ಶ್ರಾವಣ ಮಾಸದಿಂದ ಮೌಲ್ಯಯುತ ಸಂಸ್ಕಾರ ಬೆಳೆಯಲು ಸಾಧ್ಯ

By admin
ಸೆಕ್ಯುಲರ್ ವಾಯ್ಸ್ ನ್ಯೂಸ್ ತಾಳಿಕೋಟೆ 
ಶ್ರಾವಣ ಮಾಸದಲ್ಲಿ ಶಿವ ಧ್ಯಾನದೊಂದಿಗೆ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಪ್ರತಿಯೊಬ್ಬರಲ್ಲೂ ಮೌಲ್ಯಯುತ ಸಂಸ್ಕಾರ ಬೆಳೆಯಲು ಸಾಧ್ಯ ಎಂದು ಅಶ್ವಿನಿ ಅಂಗಡಿ ಹೇಳಿದರು.
ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಹತ್ತಿರದ ಸಭಾಭವನದಲ್ಲಿ ಶ್ರೀ ಸಿದ್ದ ಬಸವ ಸಾಂಸ್ಕೃತಿಕ ಪ್ರತಿಷ್ಠಾನ ವಿಜಯಪುರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿಜಯಪುರ ಸಂಯೋಗದಲ್ಲಿ ಶ್ರಾವಣ ಸಂಭ್ರಮ ಮತ್ತು  ಸಾಂಸ್ಕೃತಿಕ ಕಾರ್ಯಕ್ರಮನ್ನು ಉದ್ಘಾಟಿಸಿ ಮಾತನಾಡಿದರು.
ಯುವ ಮುಖಂಡ ಶಿವಕುಮಾರ ನಾಟೇಕರ್ ಮಾತನಾಡಿ ಶ್ರಾವಣ ಮಾಸವೆಂದರೆ ನವೋಲ್ಲಾಸ,ನವ ಚೈತನ್ಯಕ್ಕೆ ಪರ್ಯಾಯ ಹಬ್ಬವಿದ್ದಂತೆ,ಹೊಸ ನೀರು,ಹೊಸ ಚಿಗುರು,ಹೊಸ ಪುಷ್ಪಗಳ ಘಮದೊಂದಿಗೆ ಹಬ್ಬಗಳ ಮೆರವಣಿಗೆ ಸಾಗುವ ಪರ್ವಕಾಲ ಎಂದು ಹೇಳಬಹುದು ಅದರಿಂದ ಇಂತ ಹಬ್ಬಗಳಲ್ಲಿ ಪ್ರತಿಯೊಬ್ಬರೂ ಭಾಗಿಯಾಗಿ,ಉತ್ತಮ ಸಂಸ್ಕಾರದ ಜೀವನ ನಡೆಸಲು ಸಲಹೆ ನೀಡಿದರು.
ಈ ಸಮಾರಂಭದ ವೇದಿಕೆಯ ಮೇಲೆ ದಲಿತ ಮುಖಂಡ ಪರಮಣ್ಣ ಬಿ. ಪ್ರಗತಿಪರ ಚಿಂತಕ ಅಮೃತರಾವ್ ಬಿರಾದಾರ್,ಸಿದ್ದಬಸವ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಪ್ರಶಾಂತ್ ಭಂಗಿ ಸೇರಿದಂತೆ ಇತರರು ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿಜಯಪುರ ಪ್ರಾಯೋಜತ ಕಾರ್ಯಕ್ರಮಗಳಾದ ಸಂದೀಪ್ ಕೊಪ್ಪದ ಸಮೂಹ ನೃತ್ಯ, ಶ್ರೀಶೈಲ ಬಾದನ್ ಮತ್ತು ತಂಡದವರಿಂದ ತತ್ವಪದ,ಶೃತಿ ಸಂತೋಷ್ ಭೂಸನೂರ ಮತ್ತು ತಂಡದವರಿಂದ ಸಮೂಹ ಭರತನಾಟ್ಯ,ಸವಿತಾ ಕೆ ಮತ್ತು ತಂಡದವರಿಂದ ಜಾನಪದ ಸಂಗೀತ ಸಿದ್ದರಾಮಯ್ಯ ಮತ್ತು ತಂಡದವರಿಂದ ಸುಗಮ ಸಂಗೀತ ಕಾರ್ಯಕ್ರಮಗಳು ಜರುಗಿದವು, ಜಗದೀಶ್ ನಿರೂಪಿಸಿ ಸ್ವಾಗತಿಸಿದರು, ಧರಿಯಪ್ಪ ವಂದಿಸಿದರು.