ಸತ್ಯಕ್ಕೆ ಜಯ ತಂದ ಮಹಾಭಾರತ ಸಾರಥಿ ಶ್ರೀಕೃಷ್ಣ ಪರಮಾತ್ಮ

By admin

ಖ್ಯಾತ ಲೇಖಕ:- ಶ್ರೀಶೈಲ ಬಿರಾದಾರ ನಾಗನಟಗಿ

ಭಾರತ ಮಹಾಕಾವ್ಯಗಳಲ್ಲೊಂದಾದ ವ್ಯಾಸಮುನಿ ವಿರಚಿತ ಮಹಾಭಾರತದೊಳಗಿನ ಪಾಂಡವರು ಮತ್ತು ಕೌವರವರ ನಡುವಿನ ದಾಹಿದಿಗಳ ಕಲಹದಲ್ಲಿ ನ್ಯಾಯೋಚಿತವಾಗಿರುವ ಪಾಂಡವರ ಕಡೆ ನಿಂತು ಅನ್ಯಾಯವನ್ನು ಸೋಲಿಸಿ ನ್ಯಾಯ ಗೆಲ್ಲುವಂತೆ ಮಾಡಿದರು,ಸತ್ಯ ಮತ್ತು ನ್ಯಾಯಕ್ಕೆ ನೂರಾರು ನೋವು, ಸಾವಿರಾರು ಸಂಕಟಗಳು ಬಂದರು ಕೊನೆಗೆ ಸತ್ಯ ಮತ್ತು ನ್ಯಾಯವೆ ಗೆಲ್ಲುತ್ತದೆಂದು ಜಗಕ್ಕೆ ಸಂದೇಶವನ್ನು ಸಾರಿ ಹೇಳಿದ ಭಗವಾನ್ ಶ್ರೀಕೃಷ್ಣ ಪರಮಾತ್ಮರು ಜನಿಸಿದ್ದೆ “ದೃಷ್ಟರ ಸಂಹಾರ ಮತ್ತು ಶಿಷ್ಟರ ರಕ್ಷಣೆಗಾಗಿ” ಆದ್ದರಿಂದವರು ಭರತ ಭೂಮಿಯ ಬಹು ಜನಗಳ ಆರಾಧ್ಯ ದೇವರುಗಳಲ್ಲಿ ಒಬ್ಬರಾಗಿದ್ದರೆ,ಮಹಾನ್ ಜಗನ್ನ ನಾಟಕಕಾರ ಶ್ರೀಕೃಷ್ಣ ಪರಮಾತ್ಮನ ಚರಿತ್ರೆಗೆ ಸಂಬಂಧಿಸಿದ ಅನೇಕ ಕಥೆಗಳು ನಮಗೆ ಭಾಗವತ,ರಾಮಾಯಣ, ಮಹಾಭಾರತ, ವಿಷ್ಣು ಪುರಾಣಗಳಲ್ಲಿರುವದು ಕಂಡುಬರುತ್ತವೆ,ಮಕ್ಕಳಿಗೆ ಮುದ್ದು ಕೃಷ್ಣ, ವಯಸ್ಕರಿಗೆ ರಾಧಾಕೃಷ್ಣ, ಹಿರಿಯರಿಗೆ ಕೃಷ್ಣ ಪರಮಾತ್ಮ ನಾಗಿ ,ಪಾಂಡವ ಕೌವರವರಿಗೆ ಹಿರಯನಾಗಿ ಎಲ್ಲರಿಗೂ ಬೇಕಾದವರು.

