ಜಿಲ್ಲೆಯಲ್ಲಿ ಕೇಂದ್ರ ರೈಲ್ವೆ ಸಚಿವರ ಜಿಲ್ಲಾ ಪ್ರವಾಸ ಇಂದು-ನಾಳೆ

By admin

ಸೆಕ್ಯುಲರ್ ವಾಯ್ಸ್ ನ್ಯೂಸ್ ಯಾದಗಿರಿ

ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ರಾಜ್ಯ ಸಚಿವರಾದ ಶ್ರೀ.ವಿ ಸೋಮಣ್ಣ ಅವರು ಸೆಪ್ಟೆಂಬರ್ 3 ಹಾಗೂ 4 ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡು ಈ ಕೆಳಕಂಡ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.

ಸೆಪ್ಟೆಂಬರ್ 3 ರಂದು ಸಂಜೆ 4-30 ಗಂಟೆಗೆ ಜಿಲ್ಲೆಯ ಕಡೆಚೂರ ರೈಲು ಬೋಗಿ ಕಾರ್ಖಾನೆ ಪರಿಶೀಲಿಸುವರು ನಂತರ ಸ್ಥಳಿಯ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಯಾದಗಿರಿ ಯಲ್ಲಿ ವಾಸ್ತವ್ಯ ಮಾಡುವರು.

ಸೆಪ್ಟೆಂಬರ್ 4 ರಂದು ಬೆಳಿಗ್ಗೆ 8-45 ಗಂಟೆಗೆ ಚೇಂಬರ್ ಆಫ್ ಕಾಮರ್ಸ ಮತ್ತು ಇತರ ಸಂಸ್ಥೆಗಳೊಂದಿಗೆ ಸಭೆ ನಡೆಸುವರು. ನಂತರ ಬೆಳಿಗ್ಗೆ 9-30 ಗಂಟೆಗೆ ತಡಬಿಡಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಅಂಗನವಾಡಿ ಕೇಂದ್ರ ಗಳಿಗೆ ಭೇಟಿ ನೀಡುವರು. ನಂತರ ಬೆಳಿಗ್ಗೆ 10ಗಂಟೆಗೆ ತಡಬಿಡಿ ಹೈಸ್ಕೂಲ್ ದಲ್ಲಿ ಸಂಪೂರ್ಣತಾ ಅಭಿಯಾನ ಕಾರ್ಯಕ್ರಮದಲ್ಲಿ ಭಾಗಹಿಸುವರು. ಬೆಳಗ್ಗೆ 11-10 ಗಂಟೆಗೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಎಡಿಪಿ/ಎಡಿಪಿ ಜಿಲ್ಲಾ, ಬ್ಲಾಕ್ ಲೆವಲ್ ಅಧಿಕಾರಿಗಳು ಮತ್ತು ಸ್ಟೇಕ್ ಹೋಲ್ಡರ್ ಗಳೊಂದಿಗೆ ಸಭೆ ನಡೆಸುವರು. ಮಧ್ಯಾಹ್ನ 12-15 ಕ್ಕೆ ಯಾದಗಿರಿ ರೈಲ್ವೆ ಸ್ಟೇಷನ್ ದಲ್ಲಿ ಅಮ್ರಿತ್ ಭಾರತ ಸ್ಟೇಷನ್ ಕಾಮಗಾರಿ ಪರಿಶೀಲಿಸುವರು.ಅದರಂತೆ ಯಾದಗಿರಿ-ವಾಡಿ-ವಿಕಾರಾಬಾದ್- ಸಿಕಂದರಾಬಾದ್ ರೈಲು ಸೆಕ್ಷನ್ ವಿಂಡೋ ಟ್ರೆಲಿಂಗ್ ಪರಿಶೀಲಿಸುವರು.ಸಂಜೆ 5 ಗಂಟೆಗೆ ಉಮದಾನಗರ ರೈಲ್ವೆ ಸ್ಟೇಷನ್ ಗೆ ತೆರಳುವರು.