
ಸೆಕ್ಯುಲರ್ ವಾಯ್ಸ್ ನ್ಯೂಸ್ ಯಾದಗಿರಿ
ವಡಗೇರಾ ತಾಲೂಕಿನ ತೇಕರಾಳ ಗ್ರಾಮದಿಂದ ಊಳ್ಳೆ ಸೂಗೂರ ಗ್ರಾಮಕ್ಕೆ ಹೋಗುವ ಗಾಳಿ ಮರೇಮ್ಮ ದೇವಸ್ಥಾನದವರೆಗೆ ರಸ್ತೆಯು ಸಂಪೂರ್ಣ ಹದಗೆಟ್ಟಿದ್ದು ಅದನ್ನು ದುರಸ್ತಿ ಮಾಡುವಂತೆ ಗ್ರಾಮ ಪಂಚಾಯಿತಿ ಸದಸ್ಯ ಹಣಮಂತರಾಯಗೌಡ ಮಾಲಿ ಪಾಟೀಲ ತೇಕರಾಳ ಆಗ್ರಹಿಸಿದ್ದಾರೆ. ರಸ್ತೆ ಸಂಪೂರ್ಣವಾಗಿ ಹದಗೆಟ್ಟು ಸುಮಾರು ವರ್ಷಗಳ ಕಳೆಯುತ್ತಾ ಬಂದರು ಕೂಡ ಅಧಿಕಾರಿಗಳು ದುರಸ್ತಗೊಳಿಸದೆ ತೀವ್ರ ನಿರ್ಲಕ್ಷ ಮಾಡುತ್ತಿದ್ದಾರೆ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ದಿನ ನಿತ್ಯ ಸುರಿಯುತ್ತಿರುವ ಜಿಟಿ ಜಿಟಿ ಮಳೆಗೆ ರಸ್ತೆಯು ಕೆಸರು ಗದ್ದೆಯಂತಾಗಿದೆ ಈ ರಸ್ತೆಯ ಮೇಲೆ ಓಡಾಡುವ ವಾಹನ ಸವಾರರು ದಿನನಿತ್ಯ ಬೀಳುತ್ತಿದ್ದು ಸಣ್ಣ ಪುಟ್ಟ ಗಾಯಗಳಾದ ಉದಾಹರಣೆಗಳಿಗೆ ಕೂಡಲೇ ಸಂಬಂಧಿಸಿದ ಅಧಿಕಾರಿಗಳು ರಸ್ತೆ ದುರಸ್ತಿಗೆ ಮುಂದಾಗಬೇಕು ಒಂದು ವೇಳೆ ವಿಳಂಬ ಮಾಡಿದ್ದಲ್ಲಿ ಗ್ರಾಮಸ್ಥರೂಂದಿಗೆ ಸೇರಿ ರಸ್ತೆ ತಡೆದು ಹೋರಾಟ ಮಾಡುವುದಾಗಿ ಗ್ರಾಮ ಪಂಚಾಯತ್ ಸದಸ್ಯ ಹಣಮಂತ್ರಯಗೌಡ ಮಾಲಿಪಾಟೀಲ್ ಎಚ್ಚರಿಸಿದ್ದಾರೆ