ಬಾಗವತದ ಕಥೆಗಳ ಪ್ರಕಾರ ತನ್ನ ದುಷ್ಟ ಸಹೋದರ ಮಾವ ಕಂಸನ ಸಂಹರಿಸಿ ಜನಗಳ ರಕ್ಷಿಸಲು ಶ್ರೀಕೃಷ್ಣ ಜನಿಸಿ ಬರುತ್ತಾನೆ ,ಮಥುರಾ ನಗರದಲ್ಲಿ ರಾಜನಾಗಿದ್ದ ಉಗ್ರಸೇನನ್ನು ಮಗ ಕಂಸ ತಂದೆಯನ್ನು ಬಂಧನದಲ್ಲಿಟ್ಟು ತಾನು ರಾಜನಾಗಿ ದೃಡಾಳಿತವನ್ನು ನಡೆಸುತ್ತಾನೆ, ತನ್ನ ತಂಗಿ ದೇವಕಿಯ ಗರ್ಭದಲ್ಲುಟ್ಟಿದ ಶಿಶುವಿನಿಂದ ತನಗೆ ಮೃತ್ಯುವಿದೆಂಬ ಅಶರಿರವಾಣಿಯನ್ನು ನಂಬಿದ ಕಂಸ ತಂಗಿ ದೇವಕಿ ಮತ್ತವಳ ಪತಿ ವಸುದೇವ ಇಬ್ಬರನ್ನೂ ಕಾರಾಗೃಹದಲ್ಲಿ ಬಂದಿಸಿ ಅವರಿಗೆ ಹುಟ್ಟುವ ಮಕ್ಕಳನ್ನು ನಿರ್ದಯೆಯಿಂದ ಕೊಲ್ಲುತ್ತಾನೆ,ಆ ದಂಪತಿಗಳ ಎಂಟನೆಯ ಮಗನಾಗಿ ಶ್ರೀಕೃಷ್ಣ ಹುಟ್ಟುತ್ತಾನೆ, ಮಗುವನ್ನು ಬುಟ್ಟಿಯಲ್ಲಿ ಹೊತ್ತುಕೊಂಡು ಗುಟ್ಟಾಗಿ ರಾತ್ರೋರಾತ್ರಿ ಕಾರಾಗೃಹದಿಂದ ತಪ್ಪಿಸಿಕೊಂಡು ಪಕ್ಕದ ಗೋಕುಲಕ್ಕೆ ಬರುತ್ತಾನೆ,ಅಲ್ಲಿ ಯಶೋದೆ ಮತ್ತು ನಂದಗೋಪರ ಹೆಣ್ಣು ಮಗುವಿನ ಸ್ಥಾನದಲ್ಲಿ ಕೃಷ್ಣನನ್ನು ಬಿಟ್ಟು ಆ ಮಗುವನ್ನೆತ್ತಿಕೊಂಡು ಕಾರಾಗೃಹಕ್ಕೆ ಮರಳುತ್ತಾನೆ, ಆ ಹೆಣ್ಣು ಮಗುಗವನ್ನೆ ಕಂಸ ದೇವಕಿಯ ಮಗುವೆಂದೇ ಭ್ರಮಿಸಿ ಕೊಲ್ಲಲು ಹೋಗುತ್ತಾನೆ, ಆದರೆ ಆ ಶಿಶು ಆಕಾಶಕ್ಕೆ ನೆಗೆದು ನಿನ್ನನ್ನು ಸಂಹಾರ ಮಾಡುವವನು ಈಗಾಗಲೇ ಈ ಭೂಮಿಮೇಲೆ ಜನ್ಮತಳೆದನೆಂದು ಹೇಳಿದಂತರ್ಧಾನದಾವಾಗುತ್ತದೆ,, ಈ ಮಾತು ಕೇಳಿ ಕೆಂಡಮಂಡಲವಾದ ಕಂಸ ಅಕ್ಕಪಕ್ಕದ ಹಳ್ಳಿಗಳಲ್ಲಿ ಹುಟ್ಟಿದ ನವಜಾತ ಶಿಶುಗಳನ್ನು ಕೊಲ್ಲಲು ರಾಕ್ಷಸರನ್ನು ಕಳಿಸುತ್ತಾನೆ ಆದರೆ ಶ್ರೀಕೃಷ್ಣ ನನ್ನು ಕೊಲ್ಳಲು ಸಾಧ್ಯವಾಗುವದಿಲ್ಲಾ, ಹೀಗಾಗಿ ಶ್ರೀಕೃಷ್ಣ ತಂದೆ ತಾಯಿ ಜೀವಂತವಿದ್ದರು ಸಾಕು ತಾಯಿ ಯಶೋಧೆ ಮತ್ತು ಸಾಕು ತಂದೆ ನಂದಗೋಪರ ಬಳಿಬೆಳೆಯ ಬೇಕಾಗುತ್ತದೆ, ಮುಂದೆ ಕೃಷ್ಣ ತನ್ನ ಅಣ್ಣಾ ಬಲರಾಮನೊಂದಿಗೆ ಮಥುರಾಗೆ ಬಂದು ಕಂಸನನ್ನು ಮಲ್ಲಯುದ್ಧದಲ್ಲಿ ಸಂಹಾರ ಮಾಡಿ ಅಜ್ಜ ಉಗ್ರಸೇನ ಮಹರಾಜರನ್ನು ಸೆರೆಯಿಂದ ಬಿಡಿಸಿ ಪಟ್ಟಾಭಿಷೇಕ ಮಾಡುತ್ತಾನೆ,
ಶ್ರೀಕೃಷ್ಣ ನ ಬಾಲ್ಯದ ಅನೇಕ ರೋಚಕ ಕಥೆಗಳಾದ ಶಕಟಾಸುರನ ವಧೆ, ಪೂತನಿಯ ವಧೆ, ಗೋಪಿಕಾ ಸ್ತ್ರೀಯರ ವಸ್ತ್ರಾಪಹರಣ, ಕಾಳಿಂಗಮರ್ದನ, ಗೋವರ್ಧನ ಗಿರಿಯ ರಕ್ಷಣೆ ಮೊದಲಾದ ಕಥೆಗಳು ಬಾಗವತದಲ್ಲಿ ಬರುತ್ತವೆ. ಭಕ್ತಿಯುಗದ ಕವಿಗಳು ಈ ಕತೆಗಳನ್ನು ಆಧರಿಸಿ ಅನೇಕ ಭಜನೆಗಳನ್ನು ರಚಿಸಿದ್ದಾರೆ. ಸೂರದಾಸರು, ಪುರಂದರದಾಸರು, ಕನಕದಾಸರು, ಮೀರಾಬಾಯಿ, ಇವರೆಲ್ಲರೂ ಶ್ರೀಕೃಷ್ಣನ ಭಕ್ತರಾಗಿದ್ದ ಕವಿಗಳು. ಶ್ರೀಕೃಷ್ಣನಿಗೆ ಬಾಲ್ಯದಲ್ಲಿ ರಾಧೆ ಎಂಬ ಪ್ರೇಯಸಿ ಇದ್ದಳು. ಶ್ರೀಕೃಷ್ಣ ಕೊಲ್ಲಕುಲವನ್ನು ತೊರೆದು ಮಥುರಾ ನಗರಕ್ಕೆ ಹೊರಟಾಗ ರಾಧೆಯನ್ನೂ ತೊರೆಯಬೇಕಾಗುತ್ತದೆ, ಆದರೆ ಭಾರತದಲ್ಲಿ, ವಿಶೇಷವಾಗಿ ಉತ್ತರಭಾರತದಲ್ಲಿ, ಇಂದಿಗೂ ಶ್ರೀಕೃಷ್ಣನ ಜೊತೆ ರಾಧೆಗೇ ಪೂಜೆ ಸಲ್ಲುತ್ತದೆ.
ರುಕ್ಮ ಎಂಬ ರಾಜನ ತಂಗಿ ರುಕ್ಮಿಣಿಯನ್ನು ಮದುವೆಯಾಗಲು ಬಯಸುತ್ತಾನೆ,ರುಕ್ಮನಿಗೆ ಶ್ರೀಕೃಷ್ಣನನ್ನು ಕಂಡರೆ ದ್ವೇಷ. ಹೀಗಾಗಿ ರುಕ್ಮಿಣಿಯನ್ನು ಅಪಹರಿಸಿಕೊಂಡು ಬಂದು ಕೃಷ್ಣ ಮದುವೆಯಾಗುತ್ತಾನೆ. ಮುಂದೆ ಜಾಂಬವತಿ ಮತ್ತು ಸತ್ಯಭಾಮೆ ಎಂಬ ಕನ್ಯೆಯರನ್ನೂ ಕೃಷ್ಣ ವಿವಾಹವಾಗುತ್ತಾನೆ.

