ಸೆಕ್ಯುಲರ್ ವಾಯ್ಸ್ ನ್ಯೂಸ್ ಯಾದಗಿರಿ
ನಾಡಿನಾದ್ಯಂತ ಗಣೇಶ ಹಬ್ಬದ ಸಂಭ್ರಮ ಕಳೆಗಟ್ಟಿದೆ. ಹಲವು ಮಹಾನಗರಗಳಲ್ಲಿ ಸಾಕಷ್ಟು ಬೃಹದಾಕಾರದ ಗಣೇಶ್ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗ್ತಿದೆ. ಇಂದು ಯಾದಗಿರಿಯ ಬಾಲಾಜಿ ನಗರದಲ್ಲಿ ಭಜರಂಗದಳ ಕಾರ್ಯಕರ್ತರು ಹಿಂದೂ ಮಹಾಸಭಾ ಗಣಪತಿ ಮೂರ್ತಿ ಪ್ರತಿಷ್ಠಾಪನೆ ಮಾಡಲಾಯ್ತು.
ಬೆಳಗ್ಗೆಯಿಂದಲ್ಲೂ ನಗರದ ಹಲವು ಏರಿಯಾಗಳಲ್ಲಿ ವಿಘ್ನ ನಿವಾರಕನಿಗೆ ವಿಶೇಷ ಪೂಜೆ ಸಲ್ಲಿಸಲಾಯ್ತು.
ಹಿಂದೂ ಮಹಾಸಭಾ ಗಣಪತಿ ಪ್ರತಿಷ್ಠಾಪನೆಗೂ ಮುನ್ನ ಘಣ ಹೋಮ ಹಾಗೂ ಪುಣರ್ವತಿ ಹೋಮ ನೇರವೆರಿಸಲಾಯ್ತು.
ಈ ವೇಳೆ ಭಜರಂಗದಳದ ಹಲವಾರು ಕಾರ್ಯಕರ್ತರು ತಲೆಗೆ ಮೈಸೂರು ಪೇಟ್ ಧರಿಸಿ ಸನಾತನ ಧರ್ಮಕ್ಕೆ ಹಾಗೂ ಗಣಪತಿ ಬಪ್ಪಾ ಮೋರಯಾ.. ಮಂಗಲ ಮೂರ್ತಿ ಮೊರಯಾ ಎಂಬ ಘೋಷಣೆ ಕೂಗಿ ಸಂಭ್ರಮಿಸಿದ್ರು.

