
ಸೆಕ್ಯುಲರ್ ವಾಯ್ಸ್ ನ್ಯೂಸ್ ಯಾದಗಿರಿ
ಇಲ್ಲಿನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸದಸ್ಯತ್ವ ಅಭಿಯಾನದ ಕುರಿತು ಪ್ರಮುಖರ ಸಭೆ ನಡೆಯಿತು.
ಜಿಲ್ಲೆಯ ನಾಲ್ಕು ವಿಧಾನ ಸಭಾ ಕ್ಷೇತ್ರಗಳ ಪಕ್ಷದ ಪದಾಧಿಕಾರಿಗಳು ಹಾಗೂ ಪ್ರಮುಖರು ಭಾಗವಹಿಸಿದ್ದ ಈ ಸಭೆಯಲ್ಲಿ ಮಾತನಾಡಿದ ಮಾಜಿ ಶಾಸಕ ಪಿ.ರಾಜೀವ್, ಸದಸ್ಯತ್ವ ವೇಗ ಮತ್ತು ಮಾಡುವ ಕುರಿತು ಸಮಗ್ರ ಮಾಹಿತಿ ನೀಡಿದರು.
ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ್ ಮಾತನಾಡಿ ನಿಗದಿತ ಅವಧಿಯೊಳಗೆ ಸದಸ್ಯತ್ವ ಗುರಿ ಮುಟ್ಟಬೇಕೆಂದರು.
ವೇದಿಕೆಯಲ್ಲಿ ಪಕ್ಷದ ಪ್ರಮುಖರಾದ ಜಿಲ್ಲಾಧ್ಯಕ್ಷ ಅಮೀನ್ ರಡ್ಡಿ ಯಾಳಗಿ, ರಾಚಣ್ಣ ಗೌಡ ಮುದ್ನಾಳ್, ಲಲಿತಾ ಅನಪುರ, ಪರುಶರಾಮ ಕುರಕುಂದಾ, ಗುರು ಕಾಮಾ, ಹಣಮಂತ ಇಟಗಿ, ಬಸವರಾಜ ವಿಭೂತಿಹಳ್ಳಿ, ಮೇಲಪ್ಪ ಗುಳಗಿ ಸೇರಿದಂತೆ ಇತರರು ಇದ್ದರು.