ಮಹಾಭಾರತದಲ್ಲಿ ಶ್ರೀ ಕೃಷ್ಣನದು ಪ್ರಮುಖ ಪಾತ್ರವಿದೆ ಪಾಂಡವರ ತಾಯಿ ಕುಂತಿ ಶ್ರೀಕೃಷ್ಣನ ತಂದೆಯಾದ ವಸುದೇವನ ತಂಗಿ,ಜೂಜಿನಲ್ಲಿ ಪಾಂಡವರು ಸೋತಾಗ ಕೌರವರು ದ್ರೌಪದಿಯ ವಸ್ತ್ರಾಪಹರಣಕ್ಕೆ ಪ್ರಯತ್ನಿಸುತ್ತಾರೆ. ಆಗ ದ್ರೌಪದಿಗೆ ಅಕ್ಷಯವಸ್ತ್ರವನ್ನು ಕರುಣಿಸುವ ಮೂಲಕ ಅವಳ ಮಾನರಕ್ಷಣೆ ಮಾಡುತ್ತಾನೆ,
ಕುರುಕ್ಷೇತ್ರದ ಯುದ್ಧದಲ್ಲಿ ಅರ್ಜುನನ ಸಾರಥಿಯಾಗಿ ಪಾಲ್ಗೊಳ್ಳುತ್ತಾನೆ.ಯುದ್ಧರಂಗದಲ್ಲಿ ತನ್ನ ಗುರು-ಬಂಧು-ಮಿತ್ರರೊಂದಿಗೆ ಯುದ್ಧ ಮಾಡಲು ನಿರಾಕರಿಸುವ ಅರ್ಜುನನಿಗೆ ಮಾಡುವ ಉಪದೇಶವೇ ಹಿಂದೂಗಳ ಪವಿತ್ರ ಗ್ರಂಥವಾಗಿ ಭಗವದ್ಗೀತೆ ಪ್ರಸಿದ್ಧವಾಗಿದೆ,ಕೃಷ್ಣ ಏಕಾಂಗಿಯಾಗಿ, ಆಯುಧಗಳು ಇಲ್ಲದೆಯೇ ಕುರುಕ್ಷೇತ್ರ ಯುದ್ಧದಲ್ಲಿ ಪಾಂಡವರಿಗೆ ಜಯ ತಂದುಕೊಡುತ್ತಾನೆ, ಮಾದಿಗ ಸಮುದಾಯದ ಹಿರಿಯ ಜಾಂಬವಂತನ ಮಗಳಾದ ಜಾಂಬವತಿಯನ್ನು ಮದುವೆ ಮಾಡಿಕೊಂಡು ಅಂತರ್ ಜಾತಿ ವಿವಾಹಕ್ಕೆ ಅಡಿಪಾಯ ಹಾಕಿದ ಮೊದಲ ದೈವಸ್ವರೂಪಿ ಶ್ರೀ ಕೃಷ್ಣ ಪರಮಾತ್ಮ ಜನಗಳಲ್ಲಿ ಬೆಧವನ್ನೆಣಿಸದ ದೇವನನ್ನು ಇಂದು ಅನ್ನವರಿಸಿ ಈ ಮಣ್ಣಿಗೆ ಬಂದು ಹಸಿವನ್ನು ನಿಗಿಸಿಕೊಂಡ ಆರ್ಯರ ಕಪಿಮುಷ್ಟಿಯಲ್ಲಿ ಬಂಧನಕ್ಕೊಳಗಾಗಿದ್ದಾನೆ, ಆದರೆ ಭಗವಾನ್ ಶ್ರೀಕೃಷ್ಣನ ಸಮುದಾಯವಾದ ಈ ಮಣ್ಣಿನ ಮೂಲ ನಿವಾಸಿಗರು ಯಾದವರು ,ಗೋಲ್ಲರು, ಕುರುಬ ,ಬೇಡರು ಇತರೆ ಹಿಂದುಳಿದ ಸಮುದಾಯಗಳು ಕೇವಲ ಕೃಷ್ಣಜನ್ಮಾಷ್ಟಮಿಯಂದು ಪೂಜೆ ಪುನಸ್ಕಾರಗಳಿಗೆ ಸಿಮಿತವಾಗಿವೆ ಆದರೆ ಭಗವಾನ್ ಶ್ರೀಕೃಷ್ಣನಿಂದ ಧಾರ್ಮಿಕವಾಗಿ,ಸಾಮಾಜಿಕ, ಶೈಕ್ಷಣಿಕ, ಔದ್ಯೋಗಿಕವಾಗಿ ಅಭಿವೃದ್ಧಿ ಹೊಂದಿದವರು ಆತನ ಪರಮಭಕ್ತ ಭಕ್ತ ಕನಕದಾಸರನ್ನು ಆತನ ಗುಡಿಯೊಳಗೆ‌ಬಿಡದೆ ದೂರಯಿಟ್ಟವರು,ಆದರೆ ಈ ಗುರು ಶಿಷ್ಯ ರ ಸಮುದಾಯಗಳು ಸಹ ಗುರುಶಿಷ್ಯರನ್ನೊಂದು ಗುಡಿಸುವ ಮೂಲಕ ಗುರುಶಿಷ್ಯ ಪರಂಪರೆಯಲ್ಲಿ ವಾಸ್ತವ ಸಮಾಜದೊಳಗೆ ಸತ್ಯ ಮತ್ತು ನ್ಯಾಯಕ್ಕೆ ಜಯದೊರಕಿಸ ಬೇಕಿದೆ,

