ಜಿಲ್ಲಾದ್ಯಂತ ಮೂರು ಲಕ್ಷ ಸದಸ್ಯತ್ವದ ಗುರಿ: ಡಾ.ಬೆಲ್ದಾಳೆ.

By admin

ಸೆಕ್ಯುಲರ್ ವಾಯ್ಸ್ ನ್ಯೂಸ್ ಯಾದಗಿರಿ

ಸದಸ್ಯತ್ವ ಅಭಿಯಾನ ಆರಂಭವಾಗಲಿದ್ದು, ಜಿಲ್ಲಾದ್ಯಂತ ಸೆ.2ರಿಂದ ಮೂರು ಲಕ್ಷ ಸದಸ್ಯರನ್ನು ಮಾಡುವ ಗುರಿ ಹೊಂದಲಾಗಿದೆ ಎಂದು ರಾಜ್ಯ ಕಾರ್ಯದರ್ಶಿಯಾದ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ತಿಳಿಸಿದ್ದರು.
ಗ್ರೀನ್ ಸಿಟಿ ಬಳಿಯ ಪಕ್ಷದ ಜಿಲ್ಲಾ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಸದಸ್ಯತ್ವ ಅಭಿಯಾನ ಜಿಲ್ಲಾ ಕಾರ್ಯಾಗಾರದಲ್ಲಿ ಮಾತನಾಡಿ, ಎರಡು ಹಂತದಲ್ಲಿ ಅಭಿಯಾನ ನಡೆಯಲಿದೆ. ಜಿಲ್ಲೆಯ ಎಲ್ಲ ಪದಾಧಿಕಾರಿಗಳು, ಮುಖಂಡರು ಹಾಗೂ ಕಾರ್ಯಕರ್ತರು ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಹೇಳಿದರು.

ಸದಸ್ಯತ್ವ ಅಭಿಯಾನಕ್ಕೆ ಸೆ 2 ರಂದು ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ. ಕಳೆದ ಬಾರಿಯಂತೆ ಪ್ರಸ್ತುತವೂ ಜಿಲ್ಲೆಯಲ್ಲಿ ಅತ್ಯಧಿಕ ಸದಸ್ಯತ್ವ ಮಾಡುವ ನಿಟ್ಟಿನಲ್ಲಿ ಜಿಲ್ಲಾ, ಮಂಡಲ ಹಾಗೂ ಎಲ್ಲಾ ಮೋರ್ಚಾಗಳು ಕಾರ್ಯಯೋಜನೆ ಹಾಕಿಕೊಳ್ಳಬೇಕು ಎಂದರು ಹಾಗು ಯಾದಗಿರಿ ಜಿಲ್ಲೆಯಲ್ಲಿ ರಾಜ್ಯದಲ್ಲೇ ಹೆಚ್ಚು ಸದಸ್ಯತ್ವ ಮಾಡಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಅಮೀನರಡ್ಡಿ ಯಾಳಗಿ ಅಧ್ಯಕ್ಷ ವಹಿಸಿ ಮಾತನಾಡಿದ ಅವರು ಯಾದಗಿರಿ ಜಿಲ್ಲೆಯಲ್ಲಿ ಇರುವ ಪ್ರತಿ ಬೂತ್‌ಗೆ ಕನಿಷ್ಟ 300 ಮಂದಿಯನ್ನು ಸದಸ್ಯತ್ವ ಮಾಡಿದರೆ ಸುಲಭವಾಗಿ ಗುರಿ ತಲುಪ ಬಹುದಾಗಿದೆ, ಮತಪಟ್ಟಿ ಹಿಡಿದು ಮಾಡುತ್ತಿದ್ದದ್ದು ಹಳೆಯ ಪದ್ಧತಿಯಾಗಿದೆ, ಈಗ ಮೊಬೈಲ್ ಮೂಲಕ ಸದಸ್ಯತ್ವ ದಾಖಲು ಮಾಡಬೇಕು ಎಂದು ಹೇಳಿದರು..

ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ ಕು. ಲಲಿತಾ ಅನಪುರ,ಯುವ ಮುಖಂಡ ಮಹೇಶರಡ್ಡಿ ಮುದ್ನಾಳ, ನಾಗರತ್ನ ಕುಪ್ಪಿ, ದೆವಿಂದ್ರನಾಥ ನಾದ, ಹೆಚ್‌ಸಿ.ಪಾಟೀಲ್, ಸಿದ್ದನಗೌಡ ಕಾಡಂನೊರ, ಸುರೇಶ ಸಜ್ಜನ್, ವೀಣಾ ಮೋದಿ, ನಗರ ಮಂಡಲ ಅಧ್ಯಕ್ಷ ಲಿಂಗಪ್ಪ ಹತ್ತಿಮನಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರು ಕಾಮ ಸ್ವಾಗತಿಸಿದರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪರುಶುರಾಮ ಕುರಕುಂದಿ ನಿರೂಪಿಸಿದರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೇಲಪ್ಪ ಗುಳಗಿ ವಂದಿಸಿದರು.