
ಸೆಕ್ಯುಲರ್ ವಾಯ್ಸ್ ನ್ಯೂಸ್ ಯಾದಗಿರಿ
ನಾಡಿನಾದ್ಯಂತ ಗಣೇಶ ಹಬ್ಬದ ಸಂಭ್ರಮ ಕಳೆಗಟ್ಟಿದೆ ಹಲವು ಮಹಾನಗರಗಳಲ್ಲಿ ಸಾಕಷ್ಟು ಬೃಹದಾಕಾರದ ಗಣೇಶ್ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ. ಇಂದು ಯಾದಗಿರಿಯ ಬಾಲಾಜಿ ನಗರದಲ್ಲಿ ಪುಟಾಣಿ ಚಿಣ್ಣರಿಂದ ಗಣಪತಿ ಮೂರ್ತಿ ಪ್ರತಿಷ್ಠಾಪನೆ ಮಾಡಲಾಯ್ತು. ಪುಟಾಣಿ ಮಕ್ಕಳು ತಮ್ಮ ಬಳಿ ಇರುವ ಹಣದಿಂದ ಗಣೇಶನ ತಂದು ಪ್ರತಿಷ್ಟಾಪನೆ ಮಾಡ್ಡಿದ್ದಾರೆ ವಿಶೇಷವಾಗಿದೆ.
ಈ ವೇಳೆ ಪುಟಾಣಿ ಮಕ್ಕಳು ಗಣಪತಿ ಬಪ್ಪಾ ಮೋರಯಾ.. ಮಂಗಲ ಮೂರ್ತಿ ಮೊರಯಾ ಎಂಬ ಘೋಷಣೆ ಕೂಗಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಪುಟಾಣಿ ಮಕ್ಕಳಾದ ಶ್ರೇಯಸ್ ಪಾಟೀಲ, ಸಾನಿದ್ಯ, ಸ್ಪಂದನ, ಭರತ, ಚೈತ್ರ, ಸಿಂದುಶ್ವೇತ, ಹರ್ಷ, ಸಮರ್ಥ ಸೇರಿದಂತೆ ಅನೇಕರು ಭಾಗಿಯಾಗಿದ್ದರು.