ರಾಮಾಯಣದಲ್ಲಿ ರಾಮನಾಗಿ ವಾಲಿಯನ್ನು ಕೊಂದಾಗ, ವಾಲಿಗೆ ಮುಂದಿನ ಅವತಾರದಲ್ಲಿ ನೀನು ನನ್ನನ್ನು ಕೊಲ್ಲುವೆಯಂತೆ ಎಂದು ಮಾತು ನೀಡಿದಂತೆಯೇ ಜರಾ ಎಂಬ ಬೇಡನಾಗಿ ಜನ್ಮ ತಾಳಿದ ವಾಲಿಯು, ಕೃಷ್ಣನ ಕಾಲಿನ ಹೆಬ್ಬೆರಳನ್ನು ಜಿಂಕೆ ಎಂದು ಭಾವಿಸಿ ಬಾಣ ಹೊಡೆಯುತ್ತಾನೆ. ಆ ಬಾಣದಿಂದ ಜಗನ್ನ್ ನಾಟಕಕಾರ ಶ್ರೀ ಕೃಷ್ಣ ಅಸು ನೀಗಿ ತನ್ನ ಅವತಾರವನ್ನು ಮುಗಿಸುತ್ತಾನೆ.

ಯಾವುದೇ ಸಮುದಾಯಗಳಿಗೆ ಅಥವಾ ವ್ಯಕ್ತಿಗಳಿಗೆ ಜಾತಿ ಭೇದಮಾಡಿ ಅಸ್ಪೃಷ್ಯತೆ ಮೇಲು ಕೀಳು ಆಚರಣೆ ಮಾಡಿದ ವ್ಯಕ್ತಿಯ ಮುಂದಿನ ಜನ್ಮದಲ್ಲಿ ಹೇಸಿಗೆ ತಿನ್ನುವ ನಾಯಿಯಾಗಿ ಹುಟ್ಟುತ್ತಾನೆ,

ದುಃಖಿಸ ಬೇಡ ಪ್ರತಿಬಾರಿಯೂ
ಕೆಟ್ಟದೇ ಆಗುವುದಿಲ್ಲ
ದೇವರು ನಿನಗೂ
ಒಂದು ಒಳ್ಳೆಯ ಸಮಯ
ಕರುಣಿಸುತ್ತಾನೆ,

ಯಾವುದು ನಿನ್ನ ಭಾಗ್ಯದಲ್ಲಿದೆಯೋ
ಅದು ನಿನನಗೆ ಸಿಕ್ಕೇ ತೀರುತ್ತದೆ,
ಯಾವುದು ನಿನ್ನದಲ್ಲವೋ ಅದು
ನೀ ಎಷ್ಟೆ ಪ್ರಯತ್ನಿಸಿದರೂ ಸಿಗಲಾರದು,
ಚಿಂತೆ ಬಿಡು ಜೀವನದಲ್ಲಿ ಬರುವದೆಲ್ಲವು
ಬಂದಂತೆ ಸ್ವೀಕರಿಸು,

