ ಕಫ ಬೀಳುತ್ತಿದ್ದರೆ, ತೂಕ ಕಡಿಮೆ, ಹಾಗೂ ಹಸಿವು ಆಗದೆ ಇದ್ದರೆ ಇದು ಕ್ಷಯರೋಗದ ಲಕ್ಷಣ ಇದ್ದರೂ ಇರಬಹುದೆಂದು ಸಮೀಪದ ಸರ್ಕಾರಿ ಆಸ್ಪತ್ರೆಗೆ ಹೋಗಿ ಕಫ ಪರೀಕ್ಷೆ ಮಾಡಿಕೊಂಡು ಸೂಕ್ತ ಚಿಕಿತ್ಸೆ ಪಡೆದುಕೊಂಡು ಆರೋಗ್ಯವಂತರಾಗುವಂತೆ ತಿಳಿಸಿದರು. ಆರೋಗ್ಯ ಇಲಾಖೆಯ ಅಡಿಯಲ್ಲಿ ಸಿಗುವ ಕುಟುಂಬ ಕಲ್ಯಾಣ ಸೇವೆ ಮತ್ತು ಸೌಲಭ್ಯಗಳನ್ನು ಪಡೆದುಕೊಂಡು ಮತ್ತು ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಆಡಳಿತ ವೈದ್ಯಾಧಿಕಾರಿ ಡಾ.ಮುದಾಸ್ಸಿರ್ ಅಹ್ಮದ್, ವೈದ್ಯಾಧಿಕಾರಿ ಡಾ.ಬಸರೆಡ್ಡಿ, ಡಾ.ರಶೀದ್ ಡಾ.ಸುನಿತಾ, ಡಾ.ಮಾಹಂತೇಶ್ವರಿ, ಸುದರ್ಶನ, ಶಂಕರಾನAದ, ಬಾಗಪ್ಪ, ರಾಣೋಜಿ, ಹೀರಾಲಾಲ್, ಕೆ.ಬಿ. ಪತ್ತಾರ್, ರವಿಬಂಡಿ, ಹನುಮಂತ್‌ರಾಯ ಕುಲ್ಕರ್ಣಿ, ಮಹಿಬೂಬ್, ಖಲಿಮುದ್ದಿನ್, ದೇವಿಂದ್ರಪ್ಪ, ಹಣಮಂತ, ಶ್ರೀಮತಿ ನೀಲಮ್ಮ, ಶ್ರೀಮತಿ ರುಕ್ಮಿಣಿ, ಶ್ರೀಮತಿ ಸುಶೀಲಮ್ಮ, ಶ್ರೀಮತಿ ಪುಶ್ಪಾಂಜಲಿ, ಕು.ಅಮರಗುಂಡೇಶ್ವರಿ, ಕು.ಎಂಜಲಿನಾ, ರವೀಕುಮಾರ ಕಾರ್ಯದರ್ಶಿ, ಬಸವರಾಜ ಮು.ಗು, ಮಹ್ಮದ್ ಪ್ರಾಂಶುಪಾಲರು, ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳು, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಗ್ರಾ.ಪಂ.ಸಿಬ್ಬಂದಗಳು ಉಪಸ್ಥಿತರಿದ್ದರು. ಯಾದಗಿರಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳಾದ ತುಳಸಿರಾಮ ಚವ್ಹಾಣ ಅವರು ನಿರೂಪಿಸಿದರು. ಸಿ.ಹೆಚ್.ಒ.ಶಂಕರ್ ಸ್ವಾಗತಿಸಿದರು, ಜಿಲ್ಲಾ ಆರೋಗ್ಯ ಮೆಲ್ವಿಚಾರಣಾ ಅಧಿಕಾರಿ ಶಾಂತಿಲಾಲ್ ವಂದನಾರ್ಪಣೆ ನೇರವರಿಸಿದರು.
