
ಸೆಕ್ಯುಲರ್ ವಾಯ್ಸ್ ನ್ಯೂಸ್ ಯಾದಗಿರಿ
ವಿದ್ಯಾರ್ಥಿಗಳು ಈಗಿನ ದಿನಗಳಲ್ಲಿ ಓದುವಿನ ಜೆತೆ ಜೊತೆಗೆ ಕ್ರೀಡೆ , ಕಲೆ , ಸಾಹಿತ್ಯ , ಸಂಸ್ಕೃತಿ , ನಾಟ್ಯ ,ಗಾಯನ ಹಾಗೂ ವಿವಿಧ ರೀತಿಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಮಾನಸಿಕ ಹಾಗೂ ದೈಹಿಕವಾಗಿ ಸದೃಢವಾಗಿರಬೇಕೆಂದು ಯಾದಗಿರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ವಿನಾಯಕ ಮಾಲಿ ಪಾಟೀಲ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಮೇಜರ್ ಧ್ಯಾನಚಂದ್ ರವರ ಜನ್ಮ ದಿನಾಚರಣೆ ಪ್ರಯುಕ್ತ ರಾಷ್ಟಿçÃಯ ಕ್ರೀಡಾ ದಿನಾಚರಣೆ ಅಂಗವಾಗಿ ಸರಕಾರಿ ಪದವಿ ಮಹಾ ವಿದ್ಯಾಲಯದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕ್ರೀಡೆಯಿಂದ ನಮ್ಮಲ್ಲಿ ಇರುವ ಮಾನಸಿಕ ಹಾಗೂ ದೈಹಿಕ ಒತ್ತಡ ದೂರವಾಗಿ ಸದಾ ಚಟುವಟಿಕೆಯಿಂದ ಇರಲು ಸಹಕಾರಿಯಾಗಿದೆ. ಈಗಿನ ದಿನಮಾನಗಳಲ್ಲಿ ಯುವಕ ಯುವತಿಯರು ಸಾಮಾಜಿಕ ಜಾಲ ತಾಣಗಳಲ್ಲಿ ಮಾರುಹೋಗದೆ ಕ್ರೀಡಾ, ಮನೋಭಾವ ಬೆಳೆಸಿಕೊಳ್ಳಬೇಕು, ಕ್ರೀಡೆಯಿಂದ ಉತ್ಸಾಹ ಮಾನಸಿಕ ಸಮತೋಲನ ಕಾಪಾಡಲು ಸಹಕಾರಿಯಾಗಿದೆ ದೈಹಿಕವಾಗಿ ಸದೃಢವಾಗಿರಲು ಅನುಕೂಲವಾಗುವಂತಹ ಚಟುವಟಿಕೆಗಳಲ್ಲಿ ಮುಂದಾಗಿ ಶಾಲಾ ಕಾಲೇಜುಗಳಿಗೆ, ಸಮಾಜಕ್ಕೆ ಕೀರ್ತಿ ತರುವ ಪ್ರಯತ್ನ ಮಾಡಬೇಕು.ಜೀವನದಲ್ಲಿ ಕ್ರೀಡಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
ಇಂದು ನಾವು ಆಚರಿಸುತ್ತೀರುವ ರಾಷ್ಟಿçÃಯ ಕ್ರೀಡಾ ದಿನಾಚರಣೆಯು ಹಾಕಿ ಮಾಂತ್ರಿಕರೆAದೆ ಖ್ಯಾತಿ ಪಡೆದ ಮೇಜರ್ ಧ್ಯಾನಚಂದ್ ರವರ ಆದರ್ಶಗಳನ್ನು ಪ್ರತಿಯೊಬ್ಬ ವಿದ್ಯಾರ್ಥಿಯೂ ಮೈಗೂಡಿಸಿಕೊಂಡು ಸಾಧನೆಗಳ ಕಡೆ ಮುಖ ಮಾಡಬೇಕು ಎಂದರು.
ಬೆಳಿಗ್ಗೆ 6 ಗಂಟೆಗೆ ಹೊಸ ಬಸ್ ನಿಲ್ದಾಣದಿಂದ ಪ್ರಾರಂಭವಾದ ಮಿನಿ ಮ್ಯಾರಥಾನ್ ಓಟವು ಶಾಸ್ತಿç ವೃತ್ತ ಅಂಬೇಡ್ಕರ್ ವೃತ್ತ, ಕನಕ ವೃತ್ತ, ಪದವಿ ಮಹಾ ವಿದ್ಯಾಲಯದಿಂದ ಜಿಲ್ಲಾ ಕ್ರೀಡಾಂಗಣದ ವರೆಗೆ ಜಾಥಾ ನಡೆಯಿತು.
ಮಿನಿ ಮ್ಯಾರಥಾನ್ ರೇಸಿನಲ್ಲಿ ಪುರುಷರು ಹಾಗೂ ಮಹಿಳೆಯರ ಓಟದ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಸತ್ಕರಿಸಿ ನಗದು ಬಹುಮಾನ ವಿತರಿಸಲಾಯಿತು.
ಈ ಸಂದರ್ಭದಲ್ಲಿ. ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಮಂಜುನಾಥ, ಕ್ಷಯ ರೋಗ ನಿರ್ಮೂಲನಾ ಮಂಡಳಿ ಸದಸ್ಯ ಡಾ.ಸಂಜೀವ್ ಕುಮಾರ್ ರಾಯಚೂರಕರ್, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ,ರಾಜು ಬಾವಿ ಹಳ್ಳಿ ತೆರಿಗೆ ಇಲಾಖೆ ಸಹಾಯಕ ನಿರ್ದೇಶಕ ಅಪ್ಪು ಚಿಮ್ಮಲಗಿ ಅರ್ಥಶಾಸ್ತç ಉಪನ್ಯಾಸಕ ಸಾಮುವೇಲ್, ವೀರಭದ್ರಪ್ಪ ಗವಾಯಿ ತಂಡದಿಂದ ಗಾಯನ , ಗುರುಪ್ರಸಾದ್ ವೈದ್ಯ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು ಶಾಲಾ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.