ಜೀವನದಲ್ಲಿ ಯಾರನ್ನೂ ಅತಿಯಾಗಿ
ಪ್ರೀತಿಸಬೇಡಿ ನಾಳೆ ಅವನು ನಿಮ್ಮ
ಶತ್ರುವು ಆಗಬಲ್ಲ,
ಹಾಗೇ ಯಾರನ್ನೂ ಅತಿಯಾಗಿ
ದ್ವೇಷಿಸಬೇಡಿ ನಾಳೆ ಅವನು ನಿಮ್ಮ
ಮಿತ್ರನೂ ಆಗಬಲ್ಲ,
ಜಗತ್ತಿನಲ್ಲಿ ಕಾಲಕ್ಕಿಂತ
ಶಕ್ತಿಶಾಲಿಯಾದ ವಸ್ತುವು ಇನ್ನೊಂದಿಲ್ಲ,
ಪರಿವರ್ತನೆ ಜಗದ ನಿಯಮ,ಬದಲಾಗೋಣ ಚರಿತ್ರೆಯ ಅರಿತು ಹೊಂದಾಗಿ ಬಾಳೋಣ.

ಹೀಗೆ ಭಗವಾನ ಶ್ರೀಕೃಷ್ಣನು ಜೀವನಕ್ಕೆ ಬೇಕಾದ ಮೌಲಿಕವಾದ ಸಾಕಷ್ಟು ಉಪದೇಶಗಳನ್ನು ಮಾಡಿದ್ದಾರೆ,ಅವಗಳ ಮಾರ್ಗದಲ್ಲಿ ನಾವು ಸಾಗಿದರೆ ಸಾಕು ಸುಂಧರ ಬದುಕು ಸುಂದರ ಸಮಾಜ ನಿರ್ಮಾಣವಾಗುವದರಲ್ಲಿ ಸಂದೇಹವೇಯಿಲ್ಲಾ,

ಕೋಳಲು ಮತ್ತು ನವಿಲುಗರಿ ಶ್ರೀಕೃಷ್ಣ ಪರಮಾತ್ಮನಿಗೆ ಅಚ್ಚುಮೆಚ್ಚಿನ ವಸ್ತುಗಳಾಗಿವೆ,
ಅಚ್ಯುತ:- ಚ್ಯುತಿಯಿಲ್ಲದವ, ಯಾವುದೇ ದೋಷ ಇಲ್ಲದವನು,ಅಸುರಾರಿ :- ರಾಕ್ಷಸರಿಗೆ ಸದಾಕಾಲ ಶತ್ರುವಾಗಿದ್ದವನು,ಕಾಲದೇವ:- ಯಮನನ್ನು ಮೀರಿಸಿದವ,ಗಿರಿಧರ:- ಗೋವರ್ಧನ ಗಿರಿಯನ್ನು ತನ್ನ ಕಿರುಬೆರಳಲ್ಲೇ ಎತ್ತಿದವ,ವೇಣುಗೋಪಾಲ :-ಕೊಳಲನ್ನು ನುಡಿಸುವವನು,ಗೊಲ್ಲ:-ದನಕರುಗಳನ್ನು ರಕ್ಷಿಸುವವನು,ಚಕ್ರಧಾರಿ:- ಚಕ್ರಾಯುಧವನ್ನು ಧರಿಸಿದವನು,ದ್ವಾರಕಾಧೀಶ/ದ್ವಾರಕಾನಾಥ:-ದ್ವಾರಕಾನಗರಕ್ಕೆ ಒಡೆಯನಾದವನು,ಜಗನ್ನಾಥ:- ಜಗತ್ತಿಗೆ ನಾಯಕನಾದವನು,ಜನಾರ್ದನ:- ಎಲ್ಲರಿಗೂ ವರವನ್ನು ಕೊಡುವನು,ಪತಿತ ಪಾವನ:- ಪಾಪಿಗಳನ್ನು ಉದ್ದರಿಸುವವನು,ಪರಬ್ರಹ್ಮ:- ಬ್ರಹ್ಮನ ತಂದೆ,ಪಾರ್ಥ ಸಾರಥಿ: ಅರ್ಜುನನ ಸಾರಥಿ,ಮಧುಸೂದನ:- ಮಧು ಎಂಬ ರಾಕ್ಷಸನನ್ನು ನಾಶ ಮಾಡಿದವನು,ಮುಕುಂದ:-ಮುಕ್ತಿಯನ್ನು ಕೊಡುವವನು,ಯೋಗೇಶ್ವರ:-ಯೋಗಿಗಳಿಗೆಲ್ಲಾ ಸ್ವಾಮಿಯಾದವನು,
ಶ್ಯಾಮಸುಂದರ:- ಕಪ್ಪು ವರ್ಣದವನು,ಹೃಷೀಕೇಶ:- ಹೃಷಿಕಗಳನ್ನು(ಇಂದ್ರಿಯ) ಹಿಡಿದಿಟ್ಟವನು,ಪುರುಷೋತ್ತಮ :- ಪುರುಷರಲ್ಲೇ ಅತ್ಯುತ್ತಮನಾದವನು,ನವನೀತ :- ತಾಜಾ ಬೆಣ್ಣೆಯನ್ನು ತಿಂದವನು,ಸುದರ್ಶನ :- ಸುದರ್ಶನ ಚಕ್ರ ಹೊಂದಿದವ,ಮುರಳಿ :- ಕೊಳಲನ್ನು ಹೊಂದಿದವ,ಘನಶ್ಯಾಮ: ಕೃಷ್ಣನ ಮೈಬಣ್ಣ ಮೋಡದಂತೆ ಕಪ್ಪು , ದಾಮೋದರ,ಮುರಾರಿ,
ಪಾಂಡುರಂಗ,ವಿಠಲ, ಕೇಶವ
ಶ್ರೀರಂಗನಾಥ ಹೀಗೆ ಅನೇಕ ಹೆಸರಗಳಿಂದ ಕರೆಯಲ್ಪಡುವ ಶ್ರೀಕೃಷ್ಣ ಪರಮಾತ್ಮನು ವ್ಯಾಸಮುನಿಗಳ ಮಹಾಭಾರತ ಕಾವ್ಯದ ಮೂಲಕ ಸತ್ಯ ಮತ್ತು ಪ್ರಾಮಾಣಿಕತೆಗೆ ಎಷ್ಟೆ ತೊಂದರೆ ಸಂಕಷ್ಟಗಳು ಬಂದರು ಕೊನೆಗೊಮ್ಮೆ ಜಯ ಸಿಕ್ಕೆ ಸಿಗುತ್ತದೆಂದು ಸಾರಿದ ಸಂದೇಶ, ಸುಮಾರು ಐದು ಸಾವಿರ ವರ್ಷಗಳ ನಂತರವೂ ಭಾರತೀಯರ ಮನಸಿನಲ್ಲಿ ಹಚ್ಚಳಿಯದೆ ಉಳಿದುಕೊಂಡಿದೆ, ಭಗವಾನ್ ಶ್ರೀಕೃಷ್ಣ ಪರಮಾತ್ಮನನ್ನು ಸ್ಮರಿಸಿಕೊಳ್ಳುತ್ತ ಸತ್ಯದ ಹಾದಿಯಲ್ಲಿ ಸಾಗುತ್ತಾ,ಸತ್ಯ ಮತ್ತು ನ್ಯಾಯಕ್ಕೆ ಬೆಂಬಲಿಸುವ ಸಂಕಲ್ಪದೊಂದಿಗೆ ಭಗವಾನ್ ಶ್ರೀಕೃಷ್ಣನ ಜನ್ಮಾಷ್ಟಮಿಯನ್ನು ಆಚರಿಸೋಣವೆಂದೇಳಿ ದೇಶದ ಜನತೆಗೆ ಶ್ರೀಕೃಷ್ಣ ಪರಮಾತ್ಮರ ಜಯಂತಿಯ ಹಾರ್ದಿಕ ಶುಭಾಷಯಗಳು ಕೊರುವೆನು.

ಶ್ರೀಶೈಲ ಬಿರಾದಾರ ನಾಗನಟಗಿ, 9008659817